ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಶಿರ್ವಾ: ದಿನಾಂಕ 13/11/2021 ರಂದು ಪಿರ್ಯಾದಿದಾರರಾದ ಸುರೇಶ್ ಬಿ ಸೇರಿಗಾರ (55), ತಂದೆ: ದಿ.ಬೈಕ್ಲ ಸೇರಿಗಾರ, ವಾಸ: ಹೇರೂರು ಗುರುರಾಘವೇಂದ್ರ ಭಜನಾ ಮಂದಿರದ ಹತ್ತಿರ, 92ನೇ ಹೇರೂರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ಮೋಟಾರು ಸೈಕಲ್ ನಂ KA-20-EK-3030 ನೇದರಲ್ಲಿ ಹೆಂಡತಿ ಶರ್ಮಿಳಾ (42) ರವರನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಕೆಲಸದ ನಿಮಿತ್ತ ಉದ್ಯಾವರಕ್ಕೆ ಹೋಗುತ್ತಿರುವಾಗ ಬೆಳಿಗ್ಗೆ 08.45 ಗಂಟೆಗೆ ಕುರ್ಕಾಲು ಗ್ರಾಮದ ಕುರ್ಕಾಲು ಜಂಕ್ಷನ್ ಬಳಿ ತಲುಪುವಾಗ ಎದುರುಗಡೆಯಿಂದ KA-20-W-548 ನೇ ಮೋಟಾರು ಸೈಕಲ್ ಸವಾರನು ಶಂಕರಪುರದಿಂದ ಕುರ್ಕಾಲು ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕುರ್ಕಾಲು ಜಂಕ್ಷನ್ ಬಳಿ ಮಣಿಪುರ ಕಡೆಗೆ ಯಾವುದೇ ಸೂಚನೆ ನೀಡದೇ ಒಮ್ಮೆಲೆ ತಿರುಗಿಸಿದ್ದರಿಂದ ಪಿರ್ಯಾದಿದಾರರು ಚಲಾಯಿಸುತ್ತಿದ್ದ ವಾಹನಕ್ಕೆ ಢಿಕ್ಕಿ ಹೊಡೆದು ಪಿರ್ಯಾದಿದಾರರು ಮತ್ತು ಹೆಂಡತಿ ಶರ್ಮಿಳಾರವರು ರಸ್ತೆಗೆ ಎಸೆಯಲ್ಪಟ್ಟು ಪರಿಣಾಮ ಪಿರ್ಯಾದಿದಾರರ ಬಲಕಾಲಿಗೆ ತೀವ್ರ ಸ್ವರೂಪದ ಮೂಳೆಮುರಿತದ ಜಖಂ,ಬಲಗಡೆಯ ಹೊಟ್ಟೆಯ ಬಳಿ ತರಚಿದ ಗಾಯವಾಗಿದ್ದು, ಶರ್ಮಿಳಾರವರ ಹಿಂಬದಿ ತಲೆಗೆ ತೀವ್ರ ಸ್ವರೂಪದ ಜಖಂ ಆಗಿರುತ್ತದೆ. ಅಲ್ಲಿ ಸೇರಿದ ಸಾರ್ವಜನಿಕರು ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಶರ್ಮಿಳಾ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರ್ರೆಗೆ ದಾಖಲಿಸಿದ್ದು , ಪರೀಕ್ಷಿಸಿದ ವೈದ್ಯಾದಿಕಾರಿಯವರು ಶರ್ಮಿಳಾರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 66/2021 , ಕಲಂ 279, 338,304(A)ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ : ದಿನಾಂಕ 13/11/2021 ರಂದು ಬೆಳಿಗ್ಗೆ 08:20 ಗಂಟೆಗೆ ಕುಂದಾಪುರ ತಾಲೂಕಿನ, ಬೀಜಾಡಿ ಗ್ರಾಮದ ಕುಂದೇಶ್ವರ ಗ್ರಾನೈಟ್ ಅಂಗಡಿ ಎದುರು ರಾಷ್ಟ್ರೀಯ . ಹೆದ್ದಾರಿ 66 ರ ಕೋಟ –ಕುಂದಾಪುರ ಏಕಮುಖ ಸಂಚಾರ ರಸ್ತೆಯಲ್ಲಿ ಪಿರ್ಯಾದಿದಾರರಾದ ಅಶೋಕ್ ಮೋಗವೀರ (45) ,ತಂದೆ: ಶೀನಾ ಮೋಗವೀರ, ವಾಸ: ಶಾನಾಡಿ ದಾಸ್ರಜೆಡ್ಡು ಕೇದುರು ಗ್ರಾಮ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರು ಮೋಟರ್ ಸೈಕಲ್ ನಂಬ್ರ KA-20-ED-4722 ನೇ ದರಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಕೋಟ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿರುವಾಗ. ಕೋಟ ಕಡೆಯಿಂದ KA-51-AD-6804 ನೇ ಬಸ್ಸಿನ ಚಾಲಕ ತನ್ನ ಬಸ್‌ನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಮೋಟರ್ ಸೈಕಲ್‌ ಅನ್ನು ಓವರಟೇಕ್ ಮಾಡಿಕೊಂಡು ಬಂದು ಯಾವುದೇ ಮೂನ್ಸೂಚನೆ ನೀಡದೇ ಓಮ್ಮೇಲೆ ಬ್ರೇಕ್ ಹಾಕಿ ಬಸ್‌ನ್ನು ರಸ್ತೆಯ ಎಡಕ್ಕೆ ತಿರುಗಿಸಿದ ಪರಿಣಾಮ ಮೋಟರ್ ಸೈಕಲ್‌ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಮೋಟರ್ ಸೈಕಲ್ ಸವಾರ ಹಾಗೂ ಸಹ ಸವಾರ ರಸ್ತೆಗೆ ಬಿದ್ದ ಪರಿಣಾಮ ಸವಾರನಿಗೆ ಬಲ ಕಾಲಿನ ಮೂಳೆ ಮುರಿತ ಹಾಗೂ ಪಿರ್ಯಾದಿದಾರರಿಗೆ ಎರಡು ಕಾಲಿಗೆ ತರಚಿದ ರಕ್ತ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಸವಾರ ಹೆಚ್ಚಿನ ಚಿಕಿತ್ಸೆಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಸಹ ಸವಾರ ಕೊಟೇಶ್ವರ ಎನ್‌‌‌. ಆರ್‌ ಆಚಾರ್ಯ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 89/2021 ಕಲಂ: 279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಅಜೆಕಾರು: ಪಿರ್ಯಾದಿದಾರರಾದ ಶ್ರೀಧರ ಮೂಲ್ಯ (43), ತಂದೆ:ಕಾಂತು ಮೂಲ್ಯ, ವಾಸ:ಗಳಿ ಬೆಟ್ಟು ಎಣ್ಣೆಹೊಳೆ ಮರ್ಣೆ ಗ್ರಾಮ ತಾಲೂಕು ಇವರ ತಂದೆ-ತಾಯಿಗೆ 10 ಜನ ಮಕ್ಕಳಿದ್ದು ಅವರಲ್ಲಿ ಕೊನೆಯವಳಾದ ಶುಭಾಷಿಣಿ( 40) ರವರು ಸುಮಾರು 12 ವರ್ಷಗಳಿಂದ ಪೂನಾದಲ್ಲಿ ತನ್ನ ಗಂಡ, ರಘುನಾಥ ಮೂಲ್ಯರವರೊಂದಿಗೆ ವಾಸವಿದ್ದು ಸುಮಾರು 10 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಮಣಿಪಾಲ ಕಸ್ತೂರ್ಬ ಆಸ್ವತ್ರೆಯ ವೈದ್ಯರಿಂದ ಚಿಕಿತ್ಸೆ ಹಾಗೂ ಮದ್ದನ್ನು ಕೊಡಿಸುತ್ತಿದ್ದು, ಇತ್ತೀಚೆಗೆ 4 ತಿಂಗಳ ಹಿಂದೆ ಶುಭಾಷಿಣಿಯವರಿಗೆ ಮಾನಸಿಕ ಖಾಯಿಲೆ ಜಾಸ್ತಿಯಾದ ಕಾರಣ ಗಂಡ ಅವರನ್ನು ಎಣ್ಣೆಹೊಳೆಯಲ್ಲಿರುವ ಅಕ್ಕ ಶೋಭಾರ ಮನೆಗೆ ತಂದು ಬಿಟ್ಟಿದ್ದು, ನಂತರ ಅವರನ್ನು ಮೂರು ಬಾರಿ ಮಣಿಪಾಲ ಕಸ್ತೂರ್ಬ ಆಸ್ವತ್ರೆಗೆ ಕರೆದುಕೊಂಡು ಹೋಗಿ ಮದ್ದನ್ನು ಕೊಡಿಸಿರುತ್ತಾರೆ. ಪಿರ್ಯಾದಿದಾರರು ಕೆಲಸದ ನಿಮಿತ್ತ ಸುಕೇಶ್ ಹೆಗ್ಡೆಯವರ ತೋಟದ ಕೆಲಸಕ್ಕೆ ಹೋಗಿದ್ದ ಸಮಯ ದಿನಾಂಕ 13/11/2021ರಂದು 12:30 ಗಂಟೆಗೆ ಪಿರ್ಯಾದಿದಾರರ ಅಕ್ಕ ಶೋಭಾ ರವರ ಮಗಳಾದ ಪ್ರೀಯಾಂಕ ಪೋನ್ ಮಾಡಿ ಶುಭಾಷಿಣಿಯವರು ಮನೆಯ ಮಾಳಿಗೆಯ ಮರದ ಪಕ್ಕಾಸಿಗೆ ತೆಳುವಾದ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿರುವ ವಿಚಾರವನ್ನು ತಿಳಿಸಿದಾಗ ಪಿರ್ಯಾದಿದಾರರು ಶೋಭಾಳ ಮನೆಗೆ ಹೋಗಿ ನೋಡಲಾಗಿ ಶುಭಾಷಿಣಿಯವರನ್ನು ನೇಣಿನಿಂದ ಕೆಳಗಿಳಿಸಿ ಮಲಗಿಸಿದ್ದು, ಜೀವನದಲ್ಲಿ ಜಿಗಿಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ಬೆಳಿಗ್ಗೆ 8:15 ಗಂಟೆಯಿಂದ ಮದ್ಯಾಹ್ನ 12 :20 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಮಾಳಿಗೆಯ ಮರದ ಪಕ್ಕಾಸಿಗೆ ರಗ್ಗಿನಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದ್ದು ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 23/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ : ಪಿರ್ಯಾದಿದಾರರಾದ ಉದಯ (45) ,ತಂದೆ: ಲಕ್ಷ್ಮಣ ಪೂಜಾರಿ ,ವಾಸ: ಮನೆ ನಂಬ್ರ: 19/42, ಮಧ್ವನಗರ, ಕೊಡವೂರು ಅಂಚೆ, ಉಡುಪಿ ತಾಲೂಕು ಇವರ ತಂದೆ ಲಕ್ಷ್ಮಣ ಪೂಜಾರಿ (72) ರವರು ವಿಪರೀತ ಮದ್ಯ ವ್ಯಸನಿಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಮನೆ ಬಿಟ್ಟು ಹೋಗಿದ್ದು, ಆದಿ ಉಡುಪಿ ಪರಿಸರದಲ್ಲಿ ಅಲೆಮಾರಿಯಂತೆ ಜೀವಿಸಿಕೊಂಡಿದ್ದು, ದಿನಾಂಕ 13/11/2021 ರಂದು ಮೂಡನಿಡಂಬೂರು ಗ್ರಾಮದ ಆದಿ ಉಡುಪಿಯ ಮೀನು ಮಾರುಕಟ್ಟೆ ಬಳಿ ರಸ್ತೆ ಬದಿಯಲ್ಲಿ ಬೆಳಿಗ್ಗೆ 07:00 ಗಂಟೆಗೆ ಮೃತಪಟ್ಟ ಸ್ಥಿತಿಯಲ್ಲಿದ್ದವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಬೆಳಿಗ್ಗೆ 08:12 ಗಂಟೆಗೆ ಪರೀಕ್ಷಿಸಿದ ವೈದ್ಯರು, ಲಕ್ಷ್ಮಣ ಪೂಜಾರಿಯವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 46/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 13-11-2021 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080