ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ರಾಜೇಶ್ ದೇವಾಡಿಗ (45). ತಂದೆ; ದೇವದಾಸ್ , ವಾಸ; ಚಪ್ಪರಮನೆ, ಮುರುಗುಳಿಹಕ್ಲು ಬಿಜೂರು ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 11/08/2021 ರಂದು ಉಪ್ಪುಂದದ ಮಡಿಕಲ್ ಶಾಪ್ ಗೆ ಹೋಗಲು ಅವರ ಸೈಕಲ್ ನಲ್ಲಿ ಮನೆಯಿಂದ ಹೊರಟು ರಾತ್ರಿ 08:30 ಗಂಟೆಗೆ ನಂಬಿಯಾರ್ ಶಾಪ್ ಗಿಂತ ಸ್ವಲ್ಪ ಮುಂದೆ ಹೋಗುತ್ತಿರುವಾಗ ಎದುರುಗಡೆಯಿಂದ ವಿರುದ್ದ ದಿಕ್ಕಿನಲ್ಲಿ KA-20-EG-5254 ನೇ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಸೈಕಲ್ ನ ಮುಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಎಡಕಾಲಿಗೆ ರಕ್ತಗಾಯವಾಗಿರುತ್ತದೆ. ಅಲ್ಲದೆ ಸೈಕಲ್ ಸಂಪೂರ್ಣ ಜಖಂಗೊಂಡಿರುತ್ತದೆ. ನಂತರ ಗಾಯಗೊಂಡ ಪಿರ್ಯಾದಿದಾರರನ್ನು ಸಾರ್ವಜನಿಕರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 128/2021 ಕಲಂ: .279, 337 ಐಪಿಸಿ Rule 218 R/W 177 IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

 • ಕೋಟ: ಪಿರ್ಯಾದಿದಾರರಾದ ಪ್ರಭಾಕರ ಮೆಂಡನ್ (42), ತಂದೆ: ನರಸಿಂಹ ಕಾಂಚನ್, ವಾಸ: ಸಂಜೀವಿನಿ ಕೋಡಿಕನ್ಯಾನ ಗ್ರಾಮ ಬ್ರಹ್ಮಾವರ ತಾಲೂಕು , ಉಡುಪಿ ಜಿಲ್ಲೆ ಇವರು ಕೋಡಿಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದು ದಿನಾಂಕ 12/08/2021 ರಂದು ಮಧ್ಯಾಹ್ನ 12:00 ಗಂಟೆಗೆ ಕೋಡಿಕನ್ಯಾನ ಗ್ರಾಮದ ಝೋನ್ 5 ಗೆಸ್ಟ್ ಹೌಸ್ ಹತ್ತಿರ ಅರಬ್ಬೀ ಸಮುದ್ರದ ದಂಡೆಯ ಬದಿಯಲ್ಲಿ ಓರ್ವ್ ವ್ಯಕ್ತಿಯ ಮೃತದೇಹ ಇರುವ ಬಗ್ಗೆ ಮಾಹಿತಿ ಬಂದಂತೆ ಸ್ಥಳಕ್ಕೆ ಹೋಗಿ ನೋಡಿದಲ್ಲಿ ತೇಜು ಪೂಜಾರಿಯವರಿಗೆ ಸಂಭಂಧಿಸಿದ ಜಾಗದಲ್ಲಿ ಮೃತ ದೇಹ ಅಂಗಾತನೆ ಇದ್ದು ಮಧ್ಯಾಹ್ನ 12:00 ಗಂಟೆ ಸುಮಾರಿಗೆ ರಾಮದಾಸ್ ಎಂಬುವರು ಕಡಲ ಬದಿಯಲ್ಲಿ ಇರುವಾಗ ದೇಹ ಸಮುದ್ರದಲ್ಲಿ ತೇಲಾಡುತ್ತಿರುವುದನ್ನು ಕಂಡು ಅಲೆಯ ರಭಸಕ್ಕೆ ದೇಹವು ದಂಡೆಗೆ ಬಂದಾಗ ಬದಿಯಲ್ಲಿ ಮಲಗಿಸಿ ನೋಡಿದಾಗ ಮೃತಪಟ್ಟಿರುವುದು