ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಕಾರ್ಕಳ: ಪಿರ್ಯಾದಿ ಪವನ್ ಪಿ.ಡಿ  ಪ್ರಾಯ: 28 ವರ್ಷ, ತಂದೆ; ದಯಾನಂದ ಪಿ.ಕೆ  ವಾಸ:  ಪೆರುಮುಂಡ ಮನೆ, ಪೆರಾಜೆ ಅಂಚೆ ಮತ್ತು ಗ್ರಾಮ ಮಡಿಕೇರಿ ಇವರು ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಾರ್ಕಳ ತಾಲೂಕು ಕಸಬಾ ಗ್ರಾಮದ ಕಾಬೆಟ್ಟು ಎಂಬಲ್ಲಿ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಕಾರ್ಯಾಗಾರ ಹಾಗೂ ಟೆಕ್‌ಲ್ಯಾಬ್‌‌ನ ಕಟ್ಟಡವನ್ನು ನಿರ್ಮಿಸಿದ್ದು, ದಿನಾಂಕ  12.3.2022 ರಂದು ಸಂಜೆ 4.30 ಗಂಟೆಯಿಂದ ದಿನಾಂಕ 13.3.2022 ರ ರಾತ್ರಿ 9.45 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಾಬೆಟ್ಟು ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಕಾರ್ಯಾಗಾರ ಹಾಗೂ ಟೆಕ್‌ಲ್ಯಾಬ್‌‌ನ ಕಟ್ಟಡದ ಕಿಟಕಿ ಗಾಜುಗಳನ್ನು ಹಾಗೂ ಟೆಕ್ ಲ್ಯಾಬ್‌ನ ಒಳಗಿನ ಅಲ್ಯುಮೀನಿಯಂ ಪಾರ್ಟಿಷನ್‌ಗಳನ್ನು ಒಡೆದು ಸುಮಾರು 4 ಲಕ್ಷ ನಷ್ಟವನ್ನುಂಟು ಮಾಡಿದ್ದು,  ನಂತರ ಎರಡೂ ಕಟ್ಟಡದ ಬಾಗಿಲಿನ ಬೀಗವನ್ನು ಮುರಿದು ಒಳ ಪ್ರವೇಶಿಸಿ ಕಟ್ಟಡದ ಒಳಗಿನ ಸೊತ್ತುಗಳನ್ನು ಕಳವು ಮಾಡಲು ಪ್ರಯತ್ನಿಸಿರುತ್ತಾರೆ  ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣಾ  ಅಪರಾಧ ಕ್ರಮಾಂಕ 36/2022  ಕಲಂ 454, 457, 511,  427 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾಪು: ಪಿರ್ಯಾದಿ ಶ್ರೀ ಹರಿ ಪ್ರಾಯ : 21 ವರ್ಷ  ತಂದೆ : ಎಮ್. ಶ್ರೀನಿವಾಸ ವಾಸ : ಸೌಪರ್ಣಿಕಾ ಮನೋಳಿಗುಜ್ಜಿ  5 ನೇ ಅಡ್ಡ ರಸ್ತೆ ದೊಡ್ಡಣಗುಡ್ಡೆ, ಇವರು ದಿನಾಂಕ 13.03.2022 ರಂದು ತನ್ನ ತಂದೆಯವರ ಕೆ.ಎ. 20 ಇ.ಎನ್. 6033 ನೇ ಸ್ಕೂಟರ್‌ನ್ನುತೆಗೆದುಕೊಂಡು ಪಡುಕೆರೆ ಬೀಚ್‌ಗೆ ಬಂದು ಸಂಜೆ 4.30 ಗಂಟೆಗೆ ಸಮಯಕ್ಕೆ ಉದ್ಯಾವರ ಗ್ರಾಮದ ಪಂಢರೀನಾಥ ಭಜನಾ ಮಂದಿರದ ಬಳಿ  ಮಟ್ಟು ಮಲ್ಪೆ ರಸ್ತೆಯ ಬದಿಯಲ್ಲಿ ಸ್ಕೂಟರ್‌‌ನ್ನು ಇಟ್ಟು ಬೀಗ ಹಾಕಿ ಬೀಚ್‌‌ನೋಡಿಕೊಂಡು ವಾಪಾಸ್ಸು 7.15 ಗಂಟೆಗೆ ಬಂದು ನೋಡುವಾಗ ಪಿರ್ಯಾದಿದಾರರಿಟ್ಟ ಸ್ಕೂಟರ್‌ಸ್ಥಳದಲ್ಲಿ ಇಲ್ಲದೇ ಇದ್ದು. ಸದ್ರಿ ಸ್ಕೂಟರ್‌ನ್ನು ಯಾರೋ ಕಳ್ಳರು ದಿನಾಂಕ 13.03.2022 ರಂದು ಸಂಜೆ 4.30 ಗಂಟೆಯಿಂದ 7.15 ಗಂಟೆಯ ನಡುವಿನ ಸಮಯದಲ್ಲಿ  ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಪಿರ್ಯಾದಿದಾರರು ಸದ್ರಿ ಸ್ಕೂಟರ್‌‌ನ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ದೂರು ನೀಡಲು ವಿಳಂಬವಾಗಿರುತ್ತದೆ. ಸದ್ರಿ ಸ್ಕೂಟರ್‌‌ಅಂದಾಜು ಮೌಲ್ಯ ರೂ. 