ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 14/01/2023 ರಂದು ಪಿರ್ಯಾದಿದಾರರಾದ ಸುಧಾಕರ ದೇವಾಡಿಗ  (44), ತಂದೆ: ಶೇಖರ ದೇವಾಡಿಗ, ವಾಸ: ಇಂದಿರಾನಗರ, ವಾರಂಬಳ್ಳಿ ಗ್ರಾಮ, ಬ್ರಹ್ಮಾವರ  ರವರು ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಬಸ್ಸ್‌ ನಿಲ್ದಾಣದ ಬಳಿ ಇರುವ ಬ್ರಹ್ಮಾವರ ಆಟೋ ರಿಕ್ಷಾ ನಿಲ್ದಾಣದಲ್ಲಿರುವಾಗ ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ಉಡುಪಿ ಕಡೆಯಿಂದ ರಾಹೆ 66 ರಲ್ಲಿ ಆರೋಪಿ ಮ್ಯಾಕ್ಷನ್‌ ಡಿಸೋಜಾ ರವರು KA-19 C-1989 ನೇ ಲಕ್ಷ್ಮೀ ಎಕ್ಸಪ್ರೆಸ್‌ ಬಸ್ಸ್‌ ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬ್ರಹ್ಮಾವರ ಬಸ್ಸ್‌ ನಿಲ್ದಾಣದ ಒಳಗೆ ಬಂದು, ಬಸ್ಸ್‌ ನಿಲ್ದಾಣದ ಎದುರು ಇದ್ದ ಲೈಟ್‌ ಕಂಬದ ದಂಡೆಯ ಮೇಲೆ ಕುಳಿತಿದ್ದ ಕೆ. ಕೃಷ್ಣ ಮೂರ್ತಿ ಉಡುಪ ರವರ ಕಾಲಿಗೆ ಬಸ್ಸಿನ ಎಡಭಾಗ ಡಿಕ್ಕಿಯಾಗಿ ಕಾಲು ಸಿಮೆಂಟು ದಂಡೆ ಹಾಗೂ ಬಸ್ಸಿನ ಮಧ್ಯೆ ಸಿಲುಕಿ ಹಾಕಿಕೊಂಡಿರುತ್ತದೆ. ಈ ಅಪಘಾತದ ಪರಿಣಾಮ ಕೆ. ಕೃಷ್ಣ ಮೂರ್ತಿ ಉಡುಪ ರವರ ಬಲಕಾಲು ಮೊಣಗಂಟಿನಿಂದ ಕೆಳಗೆ ತೀವ್ರ ತರವಾದ ಮೂಳೆ ಮುರಿತ ಉಂಟಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 05/2023 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಾಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಸಿಸಿಲಿಯಾ ನೋರೋನ್ನಾ  (77) ತಂದೆ: ಹೆನ್ರಿ ನೋರೋನ್ನಾ, ವಾಸ: ಕೋಟಿಮುರ ಹೌಸ್ ಪರ್ಪಲೆ ದೂಪದಕಟ್ಟೆ ಅತ್ತೂರು ನಿಟ್ಟೆ ಗ್ರಾಮ, ಕಾರ್ಕಳ ರವರ ಮಗ ಆಲ್ವಿನ್ ನೋರೊನ್ನಾ (44) ಇವರು ವಿಪರೀತ ಶರಾಬು ಕುಡಿಯುತ್ತಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 11/01/2023 ರಂದು ಬೆಳಿಗ್ಗೆ 09:00 ಗಂಟೆಗೆ ಕೆಲಸಕ್ಕೆಂದು ಹೋದವರು ಇದುವರೆಗೆ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 06/2023 ಕಲಂ: ಗಂಡಸು ಕಾಣೆಯಂತೆ ಪ್ರರಕಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ದಿನಾಂಕ 13/01/2023 ರಂದು 16:00 ಗಂಟೆಗೆ ದೇವರಾಜ್‌ ಟಿ .ವಿ ಪೊಲೀಸ್ ನಿರೀಕ್ಷಕರು  ಮಣಿಪಾಲ ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ವರ್ತಮಾನದಂತೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿ ಪಿ ನಗರದ 3 ನೇ ಮುಖ್ಯ ರಸ್ತೆ,  2ನೇ ಅಡ್ಡ ರಸ್ತೆ ಯಲ್ಲಿರುವ ಅನಂತ ರೆಸಿಡೆನ್ಸಿ 3 ನೇ ಮಹಡಿಯ ಫ್ಲ್ಯಾಟ್ ನಂಬ್ರ 201 ರಲ್ಲಿ ಮಾದಕ ವಸ್ತುಗಳನ್ನು ಹೊಂದಿ ದರೋಡೆ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದ ವ್ಯಕ್ತಿಗಳನ್ನು  ದಾಳಿ ನಡೆಸಲು ಮಾನ್ಯ ಪೊಲೀಸ್ ಅಧೀಕ್ಷಕರವರಿಂದ ಸರ್ಚ್‌ ವಾರೆಂಟ್‌ ಮತ್ತು ಅನುಮತಿ ಪಡೆದು ಸದರಿ ಸ್ಥಳಕ್ಕೆ ಪತ್ರಾಂಕಿತ ಅಧಿಕಾರಿ ಹಾಗೂ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ 18:20 ಗಂಟೆಗೆ ದಾಳಿ ನಡೆಸಿ ಆಪಾದಿತರಾದ  1.ಮುಝಾಮಿಲ್, (27) 2. ಮೊಹಮ್ಮದ್‌ ಅನಾಜ್‌ ಸಾಹೇಬ್‌ (25) 3. ಮೊಹಮ್ಮದ್‌ ರಪೀಕ್‌ (26) 4.ನಿಯಾಲ್, (19) ಇವರ ವಶದಲ್ಲಿದ್ದ MDMA ಮಾದಕ ವಸ್ತು( 5.0  ಗ್ರಾಂ),ಗಾಂಜಾ (110 ಗ್ರಾಂ), Sterile Water For INJ I.P Pyarogen Free ಎಂದು ಬರೆದ 10 ML ಸೀಸೆ, ಮಚ್ಚು -1, ಚೂರಿ -1, ಕಬ್ಬಿಣದ ಸುತ್ತಿಗೆ -1, ಮರದ ಸೋಂಟೆ -1 ಹಾಗೂ 5 - ಮೊಬೈಲ್ ಫೋನ್ ಅನ್ನು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸ್ವತ್ತಿನ ಮೌಲ್ಯ ರೂಪಾಯಿ. 50,550/- ಆಗಬಹುದು,  ದಾಳಿ ನಡೆಸುವ ಸಮಯದಲ್ಲಿ ಆರೋಪಿ ರಾಕೀಬ್ ಎಂಬುವನು  ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 11/2023 ಕಲಂ: 399, 402 IPC 8 (c) 20(b) (II) (A) 21(b) 22(b)  ಎನ್.ಡಿ.ಪಿ.ಎಸ್ ಆಕ್ಟ್‌ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 14-01-2023 05:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080