ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವಾ: ದಿನಾಂಕ 12/12/2021 ರಂದು ಸಂಜೆ 5:30 ಗಂಟೆಗೆ ಪಾದೂರು ಗ್ರಾಮದ ಚಂದ್ರನಗರ ಸೇತುವೆ ಬಳಿ ಹಾದು ಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಆರೋಪಿ KA-20-P-9237 ನೇ ಕಾರಿನಲ್ಲಿ 3 ಜನ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಕಾಪು ಕಡೆಯಿಂದ ಶಿರ್ವಾ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮುಂದುಗಡೆ ಹೋಗುತ್ತಿದ್ದ ಬೇರೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ  ರಸ್ತೆಯ ತೀರಾ ಬದಿಗೆ ಬಂದು ಪಿರ್ಯಾದಿದಾರರಾದ ಮೊಹಮ್ಮದ್ ಶಾಹಿದ್ (19), ತಂದೆ: ಅಬ್ದುಲ್ ಮುನಾಫ್, ವಾಸ: ಬಿಸ್ಮಿಲ್ಲಾ ಮಂಜಲ್ ಚಂದ್ರನಗರ ಜನತಾ ಕಾಲೋನಿ, ಪಾದೂರುಗ್ರಾಮ ಮತ್ತು ಅಂಚೆ ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ಪಾದೂರು ಕಡೆಯಿಂದ ಬೆಳಪು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-MD-2181 ನೇ ನೊಂದಣಿ ಸಂಖ್ಯೆಯ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರು ಜಖಂ ಗೊಂಡಿದ್ದು, ಅಲ್ಲದೇ ಆರೋಪಿತನ ಕಾರಿನಲ್ಲಿದ್ದ  ಪ್ರಯಾಣಿಸುತ್ತಿದ್ದ ಆನಂದ ರವರ ತಲೆಗೆ ರಕ್ತಗಾಯವಾಗಿದ್ದು, ದಿನೇಶ್‌ರವರ  ಕೈಗೆ ರಕ್ತಗಾಯವಾಗಿರುತ್ತದೆ, ಕಾರಿನಲ್ಲಿದ್ದ ಬಸವರಾಜ ರವರಿಗೆ ಯಾವುದೇ ಗಾಯವಾಗಿರುವುದಿಲ್ಲ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2021, ಕಲಂ: 279,   337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಸಂಪತ್‌ ಕುಮಾರ (30), ತಂದೆ: ಮಾದವ ಕಾಂಚನ, ವಾಸ: ಗುರುಕೃಪಾ ಗ್ಯಾರೇಜ್‌ ಬಳಿ, ಕೊರಂಗ್ರಪಾಡಿ ಅಂಚೆ ಮತ್ತುಗ್ರಾಮ, ಉಡುಪಿತಾಲೂಕು, ಉಡುಪಿ ಜಿಲ್ಲೆ.