ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ರಾಧಕೃಷ್ಣ ನಾಯಕ್ (37), ತಂದೆ: ರಾಮಚಂದ್ರ ನಾಯಕ್, ವಾಸ: ಹಂಕ್ಯಾರ್ ಬಾಕ್ಯಾರ್ ಮನೆ, ಹಿರ್ಗಾನ ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 12/09/2022 ರಂದು ರಾತ್ರಿ ವೇಳೆ ತನ್ನ ಮನೆಯಿಂದ ತನ್ನ ಬಾಡಿಗೆ ಟೆಂಫೋದಲ್ಲಿ ಬಾಡಿಗೆ ನಿಮಿತ್ತ ಹೊರಟು ರಾತ್ರಿ  9:45 ಗಂಟೆಗೆ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ದುಗಂಟ್ರಾಯ ಕ್ರಾಸ್ ಬಳಿ ತಲುಪುವಾಗ ಕಾರ್ಕಳ ಹಿರ್ಗಾನ ರಾಜ್ಯ ಹೆದ್ದಾರಿಯ ತಿರುವಿನ ಬಳಿ ಪಿರ್ಯಾದಿದಾರರ ಎದುರಿನಲ್ಲಿ ಹಿರ್ಗಾನ ಕಡೆಯಿಂದ ಕಾರ್ಕಳ ಕಡೆಗೆ KA-01-AK-3439 ನೇ ನೋಂದಣಿ ಸಂಖ್ಯೆಯ ದುರ್ಗಾಂಬಾ ಬಸ್ಸನ್ನು ಅದರ ಚಾಲಕ ಗುರುರಾಜ ಎಂಬಾತನು ಅತಿ ವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಸಂತೋಷ್ ನಾಯ್ಕ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ KA-01-AA-2215 ನೇ ನೋಂದಣಿ ಸಂಖ್ಯೆಯ ಮಹೇಂದ್ರ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿಕಪ್ ವಾಹನ ರಸ್ತೆಯಲ್ಲಿ ಜಾರಿಕೊಂಡು ಹೋಗಿ ಕಾರ್ಕಳ ಕಡೆಯಿಂದ  ಹೆಬ್ರಿ ಕಡೆಗೆ ಉದಯ ಶೆಟ್ಟಿ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ KA-20-EM-1638 ನೇ ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರುತ್ತದೆ. ಈ ಅಪಘಾತದಿಂದ ಪಿಕಪ್ ವಾಹನದ ಚಾಲಕ ಸಂತೋಷ್ ನಾಯ್ಕ್ ರವರು ವಾಹನದಿಂದ ಹೊರಕ್ಕೆ ಎಸೆಯಲ್ಪಟ್ಟು ಪೊದೆಯಲ್ಲಿ ಬಿದ್ದಿದ್ದು ಎದೆ ಮತ್ತು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ದ್ವಿಚಕ್ರ ವಾಹನದ ಸವಾರ ಉದಯ ಶೆಟ್ಟಿ ರವರ ಕಾಲಿಗೆ ತರಚಿದ ಗಾಯವಾಗಿರುತ್ತದೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 116/2022, ಕಲಂ: 279, 337, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ ನಾಗರಾಜ ಕೆ (35), ತಂದೆ: ಕೊರಗ ಕುಲಾಲ್, ವಾಸ: ರಾಗಿಹಕ್ಲು, ಮೇಲ್ ಹೇರೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 11/09/2022 ರಂದು ಅವರ ಅಳಿಯ ಸಚಿನ್ ಕುಲಾಲ್ ರವರಿಗಾಗಿ  ಅರೆಹೊಳೆ ಬೈಪಾಸ್ ಬಳಿ ಕಾಯುತ್ತ ಕುಳಿತ್ತಿದ್ದಾಗ  ರಾತ್ರಿ 08:45 ಗಂಟೆಗೆ ಸಚಿನ್ ಕುಲಾಲ್ ರವರು ಅವರ ಮೋಟಾರ್ ಸೈಕಲ್ ನಂಬ್ರ KA-20-EY-3174 