ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೊಲ್ಲೂರು: ಪಿರ್ಯಾದಿದಾರರಾದ ಸುಂದರ ಶೆಟ್ಟಿ (43), ತಂದೆ:  ಸದಾಶಿವ ಶೆಟ್ಟಿ , ವಾಸ:   ಮನೆ ನಂಬ್ರ: 3-24 ಗೋಳಿಬೇರು ಜಡ್ಡು ಮೇಲ್ ಹೊಸೂರು , ಹೊಸೂರು ಗ್ರಾಮ  ಕುಂದಾಫುರ ತಾಲೂಕು ಇವರು  ದಿನಾಂಕ 13/02/2023 ರಂದು 17:00 ಗಂಟೆಗೆ  ತನ್ನ  ಮೋಟಾರು ಸೈಕಲ್‌ ನ್ನು ಕುಂದಾಪುರ – ಕೊಲ್ಲೂರು ರಾಜ್ಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಬರುತ್ತಿದಾಗ ಕುಂದಾಪುರ ತಾಲೂಕು  ಇಡೂರು- ಕುಂಜ್ಞಾಡಿ ಗ್ರಾಮದ ಜನ್ನಾಲ್‌ ಮೇಲ್‌ಜಡ್ಡು ಸಮೀಪ ತಲುಪಿದಾಗ ಪಿರ್ಯಾದಿದಾರರ ಮೋಟಾರು ಸೈಕಲ್‌ಮುಂದಿನಿಂದ  ಚಿತ್ತೂರು ಕಡೆಯಿಂದ  ಜಡ್ಕಲ್‌ಕಡೆಗೆ ಚಲಾಯಿಸಿಕೊಂಡು  ಹೋಗುತ್ತಿದ KA-15-9558 ನೇ  ಪಿಕಪ್‌ ವಾಹನವನ್ನು ಅದರ  ಚಾಲಕ ಯತೀಶ್‌  ವೇಗವಾಗಿ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಜಾಗರೂಕತೆಯಿಂದ ತೀರಾ ಬಲಬದಿಗೆ ಚಲಾಯಿಸಿ ಎದುರಿನಿಂದ ಜಡ್ಕಲ್‌ಕಡೆಯಿಂದ ಚಿತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-20-HA-4578  ಹೊಂಡಾ ಶೈನ್‌ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌‌ ಸವಾರ ಪ್ರಜ್ವಲ್‌ ರವರು ಮೋಟಾರು ಸೈಕಲ್‌ ಸಮೇತ  ರಸ್ತೆಗೆ ಬಿದ್ದು ತಲೆಗೆ ಧರಿಸಿದ ಹೆಲ್ಮೆಟ್‌ ಹಾರಿ ಹೋಗಿ ತಲೆಗೆ ಗಂಭೀರ ಸ್ವರೂಪದ ರಕ್ತಗಾಯ ಉಂಟಾಗಿ ಹಾಗೂ ಕೈ,ಕಾಲು ಮತ್ತು ದೇಹದ ಇತರ ಅಂಗಾಂಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 07/2023 ಕಲಂ: 279,  304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ದಿನಾಂಕ 12/02/2023 ರಂದು ಪಿರ್ಯಾದಿದಾರಾದ ಗಣಪು (52), ತಂದೆ: ಪಂಜು, ವಾಸ: ಕ್ರೋಡಬೈಲೂರು ಅಂಚೆ. ಶಂಕರನಾರಾಯಣ ಗ್ರಾಮ. ಕುಂದಾಪುರ  ತಾಲೂಕು  ಇವರು ರಮೇಶ್ ಇವರೊಂದಿಗೆ ಚಾರಾದ ಮಿಥುನ್ ಶೆಟ್ಟಿ ಇವರ ತೋಟದಲ್ಲಿ ಕೆಲಸ ಮಾಡಿ ಊಟಕ್ಕೆ ಮಂಡಾಡಿಜೆಡ್ಡು ಕಡೆಗೆ ಹೋಗುವ ಸಲುವಾಗಿ KA-20-R-4576 ನೇ ಮೋಟಾರ್ ಸೈಕಲ್ ನಲ್ಲಿ ಹೊರಟು ಮದ್ಯಾಹ್ನ 4:00 ಗಂಟೆಗೆ ಮಂಡಾಡಿಜೆಡ್ಡು ಹಂದಿಕಲ್ಲು ರಸ್ತೆಗೆ ಬಂದು ಮುಂದೆ ಸಾಗಲು ನಿಂತಿರುವಾಗ ಮಂಡಾಡಿಜೆಡ್ಡು ಕಡೆಯಿಂದ KA-20-MB-9319 ನೇ ಕ್ರೈನ್ ನ್ನು ಅದರ ಚಾಲಕ ಸ್ವೀವನ್ ಡಿ.ಸೋಜಾ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ಎಕಾಏಕಿ ರಸ್ತೆಯ ತೀರಾ ಎಡಬದಿಗೆ ಬಂದು KA-20-R-4576 ನೇ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಇಬ್ಬರೂ ಮೋಟಾರ್ ಸೈಕಲ್ ಸಮೇತ ಅಲ್ಲಿಯೇ ಇದ್ದ ಕಲ್ಲುಗಳ ಮೇಲೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ  ಬಲಕಾಲಿಗೆ ಮತ್ತು ಎಡಕಾಲಿಗೆ ಮತ್ತು ಹಣೆಗೆ  ಗಾಯವಾಗಿದ್ದು. ರಮೇಶ್ ರವರಿಗೆ ಬೆನ್ನಿಗೆ ಮತ್ತು ಬಲಕಾಲಿನ  ತೊಡೆಯ ಬಳಿ ತೀವ್ರ ಸ್ವರೂಪದ ಜಖಂ ಅಗಿರುತ್ತದೆ.  ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 07/2023 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ದಿನಾಂಕ 12/02/2023 ರಂದು ಪಿರ್ಯಾದಿದಾರರಾದ ಉದಯ ನಾಯ್ಕ (38). ತಂದೆ: ಲಿಂಗ ನಾಯ್ಕ ,ವಾಸ; ಈಶ್ವರಜೆಡ್ಡು  ಕನ್ಯಾನ.  ಹೆಬ್ರಿ  ಗ್ರಾಮ  ಮತ್ತು ಹೆಬ್ರಿ  ತಾಲೂಕು ಇವರು  ತನ್ನ KA-20-EV-9612 ನೇ ಬಜಾಜ್ ಸಿಟಿ  110 ಮೋಟಾರ್ ಸೈಕಲ್ ನಲ್ಲಿ ಉಡುಪಿ- ಹೆಬ್ರಿ ರಸ್ತೆಯಲ್ಲಿ ತನ್ನ ಮನೆಯಾದ ಕನ್ಯಾನದಿಂದ ಹೆಬ್ರಿ ಕಡೆಗೆ ಚಲಾಯಿಸಿಕೊಂಡು ಬಂದು ಮದ್ಯಾಹ್ನ 2:00 ಗಂಟೆಗೆ ಹೆಬ್ರಿ ಗ್ರಾಮದ ಹೆಬ್ರಿ ಸರಕಾರಿ ಅಸ್ಪತ್ರೆಯ ಎದುರುಗಡೆ ರಸ್ತೆ ತಲುಪಿ ರಸ್ತೆಯ ಬಲಬದಿಯಲ್ಲಿರುವ ವಿಘ್ನೇಶ್ ಹೋಟೇಲ್ ಗೆ ಹೋಗುವ ಸಲುವಾಗಿ ತನ್ನ ಮೋಟಾರ್ ಸೈಕಲ್ ನ ಬಲಬದಿಯ ಇಂಡಿಕೇಟರ್ ಹಾಕಿ ರಸ್ತೆಯ ಬಲಬದಿಗೆ ತಿರುಗಿಸಿದಾಗ ಅವರ ಹಿಂದುಗಡೆಯಿಂದ  ಉಡುಪಿ ಕಡೆಯಿಂದ KA-20-X-9634 ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ಶರತ್ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನ ಬಲಬದಿಯ ಹಿಂಬದಿಯ ಬಾಕ್ಸ್ ಡಿಕ್ಕಿ ಹೊಡೆದ ಪರಿಣಾಮ ಅವರಿಬ್ಬರೂ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಬಲಕೈಯ ಭುಜದ ಬಳಿ ತೀವ್ರ ಸ್ವರೂಪದ ಗಾಯವಾಗಿದ್ದು. ಎರಡು ಕಾಲಿನ ಗಂಟಿನ ಬಳಿ ಮತ್ತು ತಲೆಯ ಬಳಿ ತರಚಿದ ಗಾಯವಾಗಿದ್ದು. ಸೊಂಟಕ್ಕೆ ಗುದ್ದಿದ ನೋವಾಗಿರುತ್ತದೆ. ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರ ಶರತ್ ನಿಗೆ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 08/2023 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಕುಂದಾಪುರ: ದಿನಾಂಕ 13/02/2023  ರಂದು ರಾತ್ರಿ 7:45  ಗಂಟೆಗೆ,  ಕುಂದಾಪುರ  ತಾಲೂಕಿನ,  ಬಸ್ರೂರು ಗ್ರಾಮದ  ಮಾರ್ಗೋಳ್ಳಿ  ಎಂಬಲ್ಲಿಯ   SH 52 66 ರಸ್ತೆಯಲ್ಲಿ, ಆಪಾದಿತ  ಬಿ. ಸುಭಾಶ್‌ ಯಡಿಯಾಳ  KA-20-MD- 8554ನೇ  KIA ಕಾರನ್ನು ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ರಸ್ತೆಯ ಬಲಬದಿಗೆ ಬಂದು, ಕಂಡ್ಲೂರು ಕಡೆಯಿಂದ  ಮೂಡ್ಲಕಟ್ಟೆ  ರೈಲ್ವೆ ಸ್ಟೇಶನ್‌‌‌ಗೆ  ಸುಧಾಕರ ರವರು  KA-20-EP-3503 ನೇ ಬೈಕಿನಲ್ಲಿ  ಪಿರ್ಯಾದಿದಾರರಾದ ಸಚಿನ್‌ಕುಮಾರ್‌ ಮೋಗವೀರ (24), ತಂದೆ: ದಿ.ಗೋವಿಂದ ಮೋಗವೀರ, ವಾಸ: ಅಮ್ಮನ್‌ಬೆಟ್ಟು, ಕಂಡ್ಲೂರು, ಕಾವ್ರಾಡಿ ಗ್ರಾಮ ಕುಂದಾಪುರ  ತಾಲೂಕು ಇವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಬೈಕಿಗೆ  ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಸುಧಾಕರ ಹಾಗೂ ಸಚಿನ್‌ ಕುಮಾರ್‌ ಮೋಗವೀರ ರವರ ಬಲ ಕಾಲಿಗೆ  ಮೂಳೆ ಮುರಿತವಾದ ಗಾಯವಾಗಿ  ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 17/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿಯಾ೯ದಿದಾರರಾದ ಜೋಯಲ್‌ ಡಿಕೋಸ್ತಾ (31), ತಂದೆ: ದಿ. ಮಾಕ೯ ಡಿಕೋಸ್ತಾ,ವಾಸ:ಬಂಟಕೆದು, ಸಿದ್ಧಕಟ್ಟೆ, ಬಂಟ್ವಾಳ  ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಇವರು ದಿನಾಂಕ 13/02/2023 ರಂದು KA-19-EN-8666 ನೇ ಸ್ಕೂಟರ್‌ ನಲ್ಲಿ ರೋಶನಿ ಡಿಸೋಜಾರವರನ್ನು ಸಹಸವಾರೆಯನ್ನಾಗಿ ಕುಳ್ಳರಿಸಿಕೊಂಡು ಉಡುಪಿ ಮಂಗಳೂರು ರಸ್ತೆಯಲ್ಲಿ ಮಂಗಳೂರು ಕಡೆಗೆ ರಸ್ತೆಯ ಬಲಬದಿಯಲ್ಲಿ ಡಿವೈಡರ್‌ ಪಕ್ಕದಲ್ಲಿ ಹೋಗುತ್ತಿದ್ದು ಸಂಜೆ  6:45 ರ ಸುಮಾರಿಗೆ ಮೂಡಬೆಟ್ಟು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ಪಕ್ಕದಲ್ಲಿರುವ ಬಾಲಾಜಿ ಗ್ಯಾರೇಜ್‌ ಸಮೀಪ ಹೋಗುತ್ತಿರುವಾಗ ಉಡುಪಿ ಕಡೆಯಿಂದ ಬಂದ  ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅತೀ ವೇಗ ಹಾಗೂ ನಿಲ೯ಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದವನು ಏಕಾಏಕಿಯಾಗಿ ಬಸ್ಸನ್ನು ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಸ್ಕೂಟರ್‌  ಹಿಂದೆ ಕುಳಿತಿದ್ದ ರೋಶನಿಯವರ ಎಡ ಕಾಲಿಗೆ ಬಸ್ಸಿನ ಹಿಂಬದಿ ಡಿಕ್ಕಿ ಹೊಡೆದಿದ್ದು, ಬಸ್ಸಿನ ಚಾಲಕನು ಬಸ್ಸನ್ನು  ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಅಪಘಾತದಿಂದ ಬಸ್ಸಿನ ನಂಬ್ರವನ್ನು ನೋಡಿರುವುದಿಲ್ಲ ನಮ್ಮ ಸ್ಕೂಟರ್‌ ಗೆ ಡಿಕ್ಕಿ ಹೊಡೆದ ಬಸ್ಸು ನೀಲಿ ಬಣ್ಣದ್ದಾಗಿರುತ್ತದೆ. ಬಸ್ಸು ರೋಶನಿಯ ಕಾಲಿಗೆ ಡಿಕ್ಕಿ ಹೊಡೆದ ಕಾರಣ ಅವಳು ನೋವಿನಿಂದ  ಅತ್ತಿತ್ತ ವಾಲಾಡಿದ್ದು ಸ್ಕೂಟರ್‌ ನನ್ನ  ನಿಯಂತ್ರಣ ತಪ್ಪಿ  ಮುಂದೆ ರಾಷ್ಟ್ರೀಯ ಹೆದ್ದಾರಿ 66 ಕಾಮಗಾರಿ ನೆಡೆಯುತ್ತಿದ್ದ ಕಾರಣ ರಸ್ತೆಯ ಬಲಬದಿಗೆ  ಅಡ್ಡವಿಟ್ಟಿದ್ದ  ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು  ಸ್ವಲ್ಪ ಮುಂದಕ್ಕೆ ಹೋಗಿ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದ ಬಿದ್ದ ಪರಿಣಾಮ ರೋಶನಿ ತಲೆಗೆ ಪೆಟ್ಟಾಗಿದ್ದು  ಬಾಯಲ್ಲಿ ರಕ್ತ ಬರುತ್ತಿದ್ದು, ಅವಳು ಮಾತನಾಡುತ್ತಿರಲ್ಲಿ. ಪಿರ್ಯಾದಿದಾರರಿಗೆ ಅಲ್ಲಲ್ಲಿ ತರಚಿದ ಗಾಯವಾಗಿತ್ತು. ಕೂಡಲೇ ಅಲ್ಲಿನ ಸ್ಥಳೀಯರು ಎತ್ತಿ ಉಪಚರಿಸಿ ಒಂದು ರಿಕ್ಷಾದಲ್ಲಿ ನಮ್ಮನ್ನು ಉಡುಪಿ ಕಡೆಯ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಉಡುಪಿಯ ಆದಶ೯ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ರೋಶನಿಯನ್ನು ಪರೀಕ್ಷಿಸಿದ ವೈಧ್ಯರು ಅವಳು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದು,  ಪಿರ್ಯಾದಿದಾರರು ಪ್ರಥಮ  ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಬಂದು ದೂರು ನೀಡುತ್ತಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 21/2023 ಕಲಂ: 279, 337, 304(ಎ) ಐಪಿಸಿ  ಮತ್ತು 134 (ಎ) & (ಬಿ) ಐ.