ಇವರ ಅಣ್ಣ ಸಂತೋಷ್ (32) ರವರು ಕೂಲಿ ಕೆಲಸ ಮತ್ತು ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 10/12/2021 ರಂದು ಬೆಳಿಗ್ಗೆ ಕೆಲಸ ಹುಡುಕಿಕೊಂಡು ದಿನೇಶ ನಾಯ್ಕ್ ರವರ ಹತ್ತಿರ ಹೋಗಿದ್ದು, ದಿನೇಶ್  ನಾಯ್ಕ್ ಮತ್ತು ಹರೀಶ್ ಎಂಬುವವರು ಬೆಳ್ಳೆ ಗ್ರಾಮದ ಪಾಂಬೂರು ಎಂಬಲ್ಲಿರುವ ಅಗ್ನೇಲ್ ಪ್ರಕಾಶ್ ರವರ ಮನೆಯಲ್ಲಿ ಮಹಡಿಯಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಆ ಸಮಯ ಸಂತೋಷ್ ರವರು ಮನೆಯ ಮಹಡಿ ಹೋಗಿದ್ದು, ಆ ಸಮಯ ಸಂತೋಷ್ ರವರು ಮೂರ್ಛೆ ತಪ್ಪಿ ಮನೆಯ ಮಹಡಿಯಿಂದ ಕೆಳಗೆ ಬಿದ್ದು, ತಲೆಗೆ ಒಳ ಜಖಂ ಆಗಿದ್ದು ಅವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು, ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದ ಸಂತೋಷ್ ರವರು ದಿನಾಂಕ 12/12/2021 ರಂದು ಬೆಳಿಗ್ಗೆ 10:00 ಗಂಟೆಗೆ ಚಿಕಿತ್ಸೆಗೆ ಸ್ವಂದಿಸದೇ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ ಅವರ ಮರಣದಲ್ಲಿ ಸಂಶಯ ಇದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 22/2021  ಕಲಂ: 174 (C) ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಇತರ ಪ್ರಕರಣ
  • ಮಣಿಪಾಲ: ಪಿರ್ಯಾದಿದಾರರಾದ ಪೂರ್ಣಿಮಾ  (43), ಗಂಡ: ಸಂಜೀವ ನಾಯ್ಕ, ವಾಸ: ಮಾಣಿಬೆಟ್ಟು ಮನೆ, ಪರ್ಕಳ ಪೋಸ್ಟ್ , ಹೆರ್ಗಾ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಮನೆಯ  ಬಳಿಯ ದೇವಿಕಟ್ಟೆಯಲ್ಲಿ ಹತ್ತು ಸಮಸ್ತರ ಗೋಂದಲು ಸೇವೆ ನಿಮಿತ್ತ ಅವರ  ಸಮುದಾಯದವರು  ದಿನಾಂಕ 12/12/2021 ರಂದು  ಚಪ್ಪರ ಹಾಗೂ ಕ್ಲೀನಿಂಗ್‌ ಕೆಲಸವನ್ನು  ಮಾಡುತ್ತಿದ್ದು,  ದೇವಿಕಟ್ಟೆಗೆ ಬರುವ  ದಾರಿಯಲ್ಲಿ ರಾಜೇಶ್ ನಾಯ್ಕ  ಕಟ್ಟಿಗೆಯನ್ನು ಹಾಕಿಟ್ಟ ಕಾರಣ ಕಟ್ಟಿಗೆಯನ್ನು ಬೇರೆ ಕಡೆಗೆ ಹಾಕುವಂತೆ ಹೇಳಲಾಗಿದ್ದು , ಸಂಜೆ  5:00 ಗಂಟೆ ಸಮಯಕ್ಕೆ  ರಾಜೇಶ್ ನಾಯ್ಕ,  ರಾಧಿಕಾ,  ಗಣಪತಿ ನಾಯ್ಕ  ಹಾಗೂ ಸುರೇಶ್ ನಾಯ್ಕ  ಕಟ್ಟಿಗೆಯನ್ನು ತೆಗೆದು ಹೋಗಲು ತೊಂದರೆಯಾಗುವ ರೀತಿಯಲ್ಲಿ ದಾರಿಯಲ್ಲಿ  ಹಾಕಿರುತ್ತಾರೆ. ಆಗ ಪಿರ್ಯಾದಿದಾರರು , ಪಿರ್ಯಾದಿದಾರರ  ಗಂಡ ಸಂಜೀವ ನಾಯ್ಕ,  ಮೈದುನ ಮಂಜುನಾಥ್ ಮತ್ತು ಗಣೇಶ್‌ರವರು  ಅವರಲ್ಲಿ ಕಟ್ಟಿಗೆಯನ್ನು ಬೇರೆ ಕಡೆಗೆ ಹಾಕಲು  ಸೂಚಿಸಿರುತ್ತಾರೆ, ಆಗ   ರಾಜೇಶ್ ನಾಯ್ಕ  ಮತ್ತು ರಾಧಿಕಾ ಪಿರ್ಯಾದಿದಾರರನ್ನು ಕೈಯಿಂದ ದೂಡಿರುತ್ತಾರೆ.  