ನೇದರಲ್ಲಿ ನಾವುಂದ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಂದು ಅರೆಹೊಳೆ ಬೈಪಾಸ್ ಜಂಕ್ಷನ್ ನಲ್ಲಿ ಹೈವೆ ಕ್ರಾಸ್ ಮಾಡಿ ಅರೆಹೊಳೆ ಕಡೆಗೆ ಹೋಗುವ ರಸ್ತೆಯ ಸಮೀಪ ತಲುಪುತ್ತಿದ್ದಂತೆ ರಾಹೆ 66 ರಲ್ಲಿ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ MH-12-QF-7113 ನೇ ಕಾರು ಚಾಲಕನು ಆತನ ಕಾರನ್ನು ಅತೀವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ತೀರಾ ಎಡಭಾಗಕ್ಕೆ ಬಂದು ಸಚಿನ್ ಕುಲಾಲ್ ರವರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಚಿನ್ ಕುಲಾಲ್ ರವರು ಕೆಳಗೆ ಬಿದ್ದು ಸಚಿನ್ ರವರಿಗೆ ತಲೆಗೆ ಪೆಟ್ಟಾಗಿದ್ದು, ಬೆನ್ನಿಗೆ ಮತ್ತು ಬಲಕೈ ಮೊಣಗಂಟಿಗೆ ಗಾಯವಾಗಿರುತ್ತದೆ. ಗಾಯಗೊಂಡ ಸಚಿನ್ ರವರನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ  ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ .  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 181/2022 ಕಲಂ: 279 ,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿದಾರರಾದ ಧನರಾಜ್ (24), ತಂದೆ: ಶೇಖರ ಗೌಡ. ವಾಸ: ಕುತ್ತಾರು, ಕೃಷ್ಣಕೋಡಿ, ಮುನ್ನೂರು, ಮುನ್ನೂರು ಅಂಚೆ, ಮಂಗಳೂರು ತಾಲೂಕು, ದ.ಕ.ಜಿಲ್ಲೆ ಇವರು ಮಂಗಳೂರಿನ ಯಯ್ಯಾಡಿಯಲ್ಲಿ ಲಿಫ್ಟ್ ಸರ್ವಿಸ್ ಮತ್ತು ಇನ್ಟಾಲೇಷನ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 09/09/2022 ರಂದು ಕೆಲಸದ ನಿಮಿತ್ತ ಕಾರ್ಕಳ ತಾಲೂಕು ಇನ್ನಾ ಕಾಂಜರಕಟ್ಟೆಯ ಬ್ರೈಟ್ ಫ್ಲೆಕ್ಸ್ ಕಂಪನಿಗೆ ಬಂದು ಕೆಲಸ ಮುಗಿಸಿ ವಾಪಾಸ್ಸು ಮಂಗಳೂರಿಗೆ KA-20-D-7599  ನೇ ನಂಬ್ರದ ವಿಶಾಲ್ ಹೆಸರಿನ ಬಸ್ಸಿನಲ್ಲಿ ಹಿಂದಿನಿಂದ 3 ನೇ ಸೀಟಿನಲ್ಲಿ ಕುಳಿತು ಹೋಗುತ್ತಾ 18:30 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಮಂಗಳೂರು ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಬಸ್ಸಿನ ಚಾಲಕ ರಮೇಶ್ ಎಂಬುವವರು ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಬಸ್ಸಿನ ಹಿಂಬದಿಯ ಬಲಭಾಗದ ಚಕ್ರ ಒಮ್ಮೆಲೇ ಸ್ಪೋಟಗೊಂಡಿದ್ದರಿಂದ ಪ್ಲಾಟ್‌‌ ಫಾರಂ ಒಡೆದು ಅದರ ಒಂದು ತುಂಡು ಪಿರ್ಯಾದಿದಾರರ ಬಲಕಾಲಿನ ಪಾದಕ್ಕೆ ಬಡಿದು ತೀವ್ರ ಸ್ವರೂಪದ ಗಾಯವಾಗಿರುತ್ತದೆ. ನಂತರ ಗಾಯಾಳುವನ್ನು ಪಡುಬಿದ್ರಿಯ ಸಿದ್ದಿ ವಿನಾಯಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ, ಕಾಲಿನ ಮೂಳೆ ಮುರಿತವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಬಸ್ಸಿನ ಚಾಲಕ ರಮೇಶ್ ಹಾಗೂ ಕಂಡಕ್ಟರ್ ಪ್ರವೀಣ್ ಎಂಬುವರಾಗಿದ್ದು, ಬಸ್ಸಿನ ಚಾಲಕ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ನೀಡುವುದಾಗಿ ಹೇಳಿ ನಂತರ ನಿರಾಕರಿಸಿದ್ದರಿಂದ ದೂರು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 115/2022 ಕಲಂ:  279, 338 ಐಪಿಸಿ ಮತ್ತು ಕಲಂ: 134(ಬಿ) ಜೊತೆಗೆ 187 ಐಎಂವಿ ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಉಡುಪಿ:  ಪಿರ್ಯಾದಿದಾರರಾದ ಕೃಷ್ಣ (28), ತಂದೆ: ಸತೀಶ್ ಮರಕಲ, ವಾಸ: ಮನೆ ನಂ: 1-74 ದುರ್ಗಾನುಗ್ರಹ ಜನತಾ ಕಾಲೋನಿ ಸಾಬ್ರೈಕಟ್ಟೆ ಯೆಡ್ತಾಡಿ ಗ್ರಾಮ ಮತ್ತು ಅಂಚೆ ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 12/09/2022 ರಂದು KA-20-AA-8728ನೇ 407 ಟೆಂಪೋದಲ್ಲಿ ಚಾಲಕರಾದ ಚಿಂಕ್ರ ರವರೊಂದಿಗೆ ಬ್ರಹ್ಮಾವರದ ಕಡೆಗೆ ಕರಾವಳಿ ಫ್ಲೈಓವರ್ ನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಸಮಯ ಮಧ್ಯಾಹ್ನ 11:55 ಗಂಟೆಗೆ ಪುತ್ತೂರು ಗ್ರಾಮದ ಕರಾವಳಿ ಫ್ಲೈ ಓವರ್ ನಿಂದ ಸರ್ವಿಸ್ ರಸ್ತೆ ಸೇರುವ ರಾಷ್ಟ್ರೀಯ ಹೆದ್ದಾರಿ 66ರನ್ನು ತಲುಪುವಾಗ ಹಿಂದುಗಡೆಯಿಂದ ಅಂಬಲಪಾಡಿ ಕಡೆಯಿಂದ ಸಂತೆಕಟ್ಟೆಕಡೆಗೆ KA-20-EB-9239 ಮೋಟಾರು ಸೈಕಲ್ ಸವಾರ ರಕ್ಷಿತ್ ತನ್ನ ಮೋಟಾರು ಸೈಕಲ್ ನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು KA-20-AA-8728ನೇ 407 ಟೆಂಪೋದ ಹಿಂದುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸಮೇತ  ರಸ್ತೆಗೆ ಬಿದ್ದು, ಎರಡೂ ಕೈಗಳ ಮೂಳೆ ಮುರಿತದ ಜಖಂ ಆಗಿ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 71/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಮಟ್ಕಾ ಜುಗಾರಿ ಪ್ರಕರಣ

