ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 13/01/2023  ರಂದು ಫಿರ್ಯಾದುದಾರರಾದ ಅಮೃತೇಶ್ವರ (21), ತಂದೆ: ಶೇಕರ ಪೂಜಾರಿ, ವಾಸಫ: ರಾಘವೇಂದ್ರ ನಿಲಯ, ಜಾತಬೆಟ್ಟು, ಉಪ್ಪೂರು ಗ್ರಾಮ, ಬ್ರಹ್ಮಾವರ ರವರು ಅವರ ತಂದೆಯ KA-20 EL-9620 ನೇ ಸ್ಕೂಟರ್ ನಲ್ಲಿ ತನ್ನ ಸ್ನೇಹಿತೆ ರಮ್ಯ ಶೆಟ್ಟಿ (23) ಎಂಬವಳನ್ನು ಸಹಸವಾರಿಣಿಯನ್ನಾಗಿ ಕುಳ್ಳಿರಿಸಿಕೊಂಡು ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ರಾಹೆ 66 ರಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಮಧ್ಯಾಹ್ನ 3:15 ಗಂಟೆ ಸುಮಾರಿಗೆ ಉಪ್ಪೂರು ಗ್ರಾಮದ ಹೇರಾಯಿ ಬೆಟ್ಟು ಕ್ರಾಸ್‌ ತಲುಪುವಾಗ ಜಾತಬೆಟ್ಟು ಕಡೆಗೆ ಹೋಗಲು ಸ್ಕೂಟರ್‌ನ ಇಂಡಿಕೇಟರ್‌ ಹಾಕಿ ಸ್ಕೂಟರನ್ನು ನಿದಾನ ಮಾಡಿದಾಗ ಅವರ ಹಿಂದಿನಿಂದ ಆರೋಪಿ ಮಂಜುನಾಥ ಆಚಾರ್ಯ ಆತನ  KA-20 U-9750 ನೇ ಮೋಟಾರ್‌ ಸೈಕಲ್‌ ನಲ್ಲಿ ಇಬ್ಬರು ಸಹಸವಾರರನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರ ಸ್ಕೂಟರ್‌ ಗೆ ಹಿಂಬದಿಗೆ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಎರಡೂ ವಾಹನಗಳ ಸಮೇತ ವಾಹನದಲ್ಲಿದ್ದವರು ಥಾರು ರಸ್ತೆಯ ಮೇಲೆ ಬಿದ್ದು ಪಿರ್ಯಾದಿದಾರರ ಎಡಕಾಲು ಮೊಣಗಂಟು, ಎಡಕಾಲು ಹೆಬ್ಬರೆಳು, ಎಡ ಭುಜ, ಎಡಕೈ ಮೊಣಗಂಟಿಗೆ ಹಾಗೂ ಅಲ್ಲಲ್ಲಿ ಗಾಯವಾಗಿದ್ದು, ರಮ್ಯ ಶೆಟ್ಟಿಯ ತಲೆಗೆ ತೀವ್ರ ರಕ್ತಗಾಯ, ಕೈಕಾಲುಗಳಿಗೆ ಅಲ್ಲಲ್ಲಿ ರಕ್ತಗಾಯ ವಾಗಿ ಪ್ರಜ್ಞಾಹೀನಳಾಗಿರುತ್ತಾಳೆ. ಅಲ್ಲದೇ ಆರೋಪಿ ಹಾಗೂ ಆತನ ಮೋಟಾರ್‌ ಸೈಕಲ್‌ನಲ್ಲಿ ಸಹಸವಾರರಾಗಿದ್ದ ನಿತಿನ್‌ ಶರ್ಮಾ ಮತ್ತು ಕಿರಣ್‌ ಕುಮಾರ್‌ ಎಂಬ ಮೂವರಿಗೂ ಕೂಡಾ ಮೈ, ಕೈ, ಕಾಲು  ಹಾಗೂ ಮುಖಕ್ಕೆ ಗಾಯಗಳಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 04/2023 ಕಲಂ: 279, 337, 338 ಐಪಿಸಿ & ಕಲಂ 128(ಎ), 177 ಐಎಮ್‌ವಿ ಕಾಯ್ದೆಯಂತೆ ಪ್ರಕರಣ ದಾಖಾಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ನಾಗರಾಜ (34) ತಂದೆ: ಪಂಜು ಪೂಜಾರಿ ವಾಸ: ಮೇಲ್ಪಂಕ್ತಿ ದೊಡ್ಮನೆ ಶಿರೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 13/01/2023 ರಂದು ಬೆಳಿಗ್ಗೆ ಮನೆಯಿಂದ ಅವರ ಕೆಎ-05 ಎಲ್ ಎಂ-5727ನೇ ಹೊಂಡ ಎಸ್ ಪಿ 125ನೇ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ರಾಹೆ 66ರಲ್ಲಿ ಶಿರೂರು ಕಡೆಯಿಂದ ನಾಯ್ಕನಕಟ್ಟೆ ಕಡೆಗೆ ಹೋಗುತ್ತಿದ್ದು, ಬಿಜೂರು ನಂಬಿಯಾರ್ ಆಸ್ಪತ್ರೆಯಿಂದ ಸ್ವಲ್ಪ ಮುಂದಕ್ಕೆ ಬೆಳಿಗ್ಗೆ ಸಮಯ ಸುಮಾರು 8:45 ಗಂಟೆಗೆ ಹೋಗುತ್ತಿರುವಾಗ ನಾಗರಾಜ ರವರ ಹಿಂದಿನಿಂದ ಟಿಎನ್ 38 ಎಎಂ 1272ನೇ ಟಿಟಿ ವಾಹನವನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಾಗರಾಜ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನ್ನು ಓವರ್ ಟೇಕ್ ಮಾಡಿ ರಸ್ತೆಯ ತೀರ ಎಡಕ್ಕೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಟಿಟಿ ವಾಹನದ ಹಿಂಬದಿಯು ಫಿರ್ಯದಿದಾರರ ಮೋಟಾರ್ ಸೈಕಲ್ ನ ಹ್ಯಾಂಡಲ್ ಗೆ ತಾಗಿ ಫಿರ್ಯಾದಿದರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದಿದ್ದು, ಪರಿಣಾಮ ಫಿರ್ಯಾದಿದಾರರ ಎಡಕೈಗೆ ಒಳಜಖಂ, ಬಲಕಾಲಿನ ಮೊಣಗಂಟಿಗೆ ಮತ್ತು ಕಾಲು ಬೆರಳಿಗೆ ತರಚಿದ ರಕ್ತಗಾಯವಾಗಿರುತ್ತದೆ. ಫಿರ್ಯಾದಿದಾರರನ್ನು ಟಿಟಿ ವಾಹನದ ಚಾಲಕ ಹಾಗೂ ಇತರರು ಎತ್ತಿ ಉಪಚರಿಸಿ, ಟಿಟಿ ವಾಹನದ ಚಾಲಕ ಚಿಕಿತ್ಸೆ ಬಗ್ಗೆ 108 ವಾಹನದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 08/2023 ಕಲಂ: 279, 337, ಐಪಿಸಿಯಂತೆ ಪ್ರಕರಣ ದಾಖಾಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾಧ ರಾಘವೇಂದ್ರ ಕೆ  ತಿಂಗಳಾಯ ತಂದೆ: ಕರಿಯ  ತಿಂಗಳಾಯ ವಾಸ:ಅಕ್ಷಯ ಧಾಮ  ಬಡನಿಡಿಯೂರು ಇವರ  ತಂಗಿ ಪುಪ್ಪ (43)  ರವರಿಗೆ  ತೊಟ್ಟಂ ನ ಸತೀಶ ಜಿ ಮೆಂಡನ್  ಎಂಬವರೊಂದಿಗೆ 17 ವರ್ಷದ ಹಿಂದೆ ಮದುವೆಯಾಗಿರುತ್ತಾರೆ.. ಪುಪ್ಪರವರು ಮಲ್ಪೆ ಬಂದರಿನಲ್ಲಿ ಕ್ಯಾಂಟೀನ್ ಮಾಡಿಕೊಂಡಿದ್ದು, ರಾಘವೇಂದ್ರ ಕೆ  ತಿಂಗಳಾಯ ರವರ ತಂಗಿಗೆ ಮೈಗ್ರೇನ್  ಸಮಸ್ಯೆ ಇದ್ದು ಈ ಬಗ್ಗೆ  ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಳು ,  ದಿನಾಂಕ 08/01/2023 ರಂದು ಮಧ್ಯಾಹ್ನ 2 ಗಂಟೆ ಸಮಯಕ್ಕೆ  ಕದಿಕೆಯ ಮನೆಯಲ್ಲಿ  ಬೆಡ್ ಸೀಟ್ ಕಟ್ಟಿ  ನೇಣು  ಬಿಗಿದು ಆತ್ಮಹತ್ಯೆಗೆ  ಪ್ರಯತ್ನಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು  ಪುಷ್ಪರವರ ಗಂಡ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೆಎಂಸಿ ಮಣಿಪಾಲ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ದಾಖಲಿಸಿದ್ದು, ದಿನಾಂಕ 13/01/2023 ರಂದು ಮದ್ಯಾಹ್ನ 12:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.  ಪಿರ್ಯಾದಿದಾರರ ತಂಗಿ ಅವರಿಗಿದ್ದ ಮೈಗ್ರೇನ್ ಅಥವಾ ಇನ್ಯಾವುದೋ   ಕಾರಣದಿಂದ  ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅದರಿಂದ ಮೃತಪಟ್ಟಿರಬಹುದುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 06/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಾಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾಧ ಜಯಲಕ್ಷ್ಮೀ   (40) ಗಂಡ: ಸುಧಾಕರ ಪೂಜಾರಿ  ವಾಸ: ಶ್ರೀದೇವಿ ಕೃಪಾ ನಿಲಯ ಕಕ್ಕುಂಜೆ ಶಾಲೆ ಬದಿ ಕುಂಜಿಬೆಟ್ಟು ಪೋಸ್ಟ್ ಶಿವಳ್ಳಿ ಗ್ರಾಮ ಉಡುಪಿ ರ ಗಂಡನಾದ ಸುಧಾಕರ ಪೂಜಾರಿ (43) ಇವರು ಪಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು, ಅಲ್ಲದೇ ಕುಡಿತದ ಅಭ್ಯಾಸ ಕೂಡಾ ಇದ್ದಿರುತ್ತದೆ, ಮೃತ ಸುಧಾಕರ ಪೂಜಾರಿ ದಿನಾಂಕ 12/01/2023 ರಂದು ರಾತ್ರಿ 09:30 ಗಂಟೆಯಿಂದ ದಿನಾಂಕ 13/01/2023 ರ ಬೆಳಿಗ್ಗೆ 07:00 ಗಂಟೆಯ ಮಧ್ಯಾವಧಿಯಲ್ಲಿ ಗರಡಿ ರಸ್ತೆಯಲ್ಲಿ ಇರುವ ಮುದ್ದು ಪೂಜಾರಿ ರವರ ತೋಟದ ಬಳಿಯಲ್ಲಿರುವ ಕಿರು ಬ್ರಿಡ್ಜ್  ಬಳಿ ಆಕಸ್ಮಿಕವಾಗಿ ಜಾರಿ ತೋಡಿಗೆ ಕವಚಿ ಬಿದ್ದು ನೀರಿನಲ್ಲಿ ಉಸಿರು ಕಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 02/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಾಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಫುರ: ಪಿರ್ಯಾದಿದಾರರಾದ ಶ್ರೀಮತಿ ಜಲಜ (58) ಗಂಡ: ರಘು ಪೂಜಾರಿ ವಾಸ:ಕೋಣಿ ಲಿಂಗಿಮನೆ, ಕಸಬಾ ಗ್ರಾಮ, ಕುಂದಾಪುರ ತಾಲೂಕು ಉಡುಪಿ ಇವರು ಹಲ್ಲೆಗೆ ಒಳಗಾಗಿ  ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಾಗಿ ನೀಡಿದ ಸಾರಾಂಶದಂತೆ ಇವರಿಗೆ  ಮಕ್ಕಳಿಲ್ಲದೆ ಇದ್ದು ಶ್ರೀಮತಿ ಜಲಜ ರವರ ಅಕ್ಕನ ಮಗಳಾದ ರಜನಿಯವರು ಇವರನ್ನು  ನೋಡಿ ಕೊಳ್ಳುತ್ತಿದ್ದು,  ದಿನಾಂಕ 13/01/2023 ರಂದು ಬೆಳಿಗ್ಗೆ 08:00 ಗಂಟೆಯ ಸಮಯಕ್ಕೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ಕೋಣಿ ಲಿಂಗಿಮನೆ ಎಂಬಲ್ಲಿ ರಜನಿ ಅವರ ಜಾಗದಲ್ಲಿ ತೆಂಗಿನಕಾಯಿಯನ್ನು ರಾಶಿ ಹಾಕುತ್ತಿರುವಾಗ ನೆರೆ ಮನೆಯವರಾದ ಪದ್ಮಾವತಿ, ರಾಜೀವಿ, ಅಭಿಷೇಕ್ ಎಂಬುವವರು ರಜನಿ ಅವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಈ ಜಾಗ ನಮಗೆ ಸೇರಬೇಕಾಗಿದ್ದು, ನೀನು ಯಾರು ಕಾಯಿ ಕೊಯ್ಯಿಸುವವಳು  ಎಂದು ಅವಾಚ್ಯ ಶಬ್ದಗಳಿಂದ ಬೈದು ಪದ್ಮಾವತಿ ಮತ್ತು ರಾಜೀವಿ ನನ್ನ ಕೈ ರಟ್ಟೆ ಹಿಡಿದು ನೆಲಕ್ಕೆ ದೂಡಿ ಹಾಕಿ ಅಭಿಷೇಕನು ನನ್ನ ಎದೆಗೆ ಕೈಯಿಂದ ಹೊಡೆದು ಹಲ್ಲೆ ಮಾಡಿರುತ್ತಾನೆ. ನಂತರ ಅವರೆಲ್ಲರೂ  ಸೇರಿ ಈ ಜಾಗಕ್ಕೆ ತೆಂಗಿನ ಕಾಯಿಕೊಯ್ಯಲು ಬಂದರೆ ಕೊಲೆ ಮಾಡುವುದಾಗಿ ಬೇದರಿಕೆ ಹಾಕಿ ಅಲ್ಲಿಂದ ಓಡಿ ಹೋಗಿರುವುದಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 04/2023 ಕಲಂ: 447, 504,323, 354, , 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಾಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾಧ ಮಂಜು ದೇವಾಡಿಗ (53) ತಂದೆ: ತಿಮ್ಮ ದೇವಾಡಿಗ ವಾಸ: ತಾಯಿ ಕೃಪೆ, ಮಂಜುಶ್ರೀ ಫಾರ್ಮ್ ಹೌಸ್ ಕುದ್ರುಕೋಡು ಕೋಡಿಯಾಡಿ, ಮಹಾಸತಿ ದೇವಸ್ಥಾನದ ಹತ್ತಿರ ನಾವುಂದ ಗ್ರಾಮ ಬೈಂದೂರು ಇವರಿಗೆ ನಾವುಂದ ಗ್ರಾಮದ ಕುದ್ರುಕೋಡಿ ಕೋಡಿಯಾಡಿ ಎಂಬಲ್ಲಿ ಸುಮಾರು 2 ½ ಎಕರೆ ಜಾಗ ಇದ್ದು, ಅದರಲ್ಲಿ ಅಡಿಕೆ ಹಾಗೂ ತೆಂಗಿನ ಕೃಷಿಯನ್ನು ಮಾಡಿಕೊಂಡಿರುತ್ತಾರೆ. ಈ ವರ್ಷದ ಅಡಿಕೆ ಕೃಷಿಯನ್ನು ಕೊಯ್ಲು ಮಾಡಿ, ಸದ್ರಿ ಅಡಿಕೆಗಳನ್ನು ಅವರ ತೋಟದ ಅಂಗಳದಲ್ಲಿ ಒಣಗಲು