ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ದಿನಾಂಕ :13/03/2023 ರಂದು ಪಿಯಾ೯ದಿ ರೇಣುಕಾ ಇವರ ತಮ್ಮ ವಿಶಾಲನು ಅವನ ಸ್ನೇಹಿತನ ಬಾಬ್ತು ಕೆ.ಎ-20-ಇ.ವಿ.-4325 ನೇ ಸ್ಕೂಟರ್‌‌ನಲ್ಲಿ ತಾಯಿ ಯಮುನಮ್ಮ (45) ರವರನ್ನು ಸಹಸವಾರಿಣಿಯಾಗಿ ಕುಳ್ಳಿರಿಸಿಕೊಂಡು ಉದ್ಯಾವರ ಗ್ರಾಮದ ಪಿತ್ರೋಡಿ-ಸಂಪಿಗೆನಗರದ ರಸ್ತೆಯಲ್ಲಿ ಸಂಪಿಗೆನಗರದ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುತ್ತಾ ಸುಮಯ ಸುಮಾರು 12.30 ಗಂಟೆಗೆ ಪಿತ್ರೋಡಿಯ ಕೋಸ್ಟಲ್ ಐಸ್‌ ಪ್ಲಾಂಟ್‌ ಬಳಿ ತಲುಪುತ್ತಿದ್ದಂತೆ ವಿಶಾಲನಿಗೆ ಸ್ಕೂಟರ್‌ನ ನಿಯಂತ್ರಣ ಸಿಗದೇ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದಿದ್ದು, ಅಲ್ಲೇ ಇದ್ದ ರತನಕುಮಾರನು ಸ್ಥಳಕ್ಕೆ ಹೋಗಿ ಉಪಚರಿಸಿ ನೋಡಲಾಗಿ ಯಮುನಮ್ಮನವರಿಗೆ ತಲೆಗೆ ತೀವೃ ಒಳಪೆಟ್ಟಾಗಿದ್ದು ಪ್ರಜ್ಞೆ ತಪ್ಪಿರುತ್ತದೆ ಹಾಗೂ  ವಿಶಾಲನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ರತನಕುಮಾರನು ಗಾಯಗೊಂಡ ಯಮುನಮ್ಮನವರಿಗೆ ಚಿಕಿತ್ಸೆಯ ಬಗ್ಗೆ ಉದ್ಯಾವರ ಎಸ್.ಡಿ.ಎಮ್. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರ ಸೂಚನೆಯಂತೆ 108 ಅಂಬುಲೇನ್ಸ್‌ ನಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ, ರತನಕುಮಾರನು ಅಪಘಾತದ ಬಗ್ಗೆ ಪಿರ್ಯಾದಿದಾರರಿಗೆ ಮಾಹಿತಿ ನೀಡಿ,  ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬರುವಂತೆ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ಯಮುನಮ್ಮನವರಿಗೆ ನೋಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಬಳಿಕ ಅಲ್ಲಿನ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪಿರ್ಯಾದಿದಾರರು ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2023 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಉಡುಪಿ: ಪಿರ್ಯಾದಿ ಜಯರಾಜ್ ಆಚಾರ್ಯ  ಇವರು ವಿದೇಶದಲ್ಲಿ ಉದ್ಯೋಗಕ್ಕಾಗಿ ವಾಟ್ಸ್ ಅಪ್ ನಲ್ಲಿ ಕಂಡು ಬಂದ ವೀಸಾ ಮಾಡಿಕೊಡುವ ಪ್ರಕಟಣೆಯನ್ನು