ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿಯಾ೯ದಿದಾರರಾದ ಮನೀಷ್‌ (26) ತಂದೆ:ಗೋಪಾಲ್‌ ಬಂಗೇರಾ ವಾಸ:ಮೆಲ್ದಡ್ಡು ಮನೆ, ಸೂಡ ಗ್ರಾಮ,  ಕಾಕ೯ಳ ತಾಲೂಕು, ಉಡುಪಿ ಇವರು ದಿನಾಂಕ 12/08/2022 ರಂದು ತನ್ನ ಮೋಟಾರ್‌ ಸೈಕಲ್‌ ನಂಬ್ರ ಕೆಎ-20 ಇಎಸ್-‌ 7953 ನೇಯದರಲ್ಲಿ ಶಿರ್ವ ಕಟಪಾಡಿ ರಸ್ತೆಯಲ್ಲಿ ಶಿವಾ೯ ಕಡೆಯಿಂದ  ಕಟಪಾಡಿ ಕಡೆಗೆ  ಹೋಗುತ್ತಿರುವಾಗ  ಸಮಯ ಸುಮಾರು 10:15 ಗಂಟೆಗೆ ಮೂಡಬೆಟ್ಟು ಗ್ರಾಮದ   ಅಚ್ಚಡ  ಕ್ರಾಸ್‌ ಬಳಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಪಿಯಾ೯ದಿದಾರರ ಹಿಂದಿನಿಂದ  ಪಿಲೀಕ್ಸ್‌ ಡಿಸೋಜಾ ರವರು ತನ್ನ ಕೆಎ-20-ಎಂಡಿ-6831 ಟೊಯಾಟೋ ಅಬ೯ನ್‌ ಕ್ರೂಸರ್‌ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮನೀಷ್‌ ರವರ ಮೋಟಾರ್‌ ಸೈಕಲ್ಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಪರಿಣಾಮ ಿವರು ಮೋಟಾರ್‌ ಸೈಕಲ್‌ ಸಹಿತ ರಸ್ತೆಗೆ ಬಿದ್ದು,  ಬಲ ಅಂಗೈಗೆ, ಬಲ ಕೈ ಮೊಣಗಂಟಿನ ಬಳಿ,  ಬಲ ಭುಜದ ಬಳಿ, ಬಲಕಾಲಿನ  ಮಣಿಗಂಟಿನ ಬಳಿ, ಎರಡು ಕಾಲುಗಳ ಬೆರಳುಗಳಿಗೆ ತರಚಿದ ಗಾಯವಾಗಿದ್ದು, ಧರಿಸಿದ್ದ ರೈನ್‌ ಕೋಟ್‌ ಕೂಡ ಹರಿದು ಹೋಗಿರುತ್ತದೆ. ಮನೀಷ್‌ ರವರು ಚಿಕಿತ್ಸೆ ಪಡೆದು ಠಾಣೆಗೆ ಬಂದು ದೂರು ನೀಡುವಾಗ ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 85/2022 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ಮೋಹನ ದಾಸ್ ಹೆಗ್ಡೆ (56) ತಂದೆ: ವೆಂಕಟಕೃಷ್ಣ ಹೆಗ್ಡೆ ವಾಸ: ಇಳಲಿ ಆಜ್ರಿ  ಕುಂದಾಪುರ ತಾಲೂಕು ಉಡುಪಿ ಇವರು ದಿನಾಂಕ 12/08/2022 ರಂದು ತನ್ನ ಮಗನ KA-20 ET-8539 ನೇ ಮೋಟಾರ್ ಸೈಕಲ್ ನಲ್ಲಿ  ತನ್ನ ತಮ್ಮನಾದ  ಮಾದವ ಹೆಗ್ಡೆಯವರನ್ನು ಕುಳ್ಳಿರಿಸಿಕೊಂಡು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಜ್ರಿ ಕಡೆಯಿಂದ ಕೊಲ್ಲೂರು ಕಡೆಗೆ  ಚಲಾಯಿಸಿಕೊಂಡು ಹೋಗುತ್ತಾ 12:00 ಗಂಟೆಗೆ ಜಡ್ಕಲ್ ಗ್ರಾಮದ ರಾಜ್ಯ ಹೆದ್ದಾರಿ  ಜಡ್ಕಲ್ ಸೇತುವೆ ಸಮೀಪ ತಲುಪಿದಾಗ ಮೋಹನ ದಾಸ್ ಹೆಗ್ಡೆ ಇವರ  ಸ್ಕೂಟರ್ ಹಿಂಬದಿಯಿಂದ ಚತ್ತೂರು ಕಡೆಯಿಂದ ಕೊಲ್ಲೂರು ಕಡೆಗೆ ಆರೋಪಿ ರಾಮಚಂದ್ರ ತನ್ನ KA-19 F-3198 ನೇ KSRTC BUS ನು ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ಮೋಹನ ದಾಸ್ ಹೆಗ್ಡೆ ರವರ  ಮೋಟಾರ್ ಸೈಕಲ್ ನು  ಓವರ್ ಟೆಕ್ ಮಾಡುವ ಭರದಲ್ಲಿ  ಎಡಬದಿಗೆ ಚಲಾಯಿಸಿ   ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ  ಹೊಡೆದ ಪರಿಣಾಮ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು  ಮೋಹನ ದಾಸ್ ಹೆಗ್ಡೆ ಇವರಿಗೆ  ಬಲಕಣ್ಣಿನ ಉಬ್ಬಿನ ಬಳಿ  ಸಣ್ಣಪುಟ್ಟ ಗಾಯವಾಗಿದ್ದು  ಸ್ಕೂಟರ್ ಸಹ ಸವಾರ  ಮಾದವರಿಗೆ ಬಲಕಾಲಿನ ಕೆಳಬಾಗದಲ್ಲಿ ಚರ್ಮ ಸುಲಿದ ರಕ್ತ ಗಾಯ ಮತ್ತು ತಲೆಯ ಹಿಂಬಾಗಕ್ಕೆ  ರಕ್ತಗಾಯವಾಗಿರುತ್ತದೆ. ಗಾಯಾಳು ಮಾದವ ಹೆಗ್ಡೆಯವರು ಒಳರೋಗಿ ಮಣಿಪಾಲ ಕೆ. ಎಮ್ .ಸಿ ಆಸ್ಪತ್ರೆಗೆ ದಾಖಸಿರರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 38/2022 ಕಲಂ: 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 12/08/2022 ರಂದು ಸಮಯ ಸುಮಾರು 18:00 ಗಂಟೆಗೆ,  ಕುಂದಾಪುರ ತಾಲೂಕು, ಕೋಟೇಶ್ವರ ಗ್ರಾಮದ  ಕಟ್ಕೇರಿ ಅರಗ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ, ಹಾಲಾಡಿ – ಕೋಟೇಶ್ವರ ರಸ್ತೆಯಲ್ಲಿ ಆಪಾದಿತ ಆನಂದ ಮೊಗವೀರ ಎಂಬುವರು ಅವರ ಹೆಂಡತಿ ಮನೆಯಾದ ನೈಲಾಡಿ ಕಡೆಯಿಂದ ಕೋಡಿ ಕಡೆಗೆ KA-20- EK -4770 ನೇ ಬೈಕ್ ನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು  ಬರುತ್ತಿರುವಾಗ, ರಸ್ತೆಗೆ ಅಡ್ಡ ಬಂದ ನಾಯಿಯನ್ನು  ನೋಡಿ ಒಮ್ಮೇಲೆ ಬ್ರೇಕ ಹಾಕಿದ ಪರಿಣಾಮ  ಬೈಕ್  ಸವಾರ ಆನಂದ ರವರು ಬೈಕ್  ಸಮೇತ ರಸ್ತೆಗೆ ಬಿದ್ದ ಪರಿಣಾಮ  ಅವರ ತಲೆಯ ಹಿಂಭಾಗಕ್ಕೆ ರಕ್ತ ಗಾಯವಾಗಿ ಒಳಜಖಂ ಉಂಟಾಗಿದ್ದು ಸದ್ರಿ ರವರನ್ನು ಪಿರ್ಯಾದಿದಾರರಾದ ಶ್ರೀಕಾಂತ್‌ (30)  ತಂದೆ ಚಂದ್ರ ಮೊಗವೀರ ವಾಸ: ಹ್ಯಾಗುಳಿ ದೇವಸ್ಥಾನ ಹತ್ತಿರ ಕೋಡಿ  ಗ್ರಾಮ, ಕುಂದಾಪುರ ಇವರು ಹಾಗೂ ಸಾರ್ವಜನಿಕರು ಸೇರಿಕೊಂಡು  ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು  ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ  ಆಸ್ಪತ್ರೆಗೆ  ದಾಖಲಿಸಿರುವುದಾಗಿದೆ. ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 90/2022 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಾಧಕ ವಸ್ತು ಸೇವನೆ ಪ್ರಕರಣ

  • ಶಿವಾ: ದಿನಾಂಕ 10/08/2022 ರಂದು ಬೆಳಗ್ಗೆ 10:15   ಗಂಟೆಗೆ ಕಾಪು ತಾಲೂಕು,  ಶಿರ್ವಾ ಗ್ರಾಮದ ಸೊರ್ಕಳದ ಬಳಿ ರಿವನ್ ರೈ ಯಾವುದೋ ಮಾದಕ ವಸ್ತುವನ್ನು ಸೇವಿಸಿ ನಶೆಯಲ್ಲಿ ಇದ್ದು, ಸದ್ರಿ ವ್ಯಕ್ತಿಯನ್ನು  ರಾಘವೇಂದ್ರ ಸಿ. ಪಿಎಸ್‌ಐ, ಶಿರ್ವ ಪೊಲೀಸ್‌ ಠಾಣೆ ಇವರು ವಶಕ್ಕೆ ಪಡೆದು  ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಪಾದಿತ ರಿವನ್ ರೈ ಪ್ರಾಯ:30 ವರ್ಷ ತಂದೆ: ರಾಜು ರೈ ವಾಸ: ಇರ್ಮಿಜಿ ಚರ್ಚ ಹತ್ತಿರ ಸೊರ್ಕಳ ಶಿರ್ವಾ ಗ್ರಾಮ ಕಾಪು ತಾಲೂಕು ಉಡುಪಿ ಇತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ ಬಂದಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 52/2022, ಕಲಂ 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಸ್ಟೀಫನ್‌ ಮೆಂಡೋನ್ಸ್‌ (41), ತಂದೆ: ದಿ| ಜಾನ್‌ ಮೆಂಡೋನ್ಸ್‌, ವಾಸ: ಬೆಳ್ಮಾರ್‌, ಆರೂರು ಗ್ರಾಮ, ಬ್ರಹ್ಮಾವರ ಇವರ ಸಂಬಂಧಿ ಡಾಲಿ ಡಿ ಅಲ್ಮೇಡಾ , (31) ಎಂಬವರು ಸುಮಾರು ಐದು ವರ್ಷಗಳ ಹಿಂದೆ ಮದುವೆಯಾಗಿದ್ದು,, ಅವರಿಗೂ ಹಾಗೂ ಅವರ ಗಂಡನ ನಡುವೆ ಯಾವುದೊ ಭಿನ್ನಾಭಿಪ್ರಾಯದಿಂದ ಕಳೆದ ಮೂರು ವರ್ಷಗಳಿಂದ ಗಂಡನನ್ನು ಬಿಟ್ಟು ಅಂಗಡಿಬೆಟ್ಟುವಿನಲ್ಲಿರುವ ತಾಯಿ ಮನೆಗೆ ಬಂದು ಒಬ್ಬರೇ ಮನೆಯಲ್ಲಿದ್ದು, ಹೈನುಗಾರಿಕೆ ಮಾಡಿ ಜೀವನ ನಡೆಸಿಕೊಂಡಿರುವುದಾಗಿದೆ. ಅವರು ಒಬ್ಬಂಟಿಯಾಗಿ ಮನೆಯಲ್ಲಿದ್ದು