ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಪ್ರಸಾದ  ದೇವಾಡಿಗ (22), ತಂದೆ: ನಾರಾಯಣ  ದೇವಾಡಿಗ,  ವಾಸ: ತಟ್ಟೆಗುಳ್ಳಿ  ಕಮಲಶಿಲೆ ಗ್ರಾಮ  ಕುಂದಾಪುರ  ತಾಲೂಕು ಇವರು ದಿನಾಂಕ 11/06/2022  ರಂದು 20:30 ಗಂಟೆಗೆ  ಕುಂದಾಪುರ ತಾಲೂಕಿನ  ಸಿದ್ದಾಪುರ  ಗ್ರಾಮದ  ತಾರೇಕೊಡ್ಲು  ಎಂಬಲ್ಲಿ KA-20-E- 5651 ನೇ  ನಂಬ್ರದ ಮೋಟಾರ್  ಸೈಕಲ್‌ನಲ್ಲಿ   ಕಮಲಶಿಲೆ  ಕಡೆಗೆ   ಹೋಗುತ್ತಿರುವಾಗ  ಆರೋಪಿ KA- 20-AB-0273  ನೇ  ನಂಬ್ರದ  ಆಟೋರಿಕ್ಷಾವನ್ನು  ಮೋಟಾರ್  ಸೈಕಲ್  ಎದುರುಗಡೆ   ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು   ಹೋಗುತ್ತಿದ್ದು, ಈ  ಸಮಯ    ಯಾವುದೇ  ಮುನ್ಸೂಚನೇ  ನೀಡದೇ ಒಮ್ಮೆಲೇ  ಆತನ  ಬಲಬದಿಗೆ  ತಿರುಗಿಸಿ   ಪಿರ್ಯಾದಿದಾರರು  ಚಲಾಯಿಸಿಕೊಂಡು  ಹೋಗುತ್ತಿದ ಮೋಟಾರ್   ಸೈಕಲ್‌‌ಗೆ ಡಿಕ್ಕಿ  ಹೊಡೆದ ಪರಿಣಾಮ   ಎಡಕಾಲು , ಹಣೆ  ಹಾಗೂ  ಎಡ ಭುಜದ ಬಳಿ  ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 61/2022 ಕಲಂ: 279, 337   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಶಂಕರನಾರಾಯಣ: ಪಿರ್ಯಾದಿದಾರರಾದ ಪ್ರಸಾದ ಭಟ್ (32), ತಂದೆ: ದಯಾನಂದ ಭಟ್, ವಾಸ: ಶ್ರೀ ಲಕ್ಷೀ  ನಾರಾಯಣ  ಸದನ  ಹಳ್ಳಾಡಿ   ಹರ್ಕಾಡಿ ಅಂಚೆ ಮತ್ತು ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 12/06/2022  ರಂದು 16:00 ಗಂಟೆಗೆ  ಆರೋಪಿ ವಿವೇಕ್  KA-03-MF-7192  ನಂಬ್ರದ  ಕಾರನ್ನು  ಬ್ರಹ್ಮಾವರ ತಾಲೂಕಿನ  ಹಿಲಿಯಾಣ  ಗ್ರಾಮದ ಹೈಕಾಡಿ ಎಂಬಲ್ಲಿ  ಗೋಳಿಯಂಗಡಿ ಕಡೆಯಿಂದ  ಹಾಲಾಡಿ ಕಡೆಗೆ  ಅತೀ ವೇಗ  ಹಾಗೂ  ಅಜಾಗರೂಕತೆಯಿಂದ ಆತನ ತೀರಾ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರು ಹಾಲಾಡಿ  ಕಡೆಯಿಂದ  ಗೋಳಿಯಂಗಡಿ  ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-02-MD-4366 ನೇ  ನಂಬ್ರದ ಕಾರಿಗೆ ಡಿಕ್ಕಿ  ಹೊಡೆದ ಪರಿಣಾಮ ಕಾರಿನಲ್ಲಿ  ಪ್ರಯಾಣ ಮಾಡುತ್ತಿದ್ದ  ಶ್ರೀಮತಿ ಭಾರತಿ  ಭಟ್,  ದಯಾನಂದ  ಭಟ್   