ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ದಿನಾಂಕ: 11-11-2022 ರಂದು  16-45 ಗಂಟೆಗೆ ಪಿರ್ಯಾದಿ ಗೋಪಾಲ ಇವರು ಸೇನಾಪುರ ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಬಳಿ ನಿಂತುಕೊಂಡಿರುವಾಗ ಪಿರ್ಯಾದಿದಾರರ  ಚಿಕ್ಕಪ್ಪ ಆಪಾದಿತ ನರಸಿಂಗ ದೇವಾಡಿಗರವರು ಅವರ ಬಾಬ್ತು  KA-20 EL-2563 ನೇ ಮೋಟಾರ್‌ ಸೈಕಲನ್ನು ನಾಡ ಗುಡ್ಡೆಯಂಗಡಿ  ಕಡೆಯಿಂದ ಸೇನಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಚಾಲನಾ ಹಿಡಿತ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಹಾಗೂ ಕಾಲಿಗೆ ಗಾಯವಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 103/2022 ಕಲಂ: 279, 337  ಐ.ಪಿ.ಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ  11/11/2022 ರಂದು ರಾತ್ರಿ  ಸುಮಾರು 8:00 ಗಂಟೆಗೆ,  ಕುಂದಾಪುರ  ತಾಲೂಕಿನ, ವಡೇರಹೋಬಳಿ  ಗ್ರಾಮದ  ನೆಹರೂ ಮೈದಾನದ ಬಳಿ, ಪೂರ್ವ ಬದಿಯ   NH 66 ರಸ್ತೆಯಲ್ಲಿ, ಆಪಾದಿತ  ಯಲ್ಲಪ್ಪ ಚಕ್ರದ್‌ ಎಂಬವರು  KA20EA-1046ನೇ ಬೈಕನ್ನು  ಉಡುಪಿ ಕಡೆಯಿಂದ  ಬೈಂದೂರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು, NH 66 ರಸ್ತೆ ದಾಟಲು ನಿಂತುಕೊಂಡಿದ್ದ ಪಿರ್ಯಾದಿ ರಂಗಪ್ಪ  ಎಂಬವರಿಗೆ  ಡಿಕ್ಕಿ ಹೊಡೆದ  ಪರಿಣಾಮ, ಪಿರ್ಯಾದಿದಾರರ ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತವಾದ ಗಾಯ, ತಲೆಗೆ ಹಾಗೂ ಮೈ ಕೈಗೆ ತರಚಿದ ಗಾಯವಾಗಿ  ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ  ಅಪಘಾತದಿಂದ ಆಪಾದಿತ ಕೈ ಕಾಲುಗಳಿಗೆ  ತರಚಿದ ಗಾಯವಾಗಿ  ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ  ಪಡೆದಿರುತ್ತಾನೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 120/2022   ಕಲಂ 279, 338 ಐ.ಪಿ.ಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 11/11/2022 ರಂದು ರಾತ್ರಿ ಸುಮಾರು 9:30 ಗಂಟೆಗೆ  ಕೆಎ 25 ಎಎ  4289 ನೇದರ ಚಾಲಕ ಪ್ರಶಾಂತ ಸೊಲಬಗೌಡರ ಎಂಬವರು ತನ್ನ ಬಾಬ್ತು ಲಾರಿಯನ್ನು ಹೊಸ್ಮಾರ್ ಕಡೆಯಿಂದ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಕಾರ್ಕಳ ತಾಲೂಕು ನಲ್ಲೂರು  ಗ್ರಾಮದ ಪಾಜಿಗುಡ್ಡೆ ಎಂಬಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ತಿರುವಿನಲ್ಲಿ ಹತೋಟಿ ತಪ್ಪಿ ಲಾರಿಯ ಎಡಕ್ಕೆ ಕವುಚಿ ಬಿದ್ದು ಪರಿಣಾಮ ಚಾಲಕ ಪ್ರಶಾಂತ ಸೊಲಬಗೌಡರ ಎಡ ಕಾಲಿಗೆ ತೀವ್ರ ತರಹದ ಪೆಟ್ಟಾಗಿದ್ದು, ಹಾಗೂ ಎಡ ಕುತ್ತಿಗೆಗೆ ಗುದ್ದಿದ ನೋವಾಗಿದ್ದು, ಗಾಯಾಳುವನ್ನು ಕಾರ್ಕಳ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 139/2022 ಕಲಂ 279, 338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿ ಸುರೇಶ್ ಮೊಯಿಲಿ ಇವರು ತನ್ನ ಮೋಟಾರ್ ಸೈಕಲ್ ನಲ್ಲಿ ದಿನಾಂಕ 12/11/2022 ರಂದು ಮದ್ಯಾಹ್ನ ಸುಮಾರು 01:45 ಗಂಟೆಗೆ ಕಾರ್ಕಳ ತಾಲೂಕು ಮಾಳ ಗ್ರಾಮದ ಹೇರಾಂಟೆಯಿಂದ ಸುಮಾರು 2 ಕಿ, ಮೀ ಮುಂದಕ್ಕೆ ಹೋಗುವಾಗ ಎಸ್ ಕೆ ಬಾರ್ಡರ್ ಕಡೆಯಿಂದ ಮಾಳ ಕಡೆಗೆ KA 41 MB 7875 ನೇ ನಂಬ್ರದ ಕಾರು ಚಾಲಕ ತನ್ನ ಬಾಬ್ತು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆತನ ತೀರಾ ಎಡಕ್ಕೆ ಕಾರು ಚಲಾಯಿಸಿ ರಸ್ತೆಯ ಬದಿಯಲ್ಲಿದ್ದ ಮೋರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಮೇತ ಚರಂಡಿಗೆ ಬಿದ್ದಿದ್ದು, ಕಾರಿನಲ್ಲಿ ಕಾರುಚಾಲಕ ಸೇರಿ ಇಬ್ಬರು ಮಕ್ಕಳು ಹಾಗೂ ಇಬ್ಬರು ಹೆಂಗಸರು ಇದ್ದು ಚಾಲಕನ ಹಣೆಯ ಬಲಬದಿ ಎಡಕೈ, ತಲೆಯ ಎಡಬದಿಗೆ ರಕ್ತಗಾಯವಾಗಿದ್ದು, ಕಾರಿನಲ್ಲಿದ್ದ ಅನ್ನಪೂರ್ಣ ಎಂಬವರ ಸೊಂಟಕ್ಕೆ ಗುದ್ದಿದ್ದ ನೋವು ಹಾಗೂ ರಕ್ತಗಾಯವಾಗಿದ್ದು,ಅಲ್ಲದೇ ಕಾರಿನಲ್ಲಿದ್ದ ಪುನೀತ್ ವೈ ಹಾಗೂ ಹಂಸ್ಸಿಕಾ ವೈ  ಹಾಗೂ ನಾಗರತ್ನಮ್ಮರವರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 140/2022 ಕಲಂ 279, 337 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿ ರಮೇಶ್ ಜೆ ಇವರು  ದಿನಾಂಕ: 12-11-2022 ರಂದು 09-15 ಗಂಟೆಗೆ ತನ್ನ ಬಾಬ್ತುKA 35C-0370 ತುಫನ್ ಪೋರ್ಸ್ ವಾಹನದಲ್ಲಿ ಬಾಡಿಗೆ ನಿಮಿತ್ತ  ಖಾನಹೊಸಹಳ್ಳಿಯಿಂದ ತೀರ್ಥಯಾತ್ರೆ ಸಂಬಂಧ ಮಂಜುನಾಥ ಮತ್ತು ಅವರ ಕುಟುಂಬದವರಾದ ನಿರ್ಮಲ, ಪ್ರೇಮನೀಲ, ಮಣಿಯಮ್ಮ, ದಾಕ್ಷಯಿಣಿ, ಅನಿಲ್, ರಮ್ಯ, ಮತ್ತು ಇಬ್ಬರು ಚಿಕ್ಕ ಮಕ್ಕಳನ್ನು ಕುಳ್ಳಿರಿಸಿಕೊಂಡು ಕೊಲ್ಲೂರು  ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದು  ದೇವರ ದರ್ಶನ ಮಾಡಿ ಕೊಲ್ಲೂರಿನಿಂದ ಉಡುಪಿಗೆ ಪಿರ್ಯಾದಿದಾರರು  ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ   ಜಡ್ಕಲ್ ಗ್ರಾಮ NH-766C ರಲ್ಲಿ ಹಾಲ್ಕಲ್ ಜಂಕ್ಷನ್ ಸಮೀಪ ಪಿರ್ಯಾದಿದಾರರ ಕಾರಿನ ಎದುರಿನಿಂದ ಹಾಲ್ಕಲ್ ಜಂಕ್ಷನ್  ಕಡೆಯಿಂದ ಕೊಲ್ಲೂರು ಕಡೆಗೆ  KL 48 R 0040 ನೇ ಕಾರನ್ನು ಅದರ ಚಾಲಕ ಆರೋಪಿ ಪ್ರದೀಪ್ ವೇಗ ಹಾಗೂ ಅಜಾಗರೂಕತೆಯಿಂದ ತಿರುವು ರಸ್ತೆಯಲ್ಲಿ ತೀರ ಬಲಬದಿಗೆ ಚಲಾಯಿಸಿ ಪಿರ್ಯಾದುದಾರರ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಎರಡೂ   ಕಾರುಗಳು ಜಖುಂಗೊಂಡು ಪಿರ್ಯಾದುದಾರರ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಾಂತೇಶ್ ಮತ್ತು ನಿರ್ಮಲ ಎಂಬವರಿಗೆ ಪೆಟ್ಟಾಗಿದ್ದು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 50/2022 ಕಲಂ 279, 337 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಬ್ರಹ್ಮಾವರ : ಫಿರ್ಯಾದಿ ಜಗದೀಶ ಆಚಾರಿ ಇವರು ಚೇರ್ಕಾಡಿ ಪಂಚಾಯತ್‌ನಲ್ಲಿ ಸುಮಾರು 4 ವರ್ಷದಿಂದ ವಾಟರ್‌ಮೇನ್‌ ಆಗಿ ಕೆಲಸ ಮಾಡಿಕೊಂಡಿದ್ದು  ದಿನಾಂಕ: 12/11/2022 ರಂದು ಮಧ್ಯಾಹ್ನ  3:00 ಗಂಟೆಗೆ ಕನ್ನಾರುನಲ್ಲಿ ರಸ್ತೆ ಕಾಮಾಗಾರಿ ಮಾಡುವ ಸಮಯ ಪೈಪ್‌ ಒಡೆದಿದ್ದು  ಈ ಬಗ್ಗೆ ಪಂಚಾಯತ್‌ ಅಧ್ಯಕ್ಷರು  ಗುತ್ತಿಗೆದಾರರಲ್ಲಿ ಮಾತನಾಡಿ  ನಾಳೆ ದಿನ ಸರಿ ಮಾಡುವ  ಎಂದು ಮನೆಯಲ್ಲಿರುವಾಗ  ಚೇರ್ಕಾಡಿ ಪಂಚಾಯತ್‌ ಸದಸ್ಯರಾದ ನವೀನ್‌ ಬಂಗೇರ ರವರು ಫಿರ್ಯಾದಿದಾರಿಗೆ ಫೋನ್‌ ಮಾಡಿ ಪೈಪ್‌ಲೈನ್‌ ಹಾಳಾದ ಬಗ್ಗೆ ತಕ್ಷಣ ರಿಪೇರಿ ಮಾಡಲು ಆಗುವುದಿಲ್ಲವೇ  ಮತ್ತೆ ನೀನು ಪಂಚಾಯತ್‌ನಲ್ಲಿ ಏಕೆ ಇರುವುದು  ನಿನ್ನನ್ನು ಕೊಲ್ಲದೇ  ಬಿಡುವುದಿಲ್ಲ  ಈಗ ನೀವು ಪೇತ್ರಿ ಪೇಟೆಗೆ ಬಾ ಎಂದು ಬೆದರಿಕೆ  ಒಡ್ಡಿರುತ್ತಾರೆ.  