ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಪಡುಬಿದ್ರಿ: ಪಿರ್ಯಾದಿದಾರರಾದ ಸನತ್ ಕೆ ಎಮ್ (19) ತಂದೆ: ಮುರಳೀಧರ ಕೆ ಜೆ ವಾಸ: ಮನೆ ನಂಬ್ರ 7, ಶ್ರೀನಿಕೇತನ, 3 rd  ಸ್ಟೇಜ್, 4th ಕ್ರಾಸ್, ಬಿಈಎಮ್‌ಎಲ್‌ಲೇಔಟ್, ರಾಜರಾಜೇಶ್ವರಿ ನಗರ, ಬೆಂಗಳೂರು ಇವರು ಹಾಗೂ ತಾಯಿ ಪ್ರತಿಮಾ ಎಂ ಎಂಬವರು ಗಂಡ ಬೆಂಗಳೂರಿನಿಂದ ಶಿಮಂತೂರಿನಲ್ಲಿರುವ ತವರು ಮನೆಗೆ ಬಂದವರು ದಿನಾಂಕ 12/04/2020 ರಂದು ಅಕ್ಕ ವಿಜಯಮಾಲತಿ ಆರ್ ರಾವ್ ರವರ ಕಾರಿನಲ್ಲಿ ಅಕ್ಕನ ಜೊತೆ ಉಡುಪಿಗೆ ಹೋಗಿ ವಾಪಾಸ್ಸು ಶಿಮಂತೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ- ಮಂಗಳೂರು ಏಕಮುಖ ರಸ್ತೆಯಲ್ಲಿ ಹೋಗುತ್ತಿದ್ದಾಗ ಮದ್ಯಾಹ್ನ 14:50 ಗಂಟೆಗೆ ನಡ್ಸಾಲು ಗ್ರಾಮದ ಕನ್ನಂಗಾರು ಬೈಪಾಸ್ ಬಳಿ ತಲುಪುವಾಗ ವಿಜಯ ಮಾಲತಿ ಆರ್ ರಾವ್‌ರವರು ಕಾರನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಕಾರು ಅವರ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಯ ಸಿಮೆಂಟ್ ತಡೆಗೋಡೆಗೆ ಡಿಕ್ಕಿ ಹೊಡೆದು ಕಾರು ಜಖಂಗೊಂಡು ಸನತ್‌ ಕೆ ಎಮ್‌ ರವರ ತಾಯಿಯ ಕಾಲಿನ ಮೂಳೆ ಮುರಿತದ ಗಾಯವಾಗಿದ್ದು ಚಾಲಕಿ ವಿಜಯ ಮಾಲತಿ ಆರ್ ರಾವ್‌ರವರಿಗೂ ಸಾಮಾನ್ಯ  ಸ್ವರೂಪದ ಗಾಯವಾಗಿದ್ದು ಸನತ್‌ ಕೆ ಎಮ್‌ ಇವರ ತಾಯಿ ಚಿಕಿತ್ಸೆ ಬಗ್ಗೆ ಸುರತ್ಕಲ್ ನ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 13/04/2021 ರಂದು ಮಧ್ಯಾಹ್ನ ಸುಮಾರು 02:15 ಗಂಟೆಗೆ ಕುಂದಾಪುರ  ತಾಲೂಕು, ಬಳ್ಕೂರು  ಗ್ರಾಮದ ಬಿ.