ಓದಿ  ಅದರಲ್ಲಿದ್ದ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದಲ್ಲಿ ಆತನು ತಾನು ಪಾಸ್‌‌ಪೋರ್ಟ್‌ ಮತ್ತು ವೀಸಾ ಮಾಡಿಕೊಡುವ ಏಜೆಂಟ್ ಎಂದು ಪಿರ್ಯಾದಿದಾರರನ್ನು ನಂಬಿಸಿ, ಆನ್ ಲೈನ್ ಮುಖೇನ ಇಂಟರ್ ವೀವ್ ನಡೆಸಿ, ವಿಸಾ ಮಾಡಿಸಲು ಚಾರ್ಜ್‌ ಮತ್ತು ಇನ್ನಿತರ ಖರ್ಚುಗಳ ನೆಪ ಹೇಳಿ, ದಿನಾಂಕ 09.01.2023 ರಿಂದ ದಿನಾಂಕ 08.02.2023 ರವರೆಗೆ ಒಟ್ಟು ರೂ. 6,90,343/- ಹಣವನ್ನು ಪಿರ್ಯಾದಿದಾರರಿಂದ ಆರೋಪಿಗಳ ವಿವಿಧ ಖಾತೆಗೆ ಆನ್‌‌ಲೈನ್ ಮುಖೇನ ವರ್ಗಾವಣೆ ಮಾಡಿಸಿಕೊಂಡು, ವೀಸಾ ನೀಡದೇ ಪಡೆದ ಹಣವನ್ನೂ ವಾಪಾಸು ನೀಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 32/2023  ಕಲಂ 66(C), 66(D)   ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ: 13.03.2023 ರಂದು ಉಡುಪಿ ತಾಲೂಕು ಕುಕ್ಕಿಕಟ್ಟೆ ಎಂಬಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ  ಇಮ್ರಾನ್ ಖಾನ್ ಈತನನ್ನು ಸಿಬ್ಬಂದಿಗಳಾದ ನಾಗೇಶ್, ಪ್ರವೀಣ್ ಮತ್ತು ಸಂಜಯ್ ರವರು ಬೆಳಿಗ್ಗೆ 11:30 ಗಂಟೆಗೆ ವಶಕ್ಕೆ ಪಡೆದ್ದು, ಠಾಣೆಗೆ ಹಾಜರುಪಡಿಸಿದ್ದು, ಸುನಿಲ್ ಕುಮಾರ್ ,ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರು ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿ, ದಿನಾಂಕ 14.03.2023  ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನುಸ್ವೀಕರಿಸಿ, ವರದಿಯಲ್ಲಿ ಆರೋಪಿಯು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದರಿಂದ ಈತನ ವಿರುದ್ಧ ಸೆನ್ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 33/2023 ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 ಹಲ್ಲೆ ಪ್ರಕರಣ

