ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ :

  • ಬ್ರಹ್ಮಾವರ : ದಿನಾಂಕ 12.05.2023 ರಂದು ಫಿರ್ಯಾದಿ ಶೇಖಪ್ಪ, (35 ವರ್ಷ), ತಂದೆ: ಹವಳಪ್ಪ ಮಾದರ, ವಾಸ: ಕೆರೂರು, ಬೆನ್ನಗುಂಡಿ ಪ್ಲಾಟ, ಹನುಮಂತ ದೇವಸ್ಥಾನ, ಬಾದಾಮಿ ತಾಲೂಕು, ಬಾಗಲಕೋಟೆ ಜಿಲ್ಲೆರವರು ಬಿಜಾಪುರದ ಸಮೀರ್‌ ಎಂಬವರಿಗೆ ಸೇರಿದ ಗೂಡ್ಸ್‌ ಲಾರಿಯನ್ನು ಚಲಾಯಿಸಿಕೊಂಡು ಮಂಗಳೂರಿನಿಂದ ಯಾದವಾಡಕ್ಕೆ ಹೊರಟು ಉಡುಪಿ – ಕುಂದಾಪುರ ರಾಹೆ 66ರಲ್ಲಿ ಹೋಗುವಾಗ ಸಂಜೆ ಸುಮಾರು 6:30 ಗಂಟೆಗೆ ಬ್ರಹ್ಮಾವರ ಎಸ್‌.ಎಮ್‌.ಎಸ್‌ ಕಾಲೇಜು ಎದರು ತಲುಪುವಾಗ, ಅವರ ಮಾಲಿಕರಿಗೆ ಸೇರಿದ ನೊಂದಣಿ ನಂಬ್ರ KA.28.AA.0722 ನೇ ಲಾರಿಯನ್ನು ಚಲಾಯಿಸಿಕೊಂಡು ಬರುತ್ತಿದ್ದ ವಿರೇಶ್‌ ಎಂಬವರು ಹೇರೂರು ಗ್ರಾಮದ, ಹೇರೂರು ಎಣ್ಣೆ ಫ್ಯಾಕ್ಟರಿ ಎದುರು ರಾಹೆ 66ರಲ್ಲಿ ತನ್ನ ಲಾರಿಯನ್ನು ನಿಲ್ಲಿಸಿ ಲಾರಿಯ ಹಿಂಬದಿ ನಿಂತಿರುವಾಗ, ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ರಾ.ಹೆ 66ರಲ್ಲಿ ಅಪರಿಚಿತ ಬಸ್ಸು ಚಾಲಕನು ತನ್ನ ಬಾಬ್ತು ಬಸ್ಸ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಿರೇಶನಿಗೆ ಡಿಕ್ಕಿ ಹೊಡೆದು ಬಸ್ಸ್‌ನ್ನು ನಿಲ್ಲಿಸದೇ ಪರಾರಿಯಾಗಿ ಹೋಗಿರುತ್ತಾನೆ. ಈ ಅಪಘಾತದ ಪರಿಣಾಮ ವಿರೇಶನ ತಲೆಯ ಹಿಂಬದಿ ರಕ್ತ ಗಾಯವಾಗಿ, ಮಾತನಾಡದೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುತ್ತಾನೆ. ಗಾಯಗೊಂಡ ವಿರೇಶನನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಅಪಘಾತವೇಸಗಿ ಪರಾರಿಯಾದ ಆರೋಪಿಯ ಮೇಲೆ ಸೂಕ್ತ ಕಾನೂನುಕ್ಕಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 97/2023  ಕಲಂ. 279, 338 ಐಪಿಸಿ ಹಾಗೂ134 (A) & (B), 187 ಐಎಮ್‌ವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪಿರ್ಯಾದು ಗುಲಾಬಿ (45) ಗಂಡ: ವೆಂಕಟರಮಣ ನಾಯಕ್ ವಾಸ: ಕಾಜರಗುತ್ತು, ಶ್ರೀನಿವಾಸ ನಗರ, ಅಂಜಾರು ಗ್ರಾಮ, ಉಡುಪಿ ತಾಲೂಕು ಇವರ ಗಂಡ ವೆಂಕಟರಮಣ ನಾಯಕ್ (50) ರವರು ಓಂತಿಬೆಟ್ಟುವಿನ ಗಣೇಶ್ ಹೋಟೇಲ್ ನಲ್ಲಿ ಸಪ್ಲಯರ್ ಕೆಲಸ ಮಾಡಿಕೊಂಡಿದ್ದು, ದಿ:28/04/2023 ರಂದು ಬೆಳಿಗ್ಗೆ 07.00 ಗಂಟೆಗೆ ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಇದ್ದು, ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಿಸಿದ್ದು, ಈ ದಿನ ದಿ:12/05/2023 ರಂದು 3.30ಗಂಟೆಗೆ ಪಿರ್ಯಾದಿದಾರರಿಗೆ ಮಾಹಿತಿ ಬಂದಂತೆ ಪಿರ್ಯಾದಿದಾರರು ಬೊಮ್ಮಾರಬೆಟ್ಟು ಗ್ರಾಮದ ಎಂಎನ್ಎಸ್ ಬಿಲ್ಡಿಂಗ್ ನ ಎದುರಿರುವ ಹಾಡಿಯಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ದೊರೆತ ಮೃತ ದೇಹವನ್ನು ಗುರುತಿಸಿ,ಇದು ನನ್ನ ಗಂಡ ವೆಂಕಟರಮಣ ನಾಯಕ್ ರವರ ಮೃತ ದೇಹವೆಂದು ತಿಳಿಸಿರುತ್ತಾರೆ. ಪಿಯಾದಿದಾರರ ಗಂಡ ವೆಂಕಟರಮಣ ನಾಯಕ್ ರವರು ಮದ್ಯಪಾನದ ಅಭ್ಯಾಸವನ್ನು ಹೊಂದಿದ್ದು, ಹಾಗೂ ಎರಡು ಕಾಲಿನ ಗಂಟು ನೋವು ಸಮಸ್ಯೆ ಇದ್ದು, ಅಲ್ಲದೆ ಇತ್ತೀಚೆಗೆ ಮನೆ ಕಟ್ಟಲು ಸಾಲ ಮಾಡಿಕೊಂಡಿದ್ದು, ಇದೇ ಕಾರಣದಿಂದ ಅಥವಾ ಇನ್ನಾವುದೋ ತನ್ನ ವೈಯಕ್ತಿಕ ಕಾರಣದಿಂದ ದಿ: 28/04/2023 ರಂದು ಬೆಳಿಗ್ಗೆ 07.00 ಗಂಟೆಯಿಂದ ದಿ:12/05/2023 ರ ಮಧ್ಯಾಹ್ನ 3.30 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆ ಯುಡಿಆರ್ ನಂಬ್ರ: 18/2023 ಕಲಂ: 174  ಸಿ ಆರ್ ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ : ಪಿರ್ಯಾದಿ ಶಾರದ ಹೆಗ್ಡೆ, ಪ್ರಾಯ: 55 ವರ್ಷ, ಗಂಡ: ಮಂಜುನಾಥ ಹೆಗ್ಡೆ, ವಾಸ: ಬಾಳಿಕೆರೆ ಆಳ್ವರ ಮನೆ, ದೇವಲ್ಕುಂದ ಗ್ರಾಮ, ಕುಂದಾಪುರ ತಾಲೂಕು ಇವರ ಗಂಡ ಸುಮಾರು 7 ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದವರು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 12.05.2023 ರಂದು 11:00 ಗಂಟೆಯಿಂದ 13:30 ಗಂಟೆಯ ನಡುವಿನ ಅವಧಿಯಲ್ಲಿ ಕುಂದಾಪುರ ತಾಲೂಕು ದೇವಲ್ಕುಂದ ಗ್ರಾಮದ ಬಾಳಿಕೆರೆ ಎಂಬಲ್ಲಿ ಹರಿಯುವ ಚಕ್ರಾ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್‌ ನಂ: 15/2023 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತರ ಪ್ರಕರಣ :

  • ಉಡುಪಿ : ಪಿರ್ಯಾದಿ ಲಕ್ಷ್ಮೀ ಜಿ. ನಾಯ್ಕ, ಪ್ರಾಯ:63 ವರ್ಷ, ಗಂಡ: ಪ್ರಭಾಕರ.ಎನ್, ವಾಸ: ಸರಸ್ವತಿ ನಿಲಯ, ಕಾಡಿಕಂಬ್ಳ , ಶಿರ್ವ ಇವರು ಇವರು 0ನಿವೃತ್ತ ಶಿಕ್ಷಕಿಯಾಗಿದ್ದು ದಿನಾಂಕ:12.05.2023 ರಂದು ಸಮಯ ಸುಮಾರು 12:30 ಗಂಟೆಗೆ ಯಾರೋ ಅಪರಿಚಿತ ವ್ಯಕ್ತಿ ಮೊ.ನಂ 9752326498ನೇ ನಂಬ್ರದಿಂದ ಕರೆ ಮಾಡಿ ಪಿರ್ಯಾದಿದಾರರು OLX ನಲ್ಲಿ ಮನೆ ಬಾಡಿಗೆಗೆ ಹಾಕಿರುವ ಬಗ್ಗೆ ವಿಚಾರಿಸಿ ತಾನು ಮನೆ ಬಾಡಿಗೆಗೆ ಬರುವುದಾಗಿ ತಿಳಿಸಿ ಬಾಡಿಗೆ ಮನೆಗೆ ಡೆಪಾಸಿಟ್‌ ಹಣವನ್ನು ನೀಡುವುದಾಗಿ ತಿಳಿಸಿ ಬ್ಯಾಂಕ್ ಖಾತೆ ಸಂಖ್ಯೆ ,ಐ.ಎಫ್.ಎಸ್.ಸಿ ಸಂಖ್ಯೆಯನ್ನು ನೀಡಿ ತಾನು ಹೇಳಿದಂತೆ ಗೂಗಲ್ ಪೇ ವ್ಯವಹರಣೆ ಮಾಡಲು ತಿಳಿಸಿದಾಗ ಪಿರ್ಯಾದಿದಾರರ ಶಿರ್ವದ ಎಸ್.ಬಿ.ಐ ಉಳಿತಾಯ ಖಾತೆ ಸಂಖ್ಯೆ 64041417816ನೇ ದರಿಂದ ರೂ.30,000/-, ರೂ.29,999/- ರೂ.38,996 ಹೀಗೆ ಹಂತ ಹಂತವಾಗಿ ಒಟ್ಟು ರೂ 98,995 ಹಣವನ್ನು ಮೋಸದಿಂದ ಡೆಪಾಸಿಟ್ ಮಾಡಿಸಿಕೊಂಡು ಪಿರ್ಯಾದಿದಾರರಿಗೆ ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 86/2023, ಕಲಂ: 66(C), 66(D)ಐ.