27,000/- ಆಗಬಹುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ಠಾಣಾ ಅಪರಾಧ  ಕ್ರಮಾಂಕ 26/2022 ಕಲಂ 379  ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ13.03.2022 ರಂದು ಸಂಜೆ 6:00 ಗಂಟೆ ಸಮಯಕ್ಕೆ  ಪಿರ್ಯಾದಿದಾರರಾದ ನರಸಿಂಹ ಪುತ್ರನ್ ತಂದೆ –ರಾಮ ಕುಂದರ್, ವಾಸ-  ಅಮ್ಮ ನಿಲಯ, ಕೊಟೆಕೆರೆ ರವರು ಹೊಸಾಳ ಗ್ರಾಮದ, ಬಾರ್ಕೂರು ರಘುರಾಮ ವೈನ್ಸ್ ಬಳಿ ಇರುವಾಗ ಬ್ರಹ್ಮಾವರ – ಸಾಯಿಬ್ರಕಟ್ಟೆ ರಸ್ತೆಯಲ್ಲಿ  ಆರೋಪಿಯು ತನ್ನ ಬಾಬ್ತು KA.19.C.6703  ನೇ ನಂಬ್ರದ ಬಸ್ಸ್ ನ್ನು ಬ್ರಹ್ಮಾವರ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮುಖ್ಯ ರಸ್ತೆಯ ತೀರ ಎಡ ಭಾಗಕ್ಕೆ ಚಲಾಯಿಸಿ ರಸ್ತೆ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ನಾಗೇಶ್, ಅಲ್ತಾರು ಎಂಬವರಿಗೆ ಡಿಕ್ಕಿ ಹೊಡೆದಿದ್ದು, ಸದ್ರಿ ಅಪಘಾತದ ಪರಿಣಾಮ ನಾಗೇಶ್, ಅಲ್ತಾರು ಎಂಬವರು ರಸ್ತೆಗೆ ಬಿದ್ದು ಅವರ ಮುಖಕ್ಕೆ ಎಡಭುಜಕ್ಕೆ ರಕ್ತಗಾಯ ಉಂಟಾಗಿರುತ್ತದೆ. ಗಾಯಾಳನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತ್ರ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ 38/2022 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣಗಳು

  • ಬೈಂದೂರು: ಪಿರ್ಯಾದಿ ಸುಬ್ಬಮ್ಮಶೆಡ್ತಿ  ಪ್ರಾಯ: 55 ವರ್ಷ  ಗಂಡ:ನಾರಾಯಣ ಶೆಟ್ಟಿ  ವಾಸ: ಮುಡಾಯಿನ ಮನೆ, ಜೋಗಿ ಜೆಡ್ಡು  ಕಾಲ್ತೋಡು ಗ್ರಾಮ ಇವರ ತಂಗಿಯ ಮಗನಾದ  ಆಶಿಷ್   ಪ್ರಾಯ:21 ವರ್ಷ ಎಂಬವನಿಗೆ ದಿನಾಂಕ 14-07-2015 ರಂದು ಆತನು ಸೈಕಲ್ ನಲ್ಲಿ ಗೊಳಿಹೊಳೆ ಮೂರುಕೈ ಶಾಲೆಗೆ ಹೋಗಿ ವಾಪಾಸು  ಸುಮಾರು ಸಂಜೆ 4:30 ಗಂಟೆಗೆ ಗೊಳಿಹೊಳೆ ಅಂಗನವಾಡಿ ಕೇಂದ್ರದ ಬಳಿ ಬರುತ್ತಿರುವಾಗ ಯೆಳಜಿತ್ ಕಡೆಯಿಂದ ಅರೆಶಿರೂರು ಕಡಗೆ KA 20 EA  6884 ನೇ ಮೋಟಾರು ಸೈಕಲ್ ಸವಾರನು  ಆತನ ಬಾಬ್ತು ಮೋಟಾರು ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಆಶಿಷ್  ನ ಸೈಕಲ್ ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಶಿಷ್ ಗೆ ತಲೆಯ ಭಾಗಕ್ಕೆ ತೀವ್ರ ಸ್ವರೂಪದ ಗಾಯ ಉಂಟಾದವರನ್ನು ಉಡುಪಿ ಆದರ್ಶ ಆಸ್ಪತ್ರೆ ಚಿಕಿತ್ಸೆಗೆ  ದಾಖಲಿಸಿದ್ದು  ವೈದ್ಯಾಧಿಕಾರಿಯವರು ಚಿಕಿತ್ಸೆ  ನೀಡಿ ದಿನಾಂಕ 24-08-2015 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು ಈ ತನಕ ವೈದ್ಯರ  ಸಲಹೆಯಂತೆ  ಔಷದವನ್ನು ನೀಡಿ ಆರೈಕೆ  ಮಾಡುತ್ತಿದ್ದು ಆತನು ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದು  ಆತನಿಗೆ ಕೈ ಕಾಲು ದಪ್ಪವಾಗಿ ವಾಂತಿ ಪ್ರಾರಂಭವಾಗಿದ್ದು ದಿನಾಂಕ 13-03-2022 ರಂದು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿಯ ವೈದ್ಯರು ಚಿಕಿತ್ಸೆ ನೀಡಿದ್ದು  ಆಶಿಷ್ ನು ಚಿಕಿತ್ಸೆಗೆ ಸ್ಪಂದಿಸದೇ ಈ ದಿನ ಬೆಳಿಗ್ಗೆ  7;30 ಗಂಟೆಗೆ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯುಡಿಅರ್‌ನಂಬ್ರ 12/2022 ಕಲಂ 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 14-03-2022 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080