ಹಾಕಿದ್ದು, ಸುಮಾರು 20-25 ಚೀಲದಷ್ಟು ಇರುತ್ತದೆ. ಮಂಜು ದೇವಾಡಿಗ ರವರು ದಿನಾಂಕ 09/01/2023 ರಂದು ಅಡಿಕೆಗಳನ್ನು ಚೀಲಕ್ಕೆ ತುಂಬಿಸಲು ಒಟ್ಟು ಗೂಡಿಸಿಟ್ಟು, ಅದೇ ದಿನ ಸಂಜೆ 6:00 ಗಂಟೆಗೆ ಅವರ ಹೆಂಡತಿ ಮನೆಯಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ಮನೆಯವರೆಲ್ಲರೂ ಸೇರಿ ಹೋದವರು ದಿನಾಂಕ 12/01/2023 ರಂದು ಸಂಜೆ 5:00 ಗಂಟೆಗೆ ಮನೆಗೆ ವಾಪಾಸ್ಸು ಮನೆಗೆ ಬಂದು ನೋಡಿದಾಗ ಅಂಗಳಲ್ಲಿ ಒಣಗಿಸಿಟ್ಟಿದ್ದ 20 ರಿಂದ 25 ಚೀಲದಷ್ಟು ಅಡಿಕೆಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಅಡಿಕೆಯ ಅಂದಾಜು ಮೌಲ್ಯ ಸುಮಾರು 2,00,000/- ರೂಪಾಯಿ ಆಗಿರುತ್ತದೆ. ಮಂಜು ದೇವಾಡಿಗ ರವರು ಈ ಬಗ್ಗೆ ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದು, ಬಳಿಕ ಅವರ ಮನೆಯವರಲ್ಲಿ ಹಾಗೂ ಸ್ನೇಹಿತರಲ್ಲಿ ಚರ್ಚಿಸಿ ದೂರು ನೀಡಲು ವಿಳಂಭವಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 09/2023 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಾಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾಧ ಶಾಜಿ  ಪಿ ಎಸ್ (60) ತಂದೆ:  ಶ್ರೀಧರ ಪಿ.ಕೆ ವಾಸ:  ಪೊಯ್ಮಪ್ಲಾಕಲ್ ಮನೆ ಉದಯ ನಗರ ಮುದೂರು ಬೈಂದೂರು ಇವರು ತನ್ನ ಸಂಸಾರದೊಂದಿಗೆ ಮುದೂರಿನಲ್ಲಿ ವಾಸವಾಗಿದ್ದು ಶಾಜಿ  ಪಿ ಎಸ್ ರವರ ಕಿರಿಯ ಮಗಳಾದ ಪಾರ್ವತಿ ಕೇರಳ ಮೂಲದ ಅರ್ಬಸ್ ಖಾನ್ ಎಂಬುವನನ್ನು ಪ್ರೀತಿಸಿ ಮದುವೆಯಾಗಿ ಕೇರಳದಲ್ಲಿದ್ದು ಅವರಿಗೆ 5 ತಿಂಗಳ ಹೆಣ್ಣು ಮಗುವಿದ್ದು ಕಳೆದ ಸೆಪ್ಟಂಬರ್ ನಲ್ಲಿ ಪಾರ್ವತಿ ತನ್ನ ಮಗುವಿನೊಂದಿಗೆ ಶಾಜಿ  ಪಿ ಎಸ್ ಇವರ ಮನೆಗೆ ಬಂದು ವಾಸವಾಗಿರುತ್ತಾರೆ. ಪಾರ್ವತಿಯ ಮದುವೆಗೆ ಶಾಜಿ  ಪಿ ಎಸ್ ರವರು ಮತ್ತು ಶಾಜಿ  ಪಿ ಎಸ್ ರವರ ಹೆಂಡತಿ ಮಿನಿರವರ ವಿರೋಧ ಇದ್ದುದರಿಂದ ಅಳಿಯ ಅರ್ಬಾಸ್  ಖಾನ್  ಶಾಜಿ  ಪಿ ಎಸ್ ರವರನ್ನು ಮತ್ತು ಮಿನಿಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು ದಿನಾಂಕ 13/01/2023 ರಂದು ಸಂಜೆ 04:30 ಗಂಟೆಗೆ ಶಾಜಿ  ಪಿ ಎಸ್ ರವರು  ತನ್ನ ಹೆಂಡತಿ  ಮಿನಿ ಹಾಗೂ  ಮೊಮ್ಮಗಳಾದ ಅಯುರ್ ಖಾನ್ ರೊಂದಿಗೆ ಮುದೂರಿನ ಮನೆಯಲ್ಲಿದಾಗ  ಒಂದು ಕೆಂಪು ಬಣ್ಣದ ಶೀಪ್ಟ್ ಕಾರಿನಲ್ಲಿ ಅರ್ಬಾಸ್ ಖಾನ್  ಇಬ್ಬರೂ ವ್ಯಕ್ತಿಗಳನ್ನು ಕರೆದುಕೊಂಡು  ಬಂದು ಏಕಾಏಕಿ ಮನೆಯ ಬಾಗಿಲನ್ನು ಒದ್ದು ಆಕ್ರಮ ಪ್ರವೇಶ ಮಾಡಿ ಆರೋಪಿ ಅರ್ಬಾಸ್ ಖಾನ್ ಪ್ಯಾಂಟ್ ಕಿಸೆಯಿಂದ ಒಂದು ಚೂರಿಯನ್ನು ತೆಗೆದು ಮಗಳನ್ನು ಮದುವೆಯಾಗುವುದಕ್ಕೆ ನಮ್ಮನ್ನು ವಿರೋಧಿಸಿದೆಯಲ್ಲಾ ಎಂದು ಚೂರಿಯನ್ನು ಶಾಜಿ  ಪಿ ಎಸ್ ರವರ  ಕುತ್ತಿಗೆಯ ಕಡೆಗೆ ಬಿಸಿದ್ದು ಇವರು ತಪ್ಪಿಸಿಕೊಂಡು ಕೆಳಗೆ ಬಿದ್ದಾಗ ಶಾಜಿ  ಪಿ ಎಸ್ ರವರ ಹೆಂಡತಿ ಮಿನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಗೆ ಚೂರಿ ಹಾಕಲು ಪ್ರಯತ್ನಿಸಿ ಅವರನ್ನು  ಕೈ ನ್ನು ಅಡ್ಡ ಹಿಡಿದು  ತಪ್ಪಿಸಿಕೊಂಡು ಮನೆಯ ಹೊರಗೆ ಬೊಬ್ಬೆ ಹಾಕಿ  ಓಡಿದಾಗ ಅರ್ಬಾಸ್ ಖಾನ್ ಜೊತೆಯಲ್ಲಿ ಬಂದ ಇಬ್ಬರೂ ವ್ಯಕ್ತಿಗಳು  ಮಿನಿಯವರ ಜೂಟ್ಟನ್ನು ಹಿಡಿದ್ದು ನೆಲದಲ್ಲಿ ಬಿಳಿಸಿ ಕಾಲಿನಿಂದ ತುಳಿದು ಅವರಲ್ಲಿ ಒಬ್ಬ ವ್ಯಕ್ತಿ ಕೈಯಿಂದ ಮಿನಿಯವರ ಕುತ್ತಿಗೆಯನ್ನು ಹಿಚುಕಿ ಕೊಲ್ಲಲ್ಲು ಪ್ರಯತ್ನಿಸಿದ್ದು ಗಲಾಟೆಯ ಕೂಗಾಟ ಕೇಳಿ ತೋಟದಲ್ಲಿದ್ದ ಪಾರ್ವತಿ ಮತ್ತು ದಾರಿಯಲ್ಲಿ ಹೋಗುವ ರಾಜನ್ ಎಂಬುವರು ಬಂದಿದ್ದು ಆ ವೇಳೆ ಆರೋಪಿಗಳು ಪಿರ್ಯಾದಿದಾರರು ಮತ್ತು ಮಿನಿ ಯವರಿಗೆ ನಿಮ್ಮಿಬ್ಬರನ್ನೂ ಮುಂದಕ್ಕೆ ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಬಂದ ಕಾರಿನಲ್ಲಿ  ಓಡಿ ಹೋಗಿರುತ್ತಾರೆ. ಆರೋಪಿಗಳ ಹಲ್ಲೆಯಿಂದ ಮಿನಿಯವರಿಗೆ ತೀವ್ರವಾಗಿ ಗಾಯಗೊಂಡು ಉಸಿರಾಟದ ತೊಂದರೆಯಾಗಿದ್ದು  ಅವರನ್ನು ಚಿಕಿತ್ಸೆಗಾಗಿ  ಪಿರ್ಯಾದಿದಾರರ ಪರಿಚಯದ ಸಾಬು ಮತ್ತು  ಇತರರು ಕುಂದಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 01/2023  ಕಲಂ: 307, 354, 448, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಾಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-01-2023 11:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080