ಅಭಿಪ್ರಾಯ / ಸಲಹೆಗಳು

 ಕಳವು ಪ್ರಕರಣ 

  • ಶಂಕರನಾರಾಯಣ : ದಿನಾಂಕ 12/02/2021 ರಂದು 14:00 ಗಂಟೆಯಿಂದ ದಿನಾಂಕ 13/02/2021 ರ ಬೆಳಿಗ್ಗೆ 06:30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ನುಕ್ಯಾಡಿ ಶ್ರೀ ಉದ್ಬವ ಸಿದ್ದಿ ವಿನಾಯಕ ದೇವಸ್ಥಾನದ ಸುತ್ತಲು ಕಟ್ಟಿರುವ ಶಬ್ದ ಗಂಟೆಗಳಲ್ಲಿ 106 ಕೆ ಜಿ ತೂಕದ ಒಂದು ದೊಡ್ಡ ಶಬ್ದ ಗಂಟೆ-1, ವಿವಿಧ ತೂಕದ ಸುಮಾರು 500 ರಿಂದ 600 ಶಬ್ಧ ಗಂಟೆಗಳು ಹಾಗೂ ವಿವಿಧ ತರಹದ ಸುಮಾರು 60 ಆರತಿ ತಟ್ಟೆಗಳು ಇವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸ್ವತ್ತುಗಳ ಮೌಲ್ಯ 2,೦೦,೦00/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2020 ಕಲಂ:380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಕುಂದಾಪುರ : ಪಿರ್ಯಾದಿದಾರರಾದ ಅಜಿತ್ (34), ತಂದೆ: ಸದಾನಂದ ಶೇರಿಗಾರ,ವಾಸ: ಚಿಕನ್ ಸಾಲ್ ರಸ್ತೆ ಕಸಬಾ ಗ್ರಾಮ ಕುಂದಾಪುರ ಇವರ ಅಣ್ಣ ಅಂಬರೀಶ (36) ಇವರು ಸಕ್ಕರೆ ಖಾಯಿಲೆ ಯಿಂದ ಬಳಲುತ್ತಿದ್ದು ಕುಡಿತದ ಚಟ ಹೊಂದಿದ್ದು ದಿನಾಂಕ 31/01/2021 ರಂದು ಮನೆಗೆ ಬಾರದೇ ಇದ್ದು ಹುಡುಕಾಟದ ಸಮಯ ತಿಳಿದು ಬಂದ ಮಾಹಿತಿಯಂತೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿದ್ದವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ದಿನಾಂಕ 05/02/2021 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಅಂಬರೀಶ ರವರು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 13/02/2021 ರಂದು ಬೆಳಿಗ್ಗೆ 8:00 ಗಂಟೆಗೆ ಮೃತಪಟ್ಟಿದ್ದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2021 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಕೋಟ: ಪಿರ್ಯಾದಿದಾರರಾದ ರೇಣುಕಾ (36), ಗಂಡ:ಶಿವರಾಮ ಪೂಜಾರಿ,ವಾಸ: ಬಡಾಬೆಟ್ಟು ಕೆದೂರು ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 12/02/2021 ರಂದು ಸಂಜೆ 7:50 ಗಂಟೆಗೆ ರಸ್ತೆಯ ಹತ್ತಿರ ಹಾಕಿದ ಕಟ್ಟಿಗೆ ತೆಗೆದುಕೊಂಡು ವಾಪಾಸ್ಸು ಹೋಗುವಾಗ ಪಿರ್ಯಾದಿದಾರರ ಹಿಂದಿನಿಂದ ಸಂತೋಷ್ ಶೆಟ್ಟಿ ,ರಂಜು, ಯಶುರವರು ಪಿರ್ಯಾದಿದಾರರ ಮೊಬೈಲ್ ಕಿತ್ತು ರಸ್ತೆಯ ಮೇಲೆ ಹಾಕಿದ ಸೌದಿ ತೆಗೆ ಎಂದು ಬೆದರಿಕೆ ಹಾಕಿದ್ದು, ಆಗ ಪಿರ್ಯಾದಿದಾರರು ಗಟ್ಟಿಯಾಗಿ ಕೂಗಿಕೊಂಡಾಗ ಪಿರ್ಯಾದಿದಾರರ ಮಗ ಬರುವ ಹೊತ್ತಿಗೆ ಸಂತೋಷ್ ಶೆಟ್ಟಿ ದೂಡಿರುತ್ತಾನೆ. ಸಂತೋಷ ಶೆಟ್ಟಿಯ ಹೆಂಡತಿ ಮತ್ತು ಆತನ ತಮ್ಮನ ಹೆಂಡತಿ ಕೈಯಲ್ಲಿ ಕತ್ತಿ ಹಿಡಿದು ಬಂದು ಕೂಗಿದರೆ ಕೊಲೆ ಮಾಡುತ್ತೇವೆಂದು ಬೆದರಿಕೆ ಹಾಕಿರುತ್ತಾರೆ. ಆಗ ಕಿಶೋರ್ ಶೆಟ್ಟಿ ಮತ್ತು ಜ್ಯೋತಿ ಶೆಡ್ತಿ ದೊಣ್ಣೆ ಹಿಡಿದುಕೊಂಡು ಬಂದು ಹೊಡೆಯಿರಿ ಎಂದು ಹೇಳಿರುತ್ತಾರೆ. ಆಗ ಸಂತೋಷ್ ಶೆಟ್ಟಿಯ ತಂಗಿ ಮತ್ತು ಮಗಳು ಆತನ ತಾಯಿ ಸೇರಿ ಪಿರ್ಯಾದಿದಾರರ ಜುಟ್ಟು ಎಳೆದು ಸಂತೋಷ್ ಶೆಟ್ಟಿ ಪಿರ್ಯಾದಿದಾರರಿಗೆ ದೊಣ್ಣೆಯಿಂದ ಹೊಡೆದು ಗದ್ದೆಗೆ ತಳ್ಳಿ ಬೆದರಿಕೆ ಹಾಕಿರುತ್ತಾನೆ. ನಂತರ ಪಿರ್ಯಾದಿದಾರರ ಅಕ್ಕ ಬಾವ ಸೇರಿ ಒಂದು ಆಟೋ ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ನೀಡಿ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2021 ಕಲಂ: 143, 147, 148, 323, 324, 354, 354(B), 506(2)ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಸಂತೋಷ್ ಶೆಟ್ಟಿ ( 51), ಗಂಡ:ಬಾಬು ಶೆಟ್ಟಿ ,ವಾಸ: ಧರ್ಮಶ್ರೀ ಕೆದೂರು ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 12/02/2021 ರಂದು ಸಂಜೆ 5:00 ಗಂಟೆಗೆ ಮನೆಯಿಂದ ಹೊರಗಡೆ ಬರುವಾಗ ರೇಣುಕಾ ಪೂಜಾರಿಯವರ ಮಗ ಆಶೀಸ್ ಬಾತ್ ರೂಮ್ ನ ಬಳಿ ಕಿಟಕಿಯ ಭಾಗದಲ್ಲಿ ಮೊಬೈಲ್ ಹಿಡಿದುಕೊಂಡು ನಿಂತಿದ್ದು. ನಂತರ ಪುನಃ ಸಂಜೆ 7:30 ಗಂಟೆಗೆ ಮನೆಯ ಮುಂದೆ ಮುಳ್ಳುಗಳನ್ನು ಹಾಕಿ ತಡೆ ಮಾಡಿದ್ದು ಅದನ್ನು ಪಿರ್ಯಾದಿದಾರರು ತೆಗೆಯುವಾಗ ರೇಣುಕಾ ಕತ್ತಿಯನ್ನು ಬೀಸಿದಾಗ ಪಿರ್ಯಾದಿದಾರರ ಕೈಗೆ ತಗಲಿ ಗಾಯವಾಗಿರುತ್ತದೆ. ಕತ್ತಿಯ ಎಟಿನಿಂದ ತಪ್ಪಿಸಿಕೊಳ್ಳುವಾಗ ಗದ್ದೆಗೆ ಬಿದ್ದಿರುವುದಾಗಿದೆ. ಆಗ ರೇಣುಕ ಕಾಲಿನಿಂದ ತುಳಿದು ಹಿಂದಿನಿಂದ ಅವರ ಮಗ ಆಶೀಸ್ ರಾಡ್ ನಿಂದ ಹೊಡೆದಿರುತ್ತಾನೆ. ಆ ಸಮಯ ಬಾಬು ಪೂಜಾರಿ, ಜಲಜ, ರಕ್ಷಿತಾ, ಅಜಯ್ ಸೇರಿ ಪಿರ್ಯಾದಿದಾರರ ಮೇಲೆ ಪ್ರಾಣಾಂತಿಕ ಹಲ್ಲೆ ಮಾಡಿರುತ್ತಾರೆ.ಹಾಗೂ ರೇಣುಕಳ ತಮ್ಮ ಅಶೋಕ ಕೂಡ ಪಿರ್ಯಾದಿದಾರರಿಗೆ ಹಾಗೂ ಅವರ ಹೆಂಡತಿಗೆ ಜೀವ ಬೆದರಿಕೆ ಹಾಕಿರುತ್ತಾರೆ ನಂತರ ಪಿರ್ಯಾದಿದಾರರು ಹಲ್ಲೆಯಿಂದಾದ ಗಾಯಕ್ಕೆ ಚಿಕಿತ್ಸೆಯ ಬಗ್ಗೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 30/2021 ಕಲಂ: 143, 147, 148, 323, 324, 327,506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 14-02-2021 08:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080