ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ: ಪಿರ್ಯಾಧಿದಾರರಾಧ ಪ್ರಸಾದ ಎಮ್ ನಾಯ್ಕ(33) ತಂದೆ: ಮಹಾಬಲ ನಾಯ್ಕ, ವಾಸ: ಮಾತೃಶ್ರೀ ನಿಲಯ, ಹತ್ರಬೈಲು, ಹೌಸ್, ಪೆರ್ಡೂರು ಗ್ರಾಮ, ಉಡುಪಿ ಇವರು  ಪುಂಡಲೀಕ ನಾಯಕ್ ರವರ ವೆಂಕಟರಮಣ ಕ್ಯಾಶೂ ಪ್ಯಾಕ್ಟರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ದಿನಾಂಕ 11/03/2021 ರಂದು ಪ್ಯಾಕ್ಟರಿಯ ಟೆಂಪೋ ಟ್ರಾವೆಲರ್ ಕೆಎ-20-ಎಎ-9368 ನೇ ದರಲ್ಲಿ ಪ್ಯಾಕ್ಟರಿಯ ಕೆಲಸದವರನ್ನು ಹರಿಖಂಡಿಕೆಯಲ್ಲಿ ಬಿಟ್ಟು, ವಾಪಾಸು ಹರಿಖಂಡಿಕೆಯಿಂದ ಪೆರ್ಡೂರು ಕಡೆಗೆ ಬರುತ್ತಿದ್ದಾಗ ಸಮಯ ಸುಮಾರು ಸಂಜೆ 5:35 ಗಂಟೆಗೆ ದೂಪದಕಟ್ಟೆ ಕ್ರಾಸ್ ನ ಬಳಿ ಒಬ್ಬ ಬಾಲಕ ಲೂನಾವನ್ನು ಪೆರ್ಡೂರು ಕಡೆಯಿಂದ ಹರಿಖಂಡಿಕೆ ಕಡೆಗೆ ವೇಗವಾಗಿ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಹಿಂದಕ್ಕೆ ತಿರುಗಿ ನೋಡುತ್ತಾ ತೀರಾ ಬಲಬದಿಗೆ ಬಂದು ಟೆಂಪೋ ಟ್ರಾವೆಲರ್ ಎದುರಿಗೆ ಢಿಕ್ಕಿ ಹೊಡೆದ. ಪರಿಣಾಮ ಬಾಲಕ  ಲೂನಾ ಸಮೇತಾ ರಸ್ತೆಗೆ ಬಿದ್ದು,ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು,  ಕೂಡಲೇ ಅಲ್ಲಿ ಸೇರಿದ್ದವರು  ಹಾಗೂ ಪ್ರಸಾದ ಎಮ್ ನಾಯ್ಕ ರವರು ಎತ್ತಿ ಉಪಚರಿಸಿದ್ದು, ಆತನ ಹೆಸರು  ರಮಿತ್, ಆತನಿಗೆ  14 ವರ್ಷ  ಪ್ರಾಯ  ಆಗಿದ್ದು,  ಸವಾರಿ ಮಾಡಿಕೊಂಡಿದ್ದ  ಲೂನಾ ನಂಬ್ರ  ಕೆಎ-20-ಎಕ್ಸ್-5308  ಆಗಿರುತ್ತದೆ. ನಂತರ ಆತನನ್ನು ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಅಫಘಾತಕ್ಕೆ ಸವಾರ ಕಾನೂನು ಸಂಘರ್ಷ ಕ್ಕೆ ಒಳಗಾದ ಬಾಲಕ ರಮಿತ್ ನ ಅತೀವೇಗ ಹಾಗೂ ಅಜಾಗರೂಕತೆಯ ಸವಾರಿಯೇ  ಕಾರಣವಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2021  ಕಲಂ: 279 ಐಪಿಸಿ 3(1),181, 5(1) 180 IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ. 

 ಹುಡುಗ ಕಾಣೆ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಫಾ/ ಕಿರಣ್ ನಜ್ರೇತ್, (34) ವಾಸ: ಚರ್ಚ ರೋಡ್, ಪಡುವರಿ ಗ್ರಾಮ, ಬೈಂದೂರು ತಾಲೂಕು. ಹಾಲಿ ವಾಸ: ಡಾನ್ ಬಾಸ್ಕೋ ಯೂತ್ ಸೆಂಟರ್, ಬೆಂಜಿತ್ ನಗರ, ಶಿರ್ವಾ ಗ್ರಾಮ, ಕಾಪು ತಾಲೂಕು, ಉಡುಪಿ ಇವರು ಶಿರ್ವಾ ಡಾನ್ ಬಾಸ್ಕೋ ಯೂತ್ ಸೆಂಟ್ ಹಾಸ್ಟೆಲಿನ ಮೇಲ್ವಿಚಾರಕರು ಮತ್ತು ಧರ್ಮಗುರುಗಳಾಗಿದ್ದು, ಸದ್ರಿ ಹಾಸ್ಟೆಲಿನಲ್ಲಿರುವ ವಿದ್ಯಾರ್ಥಿಯಾದ ರಾಯಲ್ ಪಿಳ್ಳೆ (21) ಎಂಬಾತನು ದಿನಾಂಕ 12/03/2021 ರಂದು ಬೆಳಿಗ್ಗೆ 04:30 ಗಂಟೆಗೆ ಹಾಸ್ಟಲಿನಲ್ಲಿರುವ ಬೇರೆ ವಿದ್ಯಾರ್ಥಿಗಳಲ್ಲಿ ಹಾಗೂ ಪಿರ್ಯಾದಿದಾರರಲ್ಲಿ ಹೇಳದೆ ಹೋಗಿ ಕಾಣೆಯಾಗಿದ್ದು, ಈತನನ್ನು ಈವರೆಗೂ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲವಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2021 ಕಲಂ: ಹುಡುಗ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾಧ ನಾರಾಯಣ ಪೂಜಾರಿ (86) ತಂದೆ: ಗೋವಿಂದ ಪೂಜಾರಿ, ವಾಸ: ಗೊಯಾಡಿ ಮನೆ, ಮಾರಿಕಾಂಬ ದೇವಸ್ಥಾನದ ಹತ್ತಿರ, ಕೊಡಪಾಡಿ, ಗುಜ್ಜಾಡಿ ಗ್ರಾಮ, ಕುಂದಾಪುರ ಇವರ ಮಗಳು ರತ್ನ (38) ಎಂಬುವವರು ಗಂಡ ಸುಮಾರು 6 ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯ ಮರಣದ ಬಳಿಕ ರತ್ನ ರವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಉಡುಪಿಯ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಿದ್ದ ರತ್ನ ರವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 13/03/2021 ರಂದು ರಾತ್ರಿ ಸುಮಾರು 10:00 ಗಂಟೆಯಿಂದ ದಿನಾಂಕ 14/03/2021 ರ ಮುಂಜಾನೆ 3:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಅಂಗಳದಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 10/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಮಧುಕರ ಅಮೀನ್ (47) ತಂದೆ : ದಿ. ಮಹಾಬಲ ಪೂಜಾರಿ ವಾಸ : ಮಧುಕೃಷ್ಣ ಅಂಕುದ್ರು ಉದ್ಯಾವರ ಇವರ ಅಣ್ಣ ಸಂಜೀವ ಪೂಜಾರಿ (60) ರವರಿಗೆ ವಿಪರೀತ ಮಧ್ಯಪಾನ ಮಾಡಿಕೊಂಡಿದ್ದು, ದಿನಾಂಕ 13/03/2021 ರಂದು ಬೆಳಗ್ಗೆ ಸುಮಾರು 09.00 ಗಂಟೆಗೆ ಕೂಲಿ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ರಾತ್ರಿಯಾದರು ಮನೆಗೆ ಬರಲಿಲ್ಲ. ಈ ಬಗ್ಗೆ ಇವರು