ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ : ಪಿರ್ಯಾದಿ ವಸಂತಜೈನ್ (59) ತಂದೆ: ಯುವರಾಜ ಕೆಲ್ಲ ವಾಸ:ಕಂಬ್ಲದಡ್ಡ  ಮನೆ ನಲ್ಲೂರು ಗ್ರಾಮ ಇವರು ಬೀಡಿ ತೆಗೆಯಲೆಂದು ಬಜಗೋಳಿ ಪೇಟೆಯಿಂದ ಭಾಸ್ಕರ ಎಂಬವರ KA-20-C-5584 ನೇ ರಿಕ್ಷಾದಲ್ಲಿ ರಾಮೇರುಗುತ್ತು ಕಡೆ  ದಿನಾಂಕ: 13/10/2022 ರಂದು ಹೋಗುತ್ತಿರುವಾಗ ಮುಡಾರ್  ಗ್ರಾಮದ ರಾಮೇರ್ ಗುತ್ತು ಅಲ್ದಟ್ಟ ಸಂಕದ  ಬಳಿ ಬೆಳಿಗ್ಗೆ 9-45  ಗಂಟೆಗೆ ತಲುಪುವಾಗ್ಗೆ ರಾಮೇರ್  ಗುತ್ತು ಕಡೆಯಿಂದ ಬಜಗೋಳಿ  ಕಡೆಗೆ KA-23-W-8931 ನೇ ಮೋಟಾರ್ ಸೈಕಲ್ ಸವಾರನು ತಿರುವಿನಲ್ಲಿ ಆತನ ಮೋಟಾರ್ ಸೈಕಲನ್ನು  ಅತಿ ವೇಗ  ಹಾಗೂ  ನಿರ್ಲಕ್ಷತನದಿಂದ  ತೀರಾ ಬಲಕ್ಕೆ ಚಲಾಯಿಸಿ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ  ಹೊಡೆದ  ಪರಿಣಾಮ ಮೋಟಾರ್ ಸೈಕಲ್  ಸವಾರನು ವಾಹನ ಸಮೇತ ರಸ್ತೆಗೆ ಬಿದ್ದು ಆತನ ತಲೆಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 129/2022 ಕಲಂ 279,337 ಐಪಿಸಿ  ಯಂತೆ ಪ್ರಕರಣ ದಾಕಲಿಸಲಾಗಿದೆ.


ಇತರ ಪ್ರಕರಣ

 • ಕಾಪು: ಪಿರ್ಯಾದಿ ಜಗದೀಶ ಬಂಗೇರಾ ಪ್ರಾಯ : 50 ವರ್ಷ ತಂದೆ : ಪುಟ್ಟ ಪೂಜಾರಿ ವಾಸ : ಗುಲಾಬಿ ನಿವಾಸ, ಊಳಿಯಾರಗೋಳಿ ಗ್ರಾಮ ಇವರು ದಿನಾಂಕ 12-10-2022 ರಂದು 17.30 ಗಂಟೆಗೆ ಎಂದಿನಂತೆ ಅರುಣ ಶೆಟ್ಟಿ ರವರ ಗೇಟಿನ ಮುಖಾಂತರ ತನ್ನ ಮನೆಗೆ ಒಳಬರುತ್ತಿರುವಾಗ  ಅರುಣ ಶೆಟ್ಟಿ ರವರು ಪಿರ್ಯಾದಿದಾರರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ, ನಮ್ಮ ಜಾಗದಲ್ಲಿ ಬರಬಾರದು ಎಂಬುದಾಗಿ ಹೇಳಿ ಪಿರ್ಯಾದಿದಾರರ ಎಡಗೆನ್ನೆಗೆ ಕೈಯಿಂದ ಹೊಡೆದಿದ್ದು, ಪಿರ್ಯಾದಿದಾರರು ಅವರ ಮೈಗೆ ಕೈ ಹಾಕಿನ ದೂಡಿರುತ್ತಾರೆ. ಆ ವೇಳೆಗೆ ಪ್ರಸನ್ನ ಶೆಟ್ಟಿ ಹಾಗೂ ತುಸಿತ್ ಶೆಟ್ಟಿ ರವರು ಬಂದು ಪಿರ್ಯಾದಿದಾರರ ಮೈಗೆ ಕೈಯಿಂದ ಹೊಡೆದಿದ್ದು, ಬಳಿಕ ಮಂಜುನಾಥ ಶೆಟ್ಟಿ ರವರು ಕಬ್ಬಿಣದ ರಾಡ್‌ನಿಂದ ಪಿರ್ಯಾದಿದಾರರಿಗೆ ಬಲಭುಜಕ್ಕೆ ಹಾಗೂ ಎಡಗೈನ ಮುಂಗೈನ ಮೇಲ್ಭಾಗಕ್ಕೆ ಹೊಡೆದಿರುತ್ತಾರೆ. ಇದರಿಂದ ಪಿರ್ಯಾದಿದಾರರ ಎಡಗೈಗೆ ರಕ್ತಗಾಯವಾಗಿರುತ್ತದೆ. ಬಳಿಕ 4 ಜನರು ಸೇರಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 114/2022 ಕಲಂ : 341 323 324 504 506 ಜೊತೆಗೆ  149 ಐಪಿಸಿ ಯಂತೆ ಪ್ರಕರಣ ದಾಕಲಿಸಲಾಗಿದೆ.
