ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಕೊಲ್ಲೂರು: ಪಿರ್ಯಾದಿ ಅಸ್ಲಾಂ ಇವರು ದಿನಾಂಕ: 21/05/2021 ರಂದು  ಬೆಳಗ್ಗೆ 09:30 ಗಂಟೆಗೆ  ತನ್ನ ಬಾಬ್ತು ದ್ವಿಚಕ್ರ  ವಾಹನ  ಎಮ್‌ 80 ನಂಬ್ರ : KA 20 L 3094 ರಲ್ಲಿಮೀನು ವ್ಯಾಪಾರ ಮಾಡಿ  ಚಿತ್ತೂರು  ಕಡೆಯಿಂದ  ಹೆಮ್ಮಾಡಿ ಕಡೆಗೆ  ರಸ್ತೆಯ ಎಡ ಬದಿಯಲ್ಲಿ ನಿಧಾನವಾಗಿ  ಚಲಾಯಿಸಿಕೊಂಡು  ಕುಂದಾಪುರ ತಾಲೂಕು  ವಂಡ್ಸೆ ಗ್ರಾಮದ   ವಂಡ್ಸೆ  ಡಾ:ಗೋಪಿನಾಥ  ನಂಬಿಯಾರ್‌  ಕ್ಲಿನಿಕ್‌  ಹತ್ತಿರ ಹೋಗುತ್ತಿದ್ದಾಗ  ಹೆಮ್ಮಾಡಿ ಕಡೆಯಿಂದ  ಕೊಲ್ಲೂರು ಕಡೆಗೆ  KA 20 D 9172 ನೇ ಆಟೋ ರಿಕ್ಷಾವನ್ನು  ಅದರ   ಚಾಲಕ  ರವಿ ಕುಮಾರ್‌ ಕೆ.ಎಲ್‌  ಅತೀಯಾದ  ವೇಗ  ಮತ್ತು ಅಜಾಗರುಕತೆಯಿಂದ  ರಸ್ತೆಯ  ಬಲಬದಿಗೆ  ಚಲಾಯಿಸಿಕೊಂಡು ಬಂದು  ಪಿರ್ಯಾಧಿದಾರರ  ಎಮ್‌ 80  ದ್ವಿಚಕ್ರ ವಾಹನಕ್ಕೆ  ಡಿಕ್ಕಿ ಹೊಡೆದ  ಪರಿಣಾಮವಾಗಿ ಪಿರ್ಯಾದಿದಾರರು ರಸ್ತೆಗೆ  ಬಿದ್ದು  ತಲೆಗೆ  ಪೆಟ್ಟಾಗಿದ್ದು ಚಿಕಿತ್ಸೆಗಾಗಿ  ಕುಂದಾಪುರ  ಚಿನ್ಮಯಿ  ಆಸ್ಪತ್ರೆಯಲ್ಲಿ ಪ್ರಾಥಮಿಕ  ಚಿಕಿತ್ಸೆ ಪಡೆದು ಹೆಚ್ಚಿನ   ಚಿಕಿತ್ಸೆಗೆ ಮಣೆಪಾಲ ಕೆ.ಎಮ್‌.ಸಿ ಆಸ್ಪತ್ರೆಯಲ್ಲಿ  ಒಳರೋಗಿ ಯಾಗಿ  ದಾಖಲಾಗಿದ್ದು ಆ ಸಮಯದಲ್ಲಿ  ಕೋವಿಡ್‌ ಕಾಯಿಲೆ  ವಿಪರೀತ  ಹಬ್ಬುತ್ತಿದ್ದ  ಕಾರಣದಿಂದ  ದಿನಾಂಕ: 22/05/ 2021 ರಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದು  ನಂತರ ಪಿರ್ಯಾಧಿ ದಾರರು  ಮನೆಯಲ್ಲಿ ಹಾಸಿಗೆಯಲ್ಲಿ ವಿಶ್ರಾಂತಿ ಯಲ್ಲಿ ದ್ದಾಗ ಆರೋಗ್ಯದಲ್ಲಿ  ಚೇತರಿಕೆ  ಕಾಣದೇ ಉಲ್ಬಣಗೊಂಡು  ಹೆಚ್ಚಿನ ಚಿಕಿತ್ಸೆಗಾಗಿ ದಿನಾಂಕ: 04/08/ 2021 ರಂದು  ಮಂಗಳೂರಿನ ಪಸ್ಟ್‌ ನ್ಯೂರೋ  ಆಸ್ಪತ್ರೆ ಯಲ್ಲಿ ಚಿಕಿತ್ಸೆಗೆ ದಾಖಲಾಗಿ ತಲೆಗೆ ಸರ್ಜರಿ ಮತ್ತು  ಅಗತ್ಯದ  ಚಿಕಿತ್ಸೆಯನ್ನು ಪಡೆದು  ದಿನಾಂಕ: 09/08/2021 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ. ರಸ್ತೆ ಅಪಘಾತ  ಉಂಟು ಮಾಡಿದ ರಿಕ್ಷಾ  ಚಾಲಕ  ರವಿ ಕುಮಾರ್‌ ಕೆ.