ಹೆಚ್‌ ಕ್ರಾಸ್‌‌ಬಳಿ, SH 52 ರಸ್ತೆಯಲ್ಲಿ,  ಆಪಾದಿತ  ರಮೇಶ್‌ ‌ಎಂಬವರು KA-20-AA-6693 ನೇ ಅಟೋರಿಕ್ಷಾವನ್ನು ಕುಂದಾಪುರ ಕಡೆಯಿಂದ ಕಂಡ್ಲೂರು ಕಡೆಗೆ ಅತೀವೇಗ ಹಾಗೂ  ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಅಟೋರಿಕ್ಷಾದ ಮುಂದೆ ಹೋಗುತ್ತಿದ್ದ ಬೈಕನ್ನು  ಓವರ್‌‌ಟೇಕ್‌ ‌ಮಾಡಲು ಅಟೋರಿಕ್ಷಾವನ್ನು ರಸ್ತೆಯ ಬಲಬದಿಗೆ  ಚಲಾಯಿಸಿ, ಕಂಡ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಪಿರ್ಯಾದಿದಾರರಾದ ನವೀನ್‌ (43) ತಂದೆ  ದಿ. ಬಾಲಯ್ಯ  ಶೇರಿಗಾರ  ವಾಸ:  ಶ್ರೀ  ಬಾಲಚಿಕ್ಕು ದೇವಸ್ಥಾನದ ಹತ್ತಿರ,  ಕಲಲ್ರ್‌‌‌ಬೈಲು, ಕಂಡ್ಲೂರು, ಕಾವ್ರಾಡಿ  ಗ್ರಾಮ, ಕುಂದಾಪುರ ‌‌ಎಂಬವರು  ಸವಾರಿ ಮಾಡಿಕೊಂಡು ಬರುತ್ತಿದ್ದ KA-20-EK-1054 ನೇ ಬೈಕಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ, ನವೀನ್‌‌‌ ಅವರ ಬಲಕಾಲಿನ ಮುಂಗಾಲು ಗಂಟಿಗೆ ರಕ್ತಗಾಯ, ಬಲಕಾಲಿನ ಪಾದದ ಹತ್ತಿರ, ಬಲಭುಜ ಹಾಗೂ ಬಲ ಎದೆಗೆ ಒಳನೋವಾದ ಗಾಯವಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ  ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಫಿರ್ಯಾದುದಾರರಾದ ರಾಘವೇಂದ್ರ ಎನ್ (31) ತಂದೆ:ಲಕ್ಷ್ಮಣ ಗಾಣಿಗ  ವಾಸ:ಕೃಷ್ಣಮ್ಮನ ಮನೆ,ನಂದನವನ ಕೆರ್ಗಾಲ್ ಗ್ರಾಮ ಬೈಂದೂರು ಇವರು ಕೆಎಸ್ಆರ್.ಟಿಸಿ ಕುಂದಾಪುರ ಡಿಪೋದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಪ್ರಸ್ತುತ ಕೆಎಸ್ಆರ್.ಟಿಸಿ ಸಿಬ್ಬಂದಿಗಳ ಮುಷ್ಕರ ನಡೆಯುತ್ತಿದ್ದು, ಸರ್ಕಾರದಿಂದ ESMA ಜ್ಯಾರಿಯಲ್ಲಿದ್ದು, ರಾಘವೇಂದ್ರ ಎನ್ ರವರು ಮೇಲಾಧಿಕಾರಿಗಳ ಸಲಹೆಯಂತೆ ಕರ್ತವ್ಯಕ್ಕೆ ಹಾಜರಾಗಿ ದಿನಾಂಕ 13/04/2021 ರಂದು ಕೆಎಸ್ಆರ್.