ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ಪಿರ್ಯಾದಿ: ನಾಝೀಮ ಬಾನು ಪ್ರಾಯ 40 ವರ್ಷ ಗಂಡ:ಅನ್ವರ್, ವಾಸ: ಪ್ರಿಯರವರ ಬಾಡಿಗೆ ಮನೆ ಶ್ರೀ ರಾಘವೇಂದ್ರ ಭಜನಾ ಮಂದಿರದ ಬಳಿ ಗುಜ್ಜರಬೆಟ್ಟು ಹತ್ತಿರ ಪಡುತೋನ್ಸೆ ಗ್ರಾಮ ಇವರು ನೀಡಿದ ದೂರಿನ ದಿನಾಂಕ 13/02/2023 ರಂದು ಗಂಡ ಅನ್ವರ್‌ರವರೊಂದಿಗೆ KA20EK2291ನೇ ನಾಲ್ಕು ಚಕ್ರದ ಸ್ಕೂಟರ್‌ನಲ್ಲಿ ಹಿಂಬದಿ ಸವಾರಳಾಗಿ ಕುಳಿತುಕೊಂಡು ಮಲ್ಪೆಯಿಂದ ವಾಪಾಸು ಮನೆ ಆದಿ ಉಡುಪಿ ಕರಾವಳಿ ಮಾರ್ಗವಾಗಿ ಹೂಡೆಗೆ ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 11-00 ಗಂಟೆಗೆ ಸಂತೆಕಟ್ಟೆ ಪೆಟ್ರೋಲ್‌ಬಂಕ್‌ಎದುರುಗಡೆ ಅಂಬಾಗಿಲು ಕಡೆಯಿಂದ ಸಂತೆಕಟ್ಟೆ ಕಡೆಗೆ ವಾಹನನಗಳು ಏಕಮುಖವಾಗಿ ಸಂಚರಿಸುವ ರಾ.ಹೆ 66 ರಲ್ಲಿ ಸರ್ವಿಸ್‌ರಸ್ತೆ ಕಡೆಗೆ ತಿರುಗಿಸುವರೇ ಸೂಚನೆ ನೀಡಿ ತಿರುಗಿಸುತ್ತಿರುವಾಗ ಹಿಂಬಂದಿಯಿಂದ ಅಂದರೇ ಅಂಬಾಗಿಲು ಕಡೆಯಿಂದ ಸಂತೆಕಟ್ಟೆ ಕಡೆಗೆ  KA23B0341ನೇ ಬೊಲೆರೋ ಪಿಕಪ್‌ವಾಹನದ ಚಾಲಕ ನಾಗೇಶ್.ಕೆ ರವರು ತಾನುಚಲಾಯಿಸುತ್ತಿದ್ದ ವಾಹನವನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಮತ್ತು ಅವರ ಗಂಡ ಸವಾರಿ ಮಾಡಿಕೊಂಡು ಹೋಗುತ್ತಿದ್ದ  ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಗಂಡ ಸ್ಕೂಟರ್‌ಸಮೇತ ರಸ್ತೆಗೆ ಬಿದ್ದು,ಪಿರ್ಯಾದಿದಾರರ ಎಡಕೈಗೆ ಮೂಳೆಮುರಿತದ ಜಖಂ,ತಲೆಗೆ ಎಡಕಾಲಿಗೆ ಬೆನ್ನಿಗೆ ಗುದ್ದಿದ ಒಳಜಖಂ ಮತ್ತು ಅನ್ವರ್‌ರವರ ತಲೆ,ಕೆಳ ತುಟಿಗೆ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ    ಉಡುಪಿ ಸಂಚಾರ ಠಾಣೆ  ಅಪರಾಧ ಕ್ರಮಾಂಕ 14/2023 ಕಲಂ: 279,337   338  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

