ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ರಾಜ ಖಾರ್ವಿ (40) ತಂದೆ- ಜಿ ಭದ್ರ ಖಾರ್ವಿ, ವಾಸ- ಮುಖ್ಯ ರಸ್ತೆ, ನಗರೇಶ್ವರಿ ದೇವಸ್ಥಾನದ ಹತ್ತಿರ, ಗಂಗೊಳ್ಳಿ, ಕುಂದಾಪುರ ಇವರು ದಿನಾಂಕ 12/03/2021 ರಂದು ಮೋಟಾರ್ ಸೈಕಲ್ ನಂಬ್ರ ಕೆಎ-20-ಇಸಿ-8639 ನೇದರಲ್ಲಿ ತನ್ನ ಹೆಂಡತಿ ಜಾನಕಿಯನ್ನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ನಾಗೂರಿನಿಂದ ಗಂಗೊಳ್ಳಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತ ಸಮಯ ಸುಮಾರು 17:10 ಗಂಟೆಗೆ ನಾಗೂರು ಗ್ರಾಮ ಪಂಚಾಯತಿ ಎದುರು ರಾಷ್ಟ್ರೀಯ ಹೆದ್ದಾರಿ 66 ತಲುಪಿದಾಗ ಎದುರಿನಿಂದ ಆಪಾದಿತ ಕೆಎ-20-ಎಮ್.ಸಿ-2941 ನೇ ಕಾರು ಚಾಲಕನು ಎಡಬದಿಯಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ತನ್ನ ಕಾರನ್ನು ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ನಲ್ಲಿ ಸಹಸವಾರಳಾಗಿ ಪ್ರಯಾಣಿಸುತ್ತಿದ್ದ ರಾಜ ಖಾರ್ವಿ ರವರ ಹೆಂಡತಿ ಜಾನಕಿ ರಸ್ತೆಗೆ ಬಿದ್ದು ಆಕೆಯ ಎಡಕಣ್ಣಿನ ಮೇಲ್ಭಾಗಕ್ಕೆ ರಕ್ತಗಾಯವಾಗಿದ್ದು ಎಡಭುಜ, ಎಡಕೈಗೆ ತರಚಿದ ಗಾಯವಾಗಿದ್ದು , ಕಾಲುಗಳಿಗೆ ಗುದ್ದಿದ ನೋವು ಉಂಟಾಗಿರುತ್ತದೆ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ದಾಖಲಿಸಿರುತ್ತಾರೆ, ಆಪಾದಿತ ಕಾರು ಚಾಲಕನು ಆಸ್ಪತ್ರೆಯ ಖರ್ಚು ವೆಚ್ಚವನ್ನು ಭರಿಸುತ್ತೇನೆಂದು ಹೇಳಿ ಈವರೆಗೂ ಭರಿಸಿದೇ ಇದ್ದು ದೂರು ನೀಡಲು ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2021 ಕಲಂ: 279, 337 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 13/03/2021 ರಂದು ಮದ್ಯಾಹ್ನ 12:20 ಗಂಟೆಗೆ ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಹನುಮಂತನಗರದ ಶಾಲೆಯ ಮುಂಭಾಗ ಹನುಮಂತ ನಗರ ಕ್ರಾಸ್ ರಸ್ತೆಯಿಂದ  KA-25-A-3305 ನೇ ಲಾರಿ ಚಾಲಕ ಚೆನ್ನಪ್ಪ ಸುಂಕದ ಎಂಬವರು ತನ್ನ ಲಾರಿಯನ್ನು ಹನುಮಂತನಗರ ಕ್ರಾಸ್ ರಸ್ತೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ದುಡುಕುತನದಿಂದ ಒಮ್ಮೆಲೆ ಚಲಾಯಿಸಿ ತೀರಾ ಎಡಬದಿಗೆ ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಮಾರುತಿ ನಾಯ್ಕ ಎಂಬವರಿಗೆ ಡಿಕ್ಕಿಹೊಡೆದ ಪರಿಣಾಮ ಮಾರುತಿ ನಾಯ್ಕ ರವರು ರಸ್ತೆಗೆ ಬಿದ್ದು ಲಾರಿಯ ಎದುರಿನ ಚಕ್ರದಡಿ ಸಿಲಿಕಿ ತಲೆಗೆ ಗಾಯವಾಗಿದ್ದು, ಎಡಕೈಗೆ ಗಂಭೀರ ಗಾಯವಾಗಿ ಮಾತನಾಡದೇ ಇದ್ದವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಎಂಬುದಾಗಿ ರಾಜೇಶ್ ಪೂಜಾರಿ (31) ತಂದೆ: ಸಂಜೀವ ಪೂಜಾರಿ ವಾಸ: ಮ.ನಂಬ್ರ 62-9 ಬೈಲ್‌ಮನೆ, ಒಡೇರ ಹೋಬಳಿ, ಅಂಚೆ ಕುಂದಾಪುರ, ಕುಂದಾಪುರ ತಾಲೂಕು ಇವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2021 ಕಲಂ: 279, 338 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾಧ ಅಶೋಕ್ ಪೂಜಾರಿ (42), ತಂದೆ- ಜಟ್ಟ ಪೂಜಾರಿ, ವಾಸ- ನೀಲಾಶ್ರೀ ನಿಲಯ, ದೊಡ್ಡಹಿತ್ಲು, ಬಂದರು ರಸ್ತೆ, ಗಂಗೊಳ್ಳಿ ಅಂಚೆ ಮತ್ತು ಗ್ರಾಮ, ಕುಂದಾಪುರ ಇವರು ದಿನಾಂಕ 13/03/2021 ರಂದು  ಅವರ ತಮ್ಮನಾದ ರವಿ ಪೂಜಾರಿಯವರ ಮೋಟಾರ್ ಸೈಕಲ್ ನಂಬ್ರ ಕೆಎ-20-ಇಆರ್-7398ನೇದರಲ್ಲಿ ಸಹಸವಾರನಾಗಿ ಕುಳಿತುಕೊಂಡು ತಮ್ಮನ ಹೆಂಡತಿ ಮನೆಯಾದ ಕಂಬದಕೋಣೆಗೆ ಹೋಗುವರೇ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಕಂಬದಕೋಣೆ ಜಂಕ್ಷನ್ ಬಳಿ ತಲುಪಿದಾಗ ಮಧ್ಯಾಹ್ನ ಸಮಯ ಸುಮಾರು 12:30 ಗಂಟೆಗೆ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಕೆಎ-05-ಎಮ್.ಆರ್-4449ನೇ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಅಶೋಕ ಪೂಜಾರಿ ಇವರ ತಮ್ಮನ ಮೋಟಾರ್ ಸೈಕಲ್ ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಇವರು ಹಾಗೂ ಮೊಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅಶೋಕ ಇವರಿಗೆ ತಲೆಗೆ ರಕ್ತಗಾಯ ಹಾಗೂ ಕೈಕಾಲುಗಳಿಗೆ ಒಳಜಖಂವುಂಟಾಗಿರುತ್ತದೆ ಮತ್ತು ರವಿ ಇವರಿಗೆ ಬಲಕಾಲಿನ ಪಾದದ ಗಂಟಿನ ಮೂಳೆಗೆ ರಕ್ತಗಾಯವಾಗಿದ್ದು ಕೈಗಳಿಗೆ  ಒಳಜಖಂವುಂಟಾಗಿರುತ್ತದೆ ಗಾಯಗೊಂಡವರನ್ನು 108 ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2021 ಕಲಂ: 279, 337 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಫುರ: ಪಿರ್ಯಾದಿದಾರರಾದ ಬೋಜ ಶೆಟ್ಟಿ (68) ತಂದೆ: ದಿ ಮಹಾಬಲ ಶೆಟ್ಟಿ ವಾಸ: ತಲಂತಬೆಟ್ಟು, ಕೊರ್ಗಿ ಗ್ರಾಮ ಕುಂದಾಪುರ ಇವರ ಮಗಳು ಜಯಶೀಲ ಶೆಡ್ತಿ (38) ರವರು ಸುಮಾರು 6 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಯಶೀಲ ಶೆಡ್ತಿಯವರು ಅವರಿಗಿರುವ ಮಾನಸಿಕ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 13/03/2021 ರಂದು ಬೆಳಿಗ್ಗೆ 09:30 ಗಂಟೆಯಿಂದ ಬೆಳಿಗ್ಗೆ 11:30 ಗಂಟೆಯ ಮದ್ಯಾಧಿಯಲ್ಲಿ ಇವರ ಮನೆಯ ತೋಟದಲ್ಲಿ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಫು: ಪಿರ್ಯಾದಿದಾರರಾಧ ನಿಶ್ಚಲ್ ಶೆಟ್ಟಿ (35) ತಂದೆ: ಸುರೇಶ್ ಶೆಟ್ಟಿ  ವಾಸ: ವೈಷ್ಣವಿ, 1/109/ಎ-22 ದುರ್ಗಾ ನಗರ ಹೊಸಬೆಟ್ಟು ಮಂಗಳೂರು ಇವರು ಅವರ ಸಂಬಂಧಿ ಸುರೇಶ್ ಶೆಟ್ಟಿ ಮತ್ತು ಅವರ ಹೆಂಡತಿ ಸೌಮ್ಯ ಹಾಗೂ ಅಶೋಕನಗರ ಲಯನ್ಸ್ ಕ್ಲಬ್ ಸದಸ್ಯರೊಂದಿಗೆ ದಿನಾಂಕ 13/03/2021 ರಂದು ಕಾಪು  ಬೀಚ್‌ಗೆ ಪ್ರವಾಸ ಬಂದು ಕಾಪು ಲೈಟ್ ಹೌಸ್ ರೆಸಾರ್ಟ್‌ನ ಈಜುಕೊಳದಲ್ಲಿ ಆಟಾವಾಡಿಕೊಂಡಿರುವಾಗ   ಮಧ್ಯಾಹ್ನ 1:30 ಗಂಟೆಯ ಸುಮಾರಿಗೆ ಸುರೇಶ್ ಶೆಟ್ಟಿ (72) ರವರು ಈಜು ಕೊಳದಲ್ಲಿ ಕುಸಿದು ಬಿದ್ದಿದ್ದು, ಅವರನ್ನು ಕೂಡಲೇ ಸುರೇಶ್ ಶೆಟ್ಟಿ ರವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಮಧ್ಯಾಹ್ನ 2:00 ಗಂಟೆ ಸಮಯಕ್ಕೆ ವೈದ್ಯರು ಪರೀಕ್ಷಿಸಿ ಸುರೇಶ್ ಶೆಟ್ಟಿಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಸುರೇಶ್ ಶೆಟ್ಟಿಯವರು ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದ್ದು ಅವರ ಮರಣದಲ್ಲಿ ಬೇರಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕಾಫು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾಧ ಶ್ಯಾಮಲ ಶೆಡ್ತಿ  (55)  ಗಂಡ: ಶೇಖರ ಶೆಟ್ಟಿ ವಾಸ: ಸೇಳಂಜೆ  ಹೆಬ್ರಿ  ಗ್ರಾಮ ಹೆಬ್ರಿ ತಾಲೂಕು. ಇವರು ಹೆಬ್ರಿಯ ಸೇಳಂಜೆ ಎಂಬಲ್ಲಿ ಗಂಡ ಶೇಖರ ಶೆಟ್ಟಿ (65) ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು ದಿನಾಂಕ 13/03/2021 ರಂದು ಇವರ  ಇಬ್ಬರು ಮಕ್ಕಳು ಕೆಲಸಕ್ಕೆ ಹೋಗಿದ್ದು ಶ್ಯಾಮಲ ರವರು  12:30 ಗಂಟೆಗೆ  ಹೆಬ್ರಿಯ ರಾಘವೇಂದ್ರ ಮಠಕ್ಕೆ  ಹೊರಟಾಗ ಆ ಸಮಯ ಮನೆಯಲ್ಲಿ ಶೇಖರ ಶೆಟ್ಟಿ ಯವರು ಒಬ್ಬರೇ ಮನೆಯಲ್ಲಿ ಇದ್ದು ಮನೆಯ ಹೊರಗೆ ಅಂಗಳದಲ್ಲಿ ಕಸವನ್ನು ಗುಡಿಸುತ್ತಿದ್ದರು  ಮದ್ಯಾಹ್ನ 02:30 ಗಂಟೆಗೆ ಶ್ಯಾಮಲ ರವರು ವಾಪಾಸು ಮನೆಗೆ ಬಂದಾಗ ಮನೆಯ ಎದುರು ಬಾಗಿಲು ಹಾಕಿದ್ದು, ಗಂಡನವರು ಕಾಣದ ಕಾರಣ ಮನೆಯ ಹಿಂಬದಿಗೆ ಹೋಗಿ ನೋಡಿದಾಗ ಗಂಡನವರು ಹಲಸಿನ ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮೃತದೇಹವು ನೇತಾಡುತ್ತಿದ್ದು ಶೇಖರ ಶೆಟ್ಟಿ ಎಂಬವರು ಟೈಲರಿಂಗ್ ಕೆಲಸ ಮಾಡಿಕೊಂಡಿದ್ದು, ಸುಮಾರು ವರ್ಷಗಳಿಂದ ಮಧ್ಯಪಾನ ಮಾಡುವ ಚಟ ಹೊಂದಿರುತ್ತಾರೆ ಹಾಗೂ ಇತ್ತೀಚೆಗೆ ಮೂಲವ್ಯಾಧಿ ಖಾಯಿಲೆಯಿಂದಲೂ ಬಳಲುತ್ತಿದ್ದರು ಹಾಗೂ ವಿಪರೀತ ಮಧ್ಯಪಾನ ಮಾಡಿ ಸರಿಯಾಗಿ ಕೆಲಸ ಮಾಡದೆ ಖಿನ್ನತೆಯಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಜಯಶ್ರೀ (40) ಗಂಡ: ರಾಜೇಶ ಆನಂದ ಸುವರ್ಣ, ವಾಸ: ಫ್ಲಾಟ್  ನಂಬ್ರ 003, ಪಾರ್ಥ ಅಪಾರ್ಟಮೆಂಟ್, ವಿರಾರ್ ವೆಸ್ಟ್, ಥಾನಾ ಪಾಲ್ಗಾರ್, ಮಹಾರಾಷ್ಟ್ರ ಇವರ ತಾಯಿ ಶ್ರೀಮತಿ ನೀಲು ಪೂಜಾರ್ತಿ ಇವರು ರಕ್ತದ ಒತ್ತಡ ಮತ್ತು ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದು ದಿನಾಂಕ 12/03/2021 ರಂದು ಮದ್ಯಾಹ್ನ 02:00 ಘಂಟೆಗೆ ಮೃತಪಟ್ಟಿದ್ದು, ಈ ವಿಷಯವನ್ನು ಶ್ರೀಮತಿ ಜಯಶ್ರೀ ರವರು ತನ್ನ ತಂಗಿಯ ಗಂಡನಿಂದ ತಿಳಿದು ದಿನಾಂಕ 13/03/2021 ರಂದು ಮದ್ಯಾಹ್ನ 01:00 ಘಂಟೆಗೆ ಮುಂಬೈಯಿಂದ ಕಾರ್ಕಳಕ್ಕೆ ಬಂದು ಕೋಲ್ಡ್ ಚೇಂಬರ್ ನಲ್ಲಿ ಇಟ್ಟಿದ್ದ ಮೃತದೇಹವನ್ನು ನೋಡಲಾಗಿ ಮೃತದೇಹದ ಎಡಕೈ ಹೆಬ್ಬರಳಿನಲ್ಲಿ ನೀಲಿ ಬಣ್ಣದ ಶಾಯಿ ಗುರುತಿದ್ದು, ಶ್ರೀಮತಿ ಜಯಶ್ರೀ ರವರ ಅಣ್ಣ ವಿಜಯ ಮತ್ತು ಆತನ ಹೆಂಡತಿ ಮೃತರ ಬೆರಳು ಮುದ್ರೆಯನ್ನು ಯಾವುದೋ ಲಾಭ ಪಡೆಯುವ ಉದ್ದೇಶದಿಂದ ಪಡೆದಿದ್ದು,  ಮೃತರ ಮರಣದಲ್ಲಿ ಸಂಶಯವಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2021 ಕಲಂ: 174(3)(IV) ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ದಿನಾಂಕ 13/03/2021 ರಂದು ಪೊಲೀಸ್‌ವೃತ್ತ ನಿರೀಕ್ಷಕರು ರೌಂಡ್ಸ ಕರ್ತವ್ಯದಲ್ಲಿರುವಾಗ ಸಮಯ ಸುಮಾರು ರಾತ್ರಿ 21:00 ಗಂಟೆಯ ಸುಮಾರಿಗೆ ಒಂದು ಕಾರಿನಲ್ಲಿ ಮೀನು ತುಂಬುವ ಬಾಕ್ಸನಲ್ಲಿ ದನದ ಮಾಂಸ ತುಂಬಿಸಿಕೊಂಡು ಭಟ್ಕಳ ಕಡೆಯಿಂದ ಬರುತ್ತಿರುವುದಾಗಿ ಮಾಹಿತಿ ಬಂದಿದ್ದು ಸಂತೋಷ ಎ ಕಾಯ್ಕಿಣಿ, ಬೃತ್ತ ನಿರೀಕ್ಷಕರು ಬೈಂದೂರು ವೃತ್ತ ರವರು ಸಿಬ್ಬಂದಿಯವರ ಸಹಾಯದಿಂದ ಶಿರೂರು ಚೆಕ್‌ಪೋಸ್ಟ ಬಳಿ ರಾತ್ರಿ 21:45  ಗಂಟೆಗೆ ಸದ್ರಿ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದು ವಾಹನದಲ್ಲಿ ಒಟ್ಟು 2 ಜನರಿದ್ದು ಕಾರು ಟೋಯೋಟಾ  ಕಂಪೆನಿಯ ಇಟಿಯೋಸ್ ಕಾರ ಆಗಿದ್ದು ಅದರ  ನೊಂದಣಿ ಸಂಖ್ಯೆ  ಕೆಎ-20-ಡಿ-7710  ಆಗಿರುತ್ತದೆ. ಸದ್ರಿ ಕಾರಿನ  ಹಿಂಬಾಗದಲ್ಲಿ 3 ಪ್ಲಾಸ್ಟಿಕ ಚೀಲ ಕಂಡು ಬಂದಿದ್ದು ಅದರಲ್ಲಿ ಮಾಂಸ ಇರುವುದು ಕಂಡು ಬಂದಿರುತ್ತದೆ. ಕಾರಿನಲ್ಲಿದ್ದವರಲ್ಲಿ ಮಾಂಸದ ಬಗ್ಗೆ ವಿಚಾರಿಸಿದಾಗ ನಾವು ಹಾವೇರಿಯಿಂದ ಖರೀದಿಸಿ ತಂದಿರುವದಾಗಿ ನುಡಿದಿದ್ದು, ಈ ಬಗ್ಗೆ  ಯಾವುದಾದರು ದಾಖಲೆ ಇದೆಯೇ ಎಂದು ವಿಚಾರಿಸಿದ್ದು ಯಾವುದೇ ದಾಖಲೆ ಇರುವುದಿಲ್ಲವಾಗಿ ತಿಳಿಸಿರುತ್ತಾರೆ. ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಮಾಂಸವು ಒಂದೊಂದು ಪ್ಲಾಸ್ಟಿಕ್ ಚೀಲದಲ್ಲಿ 5 ಕೆ.ಜಿ ಯ ಪ್ರತ್ಯೇಕ ಪ್ರತ್ಯೇಕವಾಗಿ ತುಂಬಿಸಿ ಚೀಲವೊಂದರಲ್ಲಿ 50 ಕೆ.ಜಿ ಇದ್ದು ಒಟ್ಟು ಸುಮಾರು 150 ಕೆ.ಜಿ ತೂಕದ ಮಾಂಸವಿರುತ್ತದೆ. ಅದರ ಅಂದಾಜು ಮೌಲ್ಯ 40,000/- ರೂಪಾಯಿ ಆಗಬಹುದು ಹಾಗೂ ಕಾರಿನ ಅಂದಾಜು ಮೌಲ್ಯ 5,00,000/- ರೂಪಾಯಿ  ಆಗಬಹುದು.   ಆರೋಪಿತ 1] ಸೈಯದ್ ಮೊಸ್ಸಿನ್ ಲಂಕಾ  ಪ್ರಾಯ: 52 ವರ್ಷ ತಂದೆ: ದಿ/ ಸೈಯದ ಮೊಹಿದ್ದಿನ್ ಲಂಕಾ  ವಾಸ: 16/1, ಶೌಕತ್ ಅಲಿ ಸ್ಟ್ರೀಟ್, ಭಟ್ಕಳ ತಾಲೂಕು, ಉತ್ತರಕನ್ನಡ ಜಿಲ್ಲೆ, 2] ಇಷ್ತಿಯಾಕ್ ಅಹಮ್ಮದ್ ಇಕ್ಕೇರಿ  ಪ್ರಾಯ: 41 ವರ್ಷ ತಂದೆ: ಮೊಹಮ್ಮದ್ ಇಸ್ಮಾಯಿಲ್ ಇಕ್ಕೇರಿ  ವಾಸ: ಬೈತುಲ್ಲಾ ರಿಜ್ವಾನ್, ಅಜಾದ್ ನಗರ, 2 ನೇ ಕ್ರಾಸ್, ಜಾಲಿ, ಭಟ್ಕಳ ತಾಲೂಕು, ಉತ್ತರಕನ್ನಡ ಜಿಲ್ಲೆ, ಇವರು ಅಕ್ರಮವಾಗಿ ಹಣ ಮಾಡುವ ಉದ್ದೇಶದಿಂದ ಜಾನುವಾರನ್ನು ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದು ಜಾನುವಾರು ವಧೆ ಮಾಡಲು ಯಾವುದೇ ಪರವಾನಗಿ ಹೊಂದದೇ ಅಕ್ರಮವಾಗಿ ಜಾನುವಾರನ್ನು ಎಲ್ಲಿಯೋ ವಧೆ ಮಾಡಿ ಮಾಂಸ ಮಾಡಿ ಮಾಂಸವನ್ನು ಕೆಎ-20-ಡಿ-7710 ನೇ ಕಾರಿನಲ್ಲಿ  ತುಂಬಿಸಿಕೊಂಡು ಅಕ್ರಮ  ಸಾಗಾಟ ಮಾಡಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಮಾರಾಟ ಮಾಡುವರೇ ಸಾಗಿಸುತ್ತಿರುವದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 56/2021 ಕಲಂ: 4,5,7,11  ಕರ್ನಾಟಕ ಗೋಹತ್ಯೆ ನಿಷೇಧ ಕಾಯಿದೆ & ಗೋ ಸಂರಕ್ಷಣಾ ಕಾಯಿದೆ ಮತ್ತು ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-03-2021 10:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080