 • ಬೈಂದೂರು: ದಿನಾಂಕ 10/09/2022 ರಂದು ನಿರಂಜನ ಗೌಡ ಬಿ ಎಸ್, ಪೊಲೀಸ್ ಉಪನಿರೀಕ್ಷಕರು ಬೈಂದೂರು ಪೊಲೀಸ್ ಠಾಣೆ ಇವರಿಗೆ ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಉಪ್ಪುಂದ ಅಂಬಾಗಿಲು ಮಡಿಕಲ್ ರಸ್ತೆಯ 5 ಸೆಂಟ್ ಕಾಲೋನಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಯುತ್ತಿದೆ ಎಂದು ಬಂದ ಮಾಹಿತಿಯಂತೆ ದಾಳಿ ನಡೆಸಿ ಆರೋಪಿತ ಮಣಿಕಂಠ (26) ಎಂಬಾತನನ್ನು ವಶಕ್ಕೆ ಪಡೆದು ಮಟ್ಕಾ ಜುಗಾರಿ ಆಟದಿಂದ ಅಕ್ರಮವಾಗಿ ಸಂಗ್ರಹಿಸಿದ ನಗದು ಹಣ ರೂಪಾಯಿ 1340/- ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 182/2022  ಕಲಂ: 78 (i) & (iii) Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಪಡುಬಿದ್ರಿ: ದಿನಾಂಕ 09/09/2022 ರಂದು ಪುರುಷೋತ್ತಮ ಎ, ಪೊಲೀಸ್ ಉಪನಿರೀಕ್ಷಕರು, ಪಡುಬಿದ್ರಿ ಪೊಲೀಸ್ ಠಾಣೆ ಇವರು ಕಾಪು ತಾಲೂಕು ಹೆಜಮಾಡಿ ಗ್ರಾಮದ ಹೆಜಮಾಡಿ ಕೋಡಿ ಎಂಬಲ್ಲಿ ಸಾಗರ್ ಕರ್ಕೇರ ಎಂಬಾತನು ಯಾವುದೋ ಅಮಲಿನಲ್ಲಿದ್ದವನಂತೆ ತೂರಾಡುತ್ತಿದ್ದು, ಅವನು ಯಾವುದೋ ಮಾದಕ ಪದಾರ್ಥ ಸೇವಿಸಿರಬಹುದು ಎಂಬ ಬಗ್ಗೆ  ಅನುಮಾನಗೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಸಾಗರ್ ಕರ್ಕೇರ  ಗಾಂಜಾ ಸೇವಿಸಿರುವುದಾಗಿ ದಿನಾಂಕ 12/09/2022 ರಂದು ವೈದ್ಯರು ದೃಢ ಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 116/2022 ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಹಿರಿಯಡ್ಕ: ದಿನಾಂಕ 11/09/2022 ರಂದು ಅನಿಲ್ ಬಿ ಎಂ, ಪೊಲೀಸ್‌ ಉಪನಿರೀಕ್ಷಕರು, ಹಿರಿಯಡ್ಕ ಪೊಲೀಸ್ ಠಾಣೆ ಇವರಿಗೆ ಬೊಮ್ಮರಬೆಟ್ಟು ಗ್ರಾಮದ ಹಿರಿಯಡ್ಕ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಪ್ರಜ್ವಲ್(26) ಎಂಬಾತನು ಯಾವುದೋ ಮಾದಕ  ವಸ್ತು ಸೇವಿಸಿರುವ ಸಂಶಯದ ಮೇಲೆ  ವಶಕ್ಕೆ ಪಡೆದು, ಫಾರೆನ್ಸಿಕ್‌ ಮೆಡಿಸಿನ್‌ ವಿಭಾಗ, ಕೆ.ಎಂ.ಸಿ. ಮಣಿಪಾಲ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಲ್ಲಿ, ಆಪಾದಿತನು ನಿಷೇಧಿತ ಗಾಂಜಾ  ಸೇವಿಸಿರುವುದಾಗಿ   ದೃಢಪತ್ರ ನೀಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 48/2022  ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ 11/09/2022 ರಂದು ಗುರುನಾಥ ಬಿ. ಹಾದಿಮನಿ, ಪೊಲೀಸ್ ಉಪನಿರೀಕ್ಷಕರು,ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಬಂದ ಮಾಹಿತಿಯಂತೆ  52 ನೇ ಹೇರೂರು ಗ್ರಾಮದ ಕೆ.ಇ.