ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕಾಪು: ಪಿರ್ಯಾದಿ ಆದಂ ಬ್ಯಾರಿ (50)  ತಂದೆ:ಪಕೀರ್‌ ಸಾಭ್‌  ವಾಸ:ಹಳೇ ಪೋಸ್ಟ್‌ ಆಪೀಸ್‌ ಬಳಿ,  ಕಟಪಾಡಿ ಇವರು ಕಟಪಾಡಿಯ ಕೆನರಾ ಬ್ಯಾಂಕ್‌ ಬಳಿ ಗುಜರಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು  ದಿನಾಂಕ:11/08/2022 ರಂದು ಪಿರ್ಯಾದಿದಾರರು ತನ್ನ ಅಂಗಡಿಯಲ್ಲಿದ್ದ ಸಮಯ ಸುಮಾರು  ಮಧ್ಯಾಹ್ನ 3:30 ಗಂಟೆಗೆ   ಓವ೯ ವ್ಯಕ್ತಿಯು  ತನ್ನ ಅಂಗಡಿಯ ಮುಂಭಾಗ ಕೆನರಾ ಬ್ಯಾಂಕ್‌  ಕಡೆಯಿಂದ ರಾಹೆ 66 ಉಡುಪಿ-ಮಂಗಳೂರು ರಸ್ತೆಯನ್ನು ದಾಟಿ ಬಳಿಕ  ರಾಹೆ 66 ಮಂಗಳೂರು ಉಡುಪಿ ರಸ್ತೆಯನ್ನು ದಾಟಿ  ರಸ್ತೆಯ ಪಶ್ಚಿಮ ಅಂಚಿನಲ್ಲಿರುವಾಗ  ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕೆ.ಎ-20-ಡಿ-2200  ನೇ ಕಾರು ಚಾಲಕ ಯೋಗೇಂದ್ರ ಎಂಬವರು ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತೀರಾ ಪಶ್ಚಿಮ ಬದಿಗೆ ಬಂದು ರಸ್ತೆಯನ್ನು ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದು   ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯು ಕೆಳಕ್ಕೆ ಬಿದ್ದಿದ್ದು,  ಕೂಡಲೇ ಪಿರ್ಯಾದಿದಾರರು ಹಾಗೂ ಇತರರು ವ್ಯಕ್ತಿ ಬಿದ್ದ ಸ್ಥಳಕ್ಕೆ ಹೋಗಿ ಸದ್ರಿ ವ್ಯಕ್ತಿಯ ತಲೆಗೆ ಪೆಟ್ಟಾಗಿದ್ದು, ಆತನಿಗೆ ಪ್ರಜ್ಞೆ ಇರಲಿಲ್ಲ. ಆತನ ಪರಿಚಯ  ಇರುವುದಿಲ್ಲ. ನಂತರ ಡಿಕ್ಕಿ ಹೊಡೆದ ಕಾರಿನಲ್ಲಿ ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಕಡೆಗೆ ಕಳುಹಿಸಿಕೊಟ್ಟಿದ್ದು, ಗಾಯಾಳುವಿಗೆ ಈ ವರೆಗೆ ಪ್ರಜ್ಞೆ ಬಂದಿರುವುದಿಲ್ಲ.  ಹಾಗೂ ಆತನ ಮನೆಯವರು ಯಾರೆಂದು ತಿಳಿದಿರುವುದಿಲ್ಲ. ಈ ಅಪಘಾತಕ್ಕೆ  ಕೆ.ಎ-20-ಡಿ-2200  ನೇ  ಕಾರು ಚಾಲಕ ಯೋಗೇಂದ್ರನ ಅತೀವೇಗ ಹಾಗೂ ನಿಲ೯ಕ್ಷ್ಯತನದ ಚಾಲನೇಯೇ ಕಾರಣವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ. ಅಪರಾಧ ಕ್ರಮಾಂಕ 84/2022 ಕಲಂ 279 338  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಶಿರ್ವ: ದಿನಾಂಕ : 10/08/2022 ರಂದು ಬೆಳಗ್ಗೆ 09:30  