ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ರಿಯಾಜ್ (38), ತಂದೆ:ಅಹಮ್ಮದ್ ಭಾವ, ವಾಸ: ಜಾಮೀಯ ಮಸೀದಿ ಬಳಿ, ದೊಡ್ಡಣಗುಡ್ಡೆ ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಇವರು ದಿನಾಂಕ 13/01/2022 ರಂದು ಕೆಲಸದ ನಿಮಿತ್ತ ಉದ್ಯಾವರಕ್ಕೆ ಬಂದು ಉದ್ಯಾವರದ ರಾಷ್ಟ್ರೀಯ ಹೆದ್ದಾರಿ 66 ಬಳಿ ಇರುವ ಭಗವತಿ ಹಾರ್ಡವೇರ್ ಬಳಿ ನಿಂತುಕೊಂಡಿರುವಾಗ 12:30 ಗಂಟೆಗೆ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ KA-20-AA-7910 ನೇ ಬಸ್ ಚಾಲಕ ತನ್ನ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡಿದೇ ಓವರ್ ಟೇಕ್ ಮಾಡುವ ಬರದಲ್ಲಿ ಒಮ್ಮೇಲೆ ಬಲಕ್ಕೆ ಚಲಾಯಿಸಿ  ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಹಸವಾರಿಣಿಯನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದ KA-70-E-8409 ನೇ ಸ್ಕೂಟರ್ ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ  ಸ್ಕೂಟರ್ ಸವಾರ ಮತ್ತು ಸಹ ಸವಾರಿಣಿ ಇಬ್ಬರು ಸ್ಕೂಟರ್ ಸಮೇತ ರಸ್ತೆಗೆ ಬಿದಿದ್ದು ಕೂಡಲೇ ಪಿರ್ಯಾದಿದಾರರು  ಸ್ಥಳಕ್ಕೆ ಹೋಗಿ ನೋಡಲಾಗಿ ಅವರ ಪರಿಚಯದ ಅಬ್ದುಲ್ ಸಮದ್ ಹಾಗೂ ಅವರ ಹೆಂಡತಿ ತೋಯಿರಾ ಬಾನು ಆಗಿದ್ದು ಅಬ್ದುಲ್ ಸಮದ್ ರವರಿಗೆ ಎಡಕಾಲಿನ  ತೊಡೆಯ ಮೂಳೆ ಮುರಿತದ ಗಾಯ ಹಾಗೂ ಕೈ ಮತ್ತು ಕಾಲುಗಳಿಗೆ ತರಚಿದ ಗಾಯವಾಗಿದ್ದು ಅವರ ಹೆಂಡತಿ ತೋಯಿರಾ ಬಾನು ರವ ರ ಎಡಕಾಲಿಗೆ ತರಚಿದ ಗಾಯವಾಗಿದ್ದು ಕೂಡಲೇ ಅವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಅವರಿಬ್ಬರನ್ನು ಪರೀಕ್ಷಿಸಿ ಒಳ ರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2022  ಕಲಂ: 279,  337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ವಾಸುದೇವ (24), ತಂದೆ: ಶಿವಯ್ಯ ಮರಾಠಿ, ವಾಸ: ಹೊಸೂರು ತೂದಳ್ಳಿ ,ಯಡ್ತರೆ ಗ್ರಾಮ , ಬೈಂದೂರು  ತಾಲೂಕು ಇವರು ದಿನಾಂಕ 11/01/2022 ರಂದು ಸ್ನೇಹಿತನಾದ ರವಿ ಯವರೊಂದಿಗೆ ರಾತ್ರಿ 7:35 ಗಂಟೆಗೆ ಬೈಂದೂರಿನಿಂದ ಗಂಗನಾಡು ಮಾರ್ಗವಾಗಿ ನಡೆದುಕೊಂಡು ಹೋಗುವಾಗ ಡಿಗ್ರಿ ಕಾಲೇಜಿನ ಬಸ್ಸು ನಿಲ್ದಾಣದ ಬಳಿ ತಲುಪುವಾಗ  ರಾತ್ರಿ 8:00 ಗಂಟೆಗೆ ಬೈಂದೂರು ಕಡೆಯಿಂದ ಮೋಟಾರು ಸೈಕಲ್ ನಂಬ್ರ KA-20-EV-3304 ನೇ ಮೋಟಾರು ಸೈಕಲ್ ಸವಾರ ಹರೀಶ ಮರಾಠಿ ಮೋಟಾರ್ ಸೈಕಲ್ ನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ರವಿಗೆ  ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಸ್ನೇಹಿತ ರವಿ ರಸ್ತೆಗೆ ಬಿದ್ದಿದ್ದು ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದ್ದು ಈ ಬಗ್ಗೆ ಪಿರ್ಯಾದಿದಾರರು ಮತ್ತು ಮೋಟಾರ್ ಸೈಕಲ್  ಸವಾರ ಹರೀಶನು ಸೇರಿ ಚಿಕಿತ್ಸೆ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪರೀಕ್ಷಿಸಿದ್ದಲ್ಲಿ ವೈದ್ಯಾಧಿಕಾರಿಯವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರಗೆ ಕಳುಹಿಸಿದ್ದು ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು  ಸರಕಾರಿ ಆಸ್ಪತ್ರಗೆ ಕಳುಹಿಸಿದ್ದು ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ತಲೆಗೆ ತುಂಬಾ ಪೆಟ್ಟಾಗಿದೆ ಎಂದು ಕೆ.ಎಮ್ ಸಿ ಆಸ್ಪತ್ರೆ ಮಣಿಪಾಲ ಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ರವಿಯನ್ನು ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಗೆ  ಹೋಗಿ ಒಳರೋಗಿಯಾಗಿ ದಾಖಲಿಸಿರುವಾದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ:  ದಿನಾಂಕ 13/01/2022 ರಂದು 14;15 ಗಂಟೆಗೆ ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಬಜಾಜ್‌ ಶೋ ರೂಂ ಎದುರು NH 66 ರ ಪಶ್ಚಿಮ ಬದಿಯ ಉಡುಪಿ–ಕುಂದಾಪುರ ಏಕ ಮುಖ ಸಂಚಾರ ರಸ್ತೆಯ ಪಕ್ಕದ ಮಣ್ಣು ರಸ್ತೆಯಲ್ಲಿರುವ ಮರದ ನೆರಳಿನಲ್ಲಿ  ವಿಶ್ರಾಂತಿಗಾಗಿ ಕಾರನ್ನು ಪಿರ್ಯಾದಿದಾರರಾದ ಜೋಯ್‌ಕುಟಿನೋ (45), ತಂದೆ : ದಿ. ಬೋನಿಪಾಸ್‌ ಕುಟಿನೋ, ವಾಸ: ಫಾತೀಮಾ ಚರ್ಚ ಬಳಿ ಮುಂಡ್ಕೂರು ಗ್ರಾಮ ಕಾರ್ಕಳ ತಾಲೂಕು ಇವರು ನಿಲ್ಲಿಸಿಕೊಂಡಿದ್ದಾಗ ಉಡುಪಿ ಕಡೆಯಿಂದ KA-20-ED-3622 ನೇ ಮೋಟಾರು ಸೈಕಲ್ ಸವಾರ ಆನಂದ ಆಚಾರ್ಯ ಎಂಬುವವರು ಅತೀ ವೇಗ ಹಾಗು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಹತೋಟಿ ತಪ್ಪಿ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದು, ಅವರನ್ನು ಉಪಚರಿಸಿ ನೋಡಲಾಗಿ ಮೇಲ್ನೋಟಕ್ಕೆ ಅವರಿಗೆ ಯಾವುದೇ ಗಾಯ ಉಂಟಾಗಿರುವುದಿಲ್ಲ. ಅವರ ಬೈಕ್‌ನ ಮುಂಭಾಗದ ನಂಬರ್‌ ಪ್ಲೇಟ್‌ ಎಡಭಾಗದಲ್ಲಿ ಬೇಂಡ್‌ ಆಗಿದ್ದು ಡ್ಯೂಂ ನ ಎಡಭಾಗದಲ್ಲಿ ಅಲ್ಲಲ್ಲಿ ಗೀರು ಕಲೆಗಳು ಉಂಟಾಗಿರುತ್ತದೆ.  ದೂರುದಾರರ ಕಾರಿನ ಹಿಂಭಾಗದ ತೀರಾ ಬಲ ಭಾಗಕ್ಕೆ, ಬಲ ಭಾಗದ ಸೈಲೇಂಸರ್‌ ಜಖಂಗೊಂಡಿರುತ್ತದೆ. ಸ್ಥಳಕ್ಕೆ ಬಂದಿದ್ದ ಇಬ್ಬರು ಯುವಕರು ಅವರ ಕಾರಿನಲ್ಲಿ ಆನಂದ ಆಚಾರ್ಯರವರನ್ನು ಕುಳ್ಳಿರಿಸಿಕೊಂಡಿದ್ದು ಚಿಕಿತ್ಸೆಗೆ ಕೋಟೇಶ್ವರ ಎನ್‌ ಆರ್‌ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಹೋಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2022 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಶಂಕರನಾರಾಯಣ: ದಿನಾಂಕ 13/01/2022 ರಂದು ಹೆಬ್ರಿ ತಾಲೂಕಿನ   ಅಲ್ಬಾಡಿ ಗ್ರಾಮದ  ಅಲ್ಬಾಡಿ  ಸಾರ್ವಜನಿಕ  ಆಟೋರಿಕ್ಷಾ  ನಿಲ್ದಾಣದ ಬಳಿ   ಸಾರ್ವಜನಿಕ ಸ್ಥಳದಲ್ಲಿ   ಗುಂಪು ಗೂಡಿಕೊಂಡು ಹಣವನ್ನು  ಪಣವಾಗಿರಿಸಿ  ಗರಗರ ಮಂಡ್ಲ   ಜುಗಾರಿ ಆಟ  ಆಡುತ್ತಿರುವಾಗ ಶ್ರೀಧರ್ ನಾಯ್ಕ , ಪೊಲೀಸ್ ಉಪನಿರೀಕ್ಷಕರು, ಶಂಕರನಾರಾಯಣ ಪೊಲೀಸ್  ಠಾಣೆ ಇವರು ದಾಳಿ ನಡೆಸಿ 1) ಸತೀಶ ಪೂಜಾರಿ(43), ತಂದೆ:ಶೀನ ಪೂಜಾರಿ, ವಾಸ: ಹೊನ್ಕಲ್ ಬೆಳ್ಬೆ  ಗ್ರಾಮ  ಹೆಬ್ರಿ  ತಾಲೂಕು, 2. ಚಂದ್ರ ನಾಯ್ಕ (37),  ತಂದೆ: ಜಯರಾಮ ನಾಯ್ಕ,  ವಾಸ: ಗಂಟು ಬೀಳು ಅಲ್ಬಾಡಿ   ಗ್ರಾಮ ಹೆಬ್ರಿ ತಾಲೂಕು, 3. ಸತೀಶ  ನಾಯ್ಕ (34), ತಂದೆ:ರಾಮ ನಾಯ್ಕ,  ವಾಸ: ದುರ್ಗಾಪರಮೇಶ್ವರಿ  ನಿಲಯ   ಅಲ್ಬಾಡಿ ಗ್ರಾಮ   ಹೆಬ್ರಿ ತಾಲೂಕು ಇವರಿಂದ   ಜುಗಾರಿ  ಆಟದ  ಬಗ್ಗೆ  ಉಪಯೋಗ ಮಾಡಿದ  ನಗದು  ಹಣ   800/-  ನಂಬ್ರ  ಬರೆದ   ಖಾಕಿ   ಬಣ್ಣದ  ಪೇಪರ್  ಹಾಗೂ ಸಂಖ್ಯೆ  ಬರೆದ    ಕಾಯಿನ್    -1  ನ್ನು  ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2022  ಕಲಂ:  87 ಕರ್ನಾಟಕ ಪೊಲೀಸ್  ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಧರ್ಮೇಂದ್ರ (37), ತಂದೆ: ನಳಿನಾಕ್ಷ ವಾಸ: ದುರ್ಗಾ ನಿವಾಸ, ಇಂದಾರು ಬೆಳ್ಮಣ್ ಗ್ರಾಮ, ಕಾರ್ಕಳ ತಾಲೂಕು ಇವರ ತಮ್ಮ ಗಜೇಂದ್ರ (34) ಇವರು ವಿಪರೀತ ಮಧ್ಯಪಾನ ಮಾಡುವ ಚಟವನ್ನು ಹೊಂದಿದ್ದು ಅದೇ ಕಾರಣದಿಂದ ಮನನೊಂದು ದಿನಾಂಕ 13/01/2022 ರಂದು ಬೆಳಿಗ್ಗೆ 06:00 ಗಂಟೆಯಿಂದ ಸಂಜೆ 05:30 ಗಂಟೆಯ ನಡುವಿನ ಅವಧಿಯಲ್ಲಿ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ  ಬೆಳ್ಮಣ್ ಶ್ರೀ ಕೃಷ್ಣ ಸಭಾಭವನದ ಮುಂಭಾಗ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 03/ 2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶಿವಾನಂದ ಗಾಣಿಗ (47), ತಂದೆ: ಶ್ರೀಧರ ಗಾಣಿಗ , ವಾಸ: ಎಸ್ ವಿ ಎಮ್ ಎಸ್ ಮೋಟಾರ್ಸ್ ಉಪ್ಪುಂದ ಪೋಸ್ಟ್  , ಬೈಂದೂರು  ತಾಲೂಕು ಇವರು ಬಸ್ಸು ನಂಬ್ರ KA-20-D-4559ನೇ ಬಸ್ಸನ್ನು ಮತ್ತು ಬಾಬು ಪೂಜಾರಿಯವರ ಟಿಪ್ಪರ್ ನಂಬ್ರ KA-20-C-6656 ನೇದನ್ನು ಹಾಗೂ ದುರ್ಗ ಪೂಜಾರಿಯವರ ಲಾರಿ ನಂಬ್ರ KA-20-AA-1383 ನೇದನ್ನು ಬಿಜೂರು ESSAR ಪೆಟ್ರೋಲ್ ಬಂಕ್ ನಲ್ಲಿ ಒಟ್ಟಿಗೆ ನಿಲ್ಲಿಸುತ್ತಿದ್ದು ದಿನಾಂಕ 12/01/2022 ರಂದು ರಾತ್ರಿ 08:00 ಗಂಟೆಗೆ  ಬಸ್ಸು ,ಲಾರಿ,ಟಿಪ್ಪರ್ ನ್ನು ಬಿಜೂರು ESSAR ಪೆಟ್ರೋಲ್ ಬಂಕ್ ನಲ್ಲಿ ನಿಲ್ಲಿಸಿ  ಹೋಗಿದ್ದು ದಿನಾಂಕ 13/01/2022 ರ ಬೆಳಿಗ್ಗೆ 07:00 ಗಂಟೆಗೆ ಬಂದು ನೋಡಿದಾಗ ಬಸ್ಸಿನ2 ಬ್ಯಾಟರಿ, ಟಿಪ್ಪರಿನ 2 ಬ್ಯಾಟರಿ ಮತ್ತು  ಲಾರಿಯ 1 ಬ್ಯಾಟರಿ ಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು 5 ಬ್ಯಾಟರಿಯ ಒಟ್ಟು ಮೊತ್ತ ರೂಪಾಯಿ 67,500/- ಆಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-01-2022 09:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080