ಸಂಜೆ 5:10 ಗಂಟೆ ಸಮಾರಿಗೆ  ಪಂಚಾಯತ್‌ನಲ್ಲಿ ಹಾರಿಸಲಾದ ಬಾವುಟವನ್ನು ಇಳಿಸುವ ಬಗ್ಗೆ  ಪೇತ್ರಿ ಪೇಟೆಯ ಕೃಷ್ಣ ಮಡಿವಾಳ  ಅಂಗಡಿ ಬಳಿ ನಡೆದುಕೊಂಡು  ಹೋಗುವಾಗ ನವೀನ್‌ ಬಂಗೇರ ರವರು ಏಕಾಎಕಿ  ಫಿರ್ಯಾದಿದಾರರನ್ನು ತಡೆದು ನಿಲ್ಲಿ ಸಿ ಅವಾಚ್ಯವಾಗಿ ಬೈದು   ಪೈಪ್‌ಲೈನ್‌ ಹಾಳಾದ ವಿಚಾರದಲ್ಲಿ ಬಾರಿ ಮಾತಾನಾಡುತ್ತೀಯಾ  ಎಂದು ಬೈದು  ಫಿರ್ಯಾದಿದಾರರ ಅಂಗಿಯ  ಕಾಲರ್‌ ಪಟ್ಟಿ ಹಿಡಿದು  ಕೈಯಿಂದ ಕೆನ್ನೆಗೆ ಹೊಡೆದು  ಕಾಲಿ ನಿಂದ ತುಳಿದಿರುತ್ತಾನೆ . ಈ ದಿನ ಬದುಕಿದಿಯಾ  ಮುಂದಕ್ಕೆ  ಈ ರೀತಿ ಪೋನ್‌ನಲ್ಲಿ ಮಾತಾನಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ  ಎಂದು ಬೆದರಿಕೆ ಹಾಕಿರುತ್ತಾನೆ.  ಫಿರ್ಯಾದಿದಾರರು ತನಗೆ ಆದ ಹಲ್ಲೆಯ ವಿಚಾರವನ್ನು ಪಂಚಾಯತ್‌ ಅದ್ಯಕ್ಷರು ಮತ್ತು ಉಪಾಧ್ಯಕ್ಷರಾದ ಕಿಟ್ಟಪ್ಪ ಅಮೀನ್‌ರವರಿಗೆ ತಿಳಿಸಿದ್ದು  ಅವರು ಫಿರ್ಯಾದಿದಾರರನ್ನು ಚಿಕಿತ್ಸೆಗಾಗಿ ಬಹ್ಮಾವರ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದಾಗ  ಅಲ್ಲಿನ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 189/2022 ಕಲಂ : 314, 323, 504, 506 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಬೈಂದೂರು: ಫಿರ್ಯಾದಿ ಮಂಜುನಾಥ ಮರಾಠಿ ಇವರೊಂದಿಗೆ ವಾಸಮಾಡಿಕೊಂಡಿದ್ದ ಅವರ   ತಂದೆ ವೆಂಕ ಮರಾಠಿ ಪ್ರಾಯ: 72 ವರ್ಷದವರು ದಿನಾಂಕ 11/11/2022 ರಂದು ಬೆಳಿಗ್ಗೆ 8:30  ಗಂಟೆಗೆ ಮನೆಯಿಂದ ಹೊರಗಡೆ ಹೋದವರು ವಾಪಾಸು ಮನೆಗೆ ಮನೆಗೆ  ಬಂದಿರುವುದಿಲ್ಲ. ಫಿರ್ಯಾದಿದಾರರು ಈ ಬಗ್ಗೆ ಅವರ ಅಕ್ಕಪಕ್ಕದ ಮನೆಗಳಲ್ಲಿ, ಫಿರ್ಯಾದಿದಾರರ ಹೆಂಡತಿಯ ಮನೆಯಲ್ಲಿ  ಹಾಗೂ ಫಿರ್ಯಾದಿದಾರರ ತಾಯಿಯ ಮನೆಗಳಲ್ಲಿ  ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ. ಅಲ್ಲದೇ  ಈ ವಿಚಾರದಲ್ಲಿಫಿರ್ಯಾದಿದಾರರು ದೂರದ ಸಂಬಂಧಿಕರಿಗೆ  ದೂರವಾಣಿ ಕರೆ ಮಾಡಿ ವಿಚಾರಿಸಿದ್ದು  ಈ ವರೆಗೂ ಫಿರ್ಯದಿದಾರರತಂದೆ  ವೆಂಕ ಮರಾಠಿ ರವರು ಪತ್ತೆಯಾಗದೇ ಇದ್ದು ಕಾಣೆಯಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 223/2022 ಕಲಂ: ಗಂಡಸು  ಕಾಣೆಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-11-2022 10:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080