ನೆರೆಕೆರೆಯವರಲ್ಲಿ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಿದ್ದಲ್ಲಿ ಮಧುಕರ ರವರ ಅಣ್ಣ ಪತ್ತೆಯಾಗಿರುವದಿಲ್ಲ. ದಿನಾಂಕ 14/03/2021 ರಂದು ಬೆಳಗ್ಗೆ 11:30 ಗಂಟೆಗೆ ಮಧುಕರ ಇವರ ಪರಿಚಯದ ಡಾಲ್ಫಿ ಎಂಬವರು ಕರೆ ಮಾಡಿ ನಿನ್ನ ಅಣ್ಣ ಸಂಜೀವ ಪೂಜಾರಿಯವರು ಪಿತ್ರೋಡಿಯ ವಿಶ್ವನಾಥ ಶೆಟ್ಟಿಯವರಿಗೆ ಸೇರಿದ ಜಾಗದಲ್ಲಿರುವ ಹಳೆಯ ಬಾವಿಯ ನೀರಿನಲ್ಲಿ ಮುಳುಗಿ ಮೃತ ಪಟ್ಟು ತೇಲಾಡುವ ಸ್ಥಿತಿಯಲ್ಲಿ ಕಂಡು ಬಂದಿದ್ದು ಕೂಡಲೇ ಬರುವಂತೆ ತಿಳಿಸಿದಂತೆ ಇವರು ಬಂದು ನೋಡಲಾಗಿ ಅಣ್ಣ ಸಂಜೀವ ಪೂಜಾರಿ ಬಾವಿಯ ನೀರಿನಲ್ಲಿ ಮುಳುಗಿ ಮೃತ ಪಟ್ಟು ತೇಲಾಡುವ ಸ್ಥಿತಿಯಲ್ಲಿ ಕಂಡು ಬಂದಿರುತ್ತದೆ. ಸಂಜೀವ ಪೂಜಾರಿರವರಿಗೆ ವಿಪರೀತ ಮಧ್ಯಪಾನ ಮಾಡುವ ಚಟವಿದ್ದು, ಯಾವುದೋ ವಿಚಾರಕ್ಕೆ ಮನನೊಂದು ಜೀವನದಲ್ಲಿ ಜೀಗುಪ್ಸೆಗೊಂಡು ವಿಶ್ವನಾಥ ಶೆಟ್ಟಿಯವರಿಗೆ ಸೇರಿದ ಬಾವಿಯ ನೀರಿಗೆ ಹಾರಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವುದಾಗಿದೆ. ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲಾವಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣಾ ಯುಡಿಆರ್ ಕ್ರಮಾಂಕ 8/2021 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಬೈಂದೂರು: ದಿನಾಂಕ 14/03/2021 ರಂದು ಬೆಳಿಗ್ಗೆ 07:00 ಗಂಟೆಗೆ ಫಿರ್ಯಾದಿದಾರರಾದ ಆನಂದ ಪದ್ಮನಾಭ ಭಟ್ಟ. ವಾಸ; ಕೆರ್ಗಾಲ್ ರೈಲ್ವೇ ಕ್ವಾಟ್ರಸ್ ಹಿಂಬದಿ ಕೆರ್ಗಾಲ್ ಅಂಚೆ ಮತ್ತು ಗ್ರಾಮ, ಬೈಂದೂರು ಇವರು ತಮ್ಮ ಮನೆಯ ಬಳಿ ಜಮೀನಿನಲ್ಲಿ ಬೆಳೆದ ನೆಲಕಡಲೆ ಬೆಳೆಗಳನ್ನು ಆಪಾದಿತ , 1. ಶಶಿಧರ ಭಟ್ಟ, 2, ನರಸಿಂಹ, 3, ಯಶೋಧ, 4 ಮೀನಾಕ್ಷಮ್ಮ ಇವರು ತೆಗೆದುಕೊಂಡು ಹೋಗಲು ಬಂದಾಗ ಅದನ್ನು ಆನಂದ ಪದ್ಮನಾಭ ಭಟ್ಟ ಇವರು ಪ್ರಶ್ನಿಸಿದ್ದಕ್ಕೆ ಆಪಾದಿತ ನರಸಿಂಹನು ಇವರನ್ನು ಗಟ್ಟಿಹಿಡಿದುಕೊಂಡು ಆಪಾದಿತ ಶಶಿಧರ ಭಟ್ಟನು ಅಲ್ಲೇ ಇದ್ದ ಬೇಲಿಗೆ ಹಾಕಿದ ಮರದ ದೊಣ್ಣೆಯನ್ನು ಕಿತ್ತು ಆನಂದ ಪದ್ಮನಾಭ ಭಟ್ಟ ರವರ ತಲೆಗೆ ಸೊಂಟಕ್ಕೆ ಕಾಲಿಗೆ ಹಲ್ಲೆ ನಡೆಸಿದ್ದು. ಆನಂದ ಪದ್ಮನಾಭ ಭಟ್ಟ ರವರು ಬೊಬ್ಬೆ ಹಾಕಿದಾಗ ಇವರ ಹೆಂಡತಿ, ಮಗ ಅರುಣ್ ಪ್ರಸಾದ್ ಗಲಾಟೆಯನ್ನು ತಪ್ಪಿಸಲು ಬಂದಾಗ ಆಪಾದಿತ ಶಶಿಧರ ಭಟ್ಟನು ಅವರಿಗೂ ಸಹ ಹಲ್ಲೆ ನಡೆಸಿದ್ದು ಅಕ್ಕ ಯಶೋಧ, ತಾಯಿ ಮೀನಾಕ್ಷಮ್ಮ ಎಲ್ಲರೂ ಸೇರಿ ಅವನನ್ನು ಬಿಡಬೇಡ ಕೊಂದು ಹಾಕು ಎಂದು ಹಲ್ಲೆಗೆ ಪ್ರಚೋದಿಸಿರುತ್ತಾರೆ.  