ಎಲ್‌  ಮತ್ತು  ಆಟೋ ರಿಕ್ಷಾ  ಮಾಲಕರು   ಪಿರ್ಯಾಧಿದಾರರಿಗೆ ಆದ  ಗಾಯವು  ಸಾಮನ್ಯ ಸ್ವರೂಪದ ಗಾಯವೆಂದು  ಭಾವಿಸಿ ಪಿರ್ಯಾಧಿದಾರರ   ಮಗನಲ್ಲಿ ಆಸ್ಪತ್ರೆಯ  ಚಿಕಿತ್ಸೆಗೆ  ರೂ 10,000/= ಹಣವನ್ನು  ನೀಡಿ ಪ್ರಕರಣವನ್ನು ರಾಜಿಯಲ್ಲಿ ಮುಗಿಸಿ ಕೊಂಡಿದ್ದು  ಪಿರ್ಯಾಧಿದಾರರಿಗೆ ಮುಂದುವರಿದ  ಚಿಕಿತ್ಸೆಗೆ ರೂ 3,00,000/= ಕ್ಕಿಂತ  ಹೆಚ್ಚಿಗೆ ಖರ್ಚಾ ಗಿರುವುದ ರಿಂದ   ಆರೋಪಿ ರಿಕ್ಷಾ  ಚಾಲಕ  ಮತ್ತು  ಆಟೋ ರಿಕ್ಷಾ  ಮಾಲಕರಲ್ಲಿ ಆಸ್ಪತ್ರೆಯ ಬಿಲ್ಲನ್ನು  ಪುನ:  ಕೇಳಿದಾಗ  ದೊಡ್ಡ ಪ್ರಮಾಣದ  ಹಣವನ್ನು ಕೊಡಲು  ಸಾಧ್ಯವಿಲ್ಲ  ಎಂದು ಹೇಳಿದ ಕಾರಣ KA 20 D 9172 ನೇ ಆಟೋ ರಿಕ್ಷಾ  ಚಾಲಕ  ರವಿ ಕುಮಾರ್‌ ಕೆ.ಎಲ್‌.ರವರ  ವಿರುದ್ದ  ಕಾನೂನು ಕ್ರಮಕ್ಕಾಗಿ ಮಾನ್ಯ ನ್ಯಾಯಾಲಯದ ಮೂಲಕ ಖಾಸಗಿ ಪಿರ್ಯಾಧಿ ಸಲ್ಲಿಸಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 08/2022 ಕಲಂ: 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಕೃಷ್ಣ  ಸಾಲಿಯಾನ್ (65)  ಎಂಬವರು ಮಾನಸಿಕ ಅಸ್ವಸ್ಥತೆಯಿಂದಲೂ ಬಳಲುತ್ತಿದ್ದು ಅಲ್ಲದೆ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ: 14/02/2022 ರ ಬೆಳಿಗ್ಗೆ 1:00 ಗಂಟೆಯಿಂದ ಬೆಳಿಗ್ಗೆ 7:30 ಗಂಟೆಗೆ ಮದ್ಯಾವಧಿಯಲ್ಲಿ ಕೃಷ್ಣ ಸಾಲಿಯಾನ್‌ ರವರು  ಮನೆಯ ಬಳಿಯ ಮಣ್ಣು ರಸ್ತೆಯ ಬಳಿಯಲ್ಲಿ ಮರದ ಕೊಂಬೆಗೆ ನೇಣು ಬೀಗಿದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 03/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 14-02-2022 05:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080