ಅಭಿಪ್ರಾಯ / ಸಲಹೆಗಳು

14-05-2021 ದೈನಂದಿನ ಅಪರಾಧ ವರದಿ - ಪೂರ್ವಾಹ್ನ

ಅಪಘಾತ ಪ್ರಕರಣ :

  • ಹೆಬ್ರಿ : ದಿನಾಂಕ 07/05/2021ರಂದು ಅಪಾದಿತ  ಗದಿಗೆಪ್ಪ ಗೌಡ ಪಾಟೀಲ ಇವರು ತನ್ನ ಬಾಬ್ತು KA 27 M 6505ನೇ ಕಾರಿನಲ್ಲಿ ಚನ್ನಬಸಪ್ಪ ಹನುಮಂತಪ್ಪ ಮದ್ದಾನಿ ಮತ್ತು ಶಂಭು ಅಕ್ಕಿ ಇವರನ್ನು ಕುಳ್ಳಿರಿಸಿಕೊಂಡು ಅಗುಂಬೆ- ಉಡುಪಿ ರಸ್ತೆಯಲ್ಲಿ ಅಗುಂಬೆ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರುಕತೆ ಯಿಂದ ಚಲಾಯಿಸಿ ಸಮಯ ಸುಮಾರು ಬೆಳಿಗ್ಗೆ 09-00 ಗಂಟೆಗೆ ನಾಡ್ಪಾಲು ಗ್ರಾಮದ ಸೋಮೇಶ್ವರ ಎಂಬಲ್ಲಿಗೆ ತಲುಪಿದಾಗ ಕಾರು ಚಾಲಕನ ಹತೋಟಿ ತಪ್ಪಿ ರಸ್ತೆಯ ತೀರಾ ಬಲ ಬದಿಗೆ ಹೋಗಿ ಕಚ್ಚಾ ರಸ್ತೆಯ ಬದಿಯಲ್ಲಿದ್ದ ಹಳೆಯ ಕಟ್ಟಡದ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂದಿನ ಭಾಗವು ಜಖಂ ಅಗಿರುವುದಲ್ಲದೇ ಕಾರಿನಲ್ಲಿದ್ದ ಚನ್ನಬಸಪ್ಪ ಹನುಮಂತಪ್ಪ ಮದ್ದಾನಿ ರವರಿಗೆ ಎಡಕಾಲು ಮೊಣಗಂಟಿನ ಬಳಿ ಹಾಗೂ ಎಡಕೈ ಬೆರಳಿಗೆ ತೀವ್ರ ಸ್ವರೂಪದ ಗುದ್ದಿದ ನೋವಾಗಿದ್ದು ಹಾಗೂ ಶಂಭು ಅಕ್ಕಿ ರವರಿಗೆ ಎಡಬದಿ ಹಣೆಯ ಬಳಿ ತರಚಿದ ಗಾಯವಾಗಿರುತ್ತದೆ. ಈ ಅಪಘಾತದಲ್ಲಿ ಕಾರಿನ ಚಾಲಕನಿಗೆ ಯಾವುದೇ ನೋವು ಅಗಿರುವುದಿಲ್ಲ. ಈ ಅಪಘಾತವು KA 27 M 6505 ನೇ ಕಾರಿನ ಚಾಲಕ ಗದಿಗೆಪ್ಪಗೌಡ ಪಾಟೀಲ ಇವರ ಅತೀವೇಗ ಹಾಗೂ ಅಜಾಗರುಕತೆಯಿಂದ ಅಗಿರುವುದಾಗಿ ಪ್ರತ್ಯಕ್ಷ ಸಾಕ್ಷಿದಾರರಾದ ಪಿರ್ಯಾದಿ ಪ್ರಮೊದ ಶೆಟ್ಟಿ ಪ್ರಾಯ 38 ವರ್ಷ ತಂದೆ: ದಿ.ವಾಸ: ಜಯಗಣೇಶ ಸೊಮೇಶ್ವರ ಅಂಚೆ ನಾಡ್ಪಾಲು ಗ್ರಾಮ, ಹೆಬ್ರಿ ತಾಲೂಕು ಇವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 24/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತರ ಪ್ರಕರಣಗಳು :

  • ಕೋಟ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021ರಿಂದ ದಿನಾಂಕ 12/05/2021ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅವಶ್ಯ ವಸ್ತುಗಳ ಖರೀದಿಯ ಬಗ್ಗೆ ಇರುವ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಪಿರ್ಯಾದಿ ಸಂತೋಷ ಬಿಪಿ, ಪೊಲೀಸ್ ಉಪನಿರೀಕ್ಷಕರು, ಕೋಟ ಇವರು ದಿನಾಂಕ 13/05/2021 ರಂದು ಠಾಣಾ ಸಿಬ್ಬಂದಿಯವರೊಂದಿಗೆ ಹಾಗೂ ಇಲಾಖಾ ವಾಹನ ನಂಬ್ರ ಕೆಎ 20 ಜಿ 238ರಲ್ಲಿ ಚಾಲಕನಾಗಿ ಎ.