ಅಭಿಪ್ರಾಯ / ಸಲಹೆಗಳು

13-09-2021 ದೈನಂದಿನ ಅಪರಾಧ ವರದಿ - ಅಪರಾಹ್ನ

ಅಪಘಾತ ಪ್ರಕರಣ :

  • ಹಿರಿಯಡಕ : ಪಿಯಾಧಿ ಹೆಚ್ ಆರ್ ವಿಶ್ವನಾಥ ಆಚಾರ್ಯ ತಂದೆ: ರಾಜೀವ ಆಚಾರ್ಯ ವಾಸ:ರಾಜ್ ಕಮಲ್ ನಿವಾಸ ಮುತ್ತೂರು ಕ್ರಾಸ್ ರೋಡ್ ಬೊಮ್ಮರಬೆಟ್ಟು ಗ್ರಾಮ ಇವರು ದಿನಾಂಕ 12/09/2021 ರಂದು ತನ್ನ ಬಾಬ್ತು ಮೋಟಾರ್ ಸೈಕಲ್ ಗೆ ಪೆಟ್ರೋಲ್ ಹಾಕಲು ಕೋಟ್ನಾಕಟ್ಟೆಯ ಪೆಟ್ರೋಲ್ ಬಂಕ್ ಗೆ ಸ್ಕೂಟರ ನಲ್ಲಿ ಹೋಗುತ್ತಿದ್ದಾಗ ಸಮಯ ಸುಮಾರು ಮದ್ಯಾಹ್ನ 12:00 ಗಂಟೆಗೆ ತನ್ನ ಎದುರಿನಿಂದ ಅಂದರೆ ಹಿರಿಯಡಕದಿಂದ - ಗುಡ್ಡೆಯಂಗಡಿ ಕಡೆಗೆ ಒಂದು ಸ್ಕೂಟರ್ನಲ್ಲಿ ಇಬ್ಬರು ಇಬ್ಬರು ಹೋಗುತ್ತಿದ್ದು, ಪೆಟ್ರೋಲ್ ಬಂಕ್ ಎದುರುಗಡೆ ಹೋಗುತ್ತಿದ್ದಾಗ ಸ್ಕೂಟರ್ ಸವಾರನು ಸ್ಕೂಟರನ್ನು ವೇಗವಾಗಿ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎದುರಿನಿಂದ ಒಂದು ವಾಹನ ಬರುತ್ತಿರುವುದನ್ನು ಕಂಡು ತನ್ನ ಸ್ಕೂಟರನ್ನು ಒಮ್ಮೆಲೆ ಎಡಕ್ಕೆ ತಿರುಗಿಸಿದಾಗ ಸ್ಕೂಟರ್ ಆತನ ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ಸವಾರ ಹಾಗೂ ಸಹ ಸವಾರರು ರಸ್ತೆಗೆ ಬಿದ್ದಿರುತ್ತಾರೆ. ಬಿದ್ದ ಪರಿಣಾಮ ಸವಾರನಿಗೆ ಮೈಕೈಗೆ ತರಚಿದ ಗಾಯವಾಗಿದ್ದು ಸಹ ಸವಾರನಿಗೆ ತಲೆಗೆ ಹಾಗೂ ಎದೆಗೆ ತೀವ್ರ ತರಹದ ರಕ್ತ ಗಾಯವಾಗಿರುತ್ತದೆ. ಅವರು ಸವಾರಿ ಮಾಡಿಕೊಂಡಿದ್ದ ಸ್ಕೂಟರ್ ನಂಬ್ರ MH03 CW 3784 ಆಗಿರುತ್ತದೆ. ಗಾಯಗೊಂಡವರನ್ನು 108 ಅಂಬ್ಯುಲೆನ್ಸ ನಲ್ಲಿ ಚಿಕಿತ್ಸೆಗೆ ಕೆಎಂಸಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ. ಈ ಅಪಘಾತಕ್ಕೆ MH03 CW3784ನೇ ಸ್ಕೂಟರ್ ಸವಾರ ಸನ್ನಿ ಎಂಬುವರ ಅತೀ ವೇಗ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಹಿರಿಯಡಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 54/2021 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಗಂಗೊಳ್ಳಿ : ಪಿರ್ಯಾದಿ ವಿಶ್ವನಾಥ ಶ್ಯಾನ್‌ಭಾಗ್‌ ಪ್ರಾಯ 40 ವರ್ಷ ತಂದೆ: ಶೇಷಗಿರಿ ಶ್ಯಾನ್‌ಭಾಗ್‌ ವಾಸ: ಶಿವದರ್ಶನ ಕೆಳಪೇಟೆ ಮರವಂತೆ ಗ್ರಾಮ ಬೈಂದೂರು ಇವರು ದಿನಾಂಕ 12.09.2021ರಂದು ಎಲೆಕ್ಟ್ರೀಷಿಯನ್‌ ಕೆಲಸದ ಬಗ್ಗೆ ಮರವಂತೆಗೆ ಹೋಗಿದ್ದು ಕೆಲಸ ಮುಗಿಸಿ ತನ್ನ ಬಾಬ್ತು ಮೋಟಾರ್‌ಸೈಕಲ್‌KA 20 EH 9017ನೇದನ್ನು ಚಲಾಯಿಸಿಕೊಂಡು ನಾವುಂದ ಕಡೆಯಿಂದ ಮರವಂತೆ ಕಡೆಗೆ ರಾ.ಹೆ 66ರಲ್ಲಿ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ರಸ್ತೆಯ ಎಡಬದಿಯಲ್ಲಿ ಬೈಕನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ 19:45 ಗಂಟೆಗೆ ನಾವುಂದ ಕಡೆಯಿಂದ ತ್ರಾಸಿ ಕಡೆಗೆ KA-03 NE 8147ನೇ ಕಾರು ಚಾಲಕನು ತನ್ನ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಮೂಳೆಗೆ ಜಕಂ ಉಂಟಾಗಿದ್ದು ಹಾಗೂ ತಲೆಗೆ, ಕೈಕಾಲಿಗೆ ತರಚಿದ ಗಾಯಾವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 81/2021 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಲಲಾಗಿದೆ.

ಕಳವು ಪ್ರಕರಣ :

  • ಕೋಟ : ಪಿರ್ಯಾದಿ ಮೊಹಮ್ಮದ್‌ ಇಕ್ಬಾಲ್‌, ಪ್ರಾಯ: 43 ವರ್ಷ, ತಂದೆ:  ಅಬ್ದುಲ್‌ ಕರೀಂ ಸಾಹೇಬ್‌, ವಾಸ: 2-91/1, ಎ.ಕೆ.ಮಂಜಿಲ್‌, ಮಕ್ಕಿದಂಡೆ, ಚೇಂಪಿ. ಗುಂಡ್ಮಿ ಗ್ರಾಮ, ಸಾಸ್ತಾನ ಪೋಸ್ಟ್‌, ಬ್ರಹ್ಮಾವರ ಇವರು ಪ್ರತಿ ದಿನ ಸಾಲಿಗ್ರಾಮದ ಗೆಂಡೆಕೆರೆ ಮದ್ರಸಾಕ್ಕೆ ನಮಾಜ ಮಾಡಲು ಹೋಗುತ್ತಿದ್ದು, ದಿನಾಂಕ 11-09-2021 ರಂದು ಮಧ್ಯಾಹ್ನ ಎಂದಿನಂತೆ ಗೆಂಡೆಕೆರೆ ಮದ್ರಾಸಕ್ಕೆ ನಮಾಜ ಮಾಡಲು ಬಾಬ್ತು ಯಮಹಾ ಕಂಪನಿಯ ಪ್ಯಾಸಿನೋ ಸ್ಕೂಟಿ ನಂಬ್ರ KA 20 EP 0109ನೇದರಲ್ಲಿ ಹೊರಟು 13-05 ಘಂಟೆಗೆ ಮದ್ರಸಾ ತಲುಪಿ ಮದ್ರಸಾ ಎದುರು ಸ್ಕೂಟಿಯನ್ನು ಇಟ್ಟು ಅಲ್ಲಿಯೇ ಇದ್ದ ದಂಡೆಯ ಮೇಲೆ ಹೆಲ್ಮೆಟ್‌ ಇಟ್ಟುಕೊಂಡು ಮದ್ರಸಾದ ಒಳಗೆ ಹೋಗಿ ನಮಾಜ ಮಾಡಿ ಮಧ್ಯಾಹ್ನ 13-15 ಘಂಟೆ ಸುಮಾರಿಗೆ ಮದ್ರಸಾದಿಂದ ಹೊರಗಡೆ ಬಂದು ನೋಡುವಾಗ ಇಟ್ಟ ಸ್ಥಳದಲ್ಲಿ ಸ್ಕೂಟಿ ಇಲ್ಲದೆ ಇದ್ದು, ಸ್ಕೂಟಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವುದು ಕಂಡು ಬಂದಿರುತ್ತದೆ. ಸದ್ರಿ ಸ್ಕೂಟಿಯ ಅಂದಾಜು ಮೌಲ್ಯ 70,000/- ರೂಪಾಯಿ ಆಗಬಹುದಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 162/2021 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 13-09-2021 06:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080