ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕಾರ್ಕಳ: ಪಿರ್ಯಾದಿ ರಾಧಕೃಷ್ಣ ನಾಯಕ್, ಪ್ರಾಯ: 37 ವರ್ಷ, ತಂದೆ: ರಾಮಚಂದ್ರ ನಾಯಕ್, ವಾಸ: ಹಂಕ್ಯಾರ್ ಬಾಕ್ಯಾರ್ ಮನೆ, ಹಿರ್ಗಾನ ಇವರು ದಿನಾಂಕ: 12.09.2022 ರಂದು ರಾತ್ರಿ ವೇಳೆ ತನ್ನ ಮನೆಯಿಂದ ತನ್ನ ಬಾಡಿಗೆ ಟೆಂಫೋದಲ್ಲಿ ಬಾಡಿಗೆ ನಿಮಿತ್ತ ಹೊರಟು ರಾತ್ರಿ ಸಮಯ ಸುಮಾರು 9:45 ಗಂಟೆಗೆ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ದುಗಂಟ್ರಾಯ ಕ್ರಾಸ್ ಬಳಿ ತಲುಪುವಾಗ ಕಾರ್ಕಳ ಹಿರ್ಗಾನ ರಾಜ್ಯ ಹೆದ್ದಾರಿಯ ತಿರುವಿನ ಬಳಿ ಪಿರ್ಯಾದಿದಾರರ ಎದುರಿನಲ್ಲಿ ಹಿರ್ಗಾನ ಕಡೆಯಿಂದ ಕಾರ್ಕಳ ಕಡೆಗೆ KA01AK3439 ನೇ ನೋಂದಣಿ ಸಂಖ್ಯೆಯ ದುರ್ಗಾಂಬ ಬಸ್ಸನ್ನು ಅದರ ಚಾಲಕ ಗುರುರಾಜ ಎಂಬಾತನು ಅತಿ ವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಸಂತೋಷ್ ನಾಯ್ಕ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ KA01AA2215 ನೇ ನೋಂದಣಿ ಸಂಖ್ಯೆಯ ಮಹೇಂದ್ರ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿಕಪ್ ವಾಹನ ರಸ್ತೆಯಲ್ಲಿ ಜಾರಿಕೊಂಡು ಹೋಗಿ ಕಾರ್ಕಳ ಕಡೆಯಿಂದ  ಹೆಬ್ರಿ ಕಡೆಗೆ ಉದಯ ಶೆಟ್ಟಿ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ KA20EM1638 ನೇ ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರುತ್ತದೆ. ಈ ಅಪಘಾತದಿಂದ ಪಿಕಪ್ ವಾಹನದ ಚಾಲಕ ಸಂತೋಷ್ ನಾಯ್ಕ್ ರವರು ವಾಹನದಿಂದ ಹೊರಕ್ಕೆ ಎಸೆಯಲ್ಪಟ್ಟು ಪೊದೆಯಲ್ಲಿ ಬಿದ್ದಿದ್ದು ಎದೆ ಮತ್ತು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ದ್ವಿಚಕ್ರ ವಾಹನದ ಸವಾರ ಉದಯ ಶೆಟ್ಟಿ ರವರ ಕಾಲಿಗೆ ತರಚಿದ ಗಾಯವಾಗಿರುತ್ತದೆ ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣಾ  ಅಪರಾಧ ಕ್ರಮಾಂಕ  116/2022, ಕಲಂ: 279,337, 304(A) ಐಪಿಸಿ ಯಂತೆ ಪ್ರಕರಣ ಸಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಹೆಬ್ರಿ: ಪಿರ್ಯಾದಿ ಶಾರದಾ 58 ವರ್ಷಗಂಡ: ದಿ ನಾರಾಯಣ ಶೆಟ್ಟಿಗಾರ್ ವಾಸ: ಜನತಾ ಕಾಲೊನಿ ಕೊಂಕಣರ ಬೆಟ್ಟು ಕಬ್ಬಿನಾಲೆ ಇವರ ಗಂಡ ನಾರಾಯಣ ಶೆಟ್ಟಿಗಾರ್ ( 63 ವರ್ಷ) ಇವರು ಸುಮಾರು 20 ವರ್ಷಗಳಿಂದ ಚರ್ಮ ಅಲರ್ಜಿ ಕಾಯಿಲೆಯ ಬಗ್ಗೆ ಬಳಲುತ್ತಿದ್ದು. ಈ ಬಗ್ಗೆ ಅವರಿಗೆ ಮಣಿಪಾಲ ಕೆ.