ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ದಿನಾಂಕ 12/12/2021 ರಂದು ಪಿರ್ಯಾದಿದಾರರಾದ ಪ್ರಕಾಶ ಬಹದ್ದೂರ್ (18),  ತಂದೆ: ರಾಮ್ ಬಹದ್ದೂರ್ , ವಾಸ: ಕೃಷ್ಣ ದರ್ಶನ್ ಅಪರ್ಟ್ ಮೆಂಟ್ 11 ನೇ ಅಡ್ಡ ರಸ್ತೆ  ದಶರಥ ನಗರ ಮಣಿಪಾಲ ಉಡುಪಿ ಇವರ ತಾಯಿ ಅನಿತಾರವರು  ಶಿವಳ್ಳಿ ಗ್ರಾಮದ  ಶಾರಾದ ಕಲ್ಯಾಣ ಮಂಟಪದ ಬಳಿ ಬಸ್ಸಿನಿಂದ ಇಳಿದು ಯುವ ಪೇ ಕಾಂಪ್ಲೇಕ್ಷ್ ಎದುರು ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ಮಣಿಪಾಲ ಕಡೆಯಿಂದ ಕಲ್ಸಂಕ ಕಡೆಗೆ  ನಡೆದುಕೋಂಡು ಹೋಗುತ್ತಿರುವಾಗ ಬೆಳಿಗ್ಗೆ 09: 00 ಗಂಟೆಗೆ  KA-19-EC-0799 ನೇ ಮೋಟಾರ್ ಸೈಕಲ್ ಸವಾರ ಪ್ರಶಾಂತ ನಾಯಕ್  ತನ್ನ ಮೋಟಾರ್ ಸೈಕಲ್ ನ್ನುಮಣಿಪಾಲ ಕಡೆಯಿಂದ ಕಲ್ಸಂಕ ಕಡೆಗೆ ಸವಾರಿ ಮಾಡಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರ ತಾಯಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಾಯಿಯವರು ಬದಿಯಲ್ಲಿ ಹಾಕಿದ ಇಂಟರ್ ಲಾಕ್ ಮೇಲೆ ಎಸೆಯಲ್ಪಟ್ಟು  ಅವರ ಬಲ ಕಾಲಿಗೆ ಗುದ್ದಿದ ಬಲ ಕೈ ಗೆ ಹಣೆಗೆ ತರಚಿದ ಗಾಯಾವಾಗಿರುತ್ತದೆ ಮತ್ತು ಬಲಕಾಲಿನ ಮೊಣ ಗಂಟಿನ ಕೆಳಗೆ ಮೂಳೆ ಮುರಿತವಾಗಿರುತ್ತದೆ   ಹಾಗೂ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 88/2021 ಕಲಂ:  279 , 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ ಜಗದೀಶ್ ಪೂಜಾರಿ (30), ತಂದೆ: ದಿ.ಮುಡೂರ ಪೂಜಾರಿ, ವಾಸ; ಬಪ್ಪನಬೈಲು, ಶಿರೂರು ಗ್ರಾಮ, ಬೈಂದೂರು ತಾಲೂಕು ಇವರು ಶಿರೂರು ಗ್ರಾಮದ ಐ ಆರ್ ಬಿ ಟೋಲ್ ಗೇಟ್ ನಲ್ಲಿ ಸೆಕ್ಯೂರಿಟಿ  ಗಾರ್ಡ ಕರ್ತವ್ಯ  ಮಾಡಿಕೊಂಡಿದ್ದು, ದಿನಾಂಕ 13/12/2021 ರಂದು ರಾತ್ರಿ 12:00 ಗಂಟೆಯಿಂದ ಬೆಳಿಗ್ಗೆ 8:00 ಗಂಟೆಯ ವರೆಗೆ ಕರ್ತವ್ಯದಲ್ಲಿದ್ದು ಅವರೊಂದಿಗೆ ಮಂಜುನಾಥ ಮೊಗೇರ ಹಾಗೂ ರಾಘವೇಂದ್ರ ಮೇಸ್ತಾ (44)ರವರಿಗೂ ರಾತ್ರಿ ಸೆಕ್ಯೂರಿಟಿ ಕರ್ತವ್ಯವಿರುತ್ತದೆ.  ಟೋಲ್ ಗೇಟನಲ್ಲಿ 12 ಲೇನ್ ಗಳಿದ್ದು ಪೂರ್ವ  ಬದಿಯಲ್ಲಿ 6 ಹಾಗೂ ಪಶ್ಚಿಮ ಬದಿಯಲ್ಲಿ 6 ಲೇನ್ ಗಳು ಇರುತ್ತವೆ. ಪಿರ್ಯಾದಿದಾರರು ಹಾಗೂ ಮಂಜುನಾಥ ಮೊಗೇರ ಹಾಗೂ ರಾಘವೇಂದ್ರ ಮೇಸ್ತಾರವರು  ಪೂರ್ವ ಬದಿಯ ಲೇನ್ ಗಳಲ್ಲಿ ಕರ್ತವ್ಯದಲ್ಲಿದ್ದು , ಪಿರ್ಯಾದಿದಾರರು ಲೇನ್ ನಂಬ್ರ  5 ರಲ್ಲಿ , ರಾಘವೇಂದ್ರ  ಮೇಸ್ತಾ  ಲೇನ್ ನಂಬ್ರ 6ರಲ್ಲಿ ಕರ್ತವ್ಯ ದಲ್ಲಿರುತ್ತಾರೆ, ರಾಘವೇಂದ್ರ  ಮೇಸ್ತಾ ರವರು ಲೇನ್ ನಂಬ್ರ 6 ರಲ್ಲಿ ಬರುವ ವಾಹನಗಳಿಗೆ ಸೂಚನೆಯನ್ನು ನೀಡುತ್ತಿರುವಾಗ  2:20 ಗಂಟೆಗೆ ಭಟ್ಕಳ ಕಡೆಯಿಂದ ಬೈಂದೂರು ಕಡೆಗೆ GA-10-A-3398 ನೇ ವ್ಯಾಗನಾರ್ ಕಾರಿನ ಚಾಲಕನು ಆತನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಲೇನ್ ನಂಬ್ರ 6 ರಲ್ಲಿ ಕರ್ತವ್ಯದಲ್ಲಿದ್ದ ರಾಘವೇಂದ್ರ  ಮೇಸ್ತಾ ರವರಿನಿಗೆ ಡಿಕ್ಕಿ ಹೊಡೆದ ಪರಿಣಾಮ ರಾಘವೇಂದ್ರ ಮೇಸ್ತಾರವರ  ಸೊಂಟ ಹಾಗೂ ಹೊಟ್ಟೆ ಜಖಂ ಗೊಂಡಿರುತ್ತದೆ, ಕಾರುಚಾಲಕ ಸಂತೋಷ ರವರಿಗೆ ಕಾಲಿಗೆ ರಕ್ತಗಾಯ ಹಾಗೂ ಇನ್ನೋರ್ವನಿಗೆ ತಲೆಗೆ ರಕ್ತಗಾಯವಾಗಿರುತ್ತದೆ, ಗಾಯಗೊಂಡವರನ್ನು ಬೈಂದೂರು ಸಮುದಾಯ ಆರೋಗ್ಯಕೇಂದ್ರಕ್ಕೆ ಕರೆತಂದಿದ್ದು ರಾಘವೇಂದ್ರ  ಮೇಸ್ತಾರವರನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ, ಕಾರು ಚಾಲಕ ಹಾಗೂ ಶರತ್ ನನ್ನು   ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲಕ್ಕೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 202/2021 ಕಲಂ: 279, 337, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ : ಪಿರ್ಯಾದಿದಾರರಾದ ಚೆನ್ನಾರಾಮ (18),ತಂದೆ:ಅತ್ತಾ ರಾಮ, ವಾಸ:  ಮನೆ ನಂಬ್ರ 23-31 ಮಧ್ವನಗರ ,ಕೊಡವೂರು ಗ್ರಾಮ ಇವರ  ಅಣ್ಣ ರಘುವೀರ್ (23) ರವರು ಮರದ ಕೆಲಸ ಮಾಡಿಕೊಂಡಿದ್ದು , ದಿನಾಂಕ 06/12/2021 ರಂದು ಪೆರ್ಡೂರಿನಲ್ಲಿ ಕೆಲಸ ಕ್ಕೆ ಹೋಗಿದ್ದು ಮಧ್ಯಾಹ್ನ 2:30 ಗಂಟೆ  ಸಮಯಕ್ಕೆ ಪೆರ್ಡೂರು  ಗ್ರಾಮ ಪಂಚಾಯತ್  ಬಳಿ ನಡೆದುಕೊಂಡು ಹೋಗುತ್ತಿರುವಾಗ  ಕಾಲಿಗೆ ವೆಯರ್  ಸಿಕ್ಕಿ  ಕೆಳಗೆ ಬಿದ್ದ ಪರಿಣಾಮ   ಹೊಟ್ಟೆ, ತೊಡೆ,  ಕಾಲಿಗೆ ನೋವುಂಟಾಗಿದ್ದು  ಅಲ್ಲಿಂದ ಬಂದು  ನೋವಿಗೆ ಮನೆಯಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದು  ದಿನಾಂಕ: 10/12/2021 ರಂದು  ನೋವು ಉಲ್ಬಣಗೊಂಡು  ಚಿಕಿತ್ಸೆ ಕುರಿತು  ಉಡುಪಿಯ ಮಿತ್ರಾ ಆಸ್ಪತ್ರೆಗೆ  ಸೇರಿಸಿದ್ದು ವೈದ್ಯರಿಂದ   ಚಿಕಿತ್ಸೆ ಪಡೆದುಕೊಂಡು ಮಧ್ವನಗರದ ಮನೆಗೆ ಬಂದಿರುತ್ತಾರೆ,  ಪುನ: ದಿನಾಂಕ 12/12/2021 ರಂದು  ತೀವ್ರತರದ ನೋವು ಮತ್ತು ಉಸಿರಾಟದ ತೊಂದರೆಯಿಂದ  ಅಸ್ವಸ್ಥಗೊಂಡವರನ್ನು  ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ರಾತ್ರಿ 1:10 ಗಂಟೆಗೆ ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಪಿರ್ಯಾದಿದಾರರ ಅಣ್ಣ ಕಾಲಿಗೆ ವೆಯರ್ ಸಿಕ್ಕಿ ಬಿದ್ದು ಉಂಟಾದ ನೋವಿನಿಂದ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 46/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು : ಪಿರ್ಯಾದಿದಾರರಾದ ಕೆ ಬಾಬು ಶೆಟ್ಟಿ(66), ತಂದೆ: ನಾಗಯ್ಯ ಶೆಟ್ಟಿ, ವಾಸ: ಕಂಠದ ಮನೆ ತಗ್ಗರ್ಸೆ ಗ್ರಾಮ ಬೈಂದೂರು ತಾಲೂಕು ಇವರೊಂದಿಗೆ  ಬೈಂದೂರು ತಾಲೂಕು ತಗ್ಗರ್ಸೆ ಗ್ರಾಮದ ಕಂಠದ ಮನೆ ಎಂಬಲ್ಲಿ  ಅವರ ಅಕ್ಕನ ಮಗಳಾದ ಶ್ರೀಮತಿ ಅನಿತಾ ಶೆಟ್ಟಿ (55) ರವರು  ಗಂಡ ಹಾಗೂ ಮಗಳೊಂದಿಗೆ ವಾಸವಾಗಿದ್ದು, ದಿನಾಂಕ 13/12/2021 ರಂದು ಬೆಳಿಗ್ಗೆ 06:00 ಗಂಟೆಯ ಸಮಯ ಮನೆಗೆ ನೀರು ತರಲು  ಬಾವಿಯ ಬಳಿ ಹೋಗಿ ಬಾವಿಯಲ್ಲಿ ನೀರು ಸೇದುವಾಗ ಶ್ರೀಮತಿ ಅನಿತಾ ಶೆಟ್ಟಿ ರವರು ಆಕಸ್ಮಿಕವಾಗಿ ಬಾವಿಗೆ ಬಿದ್ದು  ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 51/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಜುಗಾರಿ ಪ್ರಕರಣ

 • ಬ್ರಹ್ಮಾವರ: ದಿನಾಂಕ 13/12/2021 ರಂದು ಗುರುನಾಥ ಬಿ ಹಾಗಿಮನಿ , ಪೊಲೀಸ್ ಉಪನಿರೀಕ್ಷಕು, ಬ್ರಹ್ಮಾವರ ಪೊಲೀಸ್ ಠಾಣೆ  ಬ್ರಹ್ಮಾವರ ತಾಲೂಕು ಇವರಿಗೆ ಚಾಂತಾರು ಗ್ರಾಮದ ಗಿಳಿಹಾಡಿ ಎಂಬಲ್ಲಿ ಪ್ರಕೃತಿ ಲೈಪ್‌ಸೈನ್ಸ್‌ ‌ಬಳಿ ಹಾಡಿ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ  ದಾಳಿ ಮಾಡಿ ಆರೋಪಿಗಳಾದ 