ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಕಾಫು: ದಿನಾಂಕ 10/03/2023 ರಂದು ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ಮೂಡುಬೆಳ್ಳೆ ನಿವಾಸಿಗಳಾದ ಸುರೇಶ್‌ ಹಾಗೂ ಅವರ ಹೆಂಡತಿ ಸೇರಿ ಪಿರ್ಯಾದಿದಾರರಾದ ಶ್ರೀಮತಿ ಸುನಿತಾ ಗಂಡ: ಕುಮಾರ  ವಾಸ: ಹೌಸ್‌ ನಂಬ್ರ:6-62A, ಉಳಿಯಾರಗೋಳಿ ಗ್ರಾಮ ಕಾಪು ತಾಲ್ಲೂಕು ಉಡುಪಿ ಇವರ ಮನೆಗೆ ಅಕ್ರಮ ಪ್ರವೇಶ ಮಾಡಿ ಶ್ರೀಮತಿ ಸುನಿತಾ ಇವರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದು ಬೆದರಿಕೆ ಹಾಕಿರುತ್ತಾರೆ. ಶ್ರೀಮತಿ ಸುನಿತಾ ರವರು ಈ ವಿಚಾರವನ್ನು ಕೆಲಸಕ್ಕೆಂದು ಹೋಗಿದ್ದ ತನ್ನ ಮಗ ಸನತ್‌ ರವರಿಗೆ ತಿಳಿಸಿದ್ದು, ಇದರಿಂದ ಮನನೊಂದುಕೊಂಡಿದ್ದ ಸನತ್‌ ರವರು ದಿನಾಂಕ ಯಾವುದೋ ವಿಷ ಪದಾರ್ಥ ಸೇವಿಸಿ 11/04/2023 ರಂದು ರಾತ್ರಿ 1:00 ಗಂಟೆಗೆ ಹೊಟ್ಟೆ ನೋವಿನಿಂದ ನರಳಾಡುತ್ತಿದ್ದವರನ್ನು ಚಿಕಿತ್ಸೆ ಬಗ್ಗೆ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈಧ್ಯರ ಸೂಚನೆಯಂತೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಪರೀಕ್ಷಿಸಿದ ವೈಧ್ಯರು ವಿಷ ಸೇವನೆ ಮಾಡಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 67/2023 ಕಲಂ 448, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ 

  • ಕಾರ್ಕಳ: ದಿನಾಂಕ 13/04/2023 ರಂದು 22:30 ಗಂಟೆಗೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿ ಪೇಟೆಯಲ್ಲಿರುವ ಬಸ್ಸು ನಿಲ್ದಾಣದ ಬಳಿ ಇರುವ ಲಕ್ಷ್ಮೀ ವೈನ್ಸ್ ಶಾಪ್ ಪಕ್ಕದ ರಸ್ತೆಯಲ್ಲಿ ಆರೋಪಿ ದೇವೇಂದ್ರ ಶೆಟ್ಟಿ ಎಂಬಾತನು, ತನ್ನ ಸ್ವಂತ ಲಾಭಗೋಸ್ಕರ ಬೈಕ್ ನಂಬ್ರ KA-20 ER-6394 ನೇಯದರ ಮೇಲೆ ಕುಳಿತು ಕೆಲವು ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು IPL ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ತನ್ನ ಮೊಬೈಲ್ ನಲ್ಲಿ ಲೋಟಸ್ ಆ್ಯಪ್ ಮೂಲಕ ಪಂದ್ಯವನ್ನು ವೀಕ್ಷಿಸಿಸುತ್ತಾ ಕ್ರಿಕೆಟ್ ಬೆಟ್ಟಿಂಗ್‌‌ನಲ್ಲಿ ಹಣ ಹಾಕಿದರೆ, ಹೆಚ್ಚು ಹಣವನ್ನು ಕೊಡುವುದಾಗಿ, ಸಾರ್ವಜನಿಕರಿಗೆ ಹೇಳಿ ಅವರಿಂದ ಹಣವನ್ನು ಪಡೆದು ಬೆಟ್ಟಿಂಗ್ ಜೂಜಾಟ ನಡೆಸುತ್ತಿರುವುದಾಗಿ ಖಚಿತ ಮಾಹಿತಿಯಂತೆ ತೇಜಸ್ವಿ ಪಿಎಸ್ಐ ಕಾರ್ಕಳ ಗ್ರಾಮಾಂತರ ಠಾಣೆ ಇವರು ಸಿಬ್ಬಂಧಿಯವರೊಂದಿಗೆ ಸದ್ರಿ ಸ್ಥಳಕ್ಕೆ 22:50 ಗಂಟೆಗೆ ದಾಳಿ ನಡೆಸಿದಾಗ, ಮಧು ಅಜೆಕಾರು, ಪ್ರಭಾಕರ ನೆಲ್ಲಿಕಾರ್, ಕರ್ಣ ನಲ್ಲೂರು ಹಾಗೂ ನವೀನ್ ಬಜಗೋಳಿ ಇವರುಗಳು ಸ್ಥಳದಿಂದ ಓಡಿ ಹೋಗಿದ್ದು, ಆರೋಪಿ ದೇವೇಂದ್ರ ಶೆಟ್ಟಿ ಈತನನ್ನು ವಶಕ್ಕೆ ಪಡೆದು ಆರೋಪಿಯು ಕೃತ್ಯಕ್ಕೆ ಬಳಸಿದ oppo ಕಂಪೆನಿಯ Android ಪೋನ್ -1, ACE ಕಂಪೆನಿಯ ಕೀ ಪ್ಯಾಡ್ ಪೋನ್-1 ಹಾಗೂ Itel ಕಂಪೆನಿಯ ಕೀ ಪ್ಯಾಡ್ ಪೋನ್-1 ನ್ನು ಮತ್ತು IPL ಕ್ರಿಕೆಟ್ ಬೆಟ್ಟಿಂಗ್‌‌ನಿಂದ ಸಾರ್ವಜನಿಕರಿಂದ ಸಂಗ್ರಹಿಸಿದ 25,000/- ರೂಪಾಯಿ ನಗದು ಹಾಗೂ ಬೈಕ್ ನ್ನು ಮಹಜರು ಮುಖೇನ ವಶಕ್ಕೆ ಪಡೆದು ಎನ್,ಸಿ ಅರ್ಜಿ ದಾಖಲಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯದ ಆದೇಶದಂತೆ ದಿನಾಂಕ 14/04/2023 ರಂತೆ ಅನುಮತಿ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 53/2023 ಕಲಂ: 78 (i)(iii) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-04-2023 06:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080