ಎಮ್.ವಿ. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಮೊಹಮ್ಮದ್ ಅಕ್ರಮ್ (48), ತಂದೆ: ಡಾ. ಜಲಾಲುದ್ದಿನ್ ವಾಸ: 8/11, ಮುಸ್ಲಿಂ ಕೇರಿ, ಮುಖ್ಯರಸ್ತೆ ಬೈಂದೂರು ತಾಲೂಕು ಇವರು ಭಟ್ಕಳದ ನಿಶಾದ್ ಆಸ್ಪತ್ರೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು, ದಿನಾಂಕ 13/02/2023 ರಂದು ಸಂಜೆ 7:30 ಗಂಟೆಗೆ ಅವರ KA-20-HA3149 ನಂಬ್ರದ ಎಲೆಕ್ಟ್ರೀಕ್ ಮೋಟಾರು ಸೈಕಲ್ ನಲ್ಲಿ ಭಟ್ಕಳದಿಂದ ಬೈಂದೂರಿಗೆ ಬರುತ್ತಿರುವಾಗ ಶಿರೂರು ಟೋಲ್ ಗೇಟ್ ಬಳಿ ಮೊಹಮ್ಮದ್ ಅಕ್ಬರ್ ಹಾಗೂ ಓರ್ವ ವ್ಯಕ್ತಿಯು KA-20-EU-9171 ನೇ ಮೋಟಾರು ಸೈಕಲನಲ್ಲಿ ಬಂದು 5 ರಿಂದ 6 ಬಾರಿ ಪಿರ್ಯಾದಿದಾರರು ಚಲಾಯಿಸಿಕೊಂಡಿದ್ದ  ಮೋಟಾರು ಸೈಕಲ್ ಗೆ ಅಡ್ಡ ಬಂದಿದ್ದು ಪಿರ್ಯಾದಿದಾರರು ಹೆದರಿ ಅಲ್ಲಿಂದ ಹೊರಟು ಮೋಟಾರು ಸೈಕಲ್ ನ್ನು ವೇಗವಾಗಿ ಚಲಾಯಿಸಿಕೊಂಡು ನೀರ್ಗದ್ದೆ ಬಳಿ ಬರುತ್ತಿರುವಾಗ ಮೊಹಮ್ಮದ್ ಅಕ್ಬರ್ ಹಾಗೂ ಇನ್ನೊರ್ವ  ವ್ಯಕ್ತಿಯು ಮೋಟಾರು ಸೈಕಲನ್ನು ಅಡ್ಡಗಟ್ಟಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿದಾರರು  ಅವರಿಂದ ತಪ್ಪಿಸಿಕೊಂಡು ಬೈಂದೂರಿಗೆ ಬರಲು  ನೀರ್ಗದ್ದೆಯಿಂದ ರಾಷ್ಟ್ರೀಯ ಹೆದ್ದಾರಿ 66 ರ ವಿರುದ್ಧ ದಿಕ್ಕಿನಲ್ಲಿ ಬರುತ್ತಿರುವಾಗ ಓತ್ತಿನೆಣೆಯಲ್ಲಿ ಮೊಹಮ್ಮದ್ ಅಕ್ಬರ್ ಹಾಗೂ ಇನ್ನೋರ್ವ ವ್ಯಕ್ತಿಯು ಇಬ್ಬರು ಅಪರಿಚಿತ ವ್ಯಕ್ತಿಗಳ ಜೊತೆಯಲ್ಲಿ ಮಾತನಾಡುತ್ತಾ ನಿಂತಿದ್ದು,  ಮೊಹಮ್ಮದ್ ಅಕ್ಬರ್ ಯಾವುದೋ ದುರುದ್ದೇಶದಿಂದ ತನಗೆ ತೊಂದರೆ ನೀಡಲು ಈ ರೀತಿಯ ಕೃತ್ಯ ಮಾಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 28/2023 ಕಲಂ: 341, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

   

ಇತ್ತೀಚಿನ ನವೀಕರಣ​ : 14-02-2023 09:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080