ಅಭಿಪ್ರಾಯ / ಸಲಹೆಗಳು

13-09-2021 ದೈನಂದಿನ ಅಪರಾಧ ವರದಿ - ಪೂರ್ವಾಹ್ನ

ಹಲ್ಲೆ ಪ್ರಕರಣಗಳು :

  • ಬೈಂದೂರು: ಪಿರ್ಯಾದಿ ಸಹದೇವ ಪ್ರಾಯ: 45 ವರ್ಷ, ತಂದೆ:ತಿಮ್ಮಪ್ಪ ಪೂಜಾರಿ,ವಾಸ; ಕೆಳಮನೆ, ಕರಾವಳಿ ಅನಂತನ ತೋಪ್ಲು, ಶಿರೂರು ಗ್ರಾಮ, ಬೈಂದೂರು ಇವರು ದಿನಾಂಕ:10-09-2021 ರಂದು ಬೈಂದೂರು ಪೇಟೆಗೆ ಬಂದು ವಾಪಸ್ಸು ಮನೆಗೆ ಹೊರಟು ಸಮಯ ಸುಮಾರು ಮಧ್ಯಾಹ್ನ 12:30 ಗಂಟೆಗೆ ಶಿರೂರು ಗ್ರಾಮದ ಕರಾವಳಿ ಅಂಗನವಾಡಿ ಶಾಲೆ ಹತ್ತಿರ ನಡೆದುಕೊಂಡು ಹೋಗುವಾಗ ಪಿರ್ಯಾದಿದಾರರ ಪರಿಚಯದ ಗಣೇಶ ಎಂಬುವವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಪದಗಳಿಂದ ನಿಂದಿಸಿ ಪಿರ್ಯಾದಿದಾರರ ಅಂಗಿಯ ಕಾಲರ್ ನ್ನು ಹಿಡಿದು ಪಿರ್ಯಾದಿದಾರರ ಕೆನ್ನೆಗೆ ಕೈಯಿಂದ ಹೊಡೆದು ದೂಡಿ ಹಾಕಿ ಕಬ್ಬಿಣದ ರಾಡಿನಿಂದ ತಲೆಗೆ ಬಲವಾಗಿ ಹೊಡೆದಿದ್ದುದ್ದಲ್ಲದೇ “ಠಾಣೆಗೆ ದೂರು ನೀಡಿದರೇ ಸೊಂಟ ಮುರಿದು ಮುಗಿಸುತ್ತೇನೆ” ಎಂದು ಪಿರ್ಯಾದಿದಾರರಿಗೆ ಬೆದರಿಕೆ ಹಾಕಿ ಕಬ್ಬಿಣದ ರಾಡ್ ನ್ನು ಬಿಸಾಡಿ ಹೋಗಿದ್ದು ಪಿರ್ಯಾದಿದಾರರಿಗೆ ತಲೆಗೆ ತೀವ್ರವಾದ ಗಾಯ ಉಂಟಾಗಿ ರಕ್ತ ಸುರಿಯುತ್ತಿದ್ದು ಚಿಕಿತ್ಸೆ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಪಿರ್ಯಾದಿದಾರರು ಹೆಂಡತಿ ಪದ್ಮಾವತಿಯೊಂದಿಗೆ ಬಂದು ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ 108 ವಾಹನದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 152-2021 ಕಲಂ:341,504,323,324,506 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.
  • ಮಣಿಪಾಲ: ದಿನಾಂಕ 11/09/2021 ರಂದು ರಾತ್ರಿ 12:15 ಗಂಟೆ ಸಮಯಕ್ಕೆ ಪಿರ್ಯಾದಿ ಅರ್ಜುನ್ (27), ತಂದೆ:ಚಂದ್ರಶೇಖರ್, ಅಗ್ರಹಾರ, ಚಾಂತಾರು, ಬ್ರಹ್ಮಾವರ ಇವರು ತನ್ನ ಸ್ನೇಹಿತರಾದ ಮಿಥುನ್‌‌ ಮತ್ತು ಗಣೇಶ್‌‌‌ರವರೊಂದಿಗೆ ಮಣಿಪಾಲ ವಿದ್ಯಾರತ್ನನಗರದಲ್ಲಿನ ಪ್ಲಾನೆಟ್‌ ಕೆಫೆಗೆ ಹೋಗಿ ಊಟ ಪಾರ್ಸೆಲ್‌‌ ತೆಗೆದುಕೊಂಡು ತಮ್ಮ ಕಾರ್‌‌ ಹತ್ತುತ್ತಿದ್ದ ಸಮಯದಲ್ಲಿ ಆರೋಪಿಗಳಾದ ಸಾಗರ್‌ ಮೆಂಡನ್, ವಿನಿತ್ ಮತ್ತು ಇತರ 8 ಜನ ಯುವಕರು ಪಿರ್ಯಾದಿದಾರರು, ಮಿಥುನ್‌‌ ಮತ್ತು ಗಣೇಶ್‌‌‌ರವರನ್ನು ಅಡ್ಡಗಟ್ಟಿ ಅವಾಚ್ಯ ಪದಗಳಿಂದ ಬೈದು ಪಿರ್ಯಾದಿದಾರರ ಕೆನ್ನೆಗೆ ಹಾಗೂ ಮೈ ಕೈಗೆ ಕೈಯಿಂದ ಹೊಡೆದು ಹಲ್ಲೆ ನಡೆಸಿರುತ್ತಾರೆ. ಆಗ ಮಿಥುನ್‌‌ ಮತ್ತು ಗಣೇಶ್‌ ರವರು ತಪ್ಪಿಸಲು ಹೋದಾಗ ಅವರಿಗೂ ಕೂಡಾ ಹಲ್ಲೆ ನಡೆಸಿ, ಪೊಲೀಸರಿಗೆ ತಿಳಿಸಿದರೆ ಜೀವ ಸಹಿತಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ, ಇನ್ನೊವಾ ಮತ್ತು ಹೋಂಡಾ ಸಿವಿಕ್‌ ಕಾರ್‌‌ಗಳಲ್ಲಿ ಪರಾರಿಯಾಗಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 116/2021 ಕಲಂ: 143,147,341,504,506,323 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣಗಳು :

  • ಕಾರ್ಕಳ : ದಿನಾಂಕ: 11.09.2021 ರಂದು ಸಂಜೆ 06:00 ಗಂಟೆಗೆ ಪಿರ್ಯಾದಿ ಶ್ರೀ ಮತಿ ಆಶಾ, ಪ್ರಾಯ: 45 ವರ್ಷ, ಗಂಡ: ಶ್ರೀನಿವಾಸ, ವಾಸ: ದೇವರ ಕುಂಜ, ಜ್ಯೋತಿ ನಗರ, ಪರಪ್ಪು, ನಕ್ರೆ ಅಂಚೆ, ಕುಕ್ಕುಂದೂರು ಗ್ರಾಮ, ಕಾರ್ಕಳ ಇವರು ಅವರ ಗಂಡ ಶ್ರೀನಿವಾಸ ರವರೊಂದಿಗೆ KA20EG 2990 ನೋಂದಣಿ ಸಂಖ್ಯೆಯ ಯಮಹಾ ಮೋಟಾರ್ ಸೈಕಲ್ ನಲ್ಲಿ ಕಾರ್ಕಳ ಕಸಬಾ ಗ್ರಾಮದ ತಾಲೂಕು ಜಂಕ್ಷನ್ ನಿಂದ ಸ್ವಲ್ಪ ಮುಂದೆ ತಾಲೂಕು ಕಚೇರಿ ರಸ್ತೆಯಲ್ಲಿ ಹೋಗುತ್ತಾ ಎಂಸಿಸಿ ಬ್ಯಾಂಕ್ ಮುಂಭಾಗ ತಲುಪಿದಾಗ ಎದುರುಗಡೆಯಿಂದ ಅಂದರೆ ಅದೇ ದಿಕ್ಕಿನಲ್ಲಿ KA19MB 4876ನೇ ನೊಂದಣಿ ಸಂಖ್ಯೆಯ ಕಾರನ್ನು ಅದರ ಚಾಲಕನು ಬಲ ಬದಿಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು ಯಾವುದೇ ಸೂಚನೆ ನೀಡದೇ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರ ಗಂಡನವರು ಚಲಾಯಿಸಿಕೊಂಡು ಹೋಗುತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಅವರ ಗಂಡ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರ ತಲೆಗೆ ಹಾಗೂ ಅವರ ಗಂಡ ಶ್ರೀನಿವಾಸರವರ ತಲೆಗೆ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 113/2021 ಕಲಂ. 279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ : ಪಿರ್ಯಾದಿ ಶ್ರೀಮತಿ ವಿನಯ, ಪ್ರಾಯ: 51 ವರ್ಷ, ಗಂಡ: ಜನಾರ್ಧನ, ವಾಸ: ಶಾರದ ನಿವಾಸ, ಮೈಪಲ, ಪತ್ತೋಂಜಿಕಟ್ಟೆ, ಕಸಬಾ ಗ್ರಾಮ, ಕಾರ್ಕಳ ಇವರು ಕಾರ್ಕಳದ ನವಮಿ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ತನ್ನ ಜೊತೆ ಕೆಲಸ ಮಾಡುವ ನೆರೆಮನೆಯ ರೇವತಿಯವರೊಂದಿಗೆ ದಿನಾಂಕ 11.09.2021 ರಂದು ರಾತ್ರಿ 20:20 ಗಂಟೆಗೆ ಕೆಲಸ ಮುಗಿಸಿ ಜೊತೆಯಲ್ಲಿ ನಡೆದುಕೊಂಡು ಕಾರ್ಕಳ ಕಸಬಾದ ಪತ್ತೊಂಜಿಕಟ್ಟೆಯ ಬಳಿ ತಲುಪಿದಾಗ ಕಾರ್ಕಳ ಕಡೆಯಿಂದ ಪೊಲ್ಲಾರ್ ಕಡೆಗೆ KA20 EJ 0180 ನಂಬ್ರದ ದ್ವಿಚಕ್ರ ವಾಹನವನ್ನು ಅದರ ಸವಾರ ಪ್ರಸಾದ್ ಶೆಟ್ಟಿ ಎಂಬಾತನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ಎಡಬದಿ ನಡೆದುಕೊಂಡು ಬರುತ್ತಿದ್ದ ಫಿರ್ಯಾದಿದಾರರು ಹಾಗೂ ರೇವತಿರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದು ಫಿರ್ಯಾದಿದಾರರಿಗೆ ಬಲಕಾಲಿನ ಮಣಿಗಂಟಿನ ಬಳಿ ಗುದ್ದಿದ ಗಾಯವಾಗಿದ್ದು, ರೇವತಿರವರಿಗೆ ಎಡಕಾಲಿನ ಕೋಲು ಕಾಲಿಗೆ, ಎಡಕಾಲಿಗೆ ಮೊಣಗಂಟಿನ ಬಳಿ ಒಳಜಖಂ ಆಗಿದ್ದು ತಲೆಯ ಹಿಂಬದಿ ರಕ್ತಗಾಯವಾಗಿರುತ್ತದೆ. ಡಿಕ್ಕಿ ಹೊಡೆದ ಸ್ಕೂಟರ್ ಸವಾರ ಸಹಾ ರಸ್ತೆಗೆಬಿದ್ದು ಗಾಯಗೊಂಡಿದ್ದು ಕೂಡಲೇ ಅಲ್ಲಿ ಸೇರಿದ ಜನರು ಗಾಯಗೊಂಡವರನ್ನು ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದು ಫಿರ್ಯಾದುದಾರರನ್ನು ಹೊರರೋಗಿಯಾಗಿ ಮತ್ತು ರೇವತಿರವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಈ ಅಪಘಾತಕ್ಕೆ ದ್ವಿಚಕ್ರ ವಾಹನ KA20 EJ 