 • ಕಾಪು: ಪಿರ್ಯಾದಿ ಮಂಜುನಾಥ ಶೆಟ್ಟಿ ಪ್ರಾಯ : 67 ವರ್ಷ  ತಂದೆ : ದಿ. ಸಂಜೀವ ಶೆಟ್ಟಿ ವಾಸ : ಕೆಳಪಲಬೆಟ್ಟು ದೊಂದರ ಅಂಗಡಿ, ಕುಕ್ಕುಂಜೆ ಗ್ರಾಮ ಇವರು ದಿನಾಂಕ 12-10-2022 ರಂದು 17.30 ಗಂಟೆಗೆ ಅಂಗಡಿಯಲ್ಲಿರುವಾಗ ಜಗದೀಶ ಬಂಗೇರಾ ರವರು ಕೈಯಲ್ಲಿ ಕಬ್ಬಿಣದ ರಾಡ್‌ನ್ನು ಹಿಡಿದುಕೊಂಡು ಬಂದು,  ಅರುಣ್ ಶೆಟ್ಟಿ ರವರ  ಜಾಗದ ಗೇಟ್‌ನ್ನು ಕಾಲಿನಿಂದ ಒದ್ದು ಅಕ್ರಮವಾಗಿ ಒಳ ಪ್ರವೇಶಿಸಿ ಗೇಟ್‌ನ ಬಳಿ ನಿಂತಿದ್ದ ಅರುಣ ಶೆಟ್ಟಿ, ಪ್ರಸನ್ನ ಶೆಟ್ಟಿ ಹಾಗೂ ತುಸಿತ್ ಶೆಟ್ಟಿ ರವರುಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ,ನಮ್ಮ ಕುಟುಂಬದವರು ಮೊದಲಿನಿಂದಲೂ ಇದೇ  ಜಾಗದಲ್ಲಿ ಓಡಾಡುತ್ತಿದ್ದು, ಮುಂದೆಯೂ ಕೂಡಾ  ಇದೇ ರಸ್ತೆಯ ಮೂಲಕ ಓಡಾಡುತ್ತೇವೆ. ಯಾರಾದರೂ ತಡೆಯಲು ಬಂದರೆ ಜೀವಸಹಿತವಾಗಿ ಬಿಡುವುದಿಲ್ಲ ಎಂದು ಬೈದಿರುತ್ತಾನೆ. ಆ ವೇಳೆಗೆ ಗೇಟಿನ ಒಳಗೆ ಜಗದೀಶ ರವರ ಅಣ್ಣ  ಉಮೇಶ ಬಂಗೇರಾ ಹಾಗೂ ನರೇಶ ರವರು ಒಳಗಡೆ ಬಂದಿದ್ದು, ಮೂರು ಜನ ಸೇರಿ ಅರುಣ ಶೆಟ್ಟಿ, ಪ್ರಸನ್ನ ಶೆಟ್ಟಿ ಹಾಗೂ ತುಸಿತ್ ಶೆಟ್ಟಿ ರವರಿಗೆ ಕೈಯಿಂದ ಹೊಡೆದಿರುತ್ತಾರೆ. ಪಿರ್ಯಾದಿದಾರರು ಅಂಗಡಿಯಿಂದ ಗಲಾಟೆ ಬಿಡಿಸಲು ಗೇಟಿನ  ಬಳಿ ಹೊಗಿದ್ದು, ಜಗದೀಶ ಬಂಗೇರಾರವರು ತಮ್ಮ ಕೈಯಲ್ಲಿದ್ದ ಕಬ್ಬಿಣದ ರಾಡ್‌‌ನಿಂದ ಪಿರ್ಯಾದಿದಾರರ ಎಡಗೈನ ತೋರು ಬೆರಳಿಗೆ ಹಲ್ಲೆ ನಡೆಸಿದ್ದು, ಪಿರ್ಯಾದಿದಾರರ ಬೆರಳಿಗೆ ರಕ್ತಗಾಯವಾಗಿರುತ್ತದೆ. ಅರುಣ ಶೆಟ್ಟಿ, ಪ್ರಸನ್ನ ಶೆಟ್ಟಿ ಹಾಗೂ ತುಸಿತ್ ಶೆಟ್ಟಿ ರವರಿಗೂ ಕೂಡಾ ಸಣ್ಣ ಪುಟ್ಟ ಗುದ್ದಿದ ರೀತಿಯ ಗಾಯಗಳಾಗಿರುತ್ತವೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 115/2022 ಕಲಂ  : 447 323 324 504 506 ಜೊತೆಗೆ  34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಉಡುಪಿ: ದಿನಾಂಕ: 02/10/2022 ರಂದು ಸುಮಾರು 15:30 