ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ಫಿರ್ಯಾದಿದಾರರಾಧ ಅಶೋಕ್ ಕುಮಾರ್ ಹೆಗ್ಡೆ ಪ್ರಾಯ: 66 ವರ್ಷ ತಂದೆ: ದಿ/ ಸದಾನಂದ ಹೆಗ್ಡೆ ವಾಸ: ಶ್ರೀ ಮಂಜುನಾಥ ಮಂಡಾಡಿಜೆಡ್ಡು ಚಾರಾ ಗ್ರಾಮ ಹೆಬ್ರಿ ಇವರು ದಿನಾಂಕ 12/04/2023 ರಂದು ಸಮಯ ಸುಮಾರು ಬೆಳಿಗ್ಗೆ 8:00 ಗಂಟೆ ಸಮಯಕ್ಕೆ ಹೆಬ್ರಿ ಗ್ರಾಮದ ಹೆಬ್ರಿ ಕೆಳಪೇಟೆಯ ನಾಯಕ್ ರೆಸ್ಟೋರೆಂಟ್ ಹೊಟೇಲ್ ನ ಎದುರು ರಸ್ತೆಯ ಬದಿಯಲ್ಲಿ ನಿಂತಿರುವಾಗ ಉಡುಪಿ ಕಡೆಯಿಂದ ಹೆಬ್ರಿ ಕಡೆಗೆ KA-20 S-6016 ನೇ ಮೋಟಾರ್ ಸೈಕಲ್ ಸವಾರ ಭಾಸ್ಕರ ಇವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ರಸ್ತೆಯ ಎಡ ಬದಿಯಲ್ಲಿ ನಿಂತುಕೊಂಡಿದ್ದ ಫಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಇವರು ಕಳಗೆ ಬಿದ್ದು ಅವರ ಎಡ ಕೈಯ ಬಳಿ ಮೂಳೆ ಮುರಿತದ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 22/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಭಾಸ್ಕರ ಪೂಜಾರಿ  (52) ತಂದೆ:ಕರಿಯ ಪೂಜಾರಿ ವಾಸ: ಮಾತೃಶ್ರೀ ನಿಲಯ ಸೈಬ್ರಕಟ್ಟೆ ಶಿರಿಯಾರ ಗ್ರಾಮ ಬ್ರಹ್ಮಾವರ ಇವರು ದಿನಾಂಕ 13/04/2023 ರಂದು ಬೆಳಿಗ್ಗೆ 09:30 ಗಂಟೆಗೆ ಮಾಲಕರಾದ ಮಹಾಬಲ ಪೂಜಾರಿ ರವರ KA-20-EY-4692 ನೇ ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸವಾರನಾಗಿ ಕುಳಿತುಕೊಂಡು ಕೋಟ ಮೂರುಕೈಗೆ ಹೋಗಿ ವಾಪಾಸು ಬರುವಾಗ ತಡವಾದ ಕಾರಣ ಮಾಲಕರು  ಬನ್ನಾಡಿ ಶಾಲೆಯ ಹತ್ತಿರ ತಿರುವಿನಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟರ್ ಸೈಕಲ್ ಹತೋಟಿ ತಪ್ಪಿ ರಸ್ತೆಗೆ ಬಿದ್ದಿರುತ್ತದೆ. ಪರಿಣಾಮ ಭಾಸ್ಕರ ಪೂಜಾರಿ  ರವರ ಎಡ ಭುಜದ ಮೂಳೆ ಮುರಿತದ ಗಾಯ ಹಾಗೂ ಕೈ ಕಾಲಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿರುತ್ತದೆ. ಸವಾರರಾದ  ಮಹಾಬಲ ಪೂಜಾರಿಯವರಿಗೆ ಕೈ ಕಾಲಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿರುತ್ತದೆ. ಈ ಅಪಘಾತಕ್ಕೆ ಮೋಟಾರ್ ಸೈಕಲ್ ಸವಾರ ಮಹಾಬಲ ಪೂಜಾರಿಯವರ ಅತೀವೇಗ ಹಾಗೂ ಅಜಾಗರೂಕತೆಯ ಸವಾರಿಯೇ ಕಾರಣವಾಗಿರುವುದಾಗಿದೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 61/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಕಾಪು:  ದಿನಾಂಕ 13/04/2023 ರಂದು ಪಿಯಾ೯ದಿದಾರರಾದ ಸುಮ. ಬಿ ಪಿ.