ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

  • ಅಮಾಸೆಬೈಲು: ಪಿರ್ಯಾದಿ ಮಂಜುನಾಥ ಶೆಟ್ಟಿಗಾರ್  ಇವರು ದಿನಾಂಕ 13/08/2021 ರಂದು ರಾತ್ರಿ 01:30 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿರುವಾಗ ಹೊರಗಡೆ ನಾಯಿ ಬೊಗಳುತ್ತಿರುವುದನ್ನು ಕೇಳಿ, ಕಾಡುಪ್ರಾಣಿಗಳು ಅಡಿಕೆ ತೋಟಕ್ಕೆ ಬಂದಿರಬಹುದೆಂದು  ಟಾರ್ಚ್ ಹಿಡಿದು ಹೊರಗಡೆ ಬಂದು ತೋಟದ ಬಳಿ ಹೋಗುತ್ತಿರುವಾಗ ಏಕಾಏಕಿ ಅಶೋಕ ಶೆಟ್ಟಿಗಾರ್ ಮತ್ತು ನಾಗೇಶ್ ಶೆಟ್ಟಿಗಾರ್ ಅಲ್ಲಿಗೆ ಬಂದು ಪಿರ್ಯಾದುದಾರರನ್ನು ನೆಲಕ್ಕೆ ದೂಡಿ ,ಎಳೆದುಕೊಂಡು ಕೊಂಡು ಹೋಗಿ ಅಶೋಕ್ ಶೆಟ್ಟಿಗಾರ್ ಕಬ್ಬಿಣದ ಸಲಾಕೆಯಿಂದ ಪಿರ್ಯಾದುದಾರರ ಬಲಕಾಲಿನ ಗಂಟಿನ ಕೆಳಗೆ ಬಲವಾಗಿ ಹೊಡೆದು, ಇಬ್ಬರು ಪಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಜಾಗಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2021 ಕಲಂ 324, 504, 506 R/W 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ : ಪಿರ್ಯಾದಿದಾರರಾದ ಪ್ರಭಾಕರ. ಜಿ ರವರು  ಕ್ಲಾಸಿಕ್ ಬಿಲ್ಡರ್ಸ್ ಕನ್‌‌ಸ್ಟ್ರಕ್ಷನ್ ಹಾಗೂ ಕಟ್ಟಡ ಸಾಮಾಗ್ರಿ ಪೂರೈಸುವ ವ್ಯವಹಾರವನ್ನು ಮಾಡಿಕೊಂಡಿದ್ದು,  ಸದರಿಯವರು ಕಳೆದ 3 ತಿಂಗಳ ಹಿಂದೆ ಮಧ್ಯವರ್ತಿ ಜಸ್ವಂತ್ ಸಿಂಗ್‌ ರವರ ಮುಖಾಂತರ ಅಂಬಾಗಿಲಿನ  GIYAN ಕನ್‌‌ಸ್ಟ್ರಕ್ಷನ್‌‌ನ  ರಾಘವೇಂದ್ರರವರಿಗೆ 6 ಲೋಡ್ ಕೆಂಪುಕಲ್ಲನ್ನು  ಪೂರೈಸಿದ್ದು, ರಾಘವೇಂದ್ರರವರು ಸದರಿ ಕೆಂಪುಕಲ್ಲಿಗೆ ಸಂಬಂಧಿಸಿದ 89,100 ರೂ  ಹಣವನ್ನು ನೀಡಲು ಬಾಕಿ ಇರಿಸಿಕೊಂಡಿರುತ್ತಾರೆ.  ಪಿರ್ಯಾದಿದಾರರಾದ ಪ್ರಭಾಕರ್‌. ಜಿ ರವರು ಜಸ್ವಂತ್ ಮುಖಾಂತರ ಹಣವನನ್ನು ಕೇಳಿದಾಗ ಹಣವನ್ನು ನೀಡದೇ  ಕಳೆದ 1 ತಿಂಗಳ ಹಿಂದೆ 40 ಸಾವಿರ ರೂ ಚೆಕ್‌ ನೀಡಿದ್ದು, ಸದರಿ ಚೆಕ್ ಬೌನ್ಸ್ ಆಗಿರುತ್ತದೆ. ನಂತರ  ಪಿರ್ಯಾದಿದಾರರು ಆರೋಪಿತನಾದ ರಾಘವೇಂದ್ರ ರವರನ್ನು ಸಂಪರ್ಕಿಸಿ ಬಾಕಿ ಹಣವನ್ನು ನೀಡುವಂತೆ  ಕೇಳಿಕೊಂಡಗಲೂ ಆತನು ಹಣ ನೀಡಲು ಸತಾಯಿಸುತ್ತಿದ್ದನು.  