ಅಭಿಪ್ರಾಯ / ಸಲಹೆಗಳು

ಪತ್ರಿಕಾ ಪ್ರಕಟಣೆ
ಅಪಘಾತ ಪಡಿಸಿ ಮರಣಕ್ಕೆ ಕಾರಣರಾದ ಆರೋಪಿಗಳಿಗೆ ಶಿಕ್ಷೆ

 


1. ದಿನಾಂಕ 28-03-2017 ರಂದು ಸುಮಾರು 19:45 ಗಂಟೆಗೆ KA-20-A-5548 ನೇ ನಂಬ್ರದ ತ್ರಿಚಕ್ರ ಗೂಡ್ಸ್  ವಾಹನವನ್ನು ಅದರ ಚಾಲಕನಾದ ದಿನೇಶ್ ನಾಯಕ್ ಪ್ರಾಯ 45 ವರ್ಷ, ತಂದೆ : ರಾಘವ ನಾಯಕ್ ವಾಸ : ರಾಘವೇಂದ್ರ ನಿಲಯ,  ಇಂದಿರಾ ನಗರ, ವಾರಂಬಳ್ಳಿ ಗ್ರಾಮ, ಉಡುಪಿ ತಾಲೂಕು ಈತನು ಉಡುಪಿ ತಾಲೂಕು ಹಂದಾಡಿ ಗ್ರಾಮದ ಶ್ರೀ ಗಣೇಶ್ ಸ್ಟೋರ್ಸ್ ಎದುರು  ಬಾರ್ಕೂರು-ಬ್ರಹ್ಮಾವರ ಮುಖ್ಯ ಡಾಂಬಾರು ರಸ್ತೆಯಲ್ಲಿ ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆಗೆ ಮಾನವನ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ತೀರ ಎಡಕ್ಕೆ ಚಲಾಯಿಸಿ ರಸ್ತೆ ದಾಟಲು ರಸ್ತೆಯ ಪೂರ್ವ ಬದಿಯ ಮಣ್ಣು ರಸ್ತೆಯಲ್ಲಿ ನಿಂತಿದ್ದ ಗೋಪಾಲ ಎನ್ನುವವರಿಗೆ  ಡಿಕ್ಕಿ ಹೊಡೆದ ಪರಿಣಾಮ ಗೋಪಾಲ ಇವರು ರಸ್ತೆಗೆ ಬಿದ್ದು ತೆಲೆಗೆ ತೀವೃ ಸ್ವರೂಪದ ರಕ್ತ ಗಾಯವಾಗಿ ಮೃತಪಟ್ಟಿದ್ದು ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅ.ಕ್ರ 77/2017 279, 304(A) ಐಪಿಸಿ ರಂತೆ ಪ್ರಕರಣ ದಾಖಲಾಗಿ ನಂತರ ಈ ಪ್ರಕರಣದ ತನಿಖೆಯನ್ನು ಅಂದಿನ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಶ್ರೀಕಾಂತ್.ಕೆ ರವರು ನಡೆಸಿ ಆರೋಪಿ ದಿನೇಶ ನಾಯಕ್  ಈತನ ಮೇಲೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣವು ಉಡುಪಿಯ ಮಾನ್ಯ ಒಂದನೇ ಹೆಚ್ಚುವರಿ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಸಿ.ಸಿ ನಂಬ್ರ 770/2017 ರಲ್ಲಿ ವಿಚಾರಣೆಯಾಗಿ ವಿಚಾರಣೆಯನ್ನು ನಡೆಸಿದ ಒಂದನೇ ಹೆಚ್ಚುವರಿ ಸಿ,ಜೆ ಮತ್ತು ಜೆ,ಎಂ,ಎಫ್,ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಶ್ಯಾಮ್ ಪ್ರಕಾಶ್ ರವರು  ಈ ಪ್ರಕರಣದ ಆರೋಪಿತನಾದ ದಿನೇಶ್ ನಾಯಕ್ ಈತನ ವಿರುದ್ಧದ ಆರೋಪವು ರುಜುವಾತಾಗಿದೆ ಎಂದು ಸದರಿ ಆರೋಪಿತನಿಗೆ 2 ವರ್ಷ 6 ತಿಂಗಳುಗಳ ಕಾರಾಗೃಹ ವಾಸದ ಶಿಕ್ಷೆ ಮತ್ತು 10,000 ರೂಪಾಯಿ ದಂಡ ರೂಪದ ಶಿಕ್ಷೆ ನೀಡಿ ದಿನಾಂಕ  07-10-2022 ರಂದು ತೀರ್ಪನ್ನು ಪ್ರಕಟಿಸಿರುತ್ತಾರೆ.  