 • ಕುಂದಾಪುರ: ದಿನಾಂಕ 13/02/2023 ರಂದು ಬೆಳಿಗ್ಗೆ 09:00 ಗಂಟೆಯಿಂದ  ದಿನಾಂಕ 13/02/2023 ರಂದು 18:00 ಗಂಟೆಯ ಮಧ್ಯಾವದಿಯಲ್ಲಿ ಕುಂದಾಪುರ ತಾಲೂಕು ತಲ್ಲೂರ್‌ ಗ್ರಾಮದ ಫಿರ್ಯಾದಿ: ಶ್ರೀನಿಧಿ ಮೊಗವೀರ ಪ್ರಾಯ:43 ವರ್ಷ ಗಂಡ: ಅಣ್ಣಪ್ಪ  ವಾಸ:ವೈಲೇಟ್‌ ಸಿಕ್ವೇರಾ ಅವರ ಬಾಡಿಗೆ ಮನೆ, ಪಾರ್ತಿಕಟ್ಟೆ, ತಲ್ಲೂರ್ ಗ್ರಾಮ ಇವರ ಮನೆಯಾದ ಪಾರ್ತಿಕಟ್ಟೆಯಲ್ಲಿರುವ ವೈಲೆಟ್‌ ಸಿಕ್ವೇರಾರವರ ಬಾಡಿಗೆ  ಮನೆಯ ಬಚ್ಚಲು ಮನೆಯ ಗೋಡೆ ಹತ್ತಿ ಒಳ ಬಂದು ಅಡುಗೆ ಮನೆಗೆ  ಬರುವ ಬಾಗಿಲಿನ ಚಿಲಕ ಮುರಿದು ಮನೆಯ ಒಳಗಡೆ ಬಂದು  ಮನೆಯ ಕಪಾಟಿನಲ್ಲಿದ್ದ  8 ಗ್ರಾಮ್‌ ನ 2 ಚಿನ್ನದ ಕಾಯಿನ್‌ ಗಳು ಮತ್ತು  ನಗದು ತುಂಬಿರುವ 3 ಪ್ಲಾಸ್ಟಿಕ್‌ ಡಬ್ಬಗಳನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಕಳವಾದ 8 ಗ್ರಾಮ್‌ ನ 2 ಚಿನ್ನದ ಕಾಯಿನ್‌ ಮೌಲ್ಯ ರೂ 70,000/-  ಹಾಗೂ 3 ಪ್ಲಾಸ್ಟಿಕ್‌ ಡಬ್ಬಗಳಲ್ಲಿ ಸಂಗ್ರಹಿಸಿದ ಹಣ 15,000 ರೂ. ಒಟ್ಟು ಮೌಲ್ಯ  ರೂ.  85,000/- ಆಗಬಹುದು. ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ  ಅಪರಾಧ ಕ್ರಮಾಂಕ 17/2023 ಕಲಂ: 454,  380 IPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಹೆಬ್ರಿ: ಪಿರ್ಯಾದಿ: ಬಾಲಕೃಷ್ಣನಾಯ್ಕಪ್ರಾಯ 42 ವರ್ಷತಂದೆ: ಜಗನ್ನಾಥನಾಯ್ಕವಾಸ: ಕೋಂಬೆ. ಸಂತೆಕಟ್ಟೆ 38 ನೇಕಳ್ತೂರುಗ್ರಾಮ ಇವರ ತಂದೆ ಜಗನ್ನಾಥ ನಾಯ್ಕ್ (74 ವರ್ಷ) ಇವರು ಪ್ರಾಯಸ್ತರಾಗಿದ್ದು. ಅವರಿಗೆ ಸುಮಾರು ಒಂದೂವರೆ ವರ್ಷದಿಂದ ಕೈಕಾಲು ನೋವು ಇದ್ದು. ಈ ಬಗ್ಗೆ ಅವರಿಗೆ ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮಾಡಿಸಿದರೂ ಗುಣಮುಖವಾಗದ ವಿಚಾರದಲ್ಲಿ ನೊಂದುಕೊಂಡು ಮಾನಸಿಕ ಖಿನ್ಯತೆಗೆ ಒಳಗಾಗಿ ಮದ್ಯಪಾನವನ್ನು ಮಾಡುತ್ತಿದ್ದರು. ಇದೇ ವಿಚಾರದಲ್ಲಿ ಜಗನ್ನಾಥ ನಾಯ್ಕ್ ಇವರು ಮಾನಸಿಕ ಖಿನ್ಯತೆಗೆ ಒಳಗಾಗಿ ದಿನಾಂಕ; 13/02/2023 ರಂದು ಸಂಜೆ 6-30 ಗಂಟೆಯಿಂದ ರಾತ್ರಿ 10-00 ಗಂಟೆಯ ಮದ್ಯಾವಧಿಯಲ್ಲಿ ಅವರ ಮನೆಯಿಂದ ಸುಮಾರು ಒಂದೂವರೆ ಕಿಲೋ ಮೀಟರ್ ದೂರ ಕಂಬಳಗದ್ದೆಯ ಕೋಡುಬೈಲ್ಲು ಎಂಬಲ್ಲಿ ಅವರಿಗೆ ಸಂಬಂದಿಸಿದ ಗದ್ದೆಯ ಬದಿಯಲ್ಲಿರುವ ಒಂದು ಗೇರು ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆUDR NO 05/2023U/s 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.  