  • ಕುಂದಾಪುರ: ದಿನಾಂಕ 13/03/2023 ರಂದು ಸಂಜೆ ಸುಮಾರು 06:00 ಗಂಟೆ ಸುಮಾರಿಗೆ ಕುಂಭಾಶಿ ಗ್ರಾಮದ ಅಯ್ಯಪ್ಪ ದೇವಸ್ಥಾನದ ಬಳಿ ಇರುವ ಮೈದಾನದಲ್ಲಿ ಇರುವಾಗ ಅಲ್ಲೇ ನಿಂತುಕೊಂಡಿರುವ ಪಿರ್ಯಾದಿ ಅಣ್ಣಯ್ಯ @ರಾಘವೇಂದ್ರ ಇವರ ಸಂಬಂದಿಕರಾದ ಗಣೇಶ್‌ ಮತ್ತು ಗೋವರ್ಧನ್‌ ರವರಲ್ಲಿ ಪಿರ್ಯಾದಿದಾರರ ಅಕ್ಕನ ಮಕ್ಕಳಿಗೆ ಮತ್ತು ಅಣ್ಣನ ಮಕ್ಕಳಿಗೆ ಮತ್ತು ನೆರೆಯವರಿಗೆ ಕುಡಿದು ಬಂದು ಅವಾಚ್ಯವಾಗಿ ಯಾಕೆ ಬೈಯುತ್ತಿರಾ ಎಂದು ಕೇಳಿದಾಗ, ಗಣೇಶನು ಪಿರ್ಯಾದಿದಾರರನನ್ನು ಉದ್ದೇಶಿಸಿ ನಿನ್ನನ್ನು ನೋಡಿಕೊಳ್ಳುತ್ತೇನೆ, ನಿನ್ನನ್ನು ಜೀವ ಸಹಿತ ಇರಲು ಬಿಡುವುದಿಲ್ಲ ಎಂದು ಅವಾಚ್ಯವಾಗಿ ಬೈದು ಅಲ್ಲಿಂದ ಹೋಗಿರುತ್ತಾರೆ. ನಂತರ ರಾತ್ರಿ ಸುಮಾರು 08:30 ಗಂಟೆಗೆ ಪಿರ್ಯಾದಿದಾರರ ಮನೆಯ ಹತ್ತಿರ ಇರುವ ಪಿರ್ಯಾದಿದಾರ ಅಕ್ಕನ  ಮಗ ವಿಜಯನ ಮನೆಯ ಅಂಗಳದಲ್ಲಿ ನಿಂತಿರುವಾಗ ಆಪಾದಿತ ಗಣೇಶ್‌, ಗೋರ್ಧನ್‌ ಮತ್ತು ಇತರರು  ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರರನನ್ನು ಉದ್ದೇಶಿಸಿ ಬೈದು ಚಾಕುವಿನಿಂದ ಪಿರ್ಯಾದಿದಾರರಿಗೆ ಬೀಸಿದ್ದು , ಅದರಿಂದ ತಪ್ಪಿಸಿಕೊಂಡ ಪಿರ್ಯಾದಿದಾರರು ಕೆಳಕ್ಕೆ ಬಿದ್ದಿದ್ದು, ಕೇಳಕ್ಕೆ ಬೀಳುವ ಸಮಯ ಚಾಕು ಪಿರ್ಯಾದಿದಾರರ ತಲೆಯ ಮಧ್ಯ ಭಾಗಕ್ಕೆ ತಾಗಿ ರಕ್ತ ಗಾಯವಾಗಿರುತ್ತದೆ. ಆಗ ಗೋವರ್ಧನ ಪಿರ್ಯಾಧಿದಾರರಿಗೆ ಕೈಯಿಂದ ಹಾಗೂ ಮರದ ಕೋಲಿನಿಂದ ಎಡಕೈ ರಟ್ಟೆಗೆ ಹೊಡೆದಿರುತ್ತಾರೆ. ಆಗ ಬಿಡಿಸಲು ಬಂದ ಪಿರ್ಯಾದಿದಾರರ ತಮ್ಮ ರಾಜೇಂದ್ರನಿಗೂ ಆಪಾದಿತರು ಕೈಯಿಂದ ಹೊಡೆದು ದೂಡಿ ಹಾಕಿರುತ್ತಾರೆ ಮತ್ತು ತರಚಿದ ಗಾಯವಾಗಿರುತ್ತದೆ. ಅಲ್ಲದೇ ಮನೆಯ ಮಾಡಿಗೆ ಕಲ್ಲಿನಿಂದ ಹೊಡೆದು ಹಂಚು ಹುಡಿ ಮಾಡಿ ಹಾನಿ ಮಾಡಿರುತ್ತಾರೆ. ಪಿರ್ಯಾದಿದಾರರ ತಾಯಿ ಮತ್ತು ಅಣ್ಣನ ಮಗಳು ವೆಂಕಟಮ್ಮ ಬರುವುದನ್ನು ಕಂಡು ಅಲ್ಲಿಂದ ಓಡಿ ಹೋಗುತ್ತಿರುವಾಗ ಮುಂದಕ್ಕೆ ನಿಮ್ಮನ್ನು ಜೀವ ಸಹಿತ ಬೀಡುವುದಿಲ್ಲ ಎಂದು ಬೇದರಿಸಿರುತ್ತಾರೆ. ನಂತರ ಪಿರ್ಯಾದಿದಾರರನನ್ನು ಆಟೋ ರಿಕ್ಷಾದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 30/2023 ಕಲಂ: 504,506,447,324,323,427, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಪಿರ್ಯಾದಿ ಪ್ರಸನ್ನ ಇವರ ಪ್ರದ್ವಿತ್  (2 ತಿಂಗಳು) ಮಗು ಪಿರ್ಯಾಧಿದಾರರ ಹೆಂಡತಿ ಮನೆಯಾದ  ಕಾರ್ಕಳ ತಾಲೂಕು ಹೆರ್ಮುಂಡೆ ಗ್ರಾಮದ ಮಾರ್ಲಿ ದರ್ಖಾಸು ಎಂಬಲ್ಲಿ ವಾಸವಿದ್ದು ಮಗುವಿಗೆ ದಿನಾಂಕ: 13/03/2023 ರಂದು ಸಂಜೆ 7:00 ಕಫ ಜಾಸ್ತಿಯಾಗಿದ್ದರಿಂದ ಚಿಕಿತ್ಸೆಯ ಬಗ್ಗೆ ಡಾ.