ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಚನ್ನಕೇಶವ (52),  ತಂದೆ : ಜನಾರ್ಧನ ಆಚಾರ್ಯ, ವಾಸ : ನಿಸರ್ಗ ಮನೆ ತಾರ್ದೊಲಿಯಾ ಹಳೇ ಅಂಚೆ ಕಛೇರಿ ಬಳಿ ಜೊಪ್ಪಿನಮೊಗರು, ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಇವರು ದಿನಾಂಕ 12/07/2022 ರಂದು ತನ್ನ KA-19-EB- 2616 ನೇ ಮೋಟಾರ್ ಸೈಕಲ್‌ ನಲ್ಲಿ ಹೆಂಡತಿ ಜಯಶ್ರಿ  ರವರನ್ನು ಸಹ ಸವಾರಿಣಿಯಾಗಿ ಕುಳ್ಳರಿಸಿಕೊಂಡು ಉಡುಪಿ ಮಂಗಳೂರು  ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿರುವಾಗ ಉದ್ಯಾವರ ಗ್ರಾಮದ ಹಲೀಮಾ ಸಾಬ್ಜು ಹಾಲ್ ಬಳಿ ತಲುಪುತ್ತಿದ್ದಂತೆ ಸಂಜೆ 4:30 ಗಂಟೆಗೆ ಪಿರ್ಯಾದಿದಾರರ ಹಿಂದಿನಿಂದ ಹೈದರಾಲಿ ತನ್ನ ಟ್ರಕ್ ನಂಬ್ರ  KA-19-C-9245 ನೇದನ್ನು ಅತೀ ವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ಹಾಗೂ ಸಹ ಸವಾರಿಣಿ ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಎಡಕೈ ಮೂಳೆ ಮುರಿತದ ಗಾಯ, ಬಲಕಾಲಿನ ಹಿಮ್ಮಡಿಗೆ ಉಜ್ಜಿದ ಗಾಯವಾಗಿದ್ದು ಸಹ ಸವಾರಿಣಿಗೆ ತಲೆಯ ಹಿಂಭಾಗಕ್ಕೆ ತೀವೃವಾಗಿ ರಕ್ತಗಾಯ, ಬಲಕಾಲಿನ ಮೂಳೆ ಮುರಿತದ ಗಾಯವಾಗಿದ್ದು, ಅಲ್ಲಿನ ಸ್ಥಳೀಯರು ಇಬ್ಬರನ್ನು ಚಿಕಿತ್ಸೆಯ ಬಗ್ಗೆ ಆಟೋ ರಿಕ್ಷಾದಲ್ಲಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಇಬ್ಬರನ್ನು ಪರೀಕ್ಷಿಸಿ ಒಳ ರೋಗಿಯ್ನನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 70/2022 ಕಲಂ: 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ಗಣೇಶ್‌ ಆಳ್ವ (48), ARSI,   ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಇವರು  ಸಿಬ್ಬಂದಿ ಚಾಲಕ  ಚರಣ್‌ ರಾಜ್‌ ರವರೊಂದಿಗೆ ಇಲಾಖಾ ಜೀಪು ನಂಬ್ರ KA-20-G-337  ನೇ ಬೊಲೆರೋ ವಾಹನದಲ್ಲಿ  ದಿನಾಂಕ 12/07/2022 ರಂದು ಮಾನ್ಯ ಕರ್ನಾಟಕ ಸಮಾಜ ಕಲ್ಯಾಣ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ರವರ ಬೆಂಗಾವಲು ಕರ್ತವ್ಯದಲ್ಲಿ ಕೋಟದಿಂದ ಮಂಗಳೂರಿಗೆ ಹೊರಟು ಕುಂದಾಪುರ – ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರ ಏಕಮುಖ ರಸ್ತೆಯಲ್ಲಿ ಬರುತ್ತಾ ಮಧ್ಯಾಹ್ನ 4:00 ಗಂಟೆಗೆ ಉಪ್ಪೂರು ಗ್ರಾಮದ, ಕೆ.ಜಿ ರೋಡ್‌ ಎಂಬಲ್ಲಿ ತಲಪುವಾಗ ಅವರ  ಮುಂಭಾಗದಲ್ಲಿ ಬಲಭಾಗದಲ್ಲಿ ಹೋಗುತ್ತಿದ್ದ  ಆರೋಪಿ ಲಾರಿ ಚಾಲಕನು ತನ್ನ ಲಾರಿಯನ್ನು ಯಾವುದೇ ಸೂಚನೆ ನೀಡದೇ, ಇಂಡಿಕೇಟರ್‌ ಹಾಕದೇ ನಿರ್ಲಕ್ಷತನದಿಂದ ಆತನ ಎಡ ಭಾಗಕ್ಕೆ ಚಲಾಯಿಸಿದ್ದು, ಅದನ್ನು ನೋಡಿ ವಾಹನ ಚಾಲಕ ಚರಣ್‌ ರಾಜ್‌ ರವರು ಎದುರುಗಡೆ ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಒಮ್ಮೇಲೆ ಬ್ರೇಕ್‌ ಹಾಕಿ ಜೀಪನ್ನು ಬಲಭಾಗಕ್ಕೆ ತಿರುಗಿಸಿದಾಗ ಜೀಪು ಪಲ್ಟಿಯಾಗಿ ರಾಷ್ಟ್ರೀಯ ಹೆದ್ದಾರಿ  66 ರ ಮಧ್ಯ ಭಾಗದ ಡಿವೈಡರ್‌ ಮೇಲೆ ಮುಗ್ಗರಿಸಿ ಅಡಿ ಮೇಲಾಗಿ ಬಿದ್ದ ಪರಿಣಾಮ ಜೀಪು ಜಖಂಗೊಂಡು ಅದರೊಳಗೆ ಪಿರ್ಯಾದಿದಾರರು ಹಾಗೂ ಚಾಲಕ ಸಿಕ್ಕಿಹಾಕಿಕೊಂಡಿದ್ದು, ಸ್ಥಳೀಯರು ಬಂದು ಜೀಪಿನ ಗ್ಲಾಸ್‌ನ್ನು ಒಡೆದು ಇಬ್ಬರನ್ನೂ ಜೀಪಿನಿಂದ ಹೊರ ತೆಗೆದಿರುತ್ತಾರೆ.  