ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕುಂದಾಪುರ : ದಿನಾಂಕ 12/11/2022 ರಂದು ಸಂಜೆ 05:30 ಗಂಟೆಗೆ, ಕುಂದಾಪುರ ತಾಲೂಕಿನ, ಕಸಬಾ ಗ್ರಾಮದ ಶಾಸ್ತ್ರೀಪಾರ್ಕನ ತಾಲೂಕು ಪಂಚಾಯತ್ ಕಟ್ಟಡದ ಗೇಟಿನ ಎದುರು ಪಾರ್ಕಿಂಗ್ ರಸ್ತೆಯಲ್ಲಿ ಆಪಾದಿತ ಸುಮಂತ್ ಗಾಣಿಗ KA-20-MC-7476 ನೇ ಇಕೋ ಕಾರನ್ನು ಶಾಸ್ತ್ರೀಪಾರ್ಕ ಜಂಕ್ಷನ್ ಕಡೆಯಿಂದ ತಾಲೂಕು ಪಂಚಾಯತ್ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಪಿರ್ಯಾದಿದಾರರಾದ ಪೂರ್ಣಿಮಾ ಎಸ್ ಆಚಾರ್ಯ ಪ್ರಾಯ :44 ವರ್ಷ, ಗಂಡ: ದಿ ಬಿ ಸುರೇಂದ್ರ ಆಚಾರ್ಯ, ವಾಸ :ಭೂಮಿಕ ನಿಲಯ ಕೊಮೆರೋಡ್ ತೆಕ್ಕಟ್ಟೆ ಗ್ರಾಮ ಕುಂದಾಪುರ ತಾಲೂಕು ಇವರು ಶಾಸ್ತ್ರೀಪಾರ್ಕ್    ಭಂಡಾರ್ ಕಾರ್ಸ್ ಕಾಲೇಜು ಕಡೆಗೆ ಪಾರ್ಕಿಂಗ್ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20- EK-0562 ನೇ ಸ್ಕೂಟರ್ ನ ಎಡಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಯಲ್ಲಿ ಬಿದ್ದು ಎಡಕಾಲು ಮೂಳೆ ಮುರಿತ ಹಾಗೂ ಕೈ ಹಾಗೂ ಕಾಲಿಗೆ ತರಚಿದ ಗಾಯವಾಗಿ ಕುಂದಾಪುರ ವಿನಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 121/2022 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ 

  • ಕಾರ್ಕಳ: ದಿನಾಂಕ 13/11/2022 ರಂದು ಬೆಳಿಗ್ಗೆ 04:30 ಗಂಟೆಯಿಂದ 05:18 ರ ಮಧ್ಯೆ ಯಾರೋ ಕಳ್ಳರು ದ್ವಿಚಕ್ರ ವಾಹನದಲ್ಲಿ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ಬಾಬಕ್ಕ ಕಂಪ್ಲೆಕ್ಸ್ ನಲ್ಲಿರುವ ಪಿರ್ಯದಾದಿದಾರರಾದ ಸದಾನಂದ ಶೆಟ್ಟಿ ಪ್ರಾಯ: 44 ವರ್ಷ, ತಂದೆ: ನಾರಾಯಣ ಶೆಟ್ಟಿ, ವಾಸ: ಅಗನೊಟ್ಟು ನಿಟ್ಟೆ ಗ್ರಾಮ ಕಾರ್ಕಳ ತಾಲೂಕು ಇವರ ಸ್ವಸ್ತಿಕ್ ಎಂಟರ್ ಪ್ರೈಸಸ್ ಎಂಬ ದಿನಸಿ ಅಂಗಡಿಯ ಬಳಿಗೆ ಬಂದು ಅವರ ಅಂಗಡಿಯ ಶಟರ್ ನ ಬೀಗವನ್ನು ಮುರಿದು ಒಳ ಪ್ರವೇಶಿಸಿ ಅಂಗಡಿಯ ಡ್ರಾವರ್ ಮತ್ತು ದೇವರ ಸ್ಟಾಂಡ್ ನಲ್ಲಿ ಇರಿಸಿದ ಡಬ್ಬದಲ್ಲಿ ಇಟ್ಟಿದ್ದ ನಗದು 8,000 ರೂಪಾಯಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 141/2022 