ಎಸ್.‌ ಐ ಕಾಪು ಪೊಲೀಸ್‌ ಠಾಣೆ ಇವರು  ಠಾಣೆಯಲ್ಲಿರುವ ಸಮಯ ಸುಮಾರು 17:15 ಗಂಟೆಗೆ  ಪಡು ಗ್ರಾಮದ ಕಾಪು ಪೇಟೆಯ ಮಾರುಕಟ್ಟೆ ಬಳಿ ಸಾವ೯ಜನಿಕ ಸ್ಥಳದಲ್ಲಿ ಮಟ್ಕಾ ಜುಆರಿ ಆಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ  ಧಾಳಿ ನೆಡೆಸುವರೇ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಸಿಬ್ಬಂದಿಗಳಾದ ಪಿಸಿ 293 ಪ್ರೇಮ್‌ ಕುಮಾರ್‌ ಪಿಸಿ 333 ಮಾಧವ ಹಾಗೂ ಇಲಾಖಾ ವಾಹನಚಾಲಕ ಎಪಿಸಿ 17 ಸುನಿಲ್‌ ಹಾಗೂ ಪಂಚರೊಂದಿಗೆ ಇಲಾಖಾ ವಾಹನ ನಂಬ್ರ ಕೆ.ಎ-20-ಜಿ-0275 ನೇಯದರಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಲ್ಲಿ ಓವ೯ ವ್ಯಕ್ತಿಯು 1 ರೂಪಾಯಿಗೆ 70 ರೂಪಾಯಿ ಎಂಬುದಾಗಿ ಕೂಗುತ್ತಿದ್ದು ಸಾವ೯ಜನಿಕರು ಆತನ ಸುತ್ತ ಸೇರಿರುವುದನ್ನು ಕಂಡು  ಸಿಬ್ಬಂದಿಗಳೊಂದಿಗೆ ಧಾಳಿ ನೆಡೆಸಿ  ಮಟ್ಕಾ ಜುಗಾರಿ ಆಡುತ್ತಿದ್ದ ಚಂದ್ರಹಾಸ(41) ತಂದೆ:ದಿ! ಮುದ್ದು ಪೂಜಾರಿ, ವಾಸ:ಸಾಮಿಲ್‌ ತೋಟ ಪಡು ಗ್ರಾಮ ಕಾಪು  ತಾಲೂಕು ಎಂಬವರನ್ನು ವಶಕ್ಕೆ ಪಡೆದು ಆತನ ಮಟ್ಕಾ ಜುಗಾರಿ ಆಟುವರೇ ಬಳಸಿದ ಬಾಲ್‌ ಪೆನ್-1‌, ಮಟ್ಕಾ ಚೀಟಿ-1 ಹಾಗೂ ಆಟದಿಂದ ಸಂಗ್ರಹಿಸಿದ 3,500/- ನಗದನ್ನು ಪಂಚರ ಸಮಕ್ಷಮ ಮಹಜರು ಮೂಲಕ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 66/2023 ಕಲಂ: 78(I)(III)  ಕೆ. ಪಿ. ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಸುಮಾ ಬಿ ಪಿಎಸ್‌ಐ ಕಾಪು ಪೊಲೀಸ್  ರವರು ದಿನಾಂಕ 13/04/2023 ರಂದು ಸಿಬ್ಬಂದಿಗಳು ಇಲಾಖಾ ಜೀಪು ನಂಬ್ರ ಕೆಎ-20 ಜಿ-0275 ನೇದರಲ್ಲಿ ಜೀಪು ಚಾಲಕನೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ ಕತ೯ವ್ಯದಲ್ಲಿರುವಾಗ 15:00 ಗಂಟೆಯ ಸುಮಾರಿಗೆ ಕಾಪು ತಾಲೂಕು, ಪಡು ಗ್ರಾಮದ, ಕಾಪು ಪೇಟೆಯ ಮಯೂರ ಹೋಟೆಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಭಾತ್ಮೀದಾರರಿಂದ ಖಚಿತ ಮಾಹಿತಿ ಬಂದಂತೆ ಠಾಣೆಗೆ ಹಾಜರಾಗಿ ಸದ್ರಿ ಸ್ಥಳಕ್ಕೆ ಧಾಳಿ ನಡೆಸುವರೇ ಮಾನ್ಯ ನ್ಯಾಯಾಲಯದ ಅನುಮತಿಗಾಗಿ ಕೋರಿಕೆ ಪತ್ರವನ್ನು ನಿವೇದಿಸಿಕೊಂಡು ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡ ಬಳಿಕ ಠಾಣೆಗೆ ಪಂಚಾಯತುದಾರರುಗಳನ್ನು ಬರಮಾಡಿಕೊಂಡು ಪಂಚರು ಹಾಗೂ ಮೇಲ್ಕಾಣಿಸಿದ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ 15:55 ಗಂಟೆಗೆ ಠಾಣೆಯಿಂದ ಹೊರಟು ಕಾಪು ತಾಲೂಕು ಪಡು  ಗ್ರಾಮದ ಕಾಪು ಪೇಟೆಯ ಮಯೂರ ಹೋಟೇಲ್‌ ಬಳಿ  ಸಾರ್ವಜನಿಕ ಸ್ಥಳದಲ್ಲಿ ಹಲವು ಜನರು ಸೇರಿದ್ದು ಅವರುಗಳ ಮಧ್ಯದಲ್ಲಿ ಕಪ್ಪು ಗೆರೆಗಳಿರುವ ಕೆಂಪು  ಬಣ್ಣದ ಅರ್ಧತೋಳಿನ ಶರ್ಟ್‌ ಹಾಗೂ ಬೂದು ಬಣ್ಣದ ಪ್ಯಾಂಟ್‌ ಧರಿಸಿದ್ದ ಓರ್ವ ವ್ಯಕ್ತಿಯು ಕೈಯಲ್ಲಿ ಚೀಟಿ ಬರೆಯುತ್ತಾ 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಜೋರಾಗಿ ಹೇಳುತ್ತಿದ್ದನು. ಸುತ್ತಲೂ ಸೇರಿದ್ದ ಸಾರ್ವಜನಿಕರು ಆತನಲ್ಲಿ ಹಣವನ್ನು ಪಣವಾಗಿ ಕಟ್ಟುತ್ತಿದ್ದು ಸದ್ರಿ ವ್ಯಕ್ತಿಯು ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸುತ್ತಿದ್ದು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡ ಪಿರ್ಯಾದಿದಾರರು 16:00 ಗಂಟೆಗೆ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದಾಗ ಅಲ್ಲಿ ಹಣ ಕಟ್ಟಲು ಸೇರಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯು ಕೂಡಾ ಓಡಲು ಪ್ರಯತ್ನಸಿದ್ದು, ಆತನನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಸುರೇಶ್‌ ಪೂಜಾರಿ ಎಂದು ತಿಳಿಸಿದ್ದು, ತಾನು ಮಟ್ಕಾ ಜೂಜಾಟದಿಂದ ಸಂಗ್ರಹಿಸಿದ ಹಣವನ್ನು ತನ್ನ ಸ್ವಂತ ಲಾಭಕ್ಕಾಗಿ ಬಳಿಸಿಕೊಳ್ಳುವುದಾಗಿ ತಿಳಿಸಿರುತ್ತಾರೆ. ಆತನಿಗೆ ಸ್ಥಳದಲ್ಲಿಯೇ ಕಲಂ 41(1)(ಎ) ಸಿ.ಆರ್.ಪಿ.ಸಿ ಯಂತೆ ನೋಟೀಸ್‌ ಜ್ಯಾರಿ ಮಾಡಿ. ಆತನ ಅಂಗ ಜಪ್ತಿ ಮಾಡಲಾಗಿ ಅಂಗಿಯ ಎಡಬದಿಯಲ್ಲಿದ್ದ  ಕಿಸೆಯಲ್ಲಿ ಮಟ್ಕಾ ಬರೆಯಲು ಬಳಸಿದ ಬಾಲ್ ಪೆನ್-1, ಮಟ್ಕಾ ಚೀಟಿ-01, ನಗದು ರೂ 3,900/- ರೂಪಾಯಿಗಳಿದ್ದು, ಸದ್ರಿ ಸೊತ್ತುಗಳನ್ನು ಪಂಚರ ಸಮಕ್ಷಮ ಮುಂದಿನ ಕ್ರಮದ ಬಗ್ಗೆ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 65/2023 ಕಲಂ: 78(I)(III)  ಕೆ. ಪಿ. ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.

ಮಾಧಕ ವಸ್ತು ಸೇವನೆ ಪ್ರಕರಣ

  • ಕಾಪು: ಸುಮಾ ಬಿ ಪಿಎಸ್‌ಐ ಕಾಪು ಪೊಲೀಸ್  ರವರು ದಿನಾಂಕ 11/04/2023 ರಂದು ಠಾಣಾ ಸಿಬ್ಬಂದಿಯವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ಕರ್ತವ್ಯದಲ್ಲಿರುವಾಗ 10:30 ಗಂಟೆಯ ಸುಮಾರಿಗೆ ಉಡುಪಿ ಜಿಲ್ಲೆ ಉಡುಪಿ ತಾಲೂಕು, ಉದ್ಯಾವರ ಗ್ರಾಮದ ಸಂಪಿಗೆನಗರ ಜಂಕ್ಷನ್ ಬಳಿ ಅನುಮಾನಾಸ್ಪದವಾಗಿ ಓರ್ವ ವ್ಯಕ್ತಿ ಕಂಡು ಬಂದಿದ್ದು, ಆತನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಆತನನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದುಕೊಂಡು ಆತನ ಹೆಸರು, ವಿಳಾಸ ವಿಚಾರಿಸಿಲಾಗಿ ಆತನ ಹೆಸರು ಶಾನವಾಜ್ (20) ತಂದೆ:‌ಇಬ್ರಾಹಿಂ ವಾಸ: ಸಾಜಿಯಾ ಕಂಪೌಂಡ್ ಸಂಪಿಗೆನಗರ ಉದ್ಯಾವರ ಗ್ರಾಮ ಉಡುಪಿ ತಾಲೂಕ್ ಉಡುಪಿ ಜಿಲ್ಲೆ. ಎಂಬುದಾಗಿ ತಿಳಿಸಿದ್ದು ಆತನಿಗೆ ಪೊಲೀಸ್ ನೋಟಿಸ್ ನೀಡಿ ವೈದ್ಯಕೀಯ ಪರೀಕ್ಷೆಯ ಬಗ್ಗೆ ಸಿಬ್ಬಂದಿಯವರನ್ನು ನೇಮಕ ಮಾಡಿ ಆಸ್ಪತ್ರೆಯ ಕೋರಿಕೆ ಪತ್ರದೊಂದಿಗೆ ಶಾನವಾಜ್ ನನ್ನು ಪ್ರೊಫೆಸರ್ ಅಂಡ್ ಹೆಡ್ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ ಮಣಿಪಾಲ ಇವರ ಮುಂದೆ ಹಾಜರುಪಡಿಸಿದ್ದು, ಪರೀಕ್ಷಿಸಿದ ವೈದ್ಯರು ದಿನಾಂಕ 13/04/2023 ರಂದು ಶಾನವಾಜ್ ಎಂಬಾತನು ಗಾಂಜಾ ಸೇವಿಸಿರುವ ಬಗ್ಗೆ ದೃಢಪತ್ರ ನೀಡಿರುವುದಾಗಿದೆ.  ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 64/2023 ಕಲಂ: 27 (b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಗಾಂಜಾ ಮಾರಾಟ ಪ್ರಕರಣ