ಟಿಸಿ ಬಸ್ ನಂಬ್ರ KA-19-F-3199 ರಲ್ಲಿ ಚಾಲಕನಾಗಿ ಹಾಗೂ ಅಶೋಕ ರವರು ನಿರ್ವಾಹಕರಾಗಿ ಮಧ್ಯಾಹ್ನ 3:00 ಗಂಟೆಯಿಂದ ಕುಂದಾಪುರದಿಂದ ಭಟ್ಕಳಕ್ಕೆ ಹೊರಟು ಮಧ್ಯಾಹ್ನ 3:55 ಗಂಟೆಯ ಸುಮಾರಿಗೆ ಬೈಂದೂರು ತಾಲೂಕು ಶಿರೂರು ಗ್ರಾಮದ ರೈಲ್ವೇ ಟನೆಲ್ ಬಳಿ ಹೋಗುತ್ತಿರುವಾಗ ಆರೋಪಿತ ನಾಗೇಶ ಹಾಗೂ ಸುರೇಂದ್ರ ರವರು ಕಪ್ಪು ಬಣ್ಣದ ಪಲ್ಸರ್ ಮೋಟಾರು ಸೈಕಲ್ ನಂಬ್ರ KA-47-J-9175 ರಲ್ಲಿ ಹಾಗೂ ಇತರ ಇಬ್ಬರು ಕೆಂಪು ಬಣ್ಣದ ಪಲ್ಸರ್ ಮೋಟಾರು ಸೈಕಲ್ ನಲ್ಲಿ ಬಂದು ರಸ್ತೆಯಲ್ಲಿ ಬಸ್ಸಿಗೆ ಅಡ್ಡವಿಟ್ಟು ಮುಂದೆ ಹೋಗದಂತೆ ತಡೆದು ಆರೋಪಿತ ನಾಗೆಶ ಹಾಗೂ ಸುರೇಂದ್ರ ರವರು “ ಕೆಎಸ್ಆರ್ಟಿಸಿ ಸಿಬ್ಬಂದಿಯವರ ಮುಷ್ಕರ ನಡೆಯುತ್ತಿರುವಾಗ ನೀವು ಯಾಕೆ ಕರ್ತವ್ಯಕ್ಕೆ ಬಂದಿದ್ದು, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ನಿಮ್ಮ ಕೈ ಕಾಲುಗಳನ್ನು ಮುರಿದು ಹಾಕುತ್ತೇವೆ”  ಎಂದು ಹೇಳಿ ನಾಗೇಶ, ಸುರೇಂದ್ರ ರವರು ರಸ್ತೆಯ ಬದಿಯಲ್ಲಿರುವ ಶಿಲೆಕಲ್ಲುಗಳನ್ನು ಹೆಕ್ಕಿ ರಾಘವೇಂದ್ರ ರವರ ಬಸ್ಸಿನ ಎದುರಿನ ಗ್ಲಾಸಿಗೆ ಹೊಡೆದು ಜಖಂ ಗೊಳಿಸಿ ಸಂಸ್ಥೆಗೆ ಸುಮಾರು ರೂಪಾಯಿ 10 ಸಾವಿರದಷ್ಟು ನಷ್ಟ ಉಂಟು ಮಾಡಿರುತ್ತಾರೆ. ಕೆಎಸ್ಆರ್ಟಿಸಿ ನೌಕರರ ಮುಷ್ಕರ ಇರುವುದರಿಂದ ಸರ್ಕಾರ ESMA ಜ್ಯಾರಿ ಮಾಡಿದ್ದು, ರಾಘವೇಂದ್ರ ಎನ್ ರವರು ಕರ್ತವ್ಯ ನಿರ್ವಹಿಸುತ್ತಿದ್ದುದರಿಂದ, ಆರೋಪಿತರು ಕೂಡಾ ಕೆಎಸ್ಆರ್ಟಿಸಿ ಉದ್ಯೋಗಿಗಳಾಗಿರುವುದರಿಂದ, ಮುಷ್ಕರ ಇರುವ ಸಮಯ ರಾಘವೇಂದ್ರ ಎನ್ ರವರು ಕರ್ತವ್ಯ ನಿರ್ವಹಿಸಬಾರದು ಎಂಬ ಉದ್ದೇಶದಿಂದ ಆರೋಪಿತರುಗಳು ಈ ಕೃತ್ಯ ಮಾಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72/2021 ಕಲಂ: 341,353,506 ಜೊತೆಗೆ 34 ಐಪಿಸಿ ಮತ್ತು 3 ಪಿ,ಡಿ ಮತ್ತು ಪಿ  ಪಿ ಆಕ್ಟ್ -1984 ಹಾಗೂ 5 ಎಸ್ಮಾ ಆಕ್ಟ್ -1981 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-04-2021 10:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