ಈ ಅಪಘಾತದಿಂದ ಪಿರ್ಯಾದಿದಾರರ ಎಡಕೈ ಬೆರಳುಗಳಿಗೆ, ತೋಳಿಗೆ, ಭುಜಕ್ಕೆ, ಬೆನ್ನಿಗೆ ರಕ್ತಗಾಯವಾಗಿದ್ದು ಹಾಗೂ ಚಾಲಕ ಚರಣ್‌ರಾಜ್‌ ರವರ ಬೆನ್ನಿನ ಹಿಂಭಾಗಕ್ಕೆ , ಎಡ ಭುಜಕ್ಕೆ  ಒಳನೋವು ಆಗಿರುತ್ತದೆ. ಗಾಯಾಗೊಂಡ ಇಬ್ಬರನ್ನೂ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 117/2022 ಕಲಂ: 279, 337 ಐಪಿಸಿ & 134 (A&B) R/W 187 IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಸೋನಿಯಾ ಮಥಾಯಸ್(36), ಗಂಡ: ಅಶ್ವಿನ್  ಮಥಾಯಸ್, ವಾಸ: ಏಂಜೆಲ್ಲ್, ಬಗ್ಗತೋಟ ರಸ್ತೆ, ಕುತ್ಯಾರು, ಶಿರ್ವ ಗ್ರಾಮ ಮತ್ತು ಅಂಚೆ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಗಂಡ ಅಶ್ವಿನ್ ಮಥಾಯಸ್ (39) ರವರು ಶುಗರ್ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಕೊಡಿಸಿರುತ್ತಾರೆ.  ಅಶ್ವಿನ್ ಮಥಾಯಸ್ ರವರು ದಿನಾಂಕ 11/07/2022 ರಂದು ಮನೆಯಲ್ಲಿ ರಾತ್ರಿ 10:30 ಗಂಟೆಗೆ ಊಟ ಮಾಡಿ ಮಲಗಿದ್ದು, ಬೆಳಿಗ್ಗಿನ ಜಾವ 05:45 ಗಂಟೆಗೆ ಪ್ರಜ್ಞಾಹೀನರಾದವರನ್ನು ಕೂಡಲೇ ಉಡುಪಿಯ ಟಿ.ಎಮ್ .ಎ ಪೈ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಅಶ್ವಿನ್ ಮಥಾಯಸ್ ರವರು ಶುಗರ್ ಖಾಯಿಲೆಯಿಂದ ದಿನಾಂಕ 12/07/2022 ರಂದು ಬೆಳಿಗ್ಗಿನ ಜಾವ 05:45 ಗಂಟೆಯಿಂದ 07:45 ಗಂಟೆಯ ನಡುವಿನ ಅವಧಿಯಲ್ಲಿ ಮೃತಪಟ್ಟಿರುತ್ತಾರೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 16 /2022  ಕಲಂ: 174  CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾ ಉರ್ಬನ್ ಡಿಸೋಜಾ (62), ತಂದೆ: ಜೆರುಮ್ ಡಿಸೋಜಾ, ವಾಸ: ಪೊಲಿವಾ ಮಾಬುಕಳ  ಪಂಚಾಯತ್ ಹಿಂದೆ ಐರೋಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರ ಮನೆಯ ತೋಟದ ಪಶ್ಚಿಮ ದಿಕ್ಕಿನಲ್ಲಿ ಜಾಕ್ಸನ್ ಪೌಲ್ ಲೂವಿಸ್  (28)  ರವರ ಮನೆಯಿದ್ದು , ಅವರು  ಮನೆಯಲ್ಲಿ ಒಬ್ಬರೆ ವಾಸ ಮಾಡಿಕೊಂಡಿರುತ್ತಾರೆ. ಜಾಕ್ಸನ್ ಪೌಲ್ ಲೂವಿಸ್  ಪೆಟ್ರೋಲ್ ಬಂಕ್ ಹಾಗೂ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದವರು  ಈಗ ಕೆಲಸ ಬಿಟ್ಟಿದ್ದು ಮದ್ಯಪಾನ ಮಾಡಿಕೊಂಡು ತಿರುಗಾಡಿಕೊಂಡಿರುತ್ತಾರೆ,  ಜೋರು  ಮಳೆಯಿಂದಾಗಿ  ತೆಂಗಿನ ತೋಟದಲ್ಲಿ  ನೀರು ತುಂಬಿದ್ದು  ಜಾಕ್ಸನ್ ವಿಪರೀತ ಮದ್ಯ ಸೇವಿಸಿ  ಮನೆಗೆ ಬರುವಾಗ ದಿನಾಂಕ 11/07/2022 ರಂದು 20:00 ಗಂಟೆಯಿಂದ  ದಿನಾಂಕ 12/07/202 ರಂದು 17:00 ಗಂಟೆಯ ಮಧ್ಯಾವಧಿಯಲ್ಲಿ ಕೆಸರಿನಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಉಸಿರುಗಟ್ಟಿ  ಮೃತ ಪಟ್ಟಿರಬಹುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 29/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 13-07-2022 10:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080