ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ 

  • ಕೋಟ: ಪಿರ್ಯಾದಿದಾರರಾದ ನಾಗರಾಜ ಗಾಣಿಗ (58),  ದಿ: ರಾಮ ಗಾಣಿಗ ಉಗ್ರಾಣಿ ಮನೆ, ತೆಕ್ಕಟ್ಟೆ, ತೆಕ್ಕಟ್ಟೆ ಗ್ರಾಮ ಇವರು ರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 13/04/2022 ರಂದು ರಾತ್ರಿ 9:00 ಗಂಟೆಗೆ ಕೋಟೇಶ್ವರಕ್ಕೆ ಬಾಡಿಗೆಗೆ ಹೋಗಿ ವಾಪಾಸು ಕೋಟೇಶ್ವರದಿಂದ ಮನೆಯಾದ ತೆಕ್ಕಟ್ಟೆ ಕಡೆಗೆ ಬರುತ್ತಾ ಕುಂದಾಪುರ - ಉಡುಪಿ ರಾ.ಹೆ. 66 ರಲ್ಲಿ ಪಿರ್ಯಾದಿದಾರರ ಹಿಂದಿನಿಂದ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ KA-51-MD-7216 ನಂಬ್ರದ ಕಾರು ಚಾಲಕ ಶಿವಪ್ರಸಾದ್‌‌‌‌‌‌ ತನ್ನ ಕಾರನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರನ್ನು ಹಿಂದಿಕ್ಕಿ ಮುಂದೆ ಹೋಗುತ್ತಿದ್ದ ಇನ್ನೊಂದು ಕಾರನ್ನು ಓವರ್‌‌‌‌‌ ಟೇಕ್‌‌‌‌‌‌ ಮಾಡಿ ತೆಕ್ಕಟ್ಟೆ ರಾಘವೇಂದ್ರ ಮಠದ ಎದುರು ಡಿವೈಡರ್‌‌‌‌‌‌‌ ಬಳಿ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದನು. ಅಪಘಾತದ ರಭಸಕ್ಕೆ ಆ ವ್ಯಕ್ತಿಯು ಹಾರಿ ಹಿಂದೆ ಬರುತ್ತಿದ್ದ ಕಾರಿನ ಮೇಲೆ ಬಿದ್ದು ರಸ್ತೆಗೆ ಬಿದ್ದನು. ಪಿರ್ಯಾದಿದಾರರು ಕೂಡಲೇ ರಿಕ್ಷಾವನ್ನು ಮಣ್ಣು ರಸ್ತೆಯಲ್ಲಿ ನಿಲ್ಲಿಸಿ ಹತ್ತಿರ ಹೋಗಿ ನೋಡುವಾಗ ಆ ವ್ಯಕ್ತಿಯ ಬಲ ಕೈ ಮತ್ತು ಎಡ ಕಾಲಿಗೆ ಮೂಳೆ ಮುರಿತದ ಗಾಯವಾಗಿ ಪ್ರಜ್ಞೆ ತಪ್ಪಿತ್ತು. ಅಪಘಾತವಾಗುವಾಗ ರಾತ್ರಿ 9:30 ಗಂಟೆಯಾಗಬಹುದು. ಎರಡೂ ಕಾರಿನ ಚಾಲಕರು ಕಾರನ್ನು ಮುಂದೆ ನಿಲ್ಲಿಸಿ ಬಂದಿದ್ದು, ಹಿಂಬದಿ ಹೋಗುತ್ತಿದ್ದ ಕಾರು ನೊಂದಣಿ ನಂಬ್ರ KA-21-N-2790 ಆಗಿರುತ್ತದೆ. ಗಾಯಾಳುವಿನ ಹೆಸರು ದಿನಕರ ಶೆಟ್ಟಿ ಎಂಬುದಾಗಿ ತಿಳಿಯಿತು. ಚಿಕಿತ್ಸೆಯ ಬಗ್ಗೆ ಕೋಟೇಶ್ವರ ಎನ್‌‌‌‌.ಆರ್‌‌‌‌‌. ಆಚಾರ್ಯ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 49/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಮಲ್ಪೆ : ಪಿರ್ಯಾದಿದಾರರಾದ ಬರಮಪ್ಪ(29),ತಂದೆ: ಈರಪ್ಪ ಹುಂಡಿ,ವಾಸ: ಬೆಳೆಗೇರೆ ಯಡೆಯಪುರ ರಸ್ತೆ ಬಳಿ ಯಲಬುರ್ಗಾ ತಾಲೂಕು ಕೊಪ್ಪಳ ಜಿಲ್ಲೆ ಇವರು ಅಭಿಮಾನ್ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದು , ದಿನಾಂಕ: 09/04/2022 ರಂದು ಶ್ರೀ ಗುರುಸಿದ್ದಿ ಬೋಟಿನಲ್ಲಿ ಬದಲಿ ಕಲಾಸಿಯಾಗಿ ಕೆಲಸಕ್ಕೆ ಹೋಗಿದ್ದು , ಬೋಟಿನಲ್ಲಿ ಡ್ರೈವರ್ ಆಗಿ ಉಮೇಶ , ಕಲಾಸಿಗಳಾಗಿ ಪಿರ್ಯಾದಿದಾರರು, ನಾಗರಾಜ,ಉಮೇಶ, ಮಹಾಂತೇಶ ರವರು ಇದ್ದು ದಿನಾಂಕ 13/04/2022 ರಂದು ಸಯಾಂಕಾಲ ಮೀನುಗಾರಿಕೆ ಮುಗಿಸಿ ಬೋಟನ್ನು ಬಾಪುತೋಟ ಟಿ ಧಕ್ಕೆ ಯಲ್ಲಿ ಲಂಗರು ಹಾಕಿ, ಉಮೇಶ ರವರು ಮನೆಗೆ ಹೋಗಿರುತ್ತಾರೆ , ಪಿರ್ಯಾದಿದಾರರು ಮತ್ತು ಮಹಾಂತೇಶ ಮಲ್ಪೆ ಪೇಟೆಗೆ ಹೋಗಿದ್ದು ಅಲ್ಲಿ ಪಿರ್ಯಾದಿದಾರರ ಸ್ನೇಹಿತ ಶಾಂತಪ್ಪ ಸಿಕ್ಕಿದ್ದು ಮೂವರು ಸೇರಿ ರಾತ್ರಿ 10:00 ಗಂಟೆಗೆ ವಾಪಸ್ಸು ಬೋಟಿಗೆ ಬಂದಿದ್ದು ,ಬೋಟಿನಲ್ಲಿ ಉಮೇಶ ಮತ್ತು ನಾಗರಾಜ ಮಲಗಿದ್ದು ಮೂವರು ಊಟ ಮಾಡುವ ಸಲುವಾಗಿ ಬೋಟಿನ ಕ್ಯಾಬಿನ ಒಳಗಡೆಯ ಲೈಟ್ ಹಾಕಿದ್ದು , ಲೈಟ್ ಆಪ್ ಮಾಡುವಂತೆ ನಾಗರಾಜ ತಿಳಿಸಿದ್ದು ಇದೇ ವಿಚಾರವಾಗಿ ಮಹಾಂತೇಶ ನಿಗೆ ಮತ್ತು ನಾಗರಾಜನಿಗೆ ಮಾತಿಗೆ ಮಾತು ಬೆಳೆದು ನಾಗರಾಜ ಸಿಟ್ಟಿನಿಂದ ಮಹಾಂತೇಶನ ಕನ್ನೆಗೆ ಹೊಡೆದಾಗ ಮಹಾಂತೇಶ ನೆಲಕ್ಕೆ ಬಿದ್ದಿದ್ದು ,ನಾಗರಾಜ ಅಲ್ಲೆ ಕೆಳಗೆ ಇದ್ದ ಕಬ್ಬಿಣದ ಗೇರ್ ರಾಡ್ ನಿಂದ ಮಹಾಂತೇಶನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದು ,ಬಳಿಕ ಆತನನ್ನು ಸಮುದ್ರದ ನೀರಿಗೆ ಬಿಸಾಡುತ್ತೇನೆ ಎಂದು ಸಿಟ್ಟಿನಿಂದ ಹೇಳಿದ್ದು ಅದನ್ನು ಪಿರ್ಯಾಧಿದಾರರು ತಡೆಯಲು ಹೋದಾಗ ಪಿರ್ಯಾಧಿದಾರರಿಗೆ ಕಬ್ಬಿಣದ ರಾಡ್ ಎಡಭುಜಕ್ಕೆ ತಾಗಿ ಒಳನೋವು ಉಂಟಾಗಿರುತ್ತದೆ. ಅಲ್ಲಿಯೆ ಪಕ್ಕದ ಇದ್ದ ಇನ್ನೊಂದು ಬೋಟಿನಲ್ಲಿ ಪಿರ್ಯಾದಿದಾರು ಮಹಾಂತೇಶ ನನ್ನು ಮಲಗಿಸಿದ್ದು ಬಳಿಕ ಮಹಾಂತೇಶ ನ ಅಣ್ಣನಿಗೆ ಮಾಹಿತಿ ನೀಡಿ ಅಲ್ಲಿಗೆ ಬಂದಿದ್ದ ಮಹಾಂತೇಶನ ಅಣ್ಣ ಹಾಗೂ ಪಿರ್ಯಾದಿದಾರರು ಮತ್ತು ಶಾಂತಪ್ಪ ಸೇರಿ ಚಿಕಿತ್ಸೆಯ ಬಗ್ಗೆ ಮಹಾಂತೇಶ ನನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದು,ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು . ದಿನಾಂಕ 14/04/2022 ರಂದು ಮುಂಜಾನೆ 5:00 ಗಂಟೆಗೆ ಮಹಾಂತೇಶನು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ . ನಾಗರಾಜನು ಮಹಾಂತೇಶನನ್ನು ಕೊಲ್ಲುವ ಉದ್ದೇಶದಿಂದ ಕಬ್ಬಿಣದ ಗೇರ್ ರಾಡ್ ನಿಂದ ಮಾರಾಣಾಂತಿಕವಾಗಿ ಹಲ್ಲೆ ಮಾಡಿ ಕೊಲೆಮಾಡಿರುವುದಾಗಿದೆ . ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2022 ಕಲಂ: 324, 302 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಸುಧಾಕರ ಪೂಜಾರಿ, ಪ್ರಾಯ: 35 ವರ್ಷ, ತಂದೆ: ಚಂದು ಪೂಜಾರಿ, ವಾಸ: “ಪಂಚಮಿ”, ಮಡ್ಮಣ್, ಇನ್ನಾ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ಹಾಗೂ ಅಲ್ಲಿನ ಸುತ್ತಮುತ್ತಲಿನ ಸುಮಾರು 10 ಮನೆಯವರು ತಮ್ಮ ಮನೆಗಳಿಗೆ ಹೋಗಲು ಕಾಲುದಾರಿಯನ್ನು ಬಳಸುತ್ತಿದ್ದು, ಇತ್ತೀಚೆಗೆ ಆ ಕಾಲುದಾರಿ ಖಾಸಗಿ ಸ್ಥಳದಲ್ಲಿದೆ ಎಂಬುದಾಗಿ ಕಾಲುದಾರಿಯನ್ನು ಮುಚ್ಚಿದ್ದರಿಂದ ಪಿರ್ಯಾದಿದಾರರಿಗೆ ಹಾಗೂ ಅಲ್ಲಿ ಮನೆ ಇರುವವರಿಗೆ ಮನೆಗೆ ಹೋಗಲು ಬೇರೆ ಯಾವುದೇ ದಾರಿಗಳಿಲ್ಲದೇ ಇರುವುದಿಲ್ಲ. ಈ ವಿಷಯವನ್ನು ಅಲ್ಲಿನ ವಾಸಿಗಳೆಲ್ಲರೂ ಇನ್ನಾ ಪಂಚಾಯತ್‌ನ ನ್ಯಾಯ ನಿರ್ಣಯ ಸಮಿತಿಗೆ ದೂರು ನೀಡಿದ್ದು, ಅದರಂತೆ ದಿನಾಂಕ 12/04/2022 ರಂದು 12:30 ಗಂಟೆಗೆ ಇನ್ನಾ ಪಂಚಾಯತ್‌ನ ಅಧ್ಯಕ್ಷರಾದ ಕುಶ ಮೂಲ್ಯ, ಗ್ರಾಮ ಕರಣಿಕರು ಹಾಗೂ ಪಂಚಾಯತ್‌‌ನ ಸಿಬ್ಬಂದಿಗಳು ಬಂದು ಸ್ಥಳ ವೀಕ್ಷಣೆ ಮಾಡುತ್ತಿರುವ ಸಮಯ ಪಿರ್ಯಾದಿದಾರರು ಸ್ಥಳದಲ್ಲಿ ಹಾಜರಿದ್ದು, ಸಮಯ 13:00 ಗಂಟೆಯ ವೇಳೆಗೆ ಆರೋಪಿತರಾದ ಅಶೋಕ್ ಶೆಟ್ಟಿ ಮತ್ತು ಸುಧಾಕರಶೆಟ್ಟಿ ಎಂಬುವವರು ಅಲ್ಲಿಗೆ ಬಂದು ಒಮ್ಮೆಲೇ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ಧಗಳಿಂದ ಬೈದು, ಅಶೋಕ್ ಶೆಟ್ಟಿ ರವರು ಪಿರ್ಯಾದಿದಾರರ ಮುಖ, ತಲೆಗೆ ಕೈಯಿಂದ ಗುದ್ದಿದ್ದು, ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ 2ನೇ ಆರೋಪಿತ ಸುಧಾಕರ ಶೆಟ್ಟಿ ರವರು ಪಿರ್ಯಾದಿದಾರರನ್ನು ಹಿಂದಿನಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆಗ 1ನೇ ಆರೋಪಿತ ಅಶೋಕ್ ಶೆಟ್ಟಿ ರವರು ಅಲ್ಲಿಯೇ ಸಮೀಪದಲ್ಲಿದ್ದ ಕಬ್ಬಿಣದ ರಾಡಿನಿಂದ ಪಿರ್ಯಾದಿದಾರರ ಕುತ್ತಿಗೆಯ ಎಡಬದಿಗೆ ಮತ್ತು ಎಡಭಜಕ್ಕೆ ಹಲ್ಲೆ ಮಾಡಿದ್ದು,ಇದರಿಂದ ಪಿರ್ಯಾದಿದಾರರ ಕುತ್ತಿಗೆಯ ಎಡಬದಿ 2-3 ಕಡೆ ಗೀರಿದ ಗಾಯ ಮತ್ತು ತಲೆಗೆ ತೀವ್ರ ಒಳನೋವು ಆಗಿರುತ್ತದೆ. ನಂತರ ಪಿರ್ಯಾದಿದಾರರಿಗೆ ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2022, ಕಲಂ :504, 323, 324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತ್ತೀಚಿನ ನವೀಕರಣ​ : 14-04-2022 07:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080