0180ನ್ನು ಅದರ ಸವಾರ ಪ್ರಸಾದ್ ಶೆಟ್ಟಿ ಎಂಬಾತನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿದ್ದೆ ಕಾರಣವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 114/2021 ಕಲಂ.: 279,337,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ : ಪಿರ್ಯಾದಿ ನಾರಾಯಣ ಶರ್ಮಾ, ಪ್ರಾಯ: 31 ವರ್ಷ, ತಂದೆ: ಕೃಷ್ಣ ಶರ್ಮಾ, ವಾಸ: ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಪಡುಬಿದ್ರೆ, ನಡ್ಸಾಲು ಗ್ರಾಮ, ಕಾಪು ತಾಲೂಕು ಇವರು ದಿನಾಂಕ 12.09.2021 ರಂದು ಪಿರ್ಯಾದಿದಾರರ ಚಿಕ್ಕಪ್ಪನ ಮಗನ ಮದುವೆಗೆ ಮೂಡಬಿದ್ರೆಗೆ ಹೋಗಿದ್ದು, ಪಿರ್ಯಾದಿದಾರರ ಅತ್ತಿಗೆ ಹಾಗೂ ಮಕ್ಕಳು ಕೂಡ ಮದುವೆಗೆ ಬಂದಿದ್ದು, ಸಮಯ ಸುಮಾರು ರಾತ್ರಿ 08:00 ಗಂಟೆಯ ಹೊತ್ತಿಗೆ ಪಿರ್ಯಾದಿದಾರರ ತಾಯಿ ಶಾಲಿನಿ ಕೆ ಶರ್ಮಾರವರು ಪಿರ್ಯಾದಿದಾರರಿಗೆ ದೂರವಾಣಿ ಮೂಲಕ ಕರೆ ಮಾಡಿ ಪಿರ್ಯಾದಿದಾರರ ಅಣ್ಣ ರವಳನಾಥ ಶರ್ಮಾ ಪ್ರಾಯ: 32 ವರ್ಷ ರವರು ಮನೆಯ ಒಳಗೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೂಡಲೇ ಎಲ್ಲರೂ ಬರುವಂತೆ ತಿಳಿಸಿದ್ದು, ಆ ಕೂಡಲೇ ಪಿರ್ಯಾದಿದಾರರು ಅವರ ಅತ್ತಿಗೆ ಹಾಗೂ ಮಕ್ಕಳೊಂದಿಗೆ ಹೊರಟು ಕಾರ್ಕಳಕ್ಕೆ ಬಂದಿದ್ದು, ಮೃತ ಶರೀರವು ಕಾರ್ಕಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಶವಗಾರದಲ್ಲಿ ಇರುವುದಾಗಿ ತಂದೆ ತಾಯಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಶವಗಾರಕ್ಕೆ ಹೋಗಿ ಮೃತ ದೇಹವನ್ನು ನೋಡಿ ನಂತರ ಠಾಣೆಗೆ ಬಂದು ತನ್ನ ಅಣ್ಣ ರವಳನಾಥ ಶರ್ಮಾರವರು ಯಾವುದೋ ಮಾನಸಿಕ ಖಿನ್ನತೆಯಿಂದ ಮನೆಯ ಒಳಗೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ ಎಂದು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣಾ ಯುಡಿಆರ್‌ ಕ್ರಮಾಂಕ: 28/2021 ಕಲಂ.: 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 13-09-2021 10:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080