ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾಧ ಬಿ ಎಮ್ ಯೂಸುಫ್ (49) ತಂದೆ: ದಿ. ಬಿ ವೈ ಮಹಮ್ಮದ್, ವಾಸ: ಬಿ ವೈ ಕಂಪೌಂಡ್, ಬಡಾಕೆರೆ ನಾವುಂದ ಗ್ರಾಮ, ಬೈಂದೂರು ಇವರು ದಿನಾಂಕ 11/05/2022 ರಂದು ಮಧ್ಯಾಹ್ನ 04:30 ಗಂಟೆಗೆ ಅವರ ಹೆಂಡತಿ ಮಕ್ಕಳು ಹಾಗೂ ಅವರ ತಂಗಿ ಜುಲೈಕಾ, ಬಾವ ಹಸನ್ ಹಾಗೂ ಅವರ ಮಕ್ಕಳೊಂದಿಗೆ ಮೈಸೂರಿನಲ್ಲಿ ಅವರ ದೂರದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿ, ಮದುವೆ ಕಾರ್ಯಕ್ರಮ ಮುಗಿಸಿಕೊಂಡು ದಿನಾಂಕ 12/05/2022 ರಂದು ರಾತ್ರಿ 11:00 ಗಂಟೆಗೆ ಮನೆಯ ಮುಖ್ಯದ್ವಾರದ ಬಾಗಿಲನ್ನು ತೆರೆದು ಮನೆಯ ಒಳಗೆ ಹೋದಾಗ ಬೆಡ್ ರೂಮ್ ನಲ್ಲಿದ್ದ ಪ್ಲೈ ವುಡ್ ಕಪಾಟಿನ ಬಾಗಿಲನ್ನು ಯಾರೋ ಕಳ್ಳರು ಬಲವಾದ ಆಯುಧದಿಂದ ಮೀಟಿ ತೆಗೆದು ಕಪಾಟಿನಲ್ಲಿದ್ದ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು ಕಪಾಟಿನಲ್ಲಿ ಇಟ್ಟಿದ್ದ 2 ಚಿನ್ನದ ಉಂಗುರ ಹಾಗೂ 5 ಸಾವಿರ ನಗದು ಹಣವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವು ಮಾಡಿಕೊಂಡು ಹೋದ ಚಿನ್ನದ ಉಂಗುರದ ಅಂದಾಜು ಮೌಲ್ಯ 30,000/- ರೂಪಾಯಿ ಆಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 93/2022 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಉಡುಪಿ: ಪಿರ್ಯಾದಿದಾರರಾದ ಷಣ್ಮುಗಂ (41) ತಂದೆ: ದಿ. ಮಾರಪ್ಪ ವಾಸ: ನಂಬ್ರ: 248, ಮಾಹಿಧರ ಪಾರ್ಚೂನ, ಸಿಟಿ ಟೋಲ್‌ಗೇಟ್‌ ಬಳಿ, ಅತ್ತಿಬೆಲೆ, ಚಿಕ್ಕನಹಳ್ಳಿ, ಇವರು ತನ್ನ ಸಂಸಾರದೊಂದಿಗೆ ದಿನಾಂಕ 13/05/2022 ರಂದು ಸಂಜೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದು, ತದನಂತರ 19:46 ಗಂಟೆಗೆ ಕೃಷ್ಣಮಠದ ವಸಂತ ಮಂಟಪದ ಬಳಿ ತೊಟ್ಟಿಲು ಸೇವೆ ನಡೆಯುತ್ತಿದ್ದು, ದೇವರ ಆರತಿಯನ್ನು ಪಡೆಯುವಾಗ ಯಾರೋ ಕಳ್ಳರು ಷಣ್ಮುಗಂ ರವರ ಹೆಂಡತಿಯ ವ್ಯಾನಿಟಿ ಬ್ಯಾಗ್‌ನ ಜಿಪ್‌ನ್ನು ತೆಗೆದು, ಅದರೊಳಗಿದ್ದ ಚಿನ್ನಾಭರಣ ಹಾಕಿದ್ದ ಬಾಕ್ಸ್‌ ನ್ನು ಕಳವು ಮಾಡಿದ್ದು, ಸದ್ರಿ ಬಾಕ್ಸ್‌ ನಲ್ಲಿ 58 ಗ್ರಾಂ ತೂಕದ ಬಳೆಗಳು-2, 16 ಗ್ರಾಂ ತೂಕದ ಕಿವಿಯೊಲೆ-2, 13 ಗ್ರಾಂ ತೂಕದ ಮಗುವಿನ ಚಿಕ್ಕ ಬಳೆ-1, 20 ಗ್ರಾಂ ತೂಕದ ಪೆಂಡೆಂಟ್‌ ಇರುವ ಚಿನ್ನದ ಸರ-1, 48 ಗ್ರಾಂ ತೂಕದ ದೊಡ್ಡ ಚಿನ್ನದ ಸರ -1 ಒಟ್ಟು 155 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ 6,30,000/- ಆಗಬಹುದುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 80/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಜಾನಕಿ (52) ಗಂಡ: ನರಸಿಂಹ ಮೊಗವೀರ, ವಾಸ: ನಾಗೂರು, ಗುಂಜಾನುಗುಡ್ಡೆ, ಕಿರಿಮಂಜೇಶ್ವರ ಇವರು ದಿನಾಂಕ 12/05/2022 ರಂದು ಸಂಜೆ ಸಮಯ ಸುಮಾರು 4:00 ಗಂಟೆಗೆ ಮನೆಯ ಹತ್ತಿರ ಇರುವ ನಾಗಬನದ ಜಾಗದಲ್ಲಿ ಇರುವ ಗಿಡಗಳನ್ನು ಯಾರೋ ಕಿತ್ತು ಹಾಕಿ ಸ್ವಚ್ಚ ಮಾಡಿರುವುದನ್ನು ಕಂಡು, ಜಾನಕಿ ರವರು ಸದ್ರಿ ಸ್ಥಳದ ಹತ್ತಿರ ಬಾವಿ ರಿಂಗ್ ತಯಾರಿಸುವ ಜನರಲ್ಲಿ ವಿಚಾರಿಸಿದಾಗ ಸದ್ರಿ ಗಿಡಗಳನ್ನು ಶ್ರೀಕಾಂತ್ ಖಾರ್ವಿ ಕಿತ್ತು ಹಾಕಿರುವುದಾಗಿ ತಿಳಿಸಿದ್ದು ಆಗ ಇವರು ಶ್ರೀಕಾಂತ್ ಖಾರ್ವಿಯವರಲ್ಲಿ ಸದ್ರಿ ಗಿಡಗಳನ್ನು ಪುನಃ ನೆಡಲು ಹೇಳಿದ್ದು, ಆಗ ಶ್ರೀಕಾಂತ ಖಾರ್ವಿ ಒಮ್ಮೆಲೇ ಸಿಟ್ಟುಗೊಂಡು ನೀನ್ಯಾರು ನನ್ನನ್ನು ಕೇಳಲು ಎಂದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ, ಆತನ ಬಳಿ ಇರುವ ಕಬ್ಬಿಣದ ಹಾರೆಯಿಂದ ಜಾನಕಿ ರವರ ಎಡ ಕಣ್ಣಿನ ಹುಬ್ಬಿನ ಮೇಲೆ, ತಲೆ ಹಿಂಭಾಗ, ಎಡ ಭುಜಕ್ಕೆ ಹಾಗೂ ಸೊಂಟಕ್ಕೆ ಹೊಡೆದು, ಕೈಯಿಂದ ದೂಡಿ ಹಾಕಿದನು. ಆಗ ಜಾನಕಿ ಇವರ ಮಗಳು ರೇವತಿ ಆತನಲ್ಲಿ ನನ್ನ ತಾಯಿಗೆ ಯಾಕೆ ಹೊಡೆಯುತ್ತೀಯಾ ಎಂದು ಕೇಳಿದ್ದಕ್ಕೆ ಆಕೆಗೂ ಕೂಡಾ ಅವಾಚ್ಯ ಶಬ್ದಗಳಿಂದ ಬೈದು, ಅವಳ ಕುತ್ತಿಗೆಯನ್ನು ಒತ್ತಿ ಹಿಡಿದು ದೂಡಿ ಹಾಕಿ, ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 91/2022 ಕಲಂ: 504,324,354, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ನಾಗು ಖಾರ್ವಿ (55) ಗಂಡ: ಚಂದ್ರ ಖಾರ್ವಿ ವಾಸ: ಗುಂಜಾನುಗುಡ್ಡೆ ಕಿರಿಮಂಜೇಶ್ವರ ಗ್ರಾಮ ಬೈಂದೂರು ಇವರು ದಿನಾಂಕ 12/05/2022 ರಂದು ಸಂಜೆ ಸುಮಾರು 5:00 ಗಂಟೆ ಹೊತ್ತಿಗೆ ಮನೆಯ ಬಳಿ ಇರುವಾಗ, ಇವರ ಮಗನಾದ ಶ್ರೀಕಾಂತನು ಮೊದಲಿನ ದಿನ ಕಿತ್ತು ಹಾಕಿದ್ದ ಎಕ್ಕೆ ಗಿಡಗಳನ್ನು ನೆಡೆಲು ಹಾರೆಯನ್ನು ಹಿಡಿದುಕೊಂಡು ನಾಗಬನದ ಬಳಿ ಹೋದಾಗ ನೆರೆಮನೆಯ ಜಾನಕಿರವರು ಅಲ್ಲಿಗೆ ಬಂದು ನಾಗು ಖಾರ್ವಿ ರವರ ಮಗನಲ್ಲಿ ಎಕ್ಕೆ ಗಿಡಗಳನ್ನು ಯಾಕೆ ಕಿತ್ತು ಹಾಕಿದ್ದು, ಅದು ನಿನ್ನ ಜಾಗದಲ್ಲಿ ಇಲ್ಲ ಎಂದು ಹೇಳಿ, ನಾಗು ಖಾರ್ವಿ ರವರ ಮಗನಿಗೆ ಕೈಯಿಂದ ಕೆನ್ನೆಗೆ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು ದೂಡಿ ಹಾಕಿದ್ದು, ಆಗ ರತ್ನ,  ರಾಜ, ಸದಾನಂದ ಹಾಗೂ ಭಾಸ್ಕರರವರು ಅಲ್ಲಿಗೆ ಬಂದು ನಾಗು ಖಾರ್ವಿ ರವರ ಮಗನಿಗೆ ಬೈದು, ರಾಜನು ಒಂದು ಮರದ ಕೋಲಿನಿಂದ ಹಣೆಗೆ ಹೊಡೆದಿದ್ದು, ಪರಿಣಾಮ ಆತನ ಹಣೆಗೆ ಪೆಟ್ಟಾಗಿರುತ್ತದೆ. ಉಳಿದವರೆಲ್ಲರೂ ನಾಗು ಖಾರ್ವಿ ರವರ ಮಗನನ್ನು ಉದ್ದೇಶಿಸಿ ನಿನ್ನನ್ನು ಇಲ್ಲಿಯೇ ಕೊಂದು ಮುಗಿಸುವುದಾಗಿ ಬೆದರಿಕೆ ಹಾಕಿದಾಗ ಇವರ ಮಗನು ಜೋರಾಗಿ ಬೊಬ್ಬೆ ಹೊಡೆದಿದ್ದು, ಆಗ ಅವರೆಲ್ಲರೂ ಅಲ್ಲಿಂದ ಹೋಗುತ್ತಾ ಫಿರ್ಯಾದಿದಾರರ ಮನೆಯ ಬಳಿ ನಿಲ್ಲಿಸಿದ್ದ ನಾಗು ಖಾರ್ವಿ ರವರ ಮಗನ ಬೈಕ್ ನ್ನು ದೂಡಿ ಹಾಕಿ, ಬೈಕ್ ನ ಮೀರರ್, ಹ್ಯಾಂಡಲ್ ಹಾಗೂ ಬಾಡಿ ಜಖಂ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 92/2022 ಕಲಂ: 504, 324, 504, 506, 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 14-05-2022 10:05 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080