ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಮಲ್ಪೆ: ಪಿರ್ಯಾದಿದಾರರಾಧ ಸುಂದರ್ ಸೆರಿಗಾರ್ (50) ತಂದೆ:  ಗೋಪಾಲ ಸೆರಿಗಾರ್ ವಾಸ:  ಮನೆ ನಂಬ್ರ 5-1-64 ಎ1 ರಜತಾದ್ರಿ ನಿಲಯ ಬಿ ಬಿ ನಗರ ಕಿನ್ನಿಮೂಲ್ಕಿ 76 ಬಡಗಬೆಟ್ಟು ಇವರು ಪೈಟಿಂಗ್ ಕೆಲಸಕ್ಕೆ ಹೋಗಿದ್ದು, ಸುಂದರ್ ಸೆರಿಗಾರ್ ರವರಿಗೆ ನೆರೆಮನೆಯ ಗಣೇಶ ಎಂಬವರು ದಿನಾಂಕ 12/10/2021 ರಂದು ಸಮಯ ಸುಮಾರು 2:40 ಗಂಟೆ ಗೆ ಪೋನ್ ಮಾಡಿ ಸುಂದರ್ ಸೆರಿಗಾರ್ ರವರ ಅಕ್ಕ ವಸಂತಿ  ರವರಿಗೆ ರಸ್ತೆ ಅಫಘಾತವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಮಿಶನ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದಂತೆ ಸುಂದರ್ ಸೆರಿಗಾರ್ ರವರು ಆಸ್ಪತ್ರೆಗೆ ಹೋಗಿ ಅಕ್ಕ ವಸಂತಿ ಇವರನ್ನು ವಿಚಾರಿಸಿಲಾಗಿ ದಿನಾಂಕ 12/10/2021 ರಂದು ಕನ್ನರಪಾಡಿ ಜಯದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಊಟಕ್ಕೆಂದು ಅಕ್ಕ ವಸಂತಿ ಹಾಗೂ ಅವರ ಮಗಳಾದ ಮಮತಾ ಮತ್ತು ಇಬ್ಬರು ಅಕ್ಕಂದಿರಾದ ಬೇಬಿ, ಲೀಲಾ ಇವರುಗಳು 12:30 ಗಂಟೆಗೆ ನಡೆದುಕೊಂಡು ಹೋಗಿದ್ದು, ಊಟ ಮುಗಿಸಿ ವಾಪಸ್ಸು ಕನ್ನರಪಾಡಿ ದೇವಸ್ಥಾನದಕಡೆಯಿಂದ ಕಿನ್ನಿಮೂಲ್ಕಿ ಮನೆಗೆ ನಡೆದುಕೊಂಡು ಬರುತ್ತಿರುವಾಗ ಸಮಯ ಸಮಾರು 2:30 ಗಂಟೆಗೆ ಕನ್ನರಪಾಡಿ ದೇವಸ್ಥಾನದ ಸ್ವಾಗತಗೋಪುರದ ಬಳಿ KA-19 MD-0862 ನೇ ಕಾರು ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಸಂತಿ ಯವರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಎಡಕಾಲಿನ ಪಾದದ ಮೇಲೆ ಮೂಳೆ ಮುರಿತದ ಒಳಜಖಂ ಆಗಿರುತ್ತದೆ ಈ ಅಫಘಾತಕ್ಕೆ ಕಾರಿನ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೆ ಕಾರಣವಾಗಿದೆ, ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 116/2021 ಕಲಂ: 279, 338 ಐಪಿಸಿ 134(A&B) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಸ್ಟ್ಯಾನ್ಲಿ ಐಮನ್ (73) ತಂದೆ: ದಿ. ಪೆನ್ವೆಲ್ ಐಮನ್ ವಾಸ: ಪದ್ಮನಾಭ ನಗರ, 1 ನೇ ಅಡ್ಡ ರಸ್ತೆ ಡಯಾನ ಥಿಯೇಟರ್ ಬಳಿ, ಕುಕ್ಕಿಕಟ್ಟೆ ಇವರ ಮಗಳಾದ ಕುಮಾರಿ ಶೆರಿನ್ ಐಮನ್ ಎಂಬವರು ದಿನಾಂಕ 11/10/2021 ರಂದು ಮದ್ಯಾಹ್ನ ಸುಮಾರು 2:45 ಗಂಟೆಗೆ ತನ್ನ ಸ್ಕೂಟರ್ ನಂಬ್ರ KA-20 X-9463 ನೇದರಲ್ಲಿ ಎಮ್‌.ಜಿ.ಎಮ್‌.ಕಾಲೇಜಿಗೆ ಹೋಗುವರೇ ಮಣಿಪಾಲ ಉಡುಪಿ ಮಾರ್ಗವಾಗಿ ಬಂದು ಎಮ್‌.ಜಿ.