ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ :

 • ಅಜೆಕಾರು : ಫಿರ್ಯಾದು ಸ್ವಸ್ತಿಕ್(21) ತಂದೆ, ಸತೀಶ್ ಎನ್ ರಾವ್, ವಾಸ: ಲಲಿತ ನಿವಾಸ ಬಾಳೆಹಿತ್ಲು ಅಂಡಾರು ಗ್ರಾಮ ಹೆಬ್ರಿ ತಾಲೂಕು, ಇವರ ತಂದೆ ದಿನಾಂಕ: 09-04-2022 ರಂದು ಹಿರ್ಗಾನ ಬಳಿ ರಸ್ತೆ ಅಪಘಾತವಾಗಿ ತೀವ್ರ ಗಾಯಗೊಂಡು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು, ಈ ಬಗ್ಗೆ ಫಿರ್ಯಾದುದಾರರ ತಾಯಿ ಶ್ರೀಮತಿ ವನಿತಾ (45) ರವರು ತುಂಬಾ ನೊಂದುಕೊಂಡಿದ್ದರು. ಅಲ್ಲದೇ ನಿನ್ನೆ ಕೆ.ಎಂ.ಸಿ ಆಸ್ಪತ್ರೆಯ ವೈಧ್ಯರು ತಂದೆಗೆ  ದಿನಾಂಕ:13/04/2022 ರಂದು ಆಪರೇಷನ್ ಮಾಡಬೇಕೆಂದು ತಿಳಿಸಿದಂತೆ ಫಿರ್ಯಾದುದಾರು ಹಣದ ವ್ಯವಸ್ಥೆಯನ್ನು ಮಾಡಿಕೊಳ್ಳಲು ದಿನಾಂಕ 12/04/2022 ರಂದು ಸಂಜೆ 8:00 ಗಂಟೆಗೆ ಮನೆಗೆ ಬಂದು ತಾಯಿಯಲ್ಲಿ ಆಪರೇಷನ್ ಗೆ ಹಣ ಬೇಕೆಂದು ಕೇಳಿದ್ದು, ತಾಯಿಯು ಹಣವಿಲ್ಲದ ಕಾರಣ ಬೇಸರಗೊಂಡು ರಾತ್ರಿಯಿಡಿ ಮಲಗದೇ ಬೊಬ್ಬೆ ಹಾಕುತ್ತಲೇ ಇದ್ದವರು. ಫಿರ್ಯಾದುದಾರರು ಬೆಳಗಿನ ಜಾವ 05:00 ಗಂಟೆಗೆ ಎದ್ದು ಸ್ನಾನಕ್ಕೆಂದು ಹೋಗುವ ಸಮಯ ಮನೆಯ ಹಾಲ್ ನಲ್ಲಿಯೇ ಕುಳಿತು ಹಣಕ್ಕೆ ಏನು ಮಾಡುವುದು ಎಂದು ಬೊಬ್ಬೆ ಹಾಕುತ್ತಿದ್ದವರು ಫಿರ್ಯಾದುದಾರರು ಸ್ನಾನ ಮುಗಿಸಿ ಮನೆಯೊಳಗೆ ಬಂದು ತಾಯಿಯನ್ನು ಕರೆದಿದ್ದು, ತಾಯಿಯು ಮಾತನಾಡದ ಕಾರಣ ಮನೆಯಲ್ಲಿ, ತೋಟದಲ್ಲಿ ಹುಡುಕಾಡಿದ್ದು, ಎಲ್ಲಿಯು ಕಂಡು ಬಾರದ  ಕಾರಣ ನೆರೆಕರೆಯ ನಿವಾಸಿಗಳೆಲ್ಲರೂ ಮನೆಯ ಬಳಿ ಬಂದು ನನ್ನ ತಾಯಿಯನ್ನು ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗದ ಕಾರಣ ಮನೆಯ ಮುಂದಿನ ಬಾವಿಯ ನೀರಿನಲ್ಲಿ ಬಿದ್ದಿಬಹುದೆಂದು ಅನುಮಾನಗೊಂಡು ಬಾವಿ ನೀರಿಗೆ ಕೋಲನ್ನು  ಹಾಕಿ ಹುಡುಕಾಡಿದ್ದು, ಬಾವಿಯ ಆಳದಲ್ಲಿ ಶ್ರೀಮತಿ ವನಿತಾ(45) ರವರ ಮೃತದೇಹ ಪತ್ತೆಯಾಗಿರುತ್ತದೆ.  