ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಸೂರಜ್‌ (31), ತಂದೆ: ನಾರಾಯಣ ಪೂಜಾರಿ, ವಾಸ: ಹೊಳೆಂಜೆ ಗಾಣದಬೆಟ್ಟು ಪೆರ್ಡೂರು ಉಡುಪಿ ತಾಲೂಕು ಇವರು ದಿನಾಂಕ 11/12/2022 ರಂದು ರಾತ್ರಿ ಉಡುಪಿಯಿಂದ ಮುದ್ರಾಡಿ ಕಡೆಗೆ ಅವರ  ಮೋಟಾರ್‌ ಸೈಕಲ್‌ ನಲ್ಲಿ ಬರುತ್ತಿರುವಾಗ ಅವರ ಎದುರುಗಡೆಯಿಂದ ಹೆಬ್ರಿ ಕಡೆಯಿಂದ ಉಡುಪಿ ಕಡೆಗೆ KA-20-HA-0090 ನೇ TVS ಮೋಟಾರ್‌ ಸೈಕಲ್ ನಲ್ಲಿ ರಕ್ಷಿತ್‌ ರವರು ಸಹ ಸವಾರನಾಗಿ ಶರತ್‌ ರವರನ್ನು ಕುಳ್ಳಿರಿಸಿಕೊಂಡು ಮೋಟಾರ್‌ ಸೈಕಲ್‌ ನ್ನು ಸವಾರಿ ಮಾಡಿಕೊಂಡು ಬರುತ್ತಿರುವಾಗ ಅವರು ರಾತ್ರಿ 08:00 ಗಂಟೆಗೆ ಹೆಬ್ರಿ ಗ್ರಾಮದ ಹೆಬ್ರಿ ಎಸ್.ಕೆ.ಫರ್ನಿಚರ್‌ ಬಿಲ್ಡಿಂಗ್‌ ಬಳಿ ತಲುಪಿದಾಗ ರಕ್ಷಿತ್‌ ರವರು ಮೋಟಾರ್‌ ಸೈಕಲ್‌ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ರಸ್ತೆಯ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದು ಮೋಟಾರ್‌ ಸೈಕಲ್‌ ಸಮೇತ ಅವರು ಬಿದ್ದ ಪರಿಣಾಮ ಸಹ ಸವಾರ ಶರತ್‌ ರವರಿಗೆ ತೀವ್ರ ಸ್ವರೂಪದ ನೋವಾಗಿರುತ್ತದೆ., ರಕ್ಷಿತ್‌ ರವರಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 72/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಶಂಕರನಾರಾಯಣ: ದಿನಾಂಕ  03/12/2022 ರಂದು 15:00 ಗಂಟೆಗೆ  ಪಿರ್ಯಾದಿದಾರರಾದ ಶ್ರೀಮತಿ  ಭವಾನಿ  ಆಚಾರ್ತಿ(58), ತಂದೆ:ಜನಾರ್ಧನ  ಆಚಾರ್ಯ, ವಾಸ: ದಕ್ಕೆರಬಾಳು  ಜನ್ದಾಲೆ ಅಂಚೆ ಸಿದ್ದಾಪುರ ಗ್ರಾಮ ಕುಂದಾಪುರ  ತಾಲೂಕು  ಇವರ ಗಂಡ ಜನಾರ್ಧನ ಆಚಾರ್ಯ ಇವರನ್ನು  ಆರೋಪಿ ಭಾಸ್ಕರ   ಶೆಟ್ಟಿ   ಇವರು KA-.20-EF- 9727 ನೇ ನಂಬ್ರದ ಮೋಟಾರ್ ಸೈಕಲ್‌‌‌‌ನಲ್ಲಿ ಸಹ  ಸವಾರನ್ನಾಗಿ ಕುಳ್ಳಿರಿಸಿಕೊಂಡು ಕುಂದಾಪುರ ತಾಲೂಕಿನ  ಸಿದ್ದಾಪುರ ಗ್ರಾಮದ ಜನ್ಸಾಲೆ ದಕ್ಕೇರಬಾಳು ಎಂಬಲ್ಲಿ  ಪಿರ್ಯಾದಿದಾರರ ಮನೆಯ  ಹತ್ತಿರ  ಬರುತ್ತಿರುವಾಗ  ಆರೋಪಿಯು  ಮೋಟಾರ್ ಸೈಕಲ್‌‌ನ್ನು  ಅತೀ ವೇಗ  ಹಾಗೂ  ಅಜಾರೂಕತೆ ಯಿಂದ  ಚಲಾಯಿಸಿದ ಪರಿಣಾಮ   ಮೋಟಾರ್  ಸೈಕಲ್ ಹಿಂಬದಿ  ಕುಳಿತ್ತ ಜನಾರ್ಧನ ಆಚಾರ್ಯ ಮೋಟಾರ್  ಸೈಕಲ್‌ನಿಂದ  ಕೆಳಗಡೆ  ಬಿದ್ದು, ಗಾಯಗೊಂಡಿದ್ದು, ಚಿಕಿತ್ಸೆಯ ಬಗ್ಗೆ   ಸಿದ್ದಾಪುರ  ವಾಸುಕಿ  ಕ್ಲಿನಿಕ್‌ಹೋಗಿ  ಅಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು  ಹೆಚ್ಚಿನ  ಚಿಕಿತ್ಸೆಯ  ಬಗ್ಗೆ  ಹಾಲಾಡಿ ದುರ್ಗಾ  ಆಸ್ಪತ್ರೆಗೆ ಹೋಗಿ ಅಲ್ಲಿಂದ  ಕೊಟೇಶ್ವರ ಡಾ, ಎನ್. ಆರ್  ಆಚಾರ್ಯ  ಆಸ್ಪತ್ರೆಗೆ  ಹೋಗಿದ್ದು,  ಅಲ್ಲಿ  ಒಳರೋಗಿಯಾಗಿ  ದಾಖಲು  ಮಾಡಿಕೊಂಡು ದಿನಾಂಕ 06/12/2022 ರಂದು ಬಲಕೈ  ಕಿರು ಬೆರಳಿಗೆ  ಮೂಳೆ  ಮುರಿತದ ಗಾಯವಾಗಿದೆ, ಎಂದು  ಆಪರೇಷನ್  ಮಾಡಿರುತ್ತಾರೆ, ಆ ಬಳಿಕ  ಅಲ್ಲಿ ಆಪರೇಷನ್  ಮಾಡಿದ್ದು ಸರಿಯಾಗದೇ ಇರುವ ಕಾರಣ   ಅಲ್ಲಿಂದ ಅದೇ  ದಿನ   ಹೆಚ್ಚಿನ ಚಿಕಿತ್ಸೆಯ  ಬಗ್ಗೆ    ಮಣಿಪಾಲದ  ಕೆಎಮ್ ಸಿ   ಆಸ್ಪತ್ರೆಗೆ  ಹೋಗಿ  ದಾಖಲಾಗಿರುತ್ತಾರೆ. ಈ  ಸಮಯ  ಆರೋಪಿಯು ಪಿರ್ಯಾದಿದಾರರಲ್ಲಿ ಹಾಗೂ ಗಾಯಾಳುವಿನಲ್ಲಿ  ಆಸ್ಪತ್ರೆಯ ಚಿಕಿತ್ಸೆ ಹಣ  ಕೊಡುವುದಾಗಿ  ಹೇಳಿದ್ದು, ಈಗ   ಹಣ ಕೊಡದೇ ಇರುವ  ಕಾರಣ  ಈ  ದಿನ  ಠಾಣೆಗೆ ಬಂದು  ದೂರು  ನೀಡಿರುವುದಾಗಿದೆ. ಆರೋಪಿಯು  ಗಾಯಾಳುವಿಗೆ   ಸರಿಯಾದ  ಚಿಕಿತ್ಸೆ  ಕೊಡಿಸದೇ  ಹಾಗೂ ಅಪಘಾತವಾದ   ಬಗ್ಗೆ   ಹತ್ತಿರದ ಪೊಲೀಸ್  ಠಾಣೆಗೆ ಯಾವುದೇ  ಮಾಹಿತಿ ನೀಡಿರುವುದಿಲ್ಲ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ     135/2022  ಕಲಂ: 279,   338 ಐಪಿಸಿ   134(A&B) IMV ACT  ರಂತೆ ಪ್ರಕರಣ ದಾಖಲಾಗಿರುತ್ತದೆ .   
  •  ಬೈಂದೂರು: ದಿನಾಂಕ 10/12/2022 ರಂದು ಬೆಳಗ್ಗಿನ ಜಾವ 01:20 ಗಂಟೆಗೆ ಉಪ್ಪುಂದ ಗ್ರಾಮದಲ್ಲಿ ಯಕ್ಷಗಾನ ನೋಡಿ ಪಿರ್ಯಾದಿದಾರರಾದ ಅವಿನಾಶ್ ದೇವಾಡಿಗ (24), ತಂದೆ : ಕೃಷ್ಣ ದೇವಾಡಿಗ, ವಾಸ : ಕೊಟ್ಯಾಡಿ, ದಿ.ಟಿ ಟೆಂಪಲ್ ರೋಡ್, ಬಿಜೂರು ಗ್ರಾಮ, ಬೈಂದೂರು ತಾಲೂಕು ಇವರ KA-20-EZ-9697 ಪಲ್ಸರ್ ಬೈಕನ್ನು ವಾಸುದೇವ ಎಂಬುವವರು ಪಿರ್ಯಾದಿದಾರರನ್ನು ಬೈಕ್ ನ ಹಿಂಬದಿ ಕೂರಿಸಿಕೊಂಡು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮುರ್ಗೋಳಿಹಕ್ಲು ಕಾಂಕ್ರೀಟ್ ರೋಡ್ ನಲ್ಲಿ ಹೋಗುತ್ತಿರುವಾಗ ರಸ್ತೆಯಲ್ಲಿ ದನ ಅಡ್ಡ ಬಂದಿದ್ದು ದನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ವಾಸುದೇವ ದೇವಾಡಿಗ ಮಣ್ಣು ರಸ್ತೆಗೆ ಬಿದ್ದಿದ್ದು ಹಿಂಬದಿ ಸವಾರರಾದ ಅವಿನಾಶ್ ದೇವಾಡಿಗ ಇವರು ಬೈಕ್ ಸಮೇತ ಕಾಂಕ್ರೀಟ್ ರಸ್ತೆಯಲ್ಲಿ ಬಿದ್ದ ಪರಿಣಾಮ ಅವಿನಾಶ್ ರವರ ಬಲತೊಡೆ, ಬಲಕೈ, ಬಲಮಂಡಿ, ಬಲಪಾದಕ್ಕೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 