ರಾಜೇಶ್ , ರಾಧಿಕಾ  ಮತ್ತು ಗಣಪತಿ ನಾಯ್ಕ ರವರು  ಮಂಜುನಾಥ್ ಮತ್ತು ಗಣೇಶ  ರವರಿಗೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿ  ಅವ್ಯಾಚ್ಯ ಶಬ್ದದಿಂದ ಬೈದಿರುತ್ತಾರೆ. ಆರೋಪಿಗಳು ಹಲ್ಲೆ ನಡೆಸಿದ  ಮಂಜುನಾಥ್‌  ರವರ ತಲೆಗೆ ರಕ್ತ ಗಾಯ ಹಾಗೂ ಗಣೇಶ ರವರ ಕೆನ್ನೆಗೆ ತರಚಿದ ಗಾಯ ಉಂಟಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 167/2021 ಕಲಂ: 354, 323, 504, 109 ಜೊತೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಕಲ್ಪನಾ (34), ತಂದೆ: ದಿ. ಶ್ರೀನಿವಾಸ ಶೇರಿಗಾರ, ವಾಸ: ಅಚಲಾ ಸಭಾಭವನ ಹತ್ತಿರ, ಚರ್ಚ ರಸ್ತೆ, ಕುಂದಾಪುರ ಇವರು ದಿನಾಂಕ 24/10/2021 ರಂದು 11:00 ಗಂಟೆಗೆ ಅವರ ಗೆಳೆಯ ದೀಪರಾಜ್ ಕರ್ಕೆರಾರವರೊಂದಿಗೆ  ಕೋಟೇಶ್ವರದ ಸಹನಾ ಹೋಟೇಲ್ ಎದುರು ಸರ್ವೀಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ KA-20-D-3393 ಟಾಟಾ ಏಸ್ ಗಾಡಿ ದೀಪರಾಜ್ ರವರಿಗೆ ತಾಗಿರುತ್ತದೆ.  ದೀಪರಾಜ್ ರವರನ್ನು  ಚಿಕಿತ್ಸೆ ಬಗ್ಗೆ ಚಿನ್ಮಯಿ ಆಸ್ಪತ್ರೆಗೆ ದಾಖಲಿಸುವಂತೆ ಏಸ್ ವಾಹನ ದ ಚಾಲಕ ಆಪಾದಿತ ರಾಜೇಶನಲ್ಲಿ  ಪಿರ್ಯಾದಿದಾರರು ಹೇಳಿದ್ದು ಆಪಾದಿತನು ದೀಪರಾಜ್ ನನ್ನು ಕೋಟೇಶ್ವರದ ಸ್ವಾತಿ ಕ್ಲೀನಿಕ್ ಗೆ ಕರೆದುಕೊಂಡು ಹೋಗಿರುವುದಾಗಿದೆ. ಸ್ವಾತಿ ಕ್ಲಿನಿಕ್ ಬಳಿ ಹೋಗಿ ಇದನ್ನು ಪ್ರಶ್ನಿಸಿದ ಪಿರ್ಯಾದಿದಾರರಿಗೆ ಹಾಗೂ ಅಲ್ಲಿದ್ದ ದೀಪರಾಜ್ ರವರಿಗೆ ಆಪಾದಿತ ರಾಜೇಶ್ ಹಾಗೂ ಅಲ್ಲಿಗೆ  ಬಂದ ಇತರ 8-9 ಜನರು ಅಕ್ರಮವಾಗಿ ಸೇರಿಕೊಂಡು ಕೈಯಿಂದ ಮುಖಕ್ಕೆ ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ಹೊಡೆದಿದ್ದು ಆರೋಪಿತರ ಪೈಕಿ ಧೃಢಕಾಯದ ವ್ಯಕ್ತಿ ಪಿರ್ಯಾದಿದಾರರಿಗೆ ಹೊಡೆದು ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 130/2021  ಕಲಂ: 143, 147, 323, 354 B, 504, 506  ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 13-12-2021 09:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080