ಶ್ರೀಮತಿ ವನಿತಾ(45) ರವರು ಅವರ  ಗಂಡನಿಗೆ ಅಪಘಾತವಾದ ದಿನದಿಂದ ಮಾನಸಿಕವಾಗಿ ತುಂಬಾ ನೊಂದುಕೊಂಡಿದ್ದು, ಅಲ್ಲದೇ ಆಸ್ಪತ್ರೆಯಲ್ಲಿದ್ದ ಗಂಡನ ಆಪರೇಷನ್ ಗೆ ಹಣವಿಲ್ಲದ ಕಾರಣ ಮಾನಸಿಕವಾಗಿ ನೊಂದು ಜೀವನದಲ್ಲಿ ಬೇಸರಗೊಂಡು ದಿನಾಂಕ 13-04-2022 ರಂದು ಬೆಳಿಗ್ಗೆ 05:00 ಗಂಟೆಯಿಂದ 05:20 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಮುಂದಿನ ಬಾವಿಯ ನೀರಿಗೆ ಹಾರಿ, ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ : 07/2022 U/s 174 CRPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಹಿರಿಯಡ್ಕ : ಪಿರ್ಯಾದು ರಾಘವೇಂದ್ರ ನಾಯ್ಕ್ (32) ತಂದೆ: ದಿ. ರಾಮಚಂದ್ರ  ನಾಯ್ಕ್  ವಾಸ: ಬಿ ಎಂ ಶಾಲೆಯ ಹಿಂಬದಿ, ಪರ್ಕಳ ಅಂಚೆ, ಹೆರ್ಗ ಗ್ರಾಮ ಉಡುಪಿ ಇವರ ತಮ್ಮನಾದ ಮಂಜುನಾಥನು(30) ಉದರ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಉಡುಪಿಯ ಅದರ್ಶ ಅಸ್ಪತ್ರೆಯಿಂದ ಚಿಕಿತ್ಸೆ ಮಾಡಲಾಗಿದ್ದು ನಂತರ ಮದ್ದು ತೆಗೆದುಕೊಳ್ಳುತ್ತಿದ್ದನು, ಇದೇ ಅನಾರೋಗ್ಯದ ಕಾರಣ ಅಥಾವ ಇನ್ನಾವುದೋ ವೈಯಕ್ತಿಕ ಕಾರಣದಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 13/04/2022 ಸಂಜೆ 4:57 ಗಂಟೆಯಿಂದ 5: 30 ಗಂಟೆಯ ಮದ್ಯಾವದಿಯಲ್ಲಿ ಪೆರ್ಡೂರು ಪಕ್ಕಾಲು 5 ಸೆಂಟ್ಸ್ ನಲ್ಲಿ ಇರುವ ಮನೆಯ ಮಲಗುವ ಕೋಣೆಯ ಸೀಲಿಂಗ್ ಫ್ಯಾನಿಗೆ ಚೂಡಿದಾರ ಶಾಲ್ ಕಟ್ಟಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ : 20/2022 ಕಲಂ: 174 ಸಿಆರಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣ :

 • ಕುಂದಾಪುರ : ದಿನಾಂಕ 13/04/2022 ರಂದು ಬೆಳಿಗ್ಗೆ ಸುಮಾರು 8:15 ಗಂಟೆಗೆ ಕುಂದಾಪುರ  ತಾಲೂಕಿನ, ಬಸ್ರೂರು ಗ್ರಾಮದ ಜೆ.