ಹೆಚ್.ಸಿ 21ನೇ ಮಂಜುನಾಥ ಇವರೊಂದಿಗೆ ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮಕ್ಕೆ ತೆರಳಿ ಅವಶ್ಯ ವಸ್ತುಗಳ ಖರೀದಿಯ ಅಂಗಡಿಯನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 09.20 ಗಂಟೆಗೆ ಶಿರಿಯಾರ ಗ್ರಾಮದ ಶೋಭಾ ಆರ್ಕೆಡ್ ನಲ್ಲಿರುವ ಓಂಕಾರ್ ಡಿಸೈನ್ ಕ್ಲಾತ್ ಸ್ಟೋರ್ ಅಂಗಡಿಯು ತೆರೆದುಕೊಂಡಿದ್ದು, ಗ್ರಾಹಕರೊಂದಿಗೆ ವ್ಯವಹಾರ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಅಂಗಡಿಯ ಒಳಗಡೆ ಕುಳಿತುಕೊಂಡಿದ್ದ ವ್ಯಕ್ತಿಯಲ್ಲಿ ವಿಚಾರಿಸಲಾಗಿ ತಾನು ಅಂಗಡಿಯ ಮಾಲಕನಾಗಿರುವುದಾಗಿ ತಿಳಿಸಿರುತ್ತಾನೆ. ಆತನ ಹೆಸರು ಕೇಳಲಾಗಿ ರತ್ನಾಕರ  ಪ್ರಾಯ: 55 ವರ್ಷ ತಂದೆ: ಧರ್ಮಪಾಲ ವಾಸ:ಕೊಳ್ಕೆ ಬೈಲ್ ಶಿರಿಯಾರ ಗ್ರಾಮ,ಬ್ರಹ್ಮಾವರ ತಾಲೂಕು ಎಂಬುದಾಗಿ ತಿಳಿಸಿದ್ದು ಕೋವಿಡ್‌ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ನಿಯಮ ಉಲ್ಲಂಘಿಸಿ ತನ್ನ ಬಟ್ಟೆ ಅಂಗಡಿಯನ್ನು  ತೆರೆದುಕೊಂಡಿದ್ದು, ಪಂಚನಾಮೆಯೊಂದಿಗೆ ವರದಿ ನೀಡಿದ್ದನ್ನು ಸ್ವೀಕರಿಸಿ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 92/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ : ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021ರಿಂದ ದಿನಾಂಕ 12/05/2021ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅವಶ್ಯ ವಸ್ತುಗಳ ಖರೀದಿಯ ಬಗ್ಗೆ ಇರುವ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಪಿರ್ಯಾದಿ ಸಂತೋಷ ಬಿಪಿ, ಪೊಲೀಸ್ ಉಪನಿರೀಕ್ಷಕರು, ಕೋಟ ಇವರು ದಿನಾಂಕ 13/05/2021ರಂದು ಠಾಣಾ ಸಿಬ್ಬಂದಿಯವರೊಂದಿಗೆ ಹಾಗೂ ಇಲಾಖಾ ವಾಹನ ನಂಬ್ರ ಕೆಎ 20 ಜಿ 238ರಲ್ಲಿ ಚಾಲಕನಾಗಿ ಎ.ಹೆಚ್.