ಗಂಟೆಗೆ ಕಾಪು ತಾಲೂಕು ಕುರ್ಕಾಲು ಗ್ರಾಮದ ಕುರ್ಕಾಲ್ ಬ್ರಿಡ್ಜ್ ಬಳಿ ಆಪಾದಿತನು ಮಾದಕ ವಸ್ತು ಗಾಂಜಾವನ್ನು ಸಿಗರೇಟ್‌ನಲ್ಲಿ ಸೇರಿಸಿ ಸೇದುತ್ತಿದ್ದವನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು,ಆಪಾದಿತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ ಬಂದಿದ್ದು, ಆಪಾದಿತನ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ. ಈ ಬಗ್ಗೆ ರಾಘವೇಂದ್ರ ಸಿ.  (ಕಾ&ಸು) ಪಿಎಸ್‌ಐ, ಶಿರ್ವ ಪೊಲೀಸ್‌ ಠಾಣೆ ರವರು ನೀಡಿದ ದೂರಿನಂತೆ ಅಪರಾಧ ಕ್ರಮಾಂಕ   51/2022, ಕಲಂ 27(b) NDPS Act. ರಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ:  ಫಿರ್ಯಾದಿ ಗೋಪಾಲ.ಎಸ್‌ ಪೂಜಾರಿ, ಪ್ರಾಯ: 69 ವರ್ಷ, ತಂದೆ: ದಿ. ಸದಿಯ ಪೂಜಾರಿ, ವಾಸ: ಜಲಜ ನಿಲಯ, ಹೆರೆಗೋಡು, ಕಟ್‌ಬೆಲ್ತೂರು ಗ್ರಾಮ, ಇವರು  ದಿನಾಂಕ: 12.08.2022 ರಂದು ಮಧ್ಯಾಹ್ನ  13:15 ಗಂಟೆಗೆ ಕುಂದಾಪುರ ತಾಲೂಕು ಕಟ್‌ಬೆಲ್ತೂರು ಗ್ರಾಮದ ಹೆರೆಗೋಡು ಎಂಬಲ್ಲಿರುವ ತನ್ನ ಮನೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿರುವಾಗ ಪಿರ್ಯಾದಿದಾರರ ನೆರೆಕರೆಯವರಾದ  ರವಿ ಪೂಜಾರಿ, ಶಂಕರ ಪೂಜಾರಿ, ಜೈರಾಮ್‌ ಪೂಜಾರಿ, ರಾಧ ಪೂಜಾರ್ತಿ, ಬಚ್ಚಿ ಪೂಜಾರ್ತಿ, ರತ್ನ ಪೂಜಾರ್ತಿ, ಗಿರಿಜಾ ಪೂಜಾರ್ತಿ, ಲಲಿತಾ ಪೂಜಾರ್ತಿರವರು ಸೇರಿಕೊಂಡು ಪಿರ್ಯಾದಿದಾರರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ , ಏನು ಬಹಳ ಹಾರಾಡ್ತಿಯಲ್ಲಾ, ಈ ರಸ್ತೆಯಲ್ಲಿ ಇನ್ನೊಮ್ಮೆ ಓಡಾಡಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 37/2022ಕಲಂ: 341, 504, 506 R.W 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೊಲ್ಲೂರು: ಪಿರ್ಯಾದಿ ಸಂದೀಪ್ (22) ತಂದೆ:  ಶೇಖರ ವಾಸ:  ಬಾಳೆಗದ್ದೆ ಸೂಸೈಟಿ ಗುಡ್ಡೆ ಕೊಲ್ಲೂರು ಗ್ರಾಮ ಬೈಂದೂರು ಇವರು ದಿನಾಂಕ: 11.08.2022 ರಂದು ಸಂಜೆ 4-00 ಗಂಟೆಗೆ ವಿನೋದ್ ಹೆಬ್ಬಾರ್ ರವರೊಂದಿಗೆ KA20 MD 7425 ನೇ ಕಾರಿನಲ್ಲಿ ಹೆಗ್ಡಹಕ್ಲು ಕಡೆಯಿಂದ ಕೊಲ್ಲೂರು ಕಡೆಗೆ  ಬರುತ್ತಿರುವಾಗ ಸೊಸೈಟಿ ಗುಡ್ಡೆ ಬಳಿ ಪ್ರವೀಣ್ @ ಗೂಳಿ  ಕಾರನ್ನು  ಚಲಾಯಿಸಿಕೊಂಡು ಎದುರಿಗೆ ಬಂದು ಸೈಡ್ ಕೊಡುವ ವಿಚಾರದಲ್ಲಿ ಲೋಫರ್ ಎಂದು ಅವಾಚ್ಯ  ಶಬ್ದಗಳಿಂದ ಬೈದು ಹೋಗಿರುತ್ತಾರೆ. ಬಳಿಕ ಪ್ರವೀಣ್ ನು ವಿನೋದ್ ಹೆಬ್ಬಾರ್ ರವರಿಗೆ 2-3 ಬಾರಿ ಕರೆ ಮಾಡಿ ಕೊಲ್ಲೂರು ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಬರಲು ಹೇಳಿದ್ದು  ಪಿರ್ಯಾದಿದಾರರು ಮತ್ತು ವಿನೋದ್ ಹೆಬ್ಬಾರ್ ಸಂಜೆ 7-25 ಗಂಟೆಗೆ ಟ್ಯಾಕ್ಸಿ ಸ್ಟ್ಯಾಂಡ್ ಗೆ ಬಂದಾಗ ಆರೋಪಿತರಾದ 1. ಪ್ರವೀಣ್ @ ಗೂಳಿ , 2. ಜಗ್ಗ @ ಜಗದೀಶ 3. ಕಿರಣ್ ಜೋಗಿ @ ಸ್ಟಿಗು  ಜೊತೆಯಲ್ಲಿದ್ದು ಆ ಸಮಯ  ಪ್ರವೀಣ್ ನು  ವಿನೋದ್ ಹೆಬ್ಬಾರ್ ರಿಗೆ  ಗಾಡಿ ಸೈಡ್ ಕೊಡುವ ವಿಚಾರದಲ್ಲಿ ಮತ್ತೆ ಮಾತಿನ ಜಗಳವಾಗಿದ್ದು ಪಿರ್ಯಾದಿದಾರರು  ವಿನೋದ್ ಹೆಬ್ಬಾರ್ ನ ಪರವಾಗಿ ಮಾತಾನಾಡಿದಾಗ 1 ನೆ ಆರೋಪಿಯು ಪಿರ್ಯಾದಿದಾರಿಗೆ ದೊಡ್ಡ ಕಾರಿನಲ್ಲಿ  ಬಂದ ತಕ್ಷಣ ನೀನು ದೊಡ್ಡ ಜನ ಆಗುವುದಿಲ್ಲ. ಯಾವತ್ತು ನೀನು  ಕೊರಗ ಕೊರಗನೇ ಎಂದು ಹೇಳಿ ದೇವಸ್ಥಾನದಲ್ಲಿ ಜಪ ಮಾಡಿದ ತಕ್ಷಣ  ಭಟ್ ಆಗುವುದಿಲ್ಲ ಎಂದು ಹೇಳಿ ಜಾತಿ ನಿಂದನೆ ಮಾಡಿ ಕೈಯಿಂದ ಬೆನ್ನಿಗೆ ಹೊಡೆದು ಕಾಲಿನಿಂದ ಸೊಂಟಕ್ಕೆ ತುಳಿದಿರುತ್ತಾರೆ. 2 ನೇ ಆರೋಪಿ ಮತ್ತು 3 ನೇ ಆರೋಪಿಯವರು ಕೈಯಲ್ಲಿ ದೊಣ್ಣೆಯನ್ನು  ಹಿಡಿದು ಹೊಡೆಯಲು ಬಂದಿರುತ್ತಾರೆ. ಹಾಗೂ  ಆರೋಪಿ 1 ರಿಂದ 3ನೇ ಯವರು ಮುಂದಕ್ಕೆ ಕೊಲ್ಲೂರಿನಲ್ಲಿ ಇರಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಜಗಳವನ್ನು ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿದ್ದ  ಕಾಂತ, ಚಂದ್ರ ಶೆಟ್ಟಿ ಮತ್ತು ವಿನೋದ್ ಹೆಬ್ಬಾರ್ ಬಿಡಿಸಿದ್ದು  ಆರೋಪಿಗಳ ಹಲ್ಲೆಯಿಂದ ಪಿರ್ಯಾದಿದಾರರಿಗೆ ಮೈ ಕೈ ಗೆ ನೋವಾಗಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2022 ಕಲಂ:  3(1)(r)(s), 3(2)(5a) sc/st act  And 323,504,506,R/W 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 13-08-2022 10:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080