ಬಿ ಕ್ವಾಟ್ರಸ್‌ ಬಳಿ ತಲುಪಿ ಆರೋಪಿ ರೋಬನ್‌ ಡಿ” ಅಲ್ಮೇಡಾ(21) ಎಂಬಾತನನ್ನು ಪರಿಶೀಲಿಸಿದಾಗ ಆತನ ಬಾಯಿಯಿಂದ ಗಾಂಜಾದಂತಹ ವಾಸನೆ ಬರುತ್ತಿದ್ದು ಆತನನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್‌ ಮೆಡಿಸಿನ್‌ ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು,  ದಿನಾಂಕ 12/09/2022 ರಂದು ವೈಧ್ಯಕೀಯ ವರದಿ ಪಡೆಯಲಾಗಿ ಆರೋಪಿಯು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 149/2022 ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ 11/09/2022 ರಂದು ಗುರುನಾಥ ಬಿ. ಹಾದಿಮನಿ, ಪೊಲೀಸ್ ಉಪನಿರೀಕ್ಷಕರು,ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಬಂದ ಮಾಹಿತಿಯಂತೆ ಉಪ್ಪೂರು ಗ್ರಾಮದ ಕೊಳಲಗಿರಿ ಎಂಬಲ್ಲಿ  ಆರೋಪಿ ಪವಾಡಪ್ಪ ಬಿ. ಬೆಳಗಲ್‌ (28) ಎಂಬಾತನನ್ನು ಪರಿಶೀಲಿಸಿದಾಗ ಆತನ ಬಾಯಿಯಿಂದ ಗಾಂಜಾದಂತಹ ವಾಸನೆ ಬರುತ್ತಿದ್ದು, ಆತನನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್‌ ಮೆಡಿಸಿನ್‌ ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದುದಿನಾಂಕ 12/09/2022 ರಂದು ವೈಧ್ಯಕೀಯ ವರದಿ ಪಡೆಯಲಾಗಿ ಆರೋಪಿಯು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 150/2022 ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ದಿನಾಂಕ 09/09/2022 ರಂದು ಸಕ್ತಿವೇಲು.ಈ, ಪೊಲೀಸ್ ಉಪ ನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ  ಇವರು  ರೌಂಡ್ಸ ಕರ್ತವ್ಯದಲ್ಲಿರುವಾಗ ಕೊಡವೂರು ಗ್ರಾಮದ ತೆಂಕನಿಡಿಯೂರು ಗ್ರಾಮ ಗರಡಿಮಜಲು ನಲ್ಲಿ ಒರ್ವ ವ್ಯಕ್ತಿ ನಿಂತಿದ್ದು,ಆತನನ್ನು  ವಿಚಾರಿಸಲಾಗಿ ಆತನ ತನ್ನ  ಹೆಸರು ಎನ್ ಸ್ಟೀಫನ್(23) ಎಂದು ತಿಳಿಸಿದ್ದು ಆತನ  ಬಾಯಿಯಿಂದ ಗಾಂಜಾದಂತಹ ವಾಸನೆ ಬಂದಿರುತ್ತದೆ. ಅವನು ಗಾಂಜಾದಂತಹ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಅನುಮಾನ ಇದ್ದು ಆತನನ್ನು ವೈದ್ಯಕೀಯ ತಪಾಸಣೆ ಬಗ್ಗೆ  ಪ್ರೊಫೆಸರ್ ಅಂಡ್ ಹೆಡ್  ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದ್ದು,  ಪರೀಕ್ಷಿಸಿದ ವೈದ್ಯರು ಎನ್ ಸ್ಟೀಫನ್  ಗಾಂಜಾ ಸೇವಿಸಿರುವ ಬಗ್ಗೆ ದಿನಾಂಕ 12/09/2022 ರಂದು ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 77/2022  ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-09-2022 09:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080