ತಿಳಿದಿರುತ್ತದೆ. ಮೃತ ದೇಹದ ಮೇಲೆ ಕಂದು, ಉಡನ್ ಚುಕ್ಕಿಗಳಿರುವ ಅರ್ಧ ತೋಳಿನ ಬಿಳಿ ಬಣ್ಣದ ಶರ್ಟ ಇದ್ದು, ಕಾಲರ್ ನಲ್ಲಿ New Friends Fashion ಎನ್ನುವ ಸ್ಟಿಕ್ಕರ್ ಇದ್ದು ಎಡಕೈಯಲ್ಲಿ ಗೋಲ್ಡನ್ ಬಣ್ಣದ ಟೈಟಾನ್ ಕಂಪೆನಿಯ ವಾಚ್ ಇದ್ದು, ಕಂದು ಬಣ್ಣದ ನಿಕ್ಕರ್ ಹಾಕಿದ್ದು ಅದರ ಬಲಗಡೆ ಕಿಸೆಯಲ್ಲಿ ದಾಖಲಾತಿಗಳು ಇರುತ್ತದೆ. ಅದನ್ನು ಪರಿಶೀಲಿಸಿದಾಗ ಹೆಸರು ವಿಳಾಸ ತಿಳಿದಿರುತ್ತದೆ. ಮೃತದೇಹದ ಬಲ ಬದಿ ಭುಜದ ಮೂಳೆ ಮುರಿದಿದ್ದು ಹೊರಗೆ ಕಾಣುವ ಗಾಯವಾಗಿರುತ್ತದೆ. ಹೊಟ್ಟೆಯ ಬಲಬದಿ ಚರ್ಮ ಸುಲಿದ ಗಾಯ ಹಾಗೂ ಬಲಕೈ ಬಲ ಗಂಟಿನ ಚರ್ಮ ಸುಲಿದ ಗಾಯ, ಎರಡು ಕಿವಿಯಲ್ಲಿ ರಕ್ತ ಬಂದಿದ್ದು ಬಾಯಿಯಲ್ಲಿ ರಕ್ತದ ಕಲೆ ಇರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 26/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಶಂಕರನಾರಾಯಣ: ದಿನಾಂಕ 11/08/2021 ರಂದು ಬೆಳಿಗ್ಗೆ 09:00 ಗಂಟೆಗೆ ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಕಾಸಂಬಳ್ಳಿ ಎಂಬಲ್ಲಿ ಆರೋಪಿ ಚಂದ್ರ ನಾಯ್ಕ ಕಾಸಂಬಳ್ಳಿ ಶಂಕರನಾರಾಯಣ ಗ್ರಾಮ ಕುಂದಾಪುರ ತಾಲೂಕು ಎಂಬಾತ ಪಿರ್ಯಾದಿದಾರರಾದ ಸುಲೋಚನಾ (53), ತಂದೆ: ಬಚ್ಚ ನಾಯ್ಕ, ವಾಸ: ಕಾಸಂಬಳ್ಳಿ ಶಂಕರನಾರಾಯಣ ಗ್ರಾಮ ಕುಂದಾಪುರ ತಾಲೂಕು ಇವರ ಮನೆಯ ಅಂಗಳಕ್ಕೆ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿ ಕತ್ತಿಯಿಂದ ಹಲ್ಲೆ ಮಾಡಲು ಬಂದಿದ್ದು, ಈ ಸಮಯ ಪಿರ್ಯಾದಿದಾರರು ತಡೆಯಲು ಪ್ರಯತ್ನಿಸಿದಾಗ ಆರೋಪಿಯು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 78/2021 ಕಲಂ: 447,504, 506, 354, 354(B) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ದಿನಾಂಕ 12/08/2021 ರಂದು ಬೆಳಿಗ್ಗೆ 8:30 ಗಂಟೆಗೆ ಪವನ್ ನಾಯಕ, ಪೊಲೀಸ್ ಉಪನಿರೀಕ್ಷಕರು, ಬೈಂದೂರು ಪೊಲೀಸ್ ಠಾಣೆ ಇವರಿಗೆ ಸಿಲ್ವರ್ ಬಣ್ಣದ ಟೊಯೊಟಾ ಇನ್ನೋವಾ ಕಾರಿನಲ್ಲಿ ಜಾನುವಾರುಗಳನ್ನು ತುಂಬಿಸಿಕೊಂಡು ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಾ ಕಿರಿಮಂಜೇಶ್ವರ ಗ್ರಾಮದ ನಾಗೂರು ನೂರಿ ಸೀ ಫುಡ್ ಐಸ್ ಫ್ಲಾಂಟ್ ನ ಎದುರು ಕಾರಿನ ಎಕ್ಸೆಲ್ ಕಟ್ ಆಗಿ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಹೋಗಿರುವುದಾಗಿ ನೀಡಿದ ಮಾಹಿತಿಯಂತೆ 9:00 ಗಂಟೆಗೆ ಸಿಬ್ಬಂದಿಗಳೊಂದಿಗೆ ಕಿರಿಮಂಜೇಶ್ವರ ಗ್ರಾಮದ ನಾಗೂರು ಎಂಬಲ್ಲಿ ನೂರಿ ಸೀ ಫುಡ್ ಐಸ್ ಫ್ಲಾಂಟ್ ನ ಎದುರು ರಾಷ್ಟ್ರೀಯ ಹೆದ್ದಾರಿ 66 ನೇದರ ಪಶ್ಚಿಮ ಬದಿಯ ರಸ್ತೆಯ ಬದಿಯಲ್ಲಿ ನಿಂತಿದ್ದ ಟೋಯೊಟಾ ಇನ್ನೋವಾ ಕಾರು ನಂಬ್ರ MH-09-BB-6561 ನ್ನು ಪರಿಶೀಲಿಸಲಾಗಿ ಕಾರಿನಲ್ಲಿ ಜಾನುವಾರುಗಳ ಕಾಲು ಹಾಗೂ ಕುತ್ತಿಗೆಗಳನ್ನು ಹಗ್ಗದಿಂದ ಒಂದಕ್ಕೊಂದು ಕಟ್ಟಿ ಅವುಗಳನ್ನು ಅಡಾದಿಡ್ಡಿಯಾಗಿ ಕಾರಿನಲ್ಲಿ ತುಂಬಿಸಿ ಅವುಗಳಿಗೆ ಯಾವುದೇ ಮೇವು ಬಾಯಾರಿಕೆ ನೀಡದೇ, ಹಿಂಸೆಯಿಂದ ಉಸಿರುಗಟ್ಟುವ ರೀತಿಯಲ್ಲಿ ಸಾಗಾಟ ಮಾಡಲು ತುಂಬಿಸಿರುವುದು ಕಂಡು ಬಂದಿದ್ದು, ಜಾನುವಾರುಗಳನ್ನು ಹೊರತೆಗೆದು ಪರಿಶೀಲಿಸಲಾಗಿ ಕಪ್ಪು ಬಣ್ಣದ ದನ-1 (ಮೌಲ್ಯ 2000/- ರೂಪಾಯಿ), ಕಪ್ಪು ಬಣ್ಣದ ಗಂಡು ಕರು -2 (ಮೌಲ್ಯ 1000/- ರೂಪಾಯಿ) ಇದ್ದು ಟೋಯೊಟಾ ಇನ್ನೋವಾ ಕಾರು (ಮೌಲ್ಯ 10 ಲಕ್ಷ ರೂಪಾಯಿ) ನ್ನು ಸ್ವಾಧೀನಪಡಿಸಿಕೊಂಡಿದ್ದು, ಅಪಾದಿತರು ಜಾನುವಾರಗಳನ್ನು ಎಲ್ಲಿಯೋ ಕಳವು ಮಾಡಿ ಅದರ ಕಾಲುಗಳು ಹಾಗೂ ಕುತ್ತಿಗೆಯನ್ನು ಹಗ್ಗದಿಂದ ಒಂದಕ್ಕೊಂದು ಕಟ್ಟಿ ಅವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ವಧೆ ಮಾಡುವರೇ ಕಾರಿನಲ್ಲಿ ಸಾಗಾಟ ಮಾಡುತ್ತಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 127/2021 ಕಲಂ: 379 ಐಪಿಸಿ ಮತ್ತು ಕಲಂ: 4, 5, 7, 12 ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧಿನಿಯಮ 2020 & 11(1) (ಡಿ) ಪ್ರಾಣಿಹಿಂಸೆ ನಿಷೇಧ ಕಾಯಿದೆ. ಮತ್ತು ಕಲಂ: 66, 192(ಎ) ಐಎಮ್ ವಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-08-2021 09:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