ಹಾಗೂ   ದಿನೇಶ  ಇವರಿಗೆ   ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 62/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಯಶೋಧ (52), ಗಂಡ  ಚಂದ್ರಶೇಖರ  ಶೆಟ್ಟಿ, ವಾಸ ಜನನಿ ನಿವಾಸ, ಅತ್ರಿನಗರ, ತೆಳ್ಳಾರು 4 ನೇ ಅಡ್ಡರಸ್ತೆ, ಕಸಬಾ ಗ್ರಾಮ,  ಕಾರ್ಕಳ ತಾಲೂಕು ಇವರು ದಿನಾಂಕ 10/06/2022 ರಂದು ಕಾರ್ಕಳ ಕಸಬಾದ ಅನಂತಶಯನದ ಬಳಿ ಇರುವ ತಮ್ಮ ಅಂಗಡಿಯಿಂದ  ತೆಳ್ಳಾರು ರಸ್ತೆ ಅತ್ರಿನರದಲ್ಲಿರುವ ಮನೆಗೆ ಹೋಗಲು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ರಾತ್ರಿ 19:30 ಗಂಟೆಗೆ ಕಾರ್ಕಳ ಕಸಬಾದ ವಿಜಯಾ ಬಾರ್  ಬಳಿ  ತಲುಪಿದಾಗ  ನಂಬ್ರ ತಿಳಿಯದ ಕಪ್ಪು ಬಣ್ಣದ  ಮೋಟಾರ್ ಸೈಕಲೊಂದನ್ನು ಅದರ  ಸವಾರನು ಅನಂತಶಯನ ಜಂಕ್ಷನ್ ಕಡೆಯಿಂದ ತೆಳ್ಳಾರು  ರಸ್ತೆ  ಕಡೆಗೆ  ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು  ಪಿರ್ಯಾದಿದಾರರ ಬಲಕಾಲಿನ ಮೂಳೆ ಮುರಿತವಾಗಿದ್ದಲ್ಲದೇ ಎಡಕಾಲಿಗೆ ಮತ್ತು ತಲೆಗೆ ರಕ್ತಗಾಯವಾಗಿದ್ದು  ಡಿಕ್ಕಿಹೊಡೆದ ಮೋಟಾರ್ ಸೈಕಲ್ ಸವಾರನು ಅಫಘಾತದ ವೇಳೆ ಮೋಟಾರ್ ಸೈಕಲ್‌ನೊಂದಿಗೆ  ರಸ್ತೆಗೆ  ಬಿದ್ದಿದ್ದು ನಂತರ ಮೋಟಾರ್ ಸೈಕಲ್‌ನೊಂದಿಗೆ ಸ್ಥಳದಿಂದ ಪರಾರಿಯಾಗಿರುತ್ತಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  86/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    
  • ಬ್ರಹ್ಮಾವರ: ದಿನಾಂಕ 12/06/2022 ರಂದು ಪಿರ್ಯಾದಿದಾರರಾದ ಪ್ರಶಾಂತ ನಾಯ್ಕ (18), ತಂದೆ: ಸುಂದರ ನಾಯ್ಕ, ವಾಸ: ಪ್ರಶಾಂತ ನಿಲಯ ನೀಲಾವರ ಗುಡ್ಡೆ ನೀಲಾವರ ಗ್ರಾಮ ಬ್ರಹ್ಮಾವರ ತಾಲೂಕು ಉಡುಪಿ ಇವರು KA-20-EY-8761 ನಂಬ್ರದ HONDA DEO SCOTTY ಮೋಟಾರ್‌ಸೈಕಲ್‌ನಲ್ಲಿ  ಸಹಾಸವಾರಿಣಿಯಾಗಿ ತಾಯಿ ಬೇಬಿಯವರನ್ನು ಕುಳ್ಳಿರಿಸಿಕೊಂಡು ಕೆಳಕುಂಜಾಲಗೆ ಹೊರಟಿದ್ದು ನೀಲಾವರ ಗ್ರಾಮದ ಮೇಲ್‌ ಕುಂಜಾಲ ತಲುಪುವಾಗ ಮೇಲ್‌ ಕುಂಜಾಲ್‌ ಕಡೆಯಿಂದ KA-03-MG-5811ನೇ SANTRO CAR ನ್ನು ಅದರ ಚಾಲಕ ಕೌಶಿಕ ಅತೀವೇಗ ಹಾಗೂ ಆಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ನಿಧಾನಿಸದೆ  