ಹಾಗೂ ಅವರಿಗೆ ತಲೆನೋವು ಕಾಣಿಸಿಕೊಂಡಿದ್ದರಿಂದ ಮನನೊಂದು ಜೀವನದಲ್ಲಿ ಜೀಗುಪ್ಸೆಗೊಂಡು ದಿನಾಂಕ 12/08/2022 ರಂದು ರಾತ್ರಿ 9:30 ಗಂಟೆಯಿಂದ ದಿನಾಂಕ 13/08/2022 ರಂದು ಬೆಳಿಗ್ಗೆ 05:15 ಗಂಟೆಯ ಮಧ್ಯಾವಧಿಯಲ್ಲಿ  ತಾನು ವಾಸವಾಗಿರುವ ಮನೆಯ ಹಾಲ್‌ನ ಫ್ಯಾನ್‌ಗೆ ನೈಲಾನ್‌ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 37/2022 ಕಲಂ 174  ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೋಟ: ಫಿರ್ಯಾದಿದಾರರಾದ ಪ್ರೇಮಾ ವಿ ಶೆಟ್ಟಿ (68) ಗಂಡ:  ವಿಶ್ವನಾಥ ಶೆಟ್ಟಿ ವಾಸ:  ಅರೆಕಲ್ಲು ಮನೆ ಕೆದೂರು ಹೌಸ್ ಕೆದೂರು ಗ್ರಾಮ ಕುಂದಾಪುರ ಇವರು ಸುಮಾರು 2 ವರ್ಷಗಳಿಂದ ತಂಗಿ ಮನೆಯಾದ ಕೆದೂರಿನಲ್ಲಿ ವಾಸ್ತವ್ಯ ಇದ್ದು  ದಿನಾಂಕ 11/08/2022 ರಂದು ರಾತ್ರಿ 10.00 ಗಂಟೆಗೆ  ತಂಗಿಯ ಮನೆಯಲ್ಲಿ ಇರುವಾಗ ಪ್ರೇಮಾ ವಿ ಶೆಟ್ಟಿ ರವರ ಮಗ ಅನಿಲ್ ಶೆಟ್ಟಿ ತಂಗಿಯ ಮನೆಗೆ ಅಕ್ರಮ ಪ್ರವೇಶ ಮಾಡಿ  ನೀನು ಯಾಕೆ ನನ್ನ ಮೇಲೆ  ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದು  ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು  ನಿನ್ನನ್ನು ಸಾಯಿಸದೇ  ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಪ್ರೇಮಾ ವಿ ಶೆಟ್ಟಿ ರವರನ್ನು ಕೈಯಿಂದ ದೂಡಿ ಹಲ್ಲೆ ಮಾಡಿರುತ್ತಾರೆ. ಆರೋಪಿಯು ಸುಮಾರು 15 ವರ್ಷಗಳಿಂದ ಪ್ರೇಮಾ ವಿ ಶೆಟ್ಟಿ ರವರ ಬಳಿಯಲ್ಲಿ ಜಾಗದ ರೆಕಾರ್ಡ್ಸ ನ್ನು ಕೇಳುತ್ತಿದ್ದು ಇದನ್ನು ನೀಡದೇ  ಇರುವುದೇ ಈ ಕೃತ್ಯಕ್ಕೆ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 131/2022 ಕಲಂ: 448.323.504.506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ಪ್ರವೀಣ (24) ತಂದೆ: ರಾಮಾಚಾರಿ ವಾಸ: ಕಲ್ಯಾಣಿಗುಡ್ಡೆ ಕೊಲ್ಲೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 11/08/2022 ರಂದು ಸಂಜೆ 4:00 ಗಂಟೆಗೆ  ಜಗದೀಶ ರವರ ಮಗನನ್ನು   