ಆಪಾದಿತ ಶಶಿಧರ ಭಟ್ಟನು ಸ್ಥಳದಲ್ಲಿದ್ದ ನೆಲಕಡಲೆ ರಾಶಿಯನ್ನು ಬಲವಂತವಾಗಿ ಕೊಂಡು ಹೋಗಿದ್ದು ಹಲ್ಲೆಯಿಂದ ಆನಂದ ಪದ್ಮನಾಭ ಭಟ್ಟ ರವರ ತಲೆಗೆ ಎಡಕಾಲಿಗೆ  ಯಶೋಧರವರ ಮುಖಕ್ಕೆ ಬೆನ್ನಿಗೆ ಗಾಯವಾಗಿದ್ದ. ಅರುಣಪ್ರಸಾದನಿಗೆ ತೊಡೆಗೆ ಗುದ್ದಿದ ನೋವುಂಟಾಗಿರುತ್ತದೆ. ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿರುತ್ತಾರೆ. ಈ ಘಟನೆಗೆ ಜಮೀನು ವಿವಾದವೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 57/2021 ಕಲಂ: 447, 324, 354, 327, 114, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 14/03/2021 ರಂದು 07.00 ಗಂಟೆಗೆ ಫಿರ್ಯಾದಿದಾರರಾಧ ಎನ್ ನರಸಿಂಹರಾವ್  (24) ತಂದೆ; ಕೆ ಎನ್ ವೆಂಕಟೇಶ್ವರ ರಾವ್ ವಾಸ;ಬಿಜೂರು ರೈಲ್ವೇ ನಿಲ್ದಾಣದ ಬಳಿ. ಕೆರ್ಗಾಲ್ ಗ್ರಾಮದ ಬೈಂದೂರು ಇವರು ತನ್ನ ತಾಯಿ ಶಾರದ, ಅಜ್ಜಿ ಮೀನಾಕ್ಷಮ್ಮ ಹಾಗೂ ಮಾವ ಶಶಿಧರವರೊಂದಿಗೆ ಕುಟುಂಬದ ಜಮೀನಿನಲ್ಲಿ ಇದ್ದ ನೆಲಕಡೆಲೆಯನ್ನು ಮನೆಗೆ ತರುವರೇ ಹೋಗಿದ್ದು ಆಗ ಅಲ್ಲಿಯೇ ಇದ್ದ ಮಾವ ವಿಶ್ವೇಶ್ವರ ಭಟ್ ಆಕ್ಷೇಪ ವ್ಯಕ್ತಪಡಿಸಿದಾಗ ಎನ್ ನರಸಿಂಹರಾವ್ ರವರಿಗೂ ಆರೋಪಿತರಿಗೂ ಮಾತಿಗೆ ಮಾತಾಗಿ ವಿಶ್ವೇಶ್ವರ ಭಟ್ ರವರು ಮರದ ದೊಣ್ಣೆಯಿಂದ ಎನ್ ನರಸಿಂಹರಾವ್ ಇವರ ತಲೆಗೆ ಹೊಡೆದ ಪರಿಣಾಮ ತಲೆಗೆ ಗಾಯವಾಗಿದ್ದು,  ಅಲ್ಲದೆ ಅವಾಚ್ಯ ಶಬ್ದದಿಂದ ಬೈದು, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು  ಜೀವ ಬೆದರಿಕೆ ಹಾಕಿದ್ದು ಗಾಯಗೊಂಡ ಎನ್ ನರಸಿಂಹರಾವ್  ರವರು ಚಿಕಿತ್ಸೆಯ ಬಗ್ಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿರುತಾರೆ. ಈ ಘಟನೆಗೆ ಜಮೀನು ವಿವಾದವೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2021 ಕಲಂ: 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-03-2021 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080