ಎಮ್‌ ಕಾಲೇಜು ಬಳಿ ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ಯುಟರ್ನ್ ನಲ್ಲಿ ಬಲಗಡೆ ತಿರುಗುವರೇ ಇಂಡಿಕೇಟರ್ ಹಾಕಿ ತನ್ನ ಸ್ಕೂಟರನ್ನು ತಿರುಗಿಸುತ್ತಿರುವಾಗ KA-20 MC-7979 ನೇ ಕಾರು ಚಾಲಕ ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕುಮಾರಿ ಶೆರಿನ್ ಐಮನ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆ, ಮುಖಕ್ಕೆ, ಹಾಗೂ ಕಾಲಿಗೆ ಗಾಯವಾಗಿದ್ದು, ಕಾರುಚಾಲಕ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿದ್ದು ಪರೀಕ್ಷಿಸಿದ ವೈದ್ಯರು ಬಲಕಾಲಿಗೆ ಮೂಳೆಮುರಿತ ಉಂಟಾಗಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 116/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಬೇಬಿ, (49) ಗಂಡ: ಸಂಜೀವ ಹಾಂಡ, ವಾಸ: ಕುಕ್ಕಿಕಟ್ಟೆ, ದರ್ಖಾಸು, ನಿಂಜೂರು ಗ್ರಾಮ, ಕಾರ್ಕಳ ಇವರ ಗಂಡ ಸಂಜೀವ ಹಾಂಡ, (59) ರವರು ನಿಂಜೂರು ಗ್ರಾಮದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಉಗ್ರಾಣಿಯಾಗಿ ಕೆಲಸ ಮಾಡಿಕೊಂಡಿದ್ದು, ಪ್ರತಿದಿನ ಸೈಕಲ್‌ನಲ್ಲಿ ಕೆಲಸಕ್ಕೆ  ಹೋಗಿ ಬರುತ್ತಿದ್ದು ದಿನಾಂಕ 12/10/2021 ರಂದು ಮಳೆ ಇದ್ದ ಕಾರಣ ಬಸ್ಸಿನಲ್ಲಿ ಕೆಲಸಕ್ಕೆ ಹೋಗಿದ್ದರು ಸಂಜೆ 7 ಗಂಟೆಯಾದರೂ ಮನೆಗೆ ವಾಪಾಸು ಬಾರದ ಕಾರಣ ಶ್ರೀಮತಿ ಬೇಬಿ ರವರು ಮತ್ತು ಇತರರೊಂದಿಗೆ ಸೇರಿ  ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ. ದಿನಾಂಕ 13/10/2021 ರಂದು ಬೆಳಿಗ್ಗೆ ಮನೆ ಬಳಿ ಹುಡುಕಾಡುತ್ತಿರುವಾಗ ನಿಂಜೂರಿನ ಸ್ಟೀವನ್ ಎಂಬವರು ನಿಂಜೂರು ಕೊಡಮಣಿತ್ತಾಯ ದೈವಸ್ಥಾನದ ದ್ವಾರದ ಬಳಿ ರಸ್ತೆ ಬದಿಯ ತೋಡಿನಲ್ಲಿ ಸಂಜೀವ ಹಾಂಡವರವರು ಕವುಚಿ ಬಿದ್ದ ಸ್ಥಿತಿಯಲ್ಲಿದ್ದುದಾಗಿ ತಿಳಿಸಿದಂತೆ ಸ್ಥಳಕ್ಕೆ ಹೋಗಿ ನೋಡಿದಾಗ ಸಂಜೀವ ಹಾಂಡರವರು ರಸ್ತೆ ಬದಿಯ ತೋಡಿನಲ್ಲಿ ಕವುಚಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿದ್ದು ಪಕ್ಕದಲ್ಲಿ ಅವರ ಛತ್ರಿ ಮತ್ತು ತರಕಾರಿಯ ಪ್ಲಾಸ್ಟಿಕ್ ಕವರ್ ಇದ್ದು ಒಂದು ಚಪ್ಪಲ್  ಮೊಣಕಾಲಿನ ಬಳಿ ಸಿಕ್ಕಿ ಹಾಕಿಕೊಂಡಿದ್ದು ಇನ್ನೊಂದು ಚಪ್ಪಲ್ ಸ್ವಲ್ಪ ದೂರ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿರುತ್ತದೆ. ಸಂಜೀವ ಹಾಂಡರವರು ಕೊಡಮಣಿತ್ತಾಯ ದೈವಸ್ಥಾನದ ಬಳಿ ನೀರಿನ ತೋಡಿಗೆಬಿದ್ದು  ನೀರಿನ ರಭಸಕ್ಕೆ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ, ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 33/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 13-10-2021 06:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080