ಓಮ್ಮೇಲೆ ಪಿರ್ಯಾದಿದಾರರು ಹೊಗುತ್ತಿದ ಬಲ್ಜಿ ರಸ್ತೆ ಕಡೆಗೆ ಚಲಾಯಿಸಿ SCOTTY ಗೇ ಡಿಕ್ಕಿ ಹೊಡೆದು SCOTTY ಸಮೇತ ಪಿರ್ಯಾದಿದಾರರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡ ಮುಂಗೈ ಗಂಟಿಗೆ ಒಳ ಜಖಂ ಎಡ ಕಣ್ಣಿನ ಬಳಿ ರಕ್ತಗಾಯ ಎಡ ಕಾಲಿನ ಪಾದದ ಬಳಿ ರಕ್ತಗಾಯ ಸಹಾಸವಾರಿಣಿ ಪಿರ್ಯಾದಿದಾರರ ತಾಯಿಗೆ ಎರಡು ಕಾಲಿನ ಕೋಲು ಕಾಲಿಗೆ ಪೆಟ್ಟಗಿದ್ದು ಎಡ ಕಾಲಿಗೆ ರಕ್ತಗಾಯವಾಗಿರುತ್ತದೆ. ಕೂಡಲೇ ಪಿರ್ಯಾದಿದಾರರನ್ನು ಹಾಗೂ ಅವರ ತಾಯಿಯನ್ನು  ಸ್ಥಳೀಯರು ಉಪಚರಿಸಿ 108 ಅಂಬುಲೆನ್ಸ್‌ನ್ನಲ್ಲಿ ಚಿಕಿತ್ಸೆಗಾಗಿ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 102/2022 ಕಲಂ : 27̧9, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ ಮಾಲಿನಿ (30), ಗಂಡ: ಉಮೇಶ ಮಡಿವಾಳ, ವಾಸ: ಗೋರಾಜೆ 76 ಹಾಲಾಡಿ ಗ್ರಾಮ ಕುಂದಾಪುರ ತಾಲೂಕು ಇವರ ಗಂಡ ಉಮೇಶ ಮಡಿವಾಳ (33) ಇವರು   ಮೊದಲು ಬೆಂಗಳೂರಿನಲ್ಲಿ  ಕ್ಯಾಂಟೀನ್ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ಯಾವುದೇ ಕೆಲಸವಿಲ್ಲದೆ ಮಾನಸಿಕವಾಗಿ ನೊಂದು ಕುಡಿದ  ಹವ್ಯಾಸ ಮೈಗೂಡಿಸಿಕೊಂದ್ದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 12/06/2022 ರ ಬೆಳಿಗಿನ ಜಾವ 03:00 ಗಂಟೆಯಿಂದ 11:30 ಗಂಟೆಯ ಮದ್ಯಾವದಿಯಲ್ಲಿ ಕುಂದಾಪುರ ತಾಲೂಕು 76 ಹಾಲಾಡಿ ಗ್ರಾಮದ ಗೋರಾಜೆಯ  ಚೀರು ಮಡಿವಾಳ್ತಿ ಎಂಬುವರ ಜಾಗದಲ್ಲಿನ  ಆವರಣ ಇಲ್ಲದ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 15/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ನಾಗರಾಜು ಸುರ್ವಣ (47), ತಂದೆ:ಶ್ಯಾಮ ಕರ್ಕೇರ, ವಾಸ: ಬ್ರಹ್ಮಾವರ ತಾಲೂಕು  ಚೇರ್ಕಾಡಿ ಗ್ರಾಮ ಬಾಯರ್‌ ಬೆಟ್ಟು ಇವರ  ಪಕ್ಕದ ಮನೆಯ ವನಿತಾ ಡಿ ಮೆಲ್ಲೋ ಹಾಗೂ ಅವರ ತಾಯಿ ಪಾವಸ್ತಿನ್‌ ಹಾಗೂ ಪಿರ್ಯಾದಿದಾರರಿಗೂ ಬಿನ್ನಾಭಿಪ್ರಾಯಗಳು ಇದ್ದು ಪಿರ್ಯಾದಿದಾರರು ದಿನಾಂಕ 12/06/2022 ರಂದು ಬೆಳಿಗ್ಗೆ 9:15 ಗಂಟೆಗೆ ಪಿರ್ಯಾದಿದಾರರು ಮನೆಯ ಟಾಯ್ಲಟ್‌ನಲ್ಲಿ ಕುಳಿತಿರುವಾಗ ಕಿಟಕಿಗೆ ಯಾರೋ ಕಲ್ಲು ಹೊಡೆದು ಗ್ಲಾಸ್‌ ತುಂಡಾಗಿ ಚೂಪಾದ ತುಂಡು ಪಿರ್ಯಾದಿದಾರರ ಬಲಹಣೆಯ ಭಾಗಕ್ಕೆ ತಾಗಿ ರಕ್ತ ಚಿಮ್ಮಿರುತ್ತದೆ ಪಿರ್ಯಾದಿದಾರರು  ಹೊರಗಡೆ ನೋಡಿದಾಗ ಪಿರ್ಯಾದಿದಾರರ ಜಾಗದಿಂದ ಪಾವಸ್ತಿನ್‌ ರವರು ಅವರ ಮನೆಕಡೆಗೆ ನೆಡೆದುಕೊಂಡು ಹೋಗುತ್ತಿದ್ದು ಇದೇ ಸಮಯದಲ್ಲಿ  ವನಿತಾ ಡಿ ಮೆಲ್ಲೋ ರವರು ಪಿರ್ಯಾದಿದಾರರ ಮನೆಯ ಬೆಡ ರೂಂ ನ ಕಿಟಕಿಗೆ ಕಲ್ಲನ್ನು  ಹೊಡೆತ್ತಿರುವುದು ಕಂಡು ಬಂತು ಪಿರ್ಯಾದಿದಾರರು ಬೆಡ್‌ ರೂಂ ಒಳಗೆ ಹೋಗಿ  ನೋಡಿದಾಗ ಪಶ್ಚಿಮದ ಬದಿಯ ಕಿಟಿಕಿಯ ಎರಡು ಗ್ಲಾಸ್‌ಗಳು ತುಂಡಾಗಿ ಬಿದ್ದಿರುತ್ತದೆ ಈ ಘಟನೆಯಿಂದ ಪಿರ್ಯಾದಿದಾರರಿಗೆ  5000 ರೂಪಾಯಿ ನಷ್ಟವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 104/2022 ಕಲಂ: 447, 427, 337 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಬ್ರಹ್ಮಾವರ: ಪಿರ್ಯಾದಿದಾರರಾದ ವನಿತಾ ಡಿ ಮೆಲ್ಲೋ (39), ತಂದೆ: ಲಾರೆನ್ಸ್‌ ಡಿಮೆಲ್ಲೋ, ವಾಸ: ಬ್ರಹ್ಮಾವರ ತಾಲೂಕು  ಚೇರ್ಕಾಡಿ ಗ್ರಾಮ ಉಡುಪಿ ಹಾಗೂ ನಾಗರಾಜ ಸುವರ್ಣರವರಿಗೂ  ಜಾಗ ಹಾಗೂ ರಸ್ತೆಯ ಬಗ್ಗೆ ತಕರಾರು ಇದ್ದು,  ಪಿರ್ಯಾದಿದಾರರು ದಿನಾಂಕ 12/06/2022  ಬೆಳಿಗ್ಗೆ 8:30 ಗಂಟೆಗೆ ಮನೆಯ ಹಿಂಬಾಗಿಲಿನಲ್ಲಿ ಕುಳಿತುಕೊಂಡಿರುವಾಗ ಪಿರ್ಯಾದಿದಾರ ಮನೆಯ  ಸಮೀಪದಲ್ಲಿರುವ ನಾಗರಾಜ ಸುವರ್ಣರವರು  ಜಾಗದಲ್ಲಿ ನಿಂತು ಕಬ್ಬಿಣದ ಸರಳನ್ನು ಹಿಡಿದು ಜೀವ ಬೆದರಿಕೆ ಹಾಕಿದ್ದೂ ಅಲ್ಲದೇ ಪಿರ್ಯಾದಿದಾರರು ಬೆಳಿಗ್ಗೆ  ೦9:37 ಗಂಟೆಗೆ  ಮನೆಯ ಹೊರಗಡೆ ಇರುವ ಉದಯವಾಣಿ ಪೇಪರ್‌ ತರಲು ಬಂದಾಗ ನಾಗರಾಜ ಸುವರ್ಣ ಅವರ ಮನೆಯ ಒಳಗೆ ಕಿಟಕಿಯ  ಬಾಗಿಲ ಗ್ಲಾಸ್‌ನ್ನು  ಒಡೆದು ಹಾಕಿ ಶಬ್ದ ಮಾಡಿ  ಭಯಭೀತಗೊಳಿಸಿ ತೊಂದರೆ ಮಾಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 103/2022 ಕಲಂ: 506(2) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

     

ಇತ್ತೀಚಿನ ನವೀಕರಣ​ : 13-06-2022 09:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080