ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ವಾಸು ಗಾಣಿಗ ಎಸ್ (70), ತಂದೆ:  ದಿ|| ಶೇಷ ಗಾಣಿಗ, ವಾಸ: ನಾಯಕವಾಡಿ, ಗುಜ್ಜಾಡಿ ಗ್ರಾಮ & ಅಂಚೆ, ಕುಂದಾಪುರ ತಾಲೂಕು ಇವರ ಕೊನೆಯ ಮಗಳಾದ ವಿಶಾಲ ಗಾಣಿಗ(35) ರವರು  ಬೀಜೂರು ಚಾರುಕೊಡ್ಲು ವಾಸಿಯಾದ ರಾಮಕೃಷ್ಣ ಗಾಣಿಗ ಎಂಬುವವರನ್ನು ಮದುವೆಯಾಗಿ, ತನ್ನ ಗಂಡ ಹಾಗೂ ಮಗು ಆರ್ವಿ ಯೊಂದಿಗೆ ದುಬೈಯಲ್ಲಿ ವಾಸಮಾಡಿಕೊಂಡಿರುವುದಾಗಿದೆ.  ಮೂರು ತಿಂಗಳ ಹಿಂದೆ ಮೂವರು ಊರಿಗೆ ಬಂದಿದ್ದು, ರಾಮಕೃಷ್ಣ ರವರ ಹಿರಿಯರ ಆಸ್ತಿಯಲ್ಲಿ ಅವರ ಪಾಲಿಗೆ ಬರುವ ಆಸ್ತಿಗೆ ಸಂಬಂಧಿಸಿದ ದಸ್ತಾವೇಜುಗಳಿಗೆ ಸಹಿ ಹಾಕಲು ಪಿರ್ಯಾದಿದಾರರಿಗೆ ಅಧಿಕಾರ ಪತ್ರವನ್ನು ನೀಡಿ ವಾಪಾಸ್ಸು ಮೂವರು ದುಬೈಗೆ ಹೋಗಿರುತ್ತಾರೆ. ಆಸ್ತಿ ಪಾಲಿನ ಸಂಬಂಧ ವಿಶಾಲ ಗಾಣಿಗ ಮತ್ತು ಮಗು ಆರ್ವಿ ದುಬೈಯಿಂದ ದಿನಾಂಕ:02/07/2021 ರಂದು ಊರಿಗೆ ಬಂದು ಬ್ರಹ್ಮಾವರ ತಾಲೂಕು ಕುಮ್ರಗೋಡು ಗ್ರಾಮದಲ್ಲಿರುವ ಮಿಲನ ರೆಸಿಡೆನ್ಸಿಯಲ್ಲಿ ಅವರ  ಪ್ಲಾಟ್ ನಂ. K-21 ರಲ್ಲಿ ವಾಸಮಾಡಿಕೊಂಡಿದ್ದು, ದಿನಾಂಕ07/07/2021 ರಂದು ರಾಮಕೃಷ್ಣ ರವರ ಆಸ್ತಿ ಪಾಲು ಪಟ್ಟಿ ಆಗಿರುತ್ತದೆ. ದಿನಾಂಕ 12/07/2021 ರಂದು ಪಿರ್ಯಾದಿದಾರರು ಅವರ ಹೆಂಡತಿ ಹಾಗೂ ಮಗಳು ವಿಶಾಲ ಗಾಣಿಗ ಮತ್ತು ಮೊಮ್ಮಗಳ ಜೋತೆಯಲ್ಲಿ ಒಂದು ರಿಕ್ಷಾದಲ್ಲಿ ಕುಮ್ರಗೋಡಿನಲ್ಲಿರು ವಿಶಾಲ ಗಾಣಿಗರವರ ಪ್ಲಾಟ್‌ನಿಂದ ಪಿರ್ಯಾದಿದಾರರ ಮನೆಯಾದ ಗುಜ್ಜಾಡಿಗೆ ಬಂದು ಪಿರ್ಯಾದಿದಾರರು, ಅವರ ಹೆಂಡತಿ ಹಾಗೂ ಮೊಮ್ಮಗಳು ಮನೆಗೆ ಹೋಗಿದ್ದು, ವಿಶಾಲ ಗಾಣಿಗ ರವರು ನಾನು ಬ್ರಹ್ಮಾವರ ಕೆನರಾ ಬ್ಯಾಂಕ್ ನಿಂದ ಹಣ ಡ್ರಾ ಮಾಡಿ ಗಂಡನ ಮನೆಗೆ ಕೊಟ್ಟು ಬರುತ್ತೇನೆ  ಎಂದು ಹೇಳಿ ಅದೇ ರಿಕ್ಷಾದಲ್ಲಿ ವಾಪಾಸ್ಸು ಮನೆಗೆ ಹೊರಟು ಬಂದಿರುತ್ತಾರೆ. ನಂತರ ಮಧ್ಯಾಹ್ನ 12:00 ಗಂಟೆಯಾದರೂ ವಿಶಾಲ ರವರು ಮನೆಗೆ ಬಾರದೇ ಇದ್ದುದರಿಂದ ಪಿರ್ಯಾದಿದಾರರು ಅವರ ಮೊಬೈಲ್ ಗೆ ಕರೆ ಮಾಡಿದಾಗ ನಾಟ್‌ ರಿಚೆಬಲ್ ಬಂದಿದ್ದು, ಆಗ ಪಿರ್ಯಾದಿದಾರರು ಗಾಬರಿಗೊಂಡು ತನ್ನ ಇನ್ನೊಬ್ಬ ಮಗಳು ವಿನಯಳಿಗೆ ಕರೆಮಾಡಿ ತಿಳಿಸಿದ್ದು ಅವರು ಕೂಡ ಕರೆ ಮಾಡಿದಾಗ ಫೋನ್ ರಿಂಗ್ ಆಗಿರುವುದಿಲ್ಲ. ನಂತರ ವಿನಯ ರವರು ವಿಶಾಲ ರವರ ಗಂಡ ರಾಮಕೃಷ್ಣ ರವರಿಗೆ ಕರೆಮಾಡಿ ವಿಚಾರಿಸಿದ್ದು, ಮದ್ಯಾಹ್ನ 12:00 ಗಂಟೆಯ  ಸಮಯಕ್ಕೆ ತಾನು ಸಾಲಿಗ್ರಾಮದಲ್ಲಿ ಇರುವುದಾಗಿಯೂ ಬ್ರಹ್ಮಾವರ ಬ್ಯಾಂಕ್‌ಗೆ ಹೋಗಿ ನಂತರ ಮಗುವಿನ ಬರ್ತ್‌ಡೇ ಕೇಕ್ ಆರ್ಡರ್‌‌ ಮಾಡಿರುವುದಾಗಿ ವಿಶಾಲ ರವರು ಮೇಸೆಜ್ ಮಾಡಿರುವ ಬಗ್ಗೆ ತಿಳಿಸಿರುತ್ತಾರೆ. ಸ್ವಲ್ಪ ಹೊತ್ತಿನ ನಂತರ ರಾಮಕೃಷ್ಣ ರವರು ಪಿರ್ಯಾದಿದಾರರಿಗೆ ಕರೆ ಮಾಡಿ ವಿಶಾಲಳು ಫೋನಿಗೆ ಸಿಗುತ್ತಿಲ್ಲ, ನೀವು ಪ್ಲಾಟ್‌ಗೆ ಹೋಗಿ ವಿಚಾರಿಸಿಕೊಂಡು ಬನ್ನಿ ಎಂದು ಹೇಳಿದ್ದು, ಅದರಂತೆ ಪಿರ್ಯಾದಿದಾರರು ಮಗಳು ವಿನಯಳ ಜೋತೆಯಲ್ಲಿ ಸಂಜೆ 6:10 ಗಂಟೆಗೆ ಪ್ಲಾಟ್‌ಗೆ ಬಂದಾಗ Main door lock ಆಗಿದ್ದು , ಆಗ ಪಿರ್ಯಾದಿದಾರರು ಅವರಲ್ಲಿದ್ದ ಕೀ ಯಿಂದ ಬಾಗಿಲು ತೆರೆದು ಒಳಗೆ ನೋಡಿದಾಗ ಬೆಡ್‌ ರೂಮ್‌ನ ನೆಲದ ಮೇಲೆ ವಿಶಾಲಳು ಅಂಗಾತನೇ ಬಿದ್ದುಕೊಂಡಿರುವ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಆಕೆಯ ದೇಹದ ಪಕ್ಕದಲ್ಲಿ ತುಂಡಾದ ಕಪ್ಪು ಬಣ್ಣದ ಎಲೆಕ್ಟ್ರಾನಿಕ್ ಉಪಕರಣದ ಪವರ್ ಕೇಬಲ್ ತುಂಡಾಗಿ ಬಿದ್ದುಕೊಂಡಿರುತ್ತದೆ. ಕುತ್ತಿಗೆಯಲ್ಲಿ ಕಪ್ಪು ಬಣ್ಣದ ಚಾರ್ಜರ್ ಪವರ್ ಕೇಬಲ್ ಬಿಗಿದು ಸುತ್ತಿಕೊಂಡಿರುತ್ತದೆ. ಆಕೆಯು ಧರಿಸಿದ್ದ ಎರಡು ಗಟ್ಟಿ ಚಿನ್ನದ ಬಳೆಗಳು , ನಿತ್ಯ ಧರಿಸುವ ಗಿಡ್ಡ ಕರಿಮಣಿ ಸರ ಮತ್ತು ಒಂದ ಜೋತೆ ಕಿವಿ ಓಲೆ ಒಟ್ಟು 50 ಗ್ರಾಂ.  ಒಟ್ಟು ಮೌಲ್ಯ ರೂಪಾಯಿ 2,00,000/-  ಬೆಲೆಯ  ಚಿನ್ನಾಭರಣಗಳು ಇಲ್ಲದೇ ಇರುವುದು ಕಂಡುಬಂದಿರುತ್ತದೆ. ಯಾರೋ ದುಷ್ಕರ್ಮಿಗಳು ಚಿನ್ನಾಭರಣಗಳನ್ನು ದರೋಡೆ ಮಾಡುವ ಉದ್ದೇಶದಿಂದ ವಿಶಾಲ ಗಾಣಿಗ ರವರನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿ ಅವರ ಮೈಮೇಲಿದ್ದ ಚಿನ್ನಾಭರಣಗಳ್ನು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 133/2021 ಕಲಂ: 449, 302, 392 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಕಾಪು: ಪಿರ್ಯಾದಿದಾರರಾದ ಶ್ರೀಮತಿ ಮಮತಾ (30),  ಗಂಡ : ಉದಯ, ವಾಸ : ಸಿಂದು ನಿವಾಸ ಮಲ್ಲಾರು ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 08/05/2016 ರಂದು ಉದಯ ಎಂಬುವವರೊಂದಿಗೆ  ಮಹಾಲಕ್ಷ್ಮೀ ಸಭಾ ಭವನದಲ್ಲಿ ವಿವಾಹವಾಗಿದ್ದು, ಪಿರ್ಯಾದಿದಾರರ ಮದುವೆ ವೇಳೆ ಪಿರ್ಯಾದಿದಾರರ ಮನೆಯವರೇ ಖರ್ಚನ್ನು ಭರಿಸಿದ್ದು, ಪಿರ್ಯಾದಿದಾರರ ಅತ್ತೆ 2017 ರಲ್ಲಿ ಮೃತಪಟ್ಟ ನಂತರ ಉದಯ ರವರ ಚಿಕ್ಕಮ್ಮ ವಿಮಲ, ಪಿರ್ಯಾದಿದಾರರ ನಾದಿನಿ ಆಶಾ ಮತ್ತು ಮಾವ ಕೃಷ್ಣ ಪೂಜಾರಿ ರವರ ಕಿರುಕುಳ ಪ್ರಾರಂಭವಾಗಿದ್ದು, ಗಂಡ ಉದಯ ಅವರ ಮನೆಯಲ್ಲಿ ವಾಸಮಾಡಲು ಬಿಡದೇ ವಿಚ್ಛೇದನ ನೀಡಬೇಕೆಂದು ಪಿಡಿಸುತ್ತಿದ್ದರು. ಉದಯ ರವರು ಪಿರ್ಯಾದಿದಾರರ ಹೆಸರಿನಲ್ಲಿ ಜಾಗ ಖರಿದಿಸುವುದಾಗಿ ಪಿರ್ಯಾದಿದಾರರ ಚಿನ್ನವನ್ನು  ಅಡ ವಿಟ್ಟು ರೂಪಾಯಿ  1,00,000/- ಪಡೆದಿದ್ದು, ಉದಯರವರು ಪಿರ್ಯಾದಿದಾರರ ಹೆಸರಿನಲ್ಲಿ ಜಾಗ ಖರಿದಿಸದೇ ಇದ್ದು, ಪಿರ್ಯಾದಿದಾರರು ಕೇಳಿದಾಗ ಉದಯ ಮತ್ತು ಅವರ ಮನೆಯವರು ಸೇರಿ ಕಿರುಕುಳ ನೀಡಿ ಮನೆಯಿಂದ ಹೊರಗೆ ಹಾಕಿರುವುದಾಗಿದೆ. ದಿನಾಂಕ 28/06/2021 ರಂದು  ಸಂಜೆ 8:00 ಗಂಟೆಗೆ ಪಿರ್ಯಾದಿದಾರರು ವಾಸ ಮಾಡಿಕೊಂಡಿರುವ ಅಕ್ಕನ ಮನೆಗೆ ಉದಯ ರವರು ಏಕಾಏಕಿ ಪ್ರವೇಶಿಸಿ ಪಿರ್ಯಾದಿದಾರರಿಗೆ ಹಲ್ಲೇ ನಡೆಸಿದ್ದು ಆ ವೇಳೆ ಪಿರ್ಯಾದಿದಾರರ ತಂದೆ ತಾಯಿ, ಅಕ್ಕ ಕೂಡ ಹಲ್ಲೆ ನಡೆಸಿದ್ದು, ಈ ವಿಷಯವನ್ನು ಬೇರೆಯುವರಿಗೆ ತಿಳಿಸಿದ್ದಲ್ಲಿ ಪಿರ್ಯಾದಿದಾರರಿಗೆ ಕೊಲ್ಲುವುದಾಗಿ ಜೀವ ಬೇದರಿಕೆ ಹಾಕಿದ್ದು, ಪ್ರತಿನಿತ್ಯ ಉದಯನು ಪಿರ್ಯಾದಿದಾರರಿಗೆ ಮತ್ತು ಪಿರ್ಯಾದಿದಾರರ ಅಕ್ಕನಿಗೆ ಫೋನ್ ಕರೆ ಮಾಡಿ  ಬೆದರಿಕೆ ಹಾಕುತ್ತಿದ್ದು, ಹಾಗೂ ಕುಡಿತದ ಚಟ ಸಹ ಹೊಂದಿರುತ್ತಾನೆ. ಪ್ರತಿ ನಿತ್ಯ ಫೊನ್ ಕರೆ ಮಾಡಿ ಪಿರ್ಯಾದಿದಾರರಿಗೆ ಜೀವ ಬೆದರಿಕೆ ನೀಡಿ ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 115/2021  ಕಲಂ: 323, 498(A), 448, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 12/07/2021 ರಂದು ಸಂತೋಷ ಬಿ.ಪಿ, ಪೊಲೀಸ್ ಉಪನಿರೀಕ್ಷಕರು, ಕೋಟ ಪೊಲೀಸ್‌ ಠಾಣೆ ಇವರು ಗಿಳಿಯಾರು ಗ್ರಾಮದ ಕದ್ರಿಕಟ್ಟು ಎಂಬಲ್ಲಿ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿರುವಾಗ ಓರ್ವ  ಸ್ಕೂಟಿ  ಸವಾರ  ತನ್ನ ಸ್ಕೂಟಿಯನ್ನು ಪಡುಕೆರೆ  ಕಡೆಯಿಂದ  ಕೋಟ  ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದವನು ವಾಹನ ತಪಾಸಣೆ ಮಾಡುತ್ತಿದ್ದವರನ್ನು ನೋಡಿ  ಸ್ಕೂಟಿಯನ್ನು  ಹಿಂದಕ್ಕೆ ತಿರುಗಿಸಿ ಪಡುಕೆರೆ ಕಡೆಗೆ ಆರೋಪಿ ಸ್ಕೂಟಿ ಸಮೇತ ಪರಾರಿಯಾಗಲು ಪ್ರಯತ್ನಿಸಿದ್ದು, ಅಷ್ಟರಲ್ಲಿ ಆತನನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದುಕೊಂಡು ನಂತರ ಓಡಿ ಹೋಗಲು ಕಾರಣವನ್ನು ಕೇಳಲಾಗಿ ಆರೋಪಿಯು  ಉತ್ತರಿಸಲು ತಡವರಿಸುತ್ತಿದ್ದು,  ವ್ಯಕ್ತಿಯು ಠಾಣಾ ವ್ಯಾಪ್ತಿಯ ಎಂಓಬಿ ಆಸಾಮಿಯಾಗಿರುವುದರಿಂದ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ವ್ಯಕ್ತಿಯು ಸ್ಕೂಟಿಯಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿರುತ್ತಾನೆ. ನಂತರ ಶೋಧನೆ ಮಾಡಲಾಗಿ ಆರೋಪಿ ಇಬ್ರಾಹಿಂ @ ಆಕಾಶಭವನ ಇಬ್ರಾಹಿಂ @ ಎಸ್ಕೇಪ್‌ಇಬ್ರಾಹಿಂನ  KA-20-ED-8271 ನೇ Hero Maestro ಸ್ಕೂಟಿಯ ಸೀಟಿನ ಅಡಿಯಲ್ಲಿರುವ ಬಾಕ್ಸ್‌‌‌‌‌‌‌ನಲ್ಲಿ ಒಂದು ರಟ್ಟಿನ ಬಾಕ್ಸ್‌ನಲ್ಲಿದ್ದ ಗಾಂಜಾವನ್ನು ಪ್ರತ್ಯೇಕವಾಗಿ ಪ್ಲಾಸ್ಟಿಕ್‌ ತೊಟ್ಟೆಯಲ್ಲಿ ಹಾಕಿ ತೂಕ ಮಾಡಲಾಗಿ  ಗಾಂಜಾದ ತೂಕವು 1 ಕೆ.ಜಿ 420 ಗ್ರಾಂ ಆಗಿದ್ದು ಗಾಂಜಾದ  ಮೌಲ್ಯ 35,000/- ರೂಪಾಯಿ ಆಗಿರುತ್ತದೆ. ಬಳಿಕ ಆರೋಪಿ ಇಬ್ರಾಹಿಂ @ ಆಕಾಶಭವನ ಇಬ್ರಾಹಿಂ @ ಎಸ್ಕೇಪ್‌ ಇಬ್ರಾಹಿಂನ ಕಿಸೆಯಲ್ಲಿದ್ದ 450/- ರೂಪಾಯಿ ಹಣ ಹಾಗೂ ಮೊಬೈಲ್ ಪೋನ್‌ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 139/2021 ಕಲಂ: 8A(c), 20 (b)(ii)(B) NDPS Act 1985ರಂತೆ ಪ್ರಕರಣ ದಾಖಲಾಗಿರುತ್ತದೆ.      

ಇತ್ತೀಚಿನ ನವೀಕರಣ​ : 13-07-2021 10:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