  • ಉಡುಪಿ: ದಿನಾಂಕ13/04/2023 ರಂದು ಉಡುಪಿ ತಾಲೂಕು  ಕೊಡವೂರು ಗ್ರಾಮದ ಕಲ್ಲಮಠ ದೇವಸ್ಥಾನದ ಬಳಿ  ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡಲು ಕಾನೂನು ಬಾಹಿರವಾಗಿ ಹೊಂದಿದ್ದ ಭವನ್ ಶಂಕರ್, (43) ತಂದೆ: ನಾರಾಯಣ.ಕೆ.ಮೆಂಡನ್, ವಾಸ:ನಂ.15-112, ಚಿನ್ಮಯಿ, ಶಂಕರನಾರಾ ಯಣ ದೇವಸ್ಥಾನ ರಸ್ತೆ, ಕೆನರಾ ಬ್ಯಾಂಕ್ ಹತ್ತಿರ, ಕೊಡವೂರು ಎಂಬಾತನನ್ನು ಖಚಿತ ಮಾಹಿತಿಯ ಮೇರೆಗೆ ಪತ್ರಾಂಕಿತ ಅಧಿಕಾರಿ ಹಾಗೂ ಪಂಚರೊಂದಿಗೆ ದಾಳಿ ನಡೆಸಿ, ಆರೋಪಿಯನ್ನು 13:50  ಗಂಟೆಗೆ ದಸ್ತಗಿರಿಗೊಳಿಸಿ, ಆರೋಪಿಯಿಂದ 1 ಕೆ.ಜಿ . 82 ಗ್ರಾಂ ತೂಕದ ಗಾಂಜಾ, ನೇರಳೆ ಮತ್ತು ಕಂದು ಮಿಶ್ರಿತ ಬಣ್ಣದ ಕೈ ಚೀಲ -1, ಮೊಬೈಲ್‌ಪೋನ್- 1, ನಗದು ರೂ.2700/- ನ್ನು ವಶಪಡಿಸಿ ಕೊಂಡಿರುವುದಾಗಿರುತ್ತದೆ. ಸ್ವಾಧೀನಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ ರೂ.50,000/- ಆಗಿದ್ದು ಸ್ವಾಧೀನಪಡಿಸಿಕೊಂಡಿ ರುವ ಎಲ್ಲಾ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 57,700/- ಆಗಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 64/2023 ಕಲಂ : 8(C), 20(b)(ii) (B) ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಫುರ: ಫಿರ್ಯಾದಿದಾರರಾಧ ಸಚಿನ್ (27) ತಂದೆ:ಗೋಪಾಲಕೃಷ್ಣ ಆಚಾರ್ ವಾಸ:ಮನೋಶಾಂತಿ ಮನೆ, ಅಸೋಡು ಗ್ರಾಮ, ಕುಂದಾಪುರ ಇವರ ತಮ್ಮ ಪವನ್‌ ಜಿ ಆಚಾರ್(‌25) ಎಂಬಾತನು ಸುಮಾರು 7 ವರ್ಷದಿಂದ ಮಾನಸಿನಾಗಿ ಅಸ್ವಸ್ಥನಾಗಿದ್ದು ಈ ಬಗ್ಗೆ ಆತನಿಗೆ ಉಡುಪಿ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ಸಂಪೂರ್ಣವಾಗಿ ಗುಣ ಮುಖನಾಗಿರುವುದಿಲ್ಲ. ದಿನಾಂಕ 12/04/2023 ರಂದು ರಾತ್ರಿ 10:00 ಗಂಟೆಗೆ ಮನೆಯವರೆಲ್ಲರೂ ಮಲಗಿದ್ದು ಮಧ್ಯ ರಾತ್ರಿ ಸಮಯಕ್ಕೆ ಸಚಿನ್‌ ರವರು ನೋಡುವಾಗ ಮನೆಯ ಬಾಗಿಲು ತೆರೆದಿದ್ದು ಸಚಿನ್‌ ರವರ ತಮ್ಮ ಪವನ್‌ಜಿ ಆಚಾರ್ ಮಲಗಿದ್ದಲ್ಲಿ ಕಾಣಿಸದೇ ಇದ್ದು  ಹುಡುಕಾಡಿದರು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ದಿನಾಂಕ 