ಎಂ ರಸ್ತೆಯಲ್ಲಿ, ಆಪಾದಿತ ಪ್ರಶಾಂತ ಎಂಬವರು KA36-A-7006ನೇ ಮಿನಿ ಗೂಡ್ಸ್ ವಾಹನವನ್ನು ಅವನ ಮನೆ ಕಡೆಯಿಂದ ರಸ್ತೆಗೆ ವೇಗ ಹಾಗೂ ನಿರ್ಲಕ್ಷತನದಿಂದ ಹಿಮ್ಮುಖವಾಗಿ ಚಲಾಯಿಸಿ, ಬಸ್ರೂರು ಕಡೆಯಿಂದ ಆನೆಗಳ್ಳಿ ಮಾರ್ಗವಾಗಿ ಕುಂದಾಪುರ ಕಡೆಗೆ ಪಿರ್ಯಾದಿದಾರರ ಅಣ್ಣ ರೋನಿ ಬೆರೆಟ್ಟೋರವರು ಸವಾರಿ ಮಾಡಿಕೊಂಡು ಬರುತ್ತಿದ್ದ KA20-EX-7076ನೇ ಬೈಕಿಗೆ ಅಪಘಾತಪಡಿಸಿ, ರೋನಿ ಬೆರೆಟ್ಟೋರವರ ತಲೆಗೆ, ಮೂಗಿಗೆ, ಎರಡೂ ಕೈಗಳಿಗೆ ರಕ್ತಗಾಯವಾಗಿ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ: 48/2022  ಕಲಂ . 279, 337 IPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಳವು ಪ್ರಕರಣ :

 • ಪಡುಬಿದ್ರಿ: ಪಿರ್ಯಾದಿ ರಜಾಕ್ ಯು, ಪ್ರಾಯ: 45 ವರ್ಷ, ತಂದೆ: ದಿ. ಇಬ್ರಾಹಿಂ,  ವಾಸ: ನ್ಯೂ ಹೌಸ್, ಉಚ್ಚಿಲ, ಬಡಾ ಗ್ರಾಮ, ಕಾಪು ತಾಲೂಕು ಇವರ ಚಿಕ್ಕಮ್ಮನ ಮಗ ಮೊಹಮ್ಮದ್ ರಫೀಕ್ ಎಂಬುವರ ಬಾಬ್ತು KA-20-L-2452 ನೇ ನಂಬ್ರದ ಹೀರೋ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ಲನ್ನು ಪಿರ್ಯಾದಿದಾರರೇ ಉಪಯೋಗಿಸುತ್ತಿದ್ದು, ಪಿರ್ಯಾದಿದಾರರು ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿನ ಕಾರ್ಯಕ್ರಮಕ್ಕೆ ಹೋಗಿ ಬಂದು, ಸದ್ರಿ ಮೋಟಾರ್ ಸೈಕಲ್ಲನ್ನು ದಿನಾಂಕ:07.04.2022 ರಂದು ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲದಲ್ಲಿರುವ ತಮ್ಮ ನ್ಯೂ ಹೌಸ್ ಮನೆಯ ಅಂಗಳದಲ್ಲಿ ನಿಲ್ಲಿಸಿ, ಮೋಟಾರ್ ಸೈಕಲ್ಲಿನ ಒಂದು ಕೀಯನ್ನು ಮೋಟಾರ್ ಸೈಕಲ್ಲಿನ ಟ್ಯಾಂಕ್ ಕವರ್‌ನಲ್ಲಿ ಇರಿಸಿ ಹೋಗಿದ್ದು, ರಾತ್ರಿ 01:30 ಗಂಟೆಯಿಂದ ಬೆಳಗಿನ ಜಾವ 04:30 ಗಂಟೆಯ ಮಧ್ಯಾವಧಿಯಲ್ಲಿ, ಯಾರೋ ಕಳ್ಳರು KA-20-L-2452ನೇ ನಂಬ್ರದ ಹೀರೋ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ಲನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್ ಸೈಕಲ್ಲಿನ ಮೌಲ್ಯ ರೂ.10,000/- ಆಗಿರುತ್ತದೆ ಎಂದು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 41/2022, ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಲ್ಲೆ ಪ್ರಕರಣ

 • ಬ್ರಹ್ಮಾವರ : ದಿನಾಂಕ 12.04.2022ರಂದು ಪಿರ್ಯಾದಿ ಸನ್ನಿ ಪೂಜಾರಿ (61) ತಂದೆ: ದಿ. ಸಂಜೀವ ಪೂಜಾರಿ, ವಾಸ: “ಶ್ರೀ ಮಂಜು ಮುಟ್ಟಿಕಲ್ಲು ಮದಗ, ಕೊಳಲಗಿರಿ ಅಂಚೆ, ಉಪ್ಪೂರು ಗ್ರಾಮ, ಬ್ರಹ್ಮಾವರ ಅವರ ಪರಿಚಯದ ರಾಜಣ್ಣ ರವರ ಜೊತೆ ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ ಮುಟ್ಟಿಕಲ್ಲು ಮದಗ ಎಂಬಲ್ಲಿ ಅವರ ವಾಸದ ಮನೆಯ ಹತ್ತಿರ ಇರುವ ಮುಟಿಕಲ್ಲು ಮೋರಿ ದಂಡೆಯ ಮೇಲೆ ರಸ್ತೆ ಬದಿಯಲ್ಲಿ ಮಾತನಾಡುತ್ತಾ ಕುಳಿತುಕೊಂಡಿರುವಾಗ ಸಂಜೆ 6:00 ಗಂಟೆಯ ಸುಮಾರಿಗೆ ಅವರ ಪರಿಚಯದ ಆರೋಪಿ ರಮೇಶ್‌ ಪೂಜಾರಿಯು ಬಂದು ಪಿರ್ಯಾದಿಯ ಹತ್ತಿರ ಹನೀಫನನ್ನು ನೋಡಿದ್ದೀಯಾ? ಎಂದು ಏರು ಧ್ವನಿಯಲ್ಲಿ ಕೇಳಿದ್ದು, ಅದಕ್ಕೆ ಪಿರ್ಯಾದಿಯು ಹನೀಫನು ಅವನ ಮನೆಯಲ್ಲಿ ಇರುತ್ತಾನೆ, ನಾನು ಅವನ ಮನೆಯಲ್ಲಿ ಇರುವುದಲ್ಲ, ಬೇಕಾದರೆ ಅವನ ಮನೆಗೆ ಹೋಗಿ ಕೇಳು ಎಂದು ಹೇಳಿರುತ್ತಾರೆ. ಆಗ ಆರೋಪಿಯು ಕೋಪಗೊಂಡು ಪಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಅಲ್ಲೇ ಅಂಗಡಿ ಬದಿಯಲ್ಲಿ ಇದ್ದ ಒಂದು ಖಾಲಿ ಬಾಜಲ್‌ ಬಾಟಲಿಯನ್ನು ಎತ್ತಿಕೊಂಡು ಪಿರ್ಯಾದಿಯ ತಲೆಯ ಎಡಬದಿಗೆ ಹೊಡೆದಿರುತ್ತಾನೆ. ಆಗ ಬಾಜಲ್‌ ಬಾಟಲ್‌ ಒಡೆದು ಹೋಗಿ ಅವರ ತಲೆಗೆ ರಕ್ತಗಾಯವಾಗಿರುತ್ತದೆ. ಅಲ್ಲದೇ ಆರೋಪಿಯು ಅಲ್ಲೇ ರಸ್ತೆ ಬದಿಯಲ್ಲಿ ಬಿದ್ದಿದ್ದ ಕೆಂಪು ಕಲ್ಲಿನ ತುಂಡನ್ನು ಎತ್ತಿಕೊಂಡು ಪಿರ್ಯಾದಿಯ ಬಲಕಾಲಿನ ತೊಡೆಗೆ ಹೊಡೆದಿರುತ್ತಾನೆ. ಆಗ ಪಿರ್ಯಾದಿಯು ನೋವಿನಿಂದ ಬೊಬ್ಬೆ ಹಾಕಿಕೊಂಡು ಮನೆ ಕಡೆಗೆ ಓಡಿ ಹೋಗುವಾಗ ಆರೋಪಿಯು ಅವರನ್ನು ಉದ್ಧೇಶಿಸಿ ಜೀವ ಬೆದರಿಕೆ ಹಾಕಿರುವುದಾಗಿದೆ. ಗಾಯಗೊಂಡು ಪಿರ್ಯಾದಿಯು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 64/2022 ಕಲಂ 504, 324, 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗೋ ಕಳವು ಪ್ರಕರಣ:

 • ಗಂಗೊಳ್ಳಿ :  ಫಿರ್ಯಾದಿ ಅಶ್ವತ್ ಪ್ರಾಯ: 24 ವರ್ಷ, ತಂದೆ: ಸಂಜೀವ ಪೂಜಾರಿ, ವಾಸ: ಅಂಗಡಿ ಮನೆ, ಆಲೂರು ಗ್ರಾಮ, ಕುಂದಾಪುರ ಇವರ ಮನೆಯ ನಸು ಕಂದು ಬಣ್ಣದ ಮಲನಾಡು ಗಿಡ್ಡ ದೇಶಿ ತಳಿಯ ಗಂಡು ಕರು ಪ್ರತಿದಿನ ರಾತ್ರಿ ಕುಂದಾಪುರ ತಾಲೂಕು ಆಲೂರು ಗ್ರಾಮದ ಅಂಗಡಿಮನೆಯ ಬಳಿ ಇರುವ ಫಿರ್ಯಾದಿದಾರರ ಮನೆಯ ಮುಂದೆ ಇರುವ ತಮ್ಮ ಬಾಬ್ತು ಅಂಗಡಿಯ ಎದುರುಗಡೆ ಮಲಗಿರುತ್ತಿತ್ತು. ಫಿರ್ಯಾದಿದಾರರು ದಿನಾಂಕ: 11-04-2022 ರಂದು ರಾತ್ರಿ ಸ್ನೇಹಿತರೊಂದಿಗೆ ಯಕ್ಷಗಾನ ನೋಡಲು ಹೋಗಿದ್ದು ದಿನಾಂಕ: 12-04-2022 ರಂದು ಬೆಳಗಿನ ಜಾವ 2:30 ಗಂಟೆಗೆ ವಾಪಾಸು ಬರುವಾಗ ಅಂಗಡಿಯ ಮುಂದೆ ಕರು ಮಲಗಿರುವುದನ್ನು ನೋಡಿದ್ದು ಬೆಳಿಗ್ಗೆ ಸಮಯ 6:00 ಗಂಟೆಗೆ ಕರು ಇಲ್ಲದೇ ಇರುವುದನ್ನು ನೋಡಿ ಅಲ್ಲೇ ಪಕ್ಕದಲ್ಲಿ ಅಂಗಡಿ ಜಗಲಿಯಲ್ಲಿ ಮಲಗಿದ್ದ ರಾಜು ಎಂಬವರ ಬಳಿ ವಿಚಾರಿಸಿದಾಗ ಸಮಯ ಸುಮಾರು ಬೆಳಗಿನ ಜಾವ 3:00 ಗಂಟೆಯಿಂದ 3:30 ಗಂಟೆ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತರು ಬಿಳಿ ಬಣ್ಣದ ಕಾರಿನಲ್ಲಿ ಬಂದು ಕರುವನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ. ಕರುವಿನ ಅಂದಾಜು ಮೌಲ್ಯ 7000/- ರೂ ಆಗಬಹುದು . ದನವನ್ನು ಮಾಂಸ ಮಾಡಿ ತಿನ್ನುವ ಉದ್ದೇಶದಿಂದ ಕಳವು ಮಾಡಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಗಂಗೋಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 32/2022 ಕಲಂ. 379 ಐ.ಪಿ.ಸಿ ಮತ್ತು 4, 5, 7, 11 The Karnataka Prevention of Slaughter & Preservation of Cattle Ordinance -2020ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 14-04-2022 10:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080