 • ಕಾಪು: ಪಿರ್ಯಾದಿ: ದಿನೇಶ್‌ ರಾಜು ಶೆಟ್ಟಿ (52) ತಂದೆ : ದಿ| ರಾಜು ಶೆಟ್ಟಿ ವಾಸ: ಶೋಭಾ ನಿವಾಸ, ತೆಂಕು ಮನೆ ಬೀಡು, ಕಟಪಾಡಿ  ಮೂಡಬೆಟ್ಟು ಗ್ರಾಮ, ಇವರ ತಾಯಿ ಶ್ರೀಮತಿ ಕುಶಲ ಆರ್‌ ಶೆಟ್ಟಿ (83) ರವರು ಮೂಡಬೆಟ್ಟು ಗ್ರಾಮದ, ಕಟಪಾಡಿ ತೆಂಕು ಮನೆ ಬೀಡು, ಶೋಭಾ ನಿವಾಸ ಎಂಬ ಮನೆಯಲ್ಲಿ ಪಿರ್ಯಾದಿದಾರರ ಹೆಂಡತಿ ಶ್ರೀಮತಿ ಆಶಾ ಎಂಬುವವರೊಂದಿಗೆ ವಾಸವಾಗಿದ್ದರು. ಕುಶಲ ಆರ್‌ ಶೆಟ್ಟಿ ರವರು ಸುಮಾರು 5-6 ವರ್ಷಗಳಿಂದ ಕ್ಯಾನ್ಸರ್‌, ಬ್ರೇನ್‌ ಟ್ಯೂಮಾರೋ, ಉಸಿರಾಟದ ತೊಂದರೆ ಹಾಗೂ ಇನ್ನೀತರ ವಯೋ ಸಹಜ ಖಾಯಿಲೆಗಳಿಂದ ಬಳಲುತ್ತಿದ್ದು ಈ ಬಗ್ಗೆ ಮಣಿಪಾಲದ ಕೆ.ಎಂ.ಸಿ ಹಾಗೂ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಖಾಯಿಲೆಯು ಗುಣಮುಖವಾಗಿರುವುದಿಲ್ಲ. ದಿನಾಂಕ: 13-02-2023 ರಂದು ಮೂಡಬೆಟ್ಟು ಗ್ರಾಮದಲ್ಲಿ ಊರಿನ ಕೋಲವಿದ್ದ ಕಾರಣ ಕೋಲ ನೋಡುವರೇ ಕುಶಲ ಆರ್‌ ಶೆಟ್ಟಿ ಹಾಗೂ ಆಶಾ ರವರು ಹೋಗಿದ್ದು, ಅಲ್ಲಿಯೇ ಊಟ ಮಾಡಿ ಬಳಿಕ ಮನೆಗೆ ಬಂದು ಕುಳಿತುಕೊಂಡಿದ್ದು, 21:30 ಗಂಟೆಯ ಸುಮಾರಿಗೆ ಕುಶಲ ಆರ್‌ ಶೆಟ್ಟಿರವರಿಗೆ ಒಮ್ಮೇಲೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು ಪ್ರಜ್ಞೆ ತಪ್ಪಿರುತ್ತದೆ. ಅವರನ್ನು ಆಶಾ ಹಾಗೂ ಅವರ ಮಗ ಆದರ್ಶ ರವರು ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿಯ ಟಿ.ಎಂ.ಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈಧ್ಯರು ಈಗಾಗಲೇ ಮೃತಪಟ್ಟಿರುವುದಾಗಿ 22:45 ಗಂಟೆಗೆ ತಿಳಿಸಿರುತ್ತಾರೆ. ಈ ಬಗ್ಗೆ  ಕಾಪು ಠಾಣಾ ಯು.ಡಿ.ಆರ್. ನಂಬ್ರ 03/2023 ಕಲಂ 174 ಸಿಆರ್‌‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

                                                                                               

ಇತ್ತೀಚಿನ ನವೀಕರಣ​ : 14-02-2023 07:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080