ಕಾರಿನಲ್ಲಿ ಕೊಲ್ಲೂರು ಪ್ರಾಥಮಿಕ ಶಾಲೆಯಿಂದ ಕರೆತರಲು ಹೋದಾಗ ಆರೋಪಿ  ವಿನೋದ್ ಹೆಬ್ಬಾರ್  ಎಂಬುವನು KA-20 MD-7425 ನೇ ಕಾರಿನಲ್ಲಿ ಬಂದು ಗುರಾಯಿಸಿ  ಇವರಿಗೆ ಅವಾಚ್ಯವಾಗಿ ಬೈದು ಗಾಡಿಯನ್ನು ಬದಿಗೆ ಹಾಕು ಎಂದು ಹೋಗಿರುತ್ತಾನೆ, ಬಳಿಕ ಸಂಜೆ 4:30 ಗಂಟೆಗೆ ಪ್ರವೀಣ ರವರ ಮೊಬೈಲ್ ಗೆ  ಕರೆ ಮಾಡಿ ಬಸ್ ನಿಲ್ದಾಣಕ್ಕೆ ಬಾ ಎಂದು  ಕರೆದಿದ್ದು  ಸಂಜೆ 7:15 ಗಂಟೆಗೆ ಪಿರ್ಯಾದಿದಾರರು ಜಗದೀಶರವರೊಂದಿಗೆ ಕೊಲ್ಲೂರು ಟ್ಯಾಕ್ಸಿ ನಿಲ್ದಾಣ ಹಿಂಬದಿ ಇದ್ದಾಗ  ವಿನೋದ್ ಹೆಬ್ಬಾರ್ ಎಂಬುವನು ಸಂದೀಪ್ ನೊಂದಿಗೆ KA-20 MD-7425 ನೇ ಕಾರಿನಲ್ಲಿ  ಮತ್ತು ಚಂದ್ರ ಶೆಟ್ಟಿ ಎಂಬುವನು ಇನ್ನೊಂದು ಕಾರಿನಲ್ಲಿ ಟ್ಯಾಕ್ಸಿ ನಿಲ್ದಾಣಕ್ಕೆ ಬಂದು ಪಿರ್ಯಾದಿದಾರರಿಗೆ ಆರೋಪಿ ವಿನೋದ್ ಹೆಬ್ಬಾರ್ ಯವರು ಅವಾಚ್ಯ ಶಬ್ದಗಳಿಂದ ಬೈದು ಕಾಲಿನಿಂದ ತುಳಿದು ಚಾಕುವಿನಿಂದ ಬಲ ಕಿವಿಯ ಕೆಳಬಾಗಕ್ಕೆ ಇರಿದು  ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು  ಬಲವಂತವಾಗಿ ಎಳೆದುಕೊಂಡು ನೀನು ಠಾಣೆಗೆ ದೂರನ್ನು  ಕೊಟ್ಟರೇ  ಸಂದೀಪ್ ಯಾರೆಂದು ಗೊತ್ತಿಲ್ವ  ಅವನ ಮುಖಾಂತರ  ನಿನ್ನ ಮೇಲೆ ಠಾಣೆಯಲ್ಲಿ  ದೂರನ್ನು  ನೀಡುತ್ತೇನೆಂದು  ನಿಂದಿಸಿರುತ್ತಾರೆ. ಆರೋಪಿಗಳಾದ  ಸಂದೀಪ್ ಮತ್ತು ಚಂದ್ರ ಶೆಟ್ಟಿ ರವರುಗಳು ಪ್ರವೀಣ ರವರಿಗೆ  ಹಲ್ಲೆಮಾಡಿ ಅಂಗಿಯನ್ನು  ಹರಿದು ಇವರ ಬಳಿಯಿದ್ದ 6300/-  ಹಣವನ್ನು  ಲಪಟಾಯಿಸಿ ಪರಾರಿಯಾಗಿರುತ್ತಾರೆ. ಪ್ರವೀಣ ರವರು ಚಿಕತ್ಸೆಬಗ್ಗೆ ಕುಂದಾಪುರ ಸರ್ಕಾರಿ ಆಸ್ಪತ್ರೆ ಗೆ ದಾಖಲಾಗಿ  ಚಿಕಿತ್ಸೆ ಪಡೆದು ಠಾಣೆಗೆ ಬಂದು ದೂರು ನೀಡಿರುತ್ತಾರೆ. ಈ ಘಟನೆಗೆ ಕಾರಿಗೆ ಸೈಡ್ ಕೊಡುವ  ವಿಚಾರದಲ್ಲಿ  ನಡೆದ ಬಾಯಿ ಮಾತಿನ ಜಗಳವೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 37/2022 ಕಲಂ: 323, 504, 397 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-08-2022 06:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080