13/04/2023 ರಂದು ಸಚಿನ್‌ ರವರು  ತಮ್ಮನನ್ನು ಹುಡುಕಾಡುತ್ತಿರುವಾಗ ಎದುರು ಮನೆಯ ಅಜಿತ್‌ ಶೆಟ್ಟಿ ಎಂಬವರ ಮನೆಯ ಬಾವಿಯಲ್ಲಿ ಚಪ್ಪಲಿ ತೇಲಾಡುತ್ತಿದ್ದು ಕಂಡು ಬಂದಿದ್ದು. ಈ ಬಗ್ಗೆ ಅನುಮಾನಗೊಂಡು ಅಗ್ನಿಶಾಮಕದವರನ್ನು ಕರೆಯಿಸಿ ಬಾವಿಯಲ್ಲಿ ಹುಡುಕಾಡಿದಾಗ 08:30 ಗಂಟೆ ಸಮಯಕ್ಕೆ ಮೃತ ದೇಹ ಪತ್ತೆಯಾಗಿರುತ್ತದೆ. ಮೃತರು ಮಾನಸಿಕ ಅಸ್ವಸ್ಥತೆಯಿಂದ  ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ.  ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 10/2023 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾಧ ಸನತ್ ದೇವಾಡಿಗ, (24) ತಂದೆ: ಲಕ್ಷ್ಮಣ ದೇವಾಡಿಗ, ವಾಸ: ಗಾಂದಾಟ್ಸ್ ಹೌಸ್, ಪಲಿಮಾರು ಮಠದ ಬಳಿ,ಪಲಿಮಾರು ಗ್ರಾಮ, ಕಾಪು ಇವರ ಮಾವ ಭಾಸ್ಕರ ದೇವಾಡಿಗ (60) ಎಂಬುವರು ಕೃಷಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 13/04/2023 ರಂದು ಕೆಲಸ ಮುಗಿಸಿ ಸಂಜೆ ಪಲಿಮಾರು ಪೇಟೆಗೆ ಹೋಗಿ ವಾಪಾಸ್ಸು ಮನೆಗೆ ನಡೆದುಕೊಂಡು ಬರುತ್ತಾ, ಸಮಯ ಸುಮಾರು 18:30 ಗಂಟೆಗೆ ಕಾಪು ತಾಲೂಕು ಪಲಿಮಾರು ಗ್ರಾಮದಲ್ಲಿರುವ ಅವರ ಮನೆಯ ಬಳಿ ಕಾಲು ದಾರಿಯ ಬದಿಯಲ್ಲಿ ಇದ್ದ ಗಿರೀಶ್ ಎಂಬುವರ ಆವರಣ ದಂಡೆ ಇರುವ ಬಾವಿಯ ಕುಂದವನ್ನು ಹಿಡಿದು ಮುಂದೆ ಸಾಗುವ ಸಮಯ ಆಕಸ್ಮಿಕವಾಗಿ ಕೈಜಾರಿ ಆಯ ತಪ್ಪಿ ಬಾವಿ ನೀರಿಗೆ ಬಿದ್ದು ಮೃತಪಟ್ಟಿದ್ದು, ಸದ್ರಿಯವರ ಮರಣದಲ್ಲಿ ಬೇರೆ ಯಾವುದೇ ಇರುವುದಿಲ್ಲವಾಗಿದೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 10/2023 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-04-2023 10:11 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080