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಿಂದ ಉಡುಪಿ ನಗರದವರೆಗೆ ಹೊರಟ ದುರ್ಗಾದೌಡ್‌ ಮೆರವಣಿಗೆಯಲ್ಲಿದ್ದ ಸುಮಾರು ಹತ್ತರಿಂದ ಹದಿನೈದು ಜನರ ಗುಂಪು ಅಕ್ರಮವಾಗಿ ಮಾರಕಾಸ್ತ್ರವಾದ ತಲವಾರನ್ನು ಪ್ರದರ್ಶಿಸಿ ಮೆರವಣಿಗೆಯೊಂದಿಗೆ ಸಾಗಿ ತ್ರಿವೇಣಿ ಸರ್ಕಲ್ ಬಳಿ ತಾಲೀಮು ನಡೆಸಿ ಸಾರ್ವಜನಿಕರಿಗೆ ಭಯ ಹುಟ್ಟಿಸುವ ದುಷ್ಕ್ರತ್ಯ ಎಸಗಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 151/2022 ಕಲಂ: 143 R/w 149 IPC & 27 ಆರ್ಮ್ಸ್ ಆ್ಯಕ್ಟ್‌ ನಂತೆ ಪ್ರಕರಣ ದಾಖಲಿಸಲಾಗಿದೆ.
 • ಉಡುಪಿ: ದಿನಾಂಕ: 02/10/2022 ರಂದು ಸುಮಾರು 18:00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಉಡುಪಿಯ ಕೃಷ್ಣಮಠದ ಪಾರ್ಕಿಂಗ್ ಸ್ಥಳದ ಎದುರು ಇರುವ ಖಾಸಗಿ ಸ್ಥಳದಲ್ಲಿ ಜರಗಿದ ದುರ್ಗಾದೌಡ್ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ ರಾಗಿರುವ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹಾಗೂ ಅತಿಥಿಯಾಗಿ ಭಾಗವಹಿಸಿದ ಕಾಜಲ್ ಹಿಂದೂಸ್ಥಾನಿ ಎಂಬವರು ಹಿಂದುಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಿ ಹಿಂದೂಗಳ ಮನೆಯಲ್ಲಿ ಮಾರಕಾಸ್ತ್ರಗಳನ್ನು ಇಟ್ಟು ಪೂಜೆ ಮಾಡಿ ಅದನ್ನು ಬಳಸಬೇಕು ಹಾಗೂ ಸಣ್ಣ ಸಣ್ಣ ಹೆಣ್ಣು ಮಕ್ಕಳನ್ನು ಮುಸ್ಲಿಂ ಸಮುದಾಯದವರು ಲವ್ ಜಿಹಾದ್ ನಡೆಸಿ ವಂಚಿಸುತ್ತಿದ್ದಾರೆ, ಈ ಲವ್ ಜಿಹಾದ್ ಪ್ರಚೋದನೆಯಾಗಿ ಬಾಲಿವುಡ್ ಕಾರ್ಯಚರಿಸುತ್ತಿದೆ ಎಂದು ಒಂದು ಸಮುದಾಯವನ್ನು ದೂಷಿಸಿ, ಇನ್ನೊಂದು ಧರ್ಮದವರೊಂದಿಗೆ ಧ್ವೇಷ ಭಾವನೆ ಹುಟ್ಟುವಂತೆ ಮಾತನಾಡಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 152/2022 ಕಲಂ: 153(ಎ) R/w 34 IPC ಯಂತೆ ಪ್ರಕರಣ ದಾಖಲಿಸಲಾಗಿದೆ.ಇತ್ತೀಚಿನ ನವೀಕರಣ​ : 14-10-2022 10:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080