ನಿನ್ನೆ ದಿನಾಂಕ 12/05/2021 ರಂದು ಸಂಜೆ 5:30 ಗಂಟೆ ಸಮಯಕ್ಕೆ ಪಿರ್ಯಾದಿದಾರರು ರಾಜೇಂದ್ರರವರ ಜೊತೆಗೆ ಶಿವಳ್ಳಿ ಗ್ರಾಮದ ಕಕ್ಕುಂಜೆಯಲ್ಲಿನ ಕಛೇರಿಯಲ್ಲಿದ್ದಾಗ  ಆರೋಪಿ ರಾಘವೆಂದ್ರನು,  ವಿಶು ಅಂಬಲಪಾಡಿ, ಗುರುಪ್ರಸಾದ್  ಹಾಗೂ  ಇತರ ಸುಮಾರು 7 ಜನರೊಂದಿಗೆ  ಕಛೇರಿಯ ಗೇಟ್ ಬಳಿ ಬಂದು  ಗೇಟ್ ಬಳಿ ನಿಂತಿದ್ದ  ಚಾಲಕ ಸುರೇಶ್ ರವರನ್ನು ತಳ್ಳಿಕೊಂಡು ಪಿರ್ಯಾದಿದಾರರ ಕಚೇರಿಯ ಜಾಗಕ್ಕೆ ಅಕ್ರಮವಾಗಿ ಒಳ ಪ್ರವೇಶಿಸಿ ನಂತರ ಪಿರ್ಯಾದಿದಾರರ ಕಛೇರಿಯ ಒಳಗೆ ಅಕ್ರಮವಾಗಿ ಪ್ರವೇಶಿಸಿ ಪಿರ್ಯಾದಿದಾರರೊಂದಿಗೆ ಜಗಳ ಮಾಡಿ ಕೊಂದು ಹಾಕುತ್ತೇವೆ” ಎಂದು ಬೆದರಿಸಿರುತ್ತಾನೆ. ಆಗ ಪಿರ್ಯಾದಿದಾರರು ಗಾಬರಿಗೊಂಡು ಹೊರಕ್ಕೆ ಹೋಗಲು ಪ್ರಯತ್ನಿಸಿದಾಗ ಆರೋಪಿಗಳು  ಪಿರ್ಯಾದಿದಾರರನ್ನು  ಅಡ್ಡಗಟ್ಟಿ ನಿಲ್ಲಿಸಿ  ಬಾಕಿ ಇರುವ ಹಣವನ್ನು ಕೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ, ಆಗ ಪಿರ್ಯಾದಿದಾರರು ಕೂಗಿಕೊಂಡಾಗ ಆರೋಪಿಗಳು  KA20MB 4650 ಮತ್ತು KA20 MC 4221 ನೇ  ಕಾರಿನಲ್ಲಿ ಪರಾರಿಯಾಗಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 103/2021 ಕಲಂ:341,323,504,506,447,448,143,147 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿ ಕೆ. ಶಶಿಧರ್ ಇವರು ಉಡುಪಿ ಪವರ್ ಕಾರ್ಪೋರೇಷನ್ ಲೀ. ( UPCL ) ಕಂಪೆನಿಯ ಅಸೋಶಿಯೆಟ್ ಜನರಲ್ ಮ್ಯಾನೇಜರ್ ಆಗಿರುತ್ತಾರೆ. ದಿನಾಂಕ 11.08.2021 ರಂದು ಯಾರೋ ಅಪರಿಚಿತ ವ್ಯಕ್ತಿಗಳು https://g.co/kgs/dHyUQY  ಎಂಬ ಹೆಸರಿನಲ್ಲಿ ಸದ್ರಿ ಕಂಪೆನಿಯ ನಕಲಿ ನೇಮಕಾತಿ ಲಿಂಕ್ ನ್ನು ಸೃಷ್ಟಿಸಿ, ಸದ್ರಿ ಲಿಂಕ್ ನಲ್ಲಿ number of vacancies:230, Location:Padubidri, Karnataka, Age limit: 18 to 35 years, Educational Qualification: BE ಹಾಗೂ Pay Scale: 20,000/= to 25,000/= ಎಂಬುದಾಗಿ ನಮೂದಿಸಿ, ಈ ಬಗ್ಗೆ ಆನ್‌‌ಲೈನ್ ಪೇಮೆಂಟ್ ರೂ. 5೦೦/- ಪಾವತಿಸಬೇಕು ಮತ್ತು ಈ ಬಗ್ಗೆ ಸಂಪರ್ಕಿಸಲು ಪೋನ್ ನಂಬ್ರವನ್ನು ಸದ್ರಿ ಲಿಂಕ್ ನಲ್ಲಿ ನಮೂದಿಸಿರುತ್ತಾರೆ. ಮೇಲೆ ತಿಳಿಸಿದ ಯಾವುದೇ ನೇಮಕಾತಿ ಲಿಂಕ್ ಗಳು ಉಡುಪಿ ಪವರ್ ಕಾರ್ಪೋರೇಷನ್ ಲಿ. (UPCL) ಪಡುಬಿದ್ರೆ ಇವರು ಸೃಷ್ಟಿಸಿರುವುದಿಲ್ಲ. ಯಾರೋ ಅಪರಿಚಿತ ವ್ಯಕ್ತಿಗಳು ಕಂಪೆನಿಯ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಮೇಲಿನ ನಕಲಿ ಲಿಂಕ್ ನ್ನು ಸೃಷ್ಟಿಸಿರುತ್ತಾರೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2021 ಕಲಂ 66(c), 66(d) ಐ.ಟಿ. ಆಕ್ಟ್  ನಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 13-08-2021 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080