ಟಿ.ಎಂ.ಎ ಪೈ ರೋಟರಿ ಆಸ್ವತ್ರೆ ಕಾರ್ಕಳ ಇಲ್ಲಿಗೆ ತೋರಿಸಿದ್ದು ವೈದ್ಯರು ಪರೀಕ್ಷಿಸಿ ಔಷಧಿ ನೀಡಿದ್ದು ಬಳಿಕ  ಮನೆಗೆ ಬಂದಿದ್ದು, ದಿನಾಂಕ: 14/03/2023 ರಂದು ಮಗು ಪ್ರದ್ವಿತ್ ಜೋರಾಗಿ ಅಳುತ್ತಿದ್ದು ಉಸಿರು ಗಟ್ಟಿದಂತೆ ಆಗಿದ್ದ ಕಾರಣ ಮಗುವನ್ನು ಬೆಳಿಗ್ಗೆ 7:00 ಗಂಟೆಗೆ  ಕಾರ್ಕಳ ಡಾ.ಟಿ.ಎಂ.ಎ ಪೈ ಆಸ್ವತ್ರೆಗೆ  ಕರೆದುಕೊಂಡು ಹೋದಲ್ಲಿ ವೈದ್ಯರು ಮಗುವನ್ನು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ  ಬಗ್ಗೆ ಅಜೆಕಾರು ಠಾಣೆ ಯುಡಿಆರ್‌  09/2023, ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿ ಉಜ್ವಲ್‌ ಇವರ ತಮ್ಮ ಪ್ರಜ್ವಲ್‌ ದೇವಾಡಿಗ ಪ್ರಾಯ:18 ವರ್ಷ ಇವರು ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಕೃಷ್ಣಗಿರಿ ಹಿರಿಯಂಗಡಿ ಎಂಬಲ್ಲಿ ತಂದೆ, ತಾಯಿ ಹಾಗೂ ಅಣ್ಣನೊಂದಿಗೆ ವಾಸವಾಗಿದ್ದು ಪೈಂಟಿಗ್‌ ಕೆಲಸ ಮಾಡಿರುತ್ತಾರೆ. ಪಿರ್ಯಾದಿದಾರರು ದಿನಾಂಕ 12/03/2023 ರಂದು ತನ್ನ ತಂದೆ, ತಾಯಿ ಜೊತೆ ಕಾರ್ಕಳದ ಮಾರಿಗುಡಿ ಕಾರ್ಯಕ್ರಮಕ್ಕೆ ಹೋಗಿದ್ದು ರಾತ್ರಿ 09:30 ಗಂಟೆಗೆ ಪ್ರಜ್ವಲ್‌ನ ಸ್ನೇಹಿತ ಮಲ್ಲಿಕಾರ್ಜುನ ಎಂಬುವರು ಕರೆ ಮಾಡಿ ಪ್ರಜ್ವಲ್‌ ತನ್ನ ಮನೆಯಲ್ಲಿ ವಿಷ ಸೇವನೆ ಮಾಡಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವುದಾಗಿ ತಿಳಿಸಿದ್ದು ಪಿರ್ಯಾದಿದಾರರು ಕಾರ್ಕಳ ಸಿಟಿ ಆಸ್ಪತ್ರೆಗೆ ಬಂದು ವಿಷ ಸೇವನೆ ಮಾಡಿದ ತನ್ನ ತಮ್ಮ ಪ್ರಜ್ವಲ್‌ ದೇವಾಡಿಗನನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆ.  ಪ್ರಜ್ವಲ್‌ ದೇವಾಡಿಗನು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 14/03/2023 ರಂದು ಬೆಳಿಗ್ಗೆ 09:05 ಗಂಟೆಗೆ ಮೃತಪಟ್ಟಿರುತ್ತಾರೆ. ಈ  ಬಗ್ಗೆ ಕಾರ್ಕಳ ನಗರ ಠಾಣೆ ಯುಡಿಆರ್‌  11/2023, ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-03-2023 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080