ಸಿ 21ನೇ ಮಂಜುನಾಥ ಇವರೊಂದಿಗೆ ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮಕ್ಕೆ ತೆರಳಿ ಅವಶ್ಯ ವಸ್ತುಗಳ ಖರೀದಿಯ ಅಂಗಡಿಯನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 09.20 ಗಂಟೆಗೆ ಶಿರಿಯಾರ ಗ್ರಾಮದ ಶೋಭಾ ಆರ್ಕೆಡ್ ನಲ್ಲಿರುವ ವಿಘ್ನೇಶ್ವರ ಪಾನ್ ಸ್ಟಾಲ್ ಅಂಗಡಿಯು ತೆರೆದುಕೊಂಡಿದ್ದು, ಗ್ರಾಹಕರೊಂದಿಗೆ  ವ್ಯವಹಾರ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಅಂಗಡಿಯ ಒಳಗಡೆ ಕುಳಿತುಕೊಂಡಿದ್ದ ವ್ಯಕ್ತಿಯಲ್ಲಿ ವಿಚಾರಿಸಲಾಗಿ ತಾನು ಅಂಗಡಿಯ ಮಾಲಕನಾಗಿರುವುದಾಗಿ ತಿಳಿಸಿರುತ್ತಾನೆ. ಆತನ ಹೆಸರು ಕೇಳಲಾಗಿ ಶಂಕರ ಪ್ರಾಯ: 44 ವರ್ಷ ತಂದೆ: ಬಸವ ದೇವಾಡಿಗ ವಾಸ:ಕೊಳ್ಕೆ ಬೈಲ್ ಶಿರಿಯಾರ ಗ್ರಾಮ, ಬ್ರಹ್ಮಾವರ ತಾಲೂಕು ಎಂಬುದಾಗಿ ತಿಳಿಸಿದ್ದು, ಕೋವಿಡ್‌ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ತನ್ನ ಪಾನ್ ಸ್ಟಾಲ್ ಅಂಗಡಿಯನ್ನು ತೆರೆದುಕೊಂಡಿದ್ದು, ಪಂಚನಾಮೆಯೊಂದಿಗೆ ವರದಿ ನೀಡಿದ್ದನ್ನು ಸ್ವೀಕರಿಸಿ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 93//2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021ರಿಂದ ದಿನಾಂಕ 12/05/2021ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅವಶ್ಯ ವಸ್ತುಗಳ ಖರೀದಿಯ ಬಗ್ಗೆ ಇರುವ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಪಿರ್ಯಾದಿ ಸಂತೋಷ ಬಿಪಿ, ಪೊಲೀಸ್ ಉಪನಿರೀಕ್ಷಕರು, ಕೋಟ ಇವರು ದಿನಾಂಕ 13/05/2021 ರಂದು ಠಾಣಾ ಸಿಬ್ಬಂದಿಯವರೊಂದಿಗೆ ಹಾಗೂ ಇಲಾಖಾ ವಾಹನ ನಂಬ್ರ ಕೆಎ 20 ಜಿ 238ರಲ್ಲಿ ಚಾಲಕನಾಗಿ ಎ.ಹೆಚ್.ಸಿ 21ನೇ ಮಂಜುನಾಥ ಇವರೊಂದಿಗೆ ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮಕ್ಕೆ ತೆರಳಿ ಅವಶ್ಯ ವಸ್ತುಗಳ ಖರೀದಿಯ ಅಂಗಡಿಯನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 09.20 ಗಂಟೆಗೆ ಶಿರಿಯಾರ ಗ್ರಾಮದ ರಮಾನಾಥ ಕಾಂಪ್ಲೆಕ್ಷ ನಲ್ಲಿರುವ ಲುಕ್ ಸ್ಮಾರ್ಟ ಕ್ಲಾತ್ ಸೆಂಟರ್ ಅಂಗಡಿ ತೆರೆದುಕೊಂಡಿದ್ದು, ಗ್ರಾಹಕರೊಂದಿಗೆ  ವ್ಯವಹಾರ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಅಂಗಡಿಯ ಒಳಗಡೆ ಕುಳಿತುಕೊಂಡಿದ್ದ ವ್ಯಕ್ತಿಯಲ್ಲಿ ವಿಚಾರಿಸಲಾಗಿ ತಾನು ಅಂಗಡಿಯ ಮಾಲಕನಾಗಿರುವುದಾಗಿ ತಿಳಿಸಿರುತ್ತಾನೆ. ಆತನ ಹೆಸರು ಕೇಳಲಾಗಿ ಮಂಜುನಾಥ ಪ್ರಾಯ: 38 ವರ್ಷ ತಂದೆ: ಕೃಷ್ಣ ಮರಕಾಲ ವಾಸ:ಕೊಳ್ಕೆಬೈಲ್ ಶಿರಿಯಾರ ಗ್ರಾಮ, ಬ್ರಹ್ಮಾವರ ತಾಲೂಕು ಎಂಬುದಾಗಿ ತಿಳಿಸಿದ್ದು ಕೋವಿಡ್‌ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ನಿಯಮ ಉಲ್ಲಂಘಿಸಿ ತನ್ನ ಬಟ್ಟೆ ಅಂಗಡಿಯನ್ನು ತೆರೆದುಕೊಂಡಿದ್ದು, ಪಂಚನಾಮೆಯೊಂದಿಗೆ ವರದಿ ನೀಡಿದ್ದನ್ನು ಸ್ವೀಕರಿಸಿ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 94//2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅವಶ್ಯ ವಸ್ತುಗಳ ಖರೀದಿಯ ಬಗ್ಗೆ ಇರುವ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಪಿರ್ಯಾದಿ ಸಂತೋಷ ಬಿಪಿ, ಪೊಲೀಸ್ ಉಪನಿರೀಕ್ಷಕರು, ಕೋಟ ಇವರು ದಿನಾಂಕ 13/05/2021 ರಂದು ಠಾಣಾ ಸಿಬ್ಬಂದಿಯವರೊಂದಿಗೆ ಹಾಗೂ ಇಲಾಖಾ ವಾಹನ ನಂಬ್ರ ಕೆಎ 20 ಜಿ 238ರಲ್ಲಿ ಚಾಲಕನಾಗಿ ಎ.ಹೆಚ್.ಸಿ 21ನೇ ಮಂಜುನಾಥ ಇವರೊಂದಿಗೆ ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮಕ್ಕೆ ತೆರಳಿ ಅವಶ್ಯ ವಸ್ತುಗಳ ಖರೀದಿಯ ಅಂಗಡಿಯನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 09.20 ಗಂಟೆಗೆ ಶಿರಿಯಾರ ಗ್ರಾಮದ ರಮಾನಾಥ ಕಾಂಪ್ಲೆಕ್ಷ ನಲ್ಲಿರುವ ಲುಕ್ ಸ್ಮಾರ್ಟ ಕ್ಲಾತ್ ಸೆಂಟರ್ ಅಂಗಡಿಯು ತೆರೆದುಕೊಂಡಿದ್ದು ಗ್ರಾಹಕರೊಂದಿಗೆ ವ್ಯವಹಾರ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಅಂಗಡಿಯ ಒಳಗಡೆ ಕುಳಿತುಕೊಂಡಿದ್ದ ವ್ಯಕ್ತಿಯಲ್ಲಿ ವಿಚಾರಿಸಲಾಗಿ ತಾನು ಅಂಗಡಿಯ ಮಾಲಕನಾಗಿರುವುದಾಗಿ ತಿಳಿಸಿರುತ್ತಾನೆ. ಆತನ ಹೆಸರು ಕೇಳಲಾಗಿ ದಿನೇಶ ಪ್ರಾಯ: 38 ವರ್ಷ ತಂದೆ: ಕೃಷ್ಣ ಮರಕಾಲ ವಾಸ:ಕೊಳ್ಕೆಬೈಲ್  ಶಿರಿಯಾರ ಗ್ರಾಮ,ಬ್ರಹ್ಮಾವರ ತಾಲೂಕು ಎಂಬುದಾಗಿ ತಿಳಿಸಿದ್ದು ಕೋವಿಡ್‌ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ನಿಯಮ ಉಲ್ಲಂಘಿಸಿ ತನ್ನ ಬಟ್ಟೆ  ಅಂಗಡಿಯನ್ನು ತೆರೆದುಕೊಂಡಿದ್ದು, ಪಂಚನಾಮೆಯೊಂದಿಗೆ ವರದಿ ನೀಡಿದ್ದನ್ನು ಸ್ವೀಕರಿಸಿ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 95/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು :

  • ಕುಂದಾಪುರ : ಪಿರ್ಯಾದಿ ಸುರೇಶ ಶೆಟ್ಟಿ, ಪ್ರಾಯ: 44 ವರ್ಷ, ತಂದೆ: ನರಸಿಂಹ ಶೆಟ್ಟಿ, ವಾಸ: ಶ್ರೀ ಸಾಯಿ ಸ್ವಾಮಿ ಮನೆ, ಮೂಡುಗೋಪಾಡಿ, ಗೋಪಾಡಿ ಗ್ರಾಮ, ಕುಂದಾಪುರ ತಾಲೂಕು ಇವರ ತಂದೆ ನರಸಿಂಹ ಶೆಟ್ಟಿ ಪ್ರಾಯ: 73 ವರ್ಷರವರು ತಾಯಿ ಗುಲಾಬಿ ಶೆಟ್ಟಿ ಮತ್ತು ಕುಟುಂಬಸ್ಥರೊಂದಿಗೆ ಮೂಡುಗೋಪಾಡಿಯಲ್ಲಿ ವಾಸವಾಗಿರುವುದಾಗಿದೆ. ಪಿರ್ಯಾದುದಾರರ ತಾಯಿ ಶ್ರೀಮತಿ ಗುಲಾಬಿ ಶೆಟ್ಟಿಯವರು ಅನಾರೋಗ್ಯ ನಿಮಿತ್ತ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು ಸದ್ರಿ ವಿಚಾರದಿಂದ ನರಸಿಂಹ ಶೆಟ್ಟಿಯವರು ಬೇಜಾರಿನಲ್ಲಿದ್ದು ದಿನಾಂಕ 12-05-2021  ರಂದು 21 :30 ಗಂಟೆಗೆ ಊಟ ಮಾಡಿ ಮಲಗಿದವರು ಬೆಳಗ್ಗೆ ಕಾಣದೇ ಇದ್ದು ಹುಡುಕಲಾಗಿ ದಿನಾಂಕ 13-05-2021ರ 06 :00 ಗಂಟೆಗೆ ಮನೆಯ ಸಮೀಪದ ಗೇರು ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿದೆ. ನರಸಿಂಹ ಶೆಟ್ಟಿಯವರ ಅವರ ಪತ್ನಿ ಗುಲಾಭಿ ಶೆಟ್ಟಿಯವರ ಅನಾರೋಗ್ಯ ವಿಚಾರದಿಂದ ಮನನೊಂದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ: 17/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ : ಪಿರ್ಯಾದಿ ಲೀಲಾವತಿ, ಪ್ರಾಯ: 48 ವರ್ಷ, ಗಂಡ: ದಿ/ ಕೃಷ್ಣ ಶೆಟ್ಟಿಗಾರ್,  ವಾಸ: ದೇವು ಮನೆ, ವಕ್ವಾಡಿ, ಕುಂದಾಪುರ ತಾಲೂಕು ಇವರ  17 ವರ್ಷ ಪ್ರಾಯದ ದತ್ತು ಮಗಳಾದ ಪವಿತ್ರ ಎಂಬುವವರು ಯಾವುದೋ ವೈಯುಕ್ತಿಕ ಕಾರಣದಿಂದ ಮನನೊಂದು ದಿನಾಂಕ:12/05/2020 ರಂದು 07:00 ಗಂಟೆಗೆ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದು ಆಕೆಯನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರದ ವಿನಯ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ  ಉಡುಪಿ ಅಜ್ಜರಕಾಡ ಆಸ್ಪತ್ರೆಗೆ ದಾಖಲಿಸಿದ್ದು ದಿನಾಂಕ 13-05-2021 ರಂದು ಬೆಳಗ್ಗೆ 04:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ  ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ: 16/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 14-05-2021 11:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080