1) ಪ್ರಕಾಶ ಕುಲಾಲ (38), ತಂದೆ : ರಾಜೀವ ಕುಲಾಲ, ವಾಸ : ಕುಂಜಾಲು ಜೆಡ್ಡು, ನೀಲಾವರ ಗ್ರಾಮ, ಬ್ರಹ್ಮಾವರ ತಾಲೂಕು, 2) ಪ್ರೀತೇಶ್‌ ಶೆಟ್ಟಿ (43), ತಂದೆ: ದಿ. ಶ್ರೀನಿವಾಸ ಶೆಟ್ಟಿ, ವಾಸ : ಕುರ್ಡುಂಜೆ ಬಡಾಮನೆ, ಆರೂರು ಅಂಚೆ ಮತ್ತು  ಗ್ರಾಮ, ಬ್ರಹ್ಮಾವರ ತಾಲೂಕು, 3) ದಿನೇಶ ಗಾಣಿಗ (42), ತಂದೆ : ದಿ. ನಾರಾಯಣ ಗಾಣಿಗ, ವಾಸ : ಕುಂಜಾಲು ಬಸ್‌ನಿಲ್ದಾಣದ ಬಳಿ, ನೀಲಾವರ ಗ್ರಾಮ, ಬ್ರಹ್ಮಾವರ ತಾಲೂಕು  ಇವರನ್ನು ವಶಕ್ಕೆ ಪಡೆದಿದ್ದು, ಇಬ್ಬರೂ ಆರೋಪಿಗಳು ಪರಾರಿಯಾಗಿರುತ್ತಾರೆ. ಆರೋಪಿತರು ಇಸ್ಪಿಟ್‌ ಜುಗಾರಿ ಆಟವಾಡಿರುವ ಪಾಲಿಥೀನ್‌ ಚೀಲದ ಮೇಲೆ ಹಾಕಿರುವ ಇಸ್ಪೀಟ್‌ಆಟಕ್ಕೆ ಬಳಸಿದ ನಗದು ರೂಪಾಯಿ 1,770/- ಮತ್ತು ಇಸ್ಪೀಟ್ ಎಲೆಗಳು 52 ಹಾಗೂ ಅವುಗಳನ್ನು ಹಾಕಿದ್ದ ಪಾಲಿಥೀನ್‌ಚೀಲ-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 205/2021 ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕುಂದಾಪುರ: ದಿನಾಂಕ 12/12/2021 ರಂದು 19:30 ಗಂಟೆಗೆ ಪಿರ್ಯಾದಿದಾರರಾದ ಪ್ರಮೋದ (31), ತಂದೆ: ಕುಷ್ಟ, ವಾಸ; ನಾನಾ ಸಾಹೇಬ್ ರಸ್ತೆ, ವಡೇರಹೋಬಳಿ ಗ್ರಾಮ, ಕುಂದಾಪುರ ಇವರು ವಡೇರಹೋಬಳಿ ಗ್ರಾಮದ ನಾನಾ ಸಾಹೇಬ್ ರಸ್ತೆಯಲ್ಲಿರುವ ಶಿವಾನಿ ಸ್ಟೋರ್ ಬಳಿ ರಸ್ತೆಯಲ್ಲಿ ನಿಂತುಕೊಂಡು ಅವರ ಸ್ನೇಹಿತರಾದ ಸುನೀಲ್ , ಅರುಣ್, ಉಮೇಶ ರವರೊಂದಿಗೆ ಮಾತನಾಡುತ್ತಿರುವಾಗ ಅವರ ಪರಿಚಯಸ್ಥನಾದ ಆಪಾದಿತ ಚಂದ್ರ ಪೂಜಾರಿ ತೋಡ್ಕಟ್ಟು ಆತನ ಆಟೋರಿಕ್ಷಾದಲ್ಲಿ ಅಲ್ಲಿಗೆ ಬಂದು ಪಿರ್ಯಾದಿದಾರರನ್ನು ಮತ್ತು ಅವರ ಸ್ನೇಹಿತರನ್ನು ಉದ್ದೇಶಿಸಿ ಯಾಕೆ ರಸ್ತೆ ಬದಿಯಲ್ಲಿ ನಿಂತಿದ್ದೀರಾ ಎಂದು ಅವಾಚ್ಯವಾಗಿ ಬೈದು ನಂತರ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 131/2021  ಕಲಂ:  504, 506 ಐಪಿಸಿ & 3 (1) (r) (s), 3 (2) (V-a) SC/ST POA Act 1989 ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 13-12-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080