2. ದಿನಾಂಕ 18-10-2017  ರಂದು ಬೆಳಿಗ್ಗೆ ಸುಮಾರು 11:30 ಗಂಟೆಗೆ KA-20-4848 ನಂಬ್ರದ 407 ಟೆಂಪೋ  ವಾಹನವನ್ನು ಅದರ ಚಾಲಕನಾದ ಉಮೇಶ ಪೂಜಾರಿ ಪ್ರಾಯ 30 ವರ್ಷ, ತಂದೆ: ದಿವಂಗತ ಗೋಪಾಲ ಪೂಜಾರಿ ವಾಸ : ಹೊಸಂಗಡಿ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಉಡುಪಿ ತಾಲೂಕು  ಹೇರೂರು  ಗ್ರಾಮದ ಮಂಜುನಾಥ ಪೆಟ್ರೋಲ್ ಬಂಕ್ ನಿಂದ ಸ್ವಲ್ಟ  ಮುಂದೆ ರಾ. ಹೆ. 66 ರಲ್ಲಿ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ  ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ಪೂರ್ವ ಬದಿಯಲ್ಲಿ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಸುಮಾರು 60 ವರ್ಷ ಪ್ರಾಯದ ಬಿ.ರಮಾನಂದ ರಾವ್ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸೈಕಲಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬಿ ರಮಾನಂದ ರಾವ್ ರವರು  ಸೈಕಲ್ ಸಮೇತ ರಸ್ತೆಗೆ ಬಿದ್ದು ಮುಖಕ್ಕೆ ಎಡ ಬದಿಯ ಭುಜಕ್ಕೆ, ಬಲಕೈಗೆ, ಬಲಕಾಲಿಗೆ ಹಾಗೂ ತಲೆಗೆ ತೀವೃ ತರಹದ ಗಾಯವಾಗಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 23-10-2017 ರಂದು ನಿಧನ ಹೊಂದಿರುತ್ತಾರೆ ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅ.ಕ್ರ 298/2017 ಕಲಂ 279, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿ ನಂತರ ಈ ಪ್ರಕರಣವನ್ನು ಅಂದಿನ ಬ್ರಹ್ಮಾವರ ವೃತ್ತದ ವೃತ್ತ ನಿರೀಕ್ಷಕರಾದ ಶ್ರೀಕಾಂತ್.ಕೆ ಇವರು ತನಿಖೆಯನ್ನು ನಡೆಸಿ ಆರೋಪಿತನಾದ ಉಮೇಶ ಪೂಜಾರಿ ಈತನ ಮೇಲೆ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.  
ಈ ಪ್ರಕರಣವು ಉಡುಪಿಯ ಮಾನ್ಯ ಒಂದನೇ ಹೆಚ್ಚುವರಿ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಸಿ.ಸಿ ನಂಬ್ರ 1092/2018 ರಲ್ಲಿ ವಿಚಾರಣೆಯಾಗಿ ವಿಚಾರಣೆಯನ್ನು ನಡೆಸಿದ ಒಂದನೇ ಹೆಚ್ಚುವರಿ ಸಿ,ಜೆ ಮತ್ತು ಜೆ,ಎಂ,ಎಫ್,ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಶ್ಯಾಮ್ ಪ್ರಕಾಶ್ ರವರು  ಈ ಪ್ರಕರಣದ ಆರೋಪಿತನಾದ ಉಮೇಶ ಪೂಜಾರಿ  ಈತನ ವಿರುದ್ಧದ ಆರೋಪವು ರುಜುವಾತಾಗಿದೆ ಎಂದು ಸದ್ರಿ ಆರೋಪಿತನಿಗೆ 2 ವರ್ಷ 6 ತಿಂಗಳುಗಳ ಕಾರಾಗೃಹ ವಾಸದ ಶಿಕ್ಷೆ ಮತ್ತು 10,000 ರೂಪಾಯಿ ದಂಡ ರೂಪದ ಶಿಕ್ಷೆ ನೀಡಿ ದಿನಾಂಕ  27-09-2022   ರಂದು ತೀರ್ಪನ್ನು ನೀಡಿ ಆದೇಶವನ್ನು ಮಾಡಿರುತ್ತಾರೆ,

ಇತ್ತೀಚಿನ ನವೀಕರಣ​ : 13-10-2022 05:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080