ಎಂ.ಸಿ ಅಸ್ಪತ್ರೆಯನ್ನು ಚಿಕಿತ್ಸೆಯನ್ನು ಮಾಡಿಸಿರುವುದಲ್ಲದೇ ಅವರಿಗೆ ಎಡಕಾಲಿನ ಮೊಣಗಂಟಿನ ಬಳಿ ನೋವು ಉಂಟಾಗಿರುತ್ತದೆ. ಸುಮಾರು ಒಂದೂವರೆ ವರ್ಷಗಳಿಂದ ಅವರ ಮೇಲಿನ ನೋವು ಉಲ್ಬಣಗೊಂಡ ಕಾರಣ ಅವರು ಮಾನಸಿಕ ಖಿನ್ಯತೆಗೆ ಒಳಗಾಗಿ ಈ ದಿನ ದಿನಾಂಕ: 13/09/2022 ರಂದು ಬೆಳಿಗ್ಗೆ 09-45 ಗಂಟೆಯಿಂದ ಬೆಳಿಗ್ಗೆ 10-00 ಗಂಟೆಯ ಮದ್ಯಾವಧಿಯಲ್ಲಿ ಕಬ್ಬಿನಾಲೆ ಗ್ರಾಮದ ಕೊಂಕಣಾರ ಬೆಟ್ಟುವಿನ ಜನತಾ ಕಾಲೋನಿ ಎಂಬಲ್ಲಿ ಮನೆಯ ಪಕ್ಕದಲ್ಲಿರುವ ಚಪ್ಪರದ ಮೇಲಿನ ಎಳವಿಗೆ ನೈಲಾನ್ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ನೇಣು ಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡಿರುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ UDR NO 28/2022 U/s 174 CRPC ಯಂತೆ ಪ್ರಕರಣ ಸಾಖಲಿಸಲಾಗಿದೆ.
  • ಮಲ್ಪೆ: ಪಿರ್ಯಾದಿ  ಯು ರಾಘವೇಂದ್ರ(66) ತಂದೆ: ದಿ/ ಬಾಬು ಮೆಂಡನ್ ವಾಸ: ಮುತ್ತುಶ್ರೀ ,ಕಾನಂಗಿ, ಕೊಡವೂರು ಗ್ರಾಮ ಇವರ  ಮಗಳಾದ ಬೀನಾರಾಣಿ, ಪ್ರಾಯ:34 ವರ್ಷ,ಇವರು 4 ವರ್ಷದಿಂದ ಶಿರ್ವಾದ ಹಿಂದೂ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ  ಕೆಲಸ ಮಾಡಿಕೊಂಡಿದ್ದು , ಬೀನಾರಾಣಿ ಇವರಿಗೆ  ಸುಮಾರು 6 ವರ್ಷಗಳ ಹಿಂದೆ  ಗುಂಡಿಬೈಲು ನಿವಾಸಿ ನಿತ್ಯಾನಂದ ರವರ ಜೊತೆ ಮದುವೆ ಆಗಿದ್ದು , ಮಕ್ಕಳಿರುವುದಿಲ್ಲ. ಬೀನಾರಾಣಿರವರ ಗಂಡ ವಿಪರೀತ ಸಾಲ ಮಾಡಿದ್ದು , ಸಾಲ ತೀರಿಸಲಾಗದೆ ಸುಮಾರು 9 ತಿಂಗಳ ಹಿಂದೆ ಗುಂಡಿಬೈಲುವಿನ ತನ್ನ ಮನೆಯಲ್ಲಿ  ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು , ನಿತ್ಯಾನಂದರವರು ಮಾಡಿದ ಸಾಲದ ಹೊರೆ ಬೀನಾರಾಣಿ ಯವರ ಮೇಲಿದ್ದು , ಅವರಿಗೆ ಬರುತ್ತಿದ್ದ ಕಡಿಮೆ  ಸಂಬಳದಲ್ಲಿ  ಸಾಲ ತೀರಿಸಲಾಗದೆ ತೀವ್ರ ಮನನೊಂದು ಇತ್ತೀಚಿಗೆ  ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದು ,ಅವರನ್ನು ಈ ದಿನ ದಿನಾಂಕ: 13-09-2022 ರಂದು ಮಂಗಳೂರಿನ ದೇರಳಕಟ್ಟೆ ವೈದ್ಯರಲ್ಲಿ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲು ತಯಾರಿ ನಡೆಸಿದ್ದು ,ಈ ದಿನ ದಿನಾಂಕ:13-09-2022ರಂದು  ಬೆಳಿಗ್ಗೆ 8:00 ಗಂಟೆಯಿಂದ 09:45 ಗಂಟೆಯ  ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ಮಗಳು ಬೀನಾರಾಣಿ ಮನೆಯ ಪಶ್ಚಿಮ ಬದಿಯಲ್ಲಿರುವ ರೂಮ್ ನಲ್ಲಿ ಮಾಡಿನ ಜಂತಿಗೆ ನೈಲಾನ್ ಸೀರೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಬೀನಾರಾಣಿಯವರು  ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ  ಠಾಣಾ UDR NO  50/2022 . ಕಲಂ 174 CRPC ಯಂತೆ ಪ್ರಕರಣ ಸಾಖಲಿಸಲಾಗಿದೆ.


ಇತರ ಪ್ರಕರಣಗಳು

  • ಬ್ರಹ್ಮಾವರ: ದಿನಾಂಕ  13.09.2022 ರಂದು 14:45   ಘಂಟೆಗೆ   ಆರೋಪಿತ ಸಂಧೀಪ್ ಪ್ರಾಯ 37 ವರ್ಷ ತಂದೆ, ಬಾಬು ಮೊಗವೀರ  ವಾಸ, ಮದಗದ  ಬಳಿ  ಈತನು ಹಿಲಿಯಾಣ  ಗ್ರಾಮದ ಹಿಲಿಯಾಣ ಜೆಡ್ಡು ಎಂಬಲ್ಲಿ ಸಾರ್ವಜನಿಕ  ಸ್ಥಳದಲ್ಲಿ ಅಕ್ರಮವಾಗಿ ಜನರನ್ನು ಸೇರಿಸಿಕೊಂಡು ಮಟ್ಕಾ ಜುಗಾರಿ ಆಟದ  ಬಗ್ಗೆ  ಹಣ ಸಂಗ್ರಹ ಮಾಡುತ್ತಿರುವಾಗ ಪಿರ್ಯಾದಿ ಶ್ರೀಧರ ನಾಯ್ಕ  ಪಿಎಸ್ಐ   ಶಂಕರನಾರಾಯಣ ಪೊಲೀಸ್  ಠಾಣೆ  ಇವರು  ಖಚಿತ  ಮಾಹಿತಿಯಂತೆ ದಾಳಿ  ನಡೆಯಿಸಿ  ಮಟ್ಕಾ ಸಂಖ್ಯೆ ಬರೆದ ಚೀಟಿ-1, ಬಾಲ್ ಪೆನ್ನು -1  ಹಾಗೂ ಮಟ್ಕಾ  ಜುಗಾರಿ ಆಟದ ಬಗ್ಗೆ ಸಂಗ್ರಹ ಮಾಡಿದ  ನಗದು ಹಣ  ರೂ 680/- ವಶಪಡಿಸಿಕೊಂಡಿರುತ್ತಾರೆ,  ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  88/2022 , ಕಲಂ: 78(I),(III) ಕರ್ನಾಟಕ ಪೊಲೀಸ್‌ಕಾಯ್ದೆ (ತಿದ್ದುಪಡಿ) 2021 ಯಂತೆ ಪ್ರಕರಣ ಸಾಖಲಿಸಲಾಗಿದೆ.  

ಇತ್ತೀಚಿನ ನವೀಕರಣ​ : 13-09-2022 06:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080