ಕಲಂ:457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಕೋಟ: ಪಿರ್ಯಾದಿದಾರರಾದ ಗಣೇಶ ಪ್ರಭು ಪ್ರಾಯ: 44, ತಂದೆ: ಶ್ರೀನಿವಾಸ ಪ್ರಭುವಾಸ:ಸಿದ್ದಿವಿನಾಯಕ ಹುಣ್ಸೆಮಕ್ಕಿ ಹಾಲಾಡಿ ರೋಡ್ ಹೊಂಬಾಡಿ –ಮಂಡಾಡಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 10/11/2022 ರಂದು ಕೋಟದಲ್ಲಿ ರಾತ್ರಿ ಕ್ರಿಕೆಟ್ ಮ್ಯಾಚ್ ನೋಡಲು ಸ್ನೇಹಿತ ವಿಶ್ವನಾಥನೊಂದಿಗೆ ಆತನ ಕಾರಿನಲ್ಲಿ ಹೋಗಿದ್ದು ನಂತರ ಮ್ಯಾಚ್ ನೋಡಿ ವಾಪಾಸ್ಸು ದಿನಾಂಕ 11/11/2022 ರಂದು ತನ್ನ ಮನೆಯಾದ ಹುಣ್ಚೆಮಕ್ಕಿಗೆ ಬರುತ್ತಿರುವಾಗ 3:30 ಗಂಟೆಯ ಸಮಯಕ್ಕೆ ಹೊಂಬಾಡಿಯ ಜಿ.ಕೆ ನಗರದ ಬಸ್ಸು ಸ್ಟಾಂಡ್ ಹತ್ತಿರ ಒಂದು ಬಿಳಿ ಬಣ್ಣದ ಶಿಪ್ಟ್ ಕಾರು ನಿಂತಿದ್ದು ಪರಿಸರದಲ್ಲಿ ದನ ಕಳ್ಳತನ ಆಗುತ್ತಾ ಇರುವುದರಿಂದ ಸುಮಾರು 50 ಮೀಟರ್ ಹಿಂದೆ ತಮ್ಮ ಕಾರನ್ನು ನಿಲ್ಲಿಸಿ ನೋಡಲಾಗಿ ಇಬ್ಬರು ವ್ಯಕ್ತಿಗಳು ಅವರ ಕಾರಿಗೆ ಅಲ್ಲಿಯೇ ಮಲಗಿದ್ದ 2 ದನವನ್ನು ಹಿಂಸಾತ್ಮಕವಾಗಿ ತುಂಬಿಸುತ್ತಿದ್ದು ನಂತರ ಕೋಟೇಶ್ವರ ಕಡೆಗೆ ಕಾರನ್ನು ಚಲಾಯಿಸಿಕೊಂಡು ಪಿರ್ಯಾದಿದಾರರ ಎದುರನಲ್ಲಿಯೇ ಹೋಗಿರುತ್ತಾರೆ ನಂತರ ಕಾರು ನಂಬ್ರವನ್ನು ನೋಡಲಾಗಿ KA-19-MF-4238 ಆಗಿರುತ್ತದೆ . ಆ ಇಬ್ಬರು ವ್ಯಕ್ತಿಗಳು ಹಿಂಸಾತ್ಮಕ ರೂಪದಲ್ಲಿ ದನವನ್ನು ಕಳ್ಳತನ ಮಾಡಿ ತುಂಬಿಸಿದ್ದು ಅವನ್ನು ಕಡಿದು ಮಾಂಸ ಮಾಡುವ ಉದ್ದೇಶದಿಂದಲೇ ಸಾಗಾಟ ಮಾಡಿರುತ್ತಾರೆ. ಪಿರ್ಯಾದಿದಾರರು ದಿನಾಂಕ 11/11/2022 ರಂದು ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ಹೋಗಿದ್ದು ಈ ದಿನ ಮನೆಗೆ ಬಂದಿದ್ದು ಈ ವರೆಗೂ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುವುದಿಲ್ಲವಾಗಿ ತಿಳಿದು ಠಾಣೆಗೆ ಬಂದು ದೂರು ನೀಡಿರುವುದಾಗಿದೆ . ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 196/2022 ಕಲಂ: 379 ಐಪಿಸಿ, 5.12 ಗೋಹತ್ಯೆ ಮತ್ತು ಗೋ ಸಂರಕ್ಷಣಾ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 13-11-2022 06:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080