241/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಭರತ್‌ಶೆಟ್ಟಿ (29), ತಂದೆ ಶಾಂತೇಶ್‌ ಶೆಟ್ಟಿ, ವಾಸಳ ಪಡುಕೊಟ್ಟಿಗೆ ಹೌಸ್‌, ಹಳೆ ಕೊಲ್ಯಾರು , ಬೊಮ್ಮರಬೆಟ್ಟು ಉಡುಪಿ ಇವರ ತಂದೆ ಶಾಂತೇಶ್ ಶೆಟ್ಟಿ (59) ರವರು  ಕೃಷಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ಮನೆಯು ಹಳೆಯ ಮನೆಯಾಗಿದ್ದು  ಮನೆಯನ್ನು ಕಳೆದ ಎರಡು ವಾರಗಳ ಹಿಂದೆ ರಿಪೇರಿ ಕೆಲಸ ಮಾಡಿಕೊಂಡಿದ್ದು ದಿನಾಂಕ 09/12/2022  ರಂದು ಮನೆಯ ಬಳಿಯಲ್ಲಿರುವ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಹೋಗಿದ್ದು , ಕೊಟ್ಟಗೆಯಲ್ಲಿದ್ದ ತೆಂಗಿನಕಾಯಿ ಹಾಗೂ ಬೈಹುಲ್ಲು ಸಂಪೂರ್ಣ ಸುಟ್ಟು ಹೋಗಿದ್ದು ಈ ಬಗ್ಗೆ ಪಿರ್ಯಾದಿದಾರರ ತಂದೆ ಬಹಳ ಚಿಂತಕ್ರಾಂತರಾಗಿದ್ದು ಇದೇ ವಿಚಾರದಲ್ಲಿ ಮಾನಸಿಕವಾಗಿ ನೊಂದು ದಿನಾಂಕ 11/12/2022 ರಂದು ರಾತ್ರಿ 10:00 ಗಂಟೆಯಿಂದ  ದಿನಾಂಕ 12/12/2022 ರಂದು ಬೆಳಿಗ್ಗೆ 7:00 ಗಂಟೆಯ ಮಧ್ಯೆ  ಅವಧಿಯಲ್ಲಿ ಮನೆಯ ಹಿಂಬದಿಯಲ್ಲಿರುವ ಹಲಸಿನ ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 45/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ವೈಷ್ಣವಿ ಆಚಾರ್ಯ (50), ಗಂಡ: ದಿ. ವಾಧೀಂದ್ರ ಆಚಾರ್ಯ, ವಿಳಾಸ: ಮನೆ ನಂಬ್ರ: 8-1-71ಎ,  ರಮಾತ್ರಿವಿಕ್ರಮ ನಿಲಯ, ಕುಂಜಿಬೆಟ್ಟು, ಶಿವಳ್ಳಿ ಗ್ರಾಮ, ಉಡುಪಿ  ತಾಲೂಕು ಇವರ ಮನೆಯಲ್ಲಿ ದಿನಾಂಕ 11/12/2022 ರಂದು 22:00 ಗಂಟೆಯಿಂದ ದಿನಾಂಕ 12/12/2022 ರಂದು ಬೆಳಿಗ್ಗೆ 09:00 ಗಂಟೆ ನಡುವೆ ಯಾರೂ ಇಲ್ಲದೆ ಇರುವ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಮೂಲಕ ಒಳಪ್ರವೇಶಿಸಿ, ರೂಮ್‌ ನಲ್ಲಿದ್ದ ಅಲ್ಮೇರಾ ಬಾಗಿಲನ್ನು ಮುರಿದು ತೆಗೆದು, ಗೋದ್ರೇಜ್‌ ಲಾಕರ್‌ ನಲ್ಲಿದ್ದ ಡೈಮಂಡ್‌ ಉಂಗುರ-1, 20 ಗ್ರಾಂ ತೂಕದ ಚಿನ್ನದ ಜುಮುಕಿ-2, 8 ಗ್ರಾಂ ತೂಕದ ಚಿನ್ನದ ಕಾಯಿನ್‌-1, ಬೆಳ್ಳಿಯ ತಟ್ಟೆಗಳು-2, ಚಿನ್ನದ ಲೇಪನ ಇರುವ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 3,48,000/- ಆಗಿರುತ್ತದೆ . ಈ ಬಗ್ಗೆ  ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 183/2022 ಕಲಂ:  454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-12-2022 09:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080