ಟಿ. ಆಕ್ಟ್ಯ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಉಡುಪಿ : ಪಿರ್ಯಾದಿ ಶ್ರಿಲಕ್ಷ್ಮೀ ಪ್ರಾಯ: 25 ವಷ್ ತಂದೆ: ದೇವುದಾಸ್ ಕುಂದರ್ , ವಾಸ: ಶ್ರಿ ಲಕ್ಷ್ಮೀ ದೇವಿ, ಮನೆ ನಂಬ್ರ AIA, ಮಲ್ಪೆ, ಇವರು ajio ಆ್ಯಪ್‌ನಲ್ಲಿ ಟಿಶರ್ಟ್ ನ್ನು ಬುಕ್ ಮಾಡಿದ್ದು. ಈ ದಿನ ಪಿರ್ಯಾದಿದಾರರಿಗೆ ಮೊ.ನಂಬ್ರ 9088109251 ನೇದರಿಂದ ಕರೆ ಮಾಡಿ ajio ಆ್ಯಪ್‌ ನಿಂದ ಕರೆ ಮಾಡುವುದಾಗಿ ನಂಬಿಸಿ ನಿಮ್ಮ ಕೋರಿಯರ್ ಬಂದಿರುವುದಾಗಿ ತಿಳಿಸಿ ಈ ಬಗ್ಗೆ ಹಣ ಪಾವತಿ ಮಾಡಲು ನಿಮಗೆ ಲಿಂಕ್ ಕಳುಹಿಸಿರುವುದಾಗಿ ತಿಳಿಸಿದ್ದು  ಸದ್ರಿ ಲಿಂಕ್ ನ್ನು ಪಿರ್ಯಾದಿದಾರರು ಕ್ಲಿಕ್ ಮಾಡಿದಾಗ ಪಿರ್ಯಾದುದಾರರ ಕೆನರಾ ಬ್ಯಾಂಕ್ ನಿಂದ ರೂ.40,165 ಹಾಗೂ ಯುನಿಯನ್ ಬ್ಯಾಂಕ್‌ ನಿಂದ ರೂ 57,585 ಒಟ್ಟು ರೂ 97,750/- ಹಣವನ್ನು ಮೋಸದಿಂದ ವರ್ಗಾವಣೆ ಮಾಡಿಸಿಕೊಂಡು ಪಿರ್ಯಾದಿದಾರರಿಗೆ ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ  ಸೆನ್ ಅಪರಾಧ ಪೊಲೀಸ್‌ ಠಾಣಾ ಅ.ಕ್ರ: 87/2023 ಕಲಂ: 66(C), 66(D)ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :

  • ಉಡುಪಿ : ಪಿರ್ಯಾದು ಕೆ. ಬಾಲಕೃಷ್ಣ ಶೆಣೈ  ಪ್ರಾಯ: 61 ವರ್ಷ ತಂದೆ: ದಿ. ವಾಸುದೇವ ಶೆಣೈ ವಾಸ: ದ್ವಾರಕ, ಅನಂತನಗರ 2ನೇಹಂತ, ಮಣಿಪಾಲ, ಉಡುಪಿ ತಾಲೂಕು & ಜಿಲ್ಲೆ ಇವರು ಉಡುಪಿ ಮಸೀದಿ ರಸ್ತೆಯಲ್ಲಿರುವ ಸೆಂಚುರಿ ಕಂಪಾರ್ಟ್ಸ್ ಹೋಟೇಲ್ನ ಎಂ.ಡಿ ಆಗಿದ್ದು, ದಿನಾಂಕ 12/05/2023 ರಂದು 18:40 ಗಂಟೆಗೆ ಪಿರ್ಯಾದುದಾರರು ತಮ್ಮ ಕಾರನ್ನು ಹೋಟೇಲ್ನಿಂದ ಚಾಲನೆ ಮಾಡಿಕೊಂಡು ಬರುತ್ತಿರುವಾಗ ಸ್ಕೂಟರ್ ನಂಬ್ರ: KA20EZ8863ನೇದನ್ನು ಖಾಸಗಿ ಮಾರ್ಗದ ಮಧ್ಯದಲ್ಲಿ ನಿಲ್ಲಿಸಿದ್ದು, ಪಿರ್ಯಾದುದಾರರು ಸ್ಕೂಟರ್ನ್ನು ಪಕ್ಕಕ್ಕೆ ಇಡಲು ಪ್ರಯತ್ನಿಸುವಾಗ ಸ್ಕೂಟರ್ ಮೇಲಿದ್ದ ಹೆಲ್ಮೇಟ್ ಕೆಳಕ್ಕೆ ಬಿದ್ದಿರುವುದನ್ನು ಪಿರ್ಯಾದುದಾರರು ಎತ್ತಿ ಪಕ್ಕಕ್ಕೆ ಇಟ್ಟಿರುತ್ತಾರೆ. ನಂತರ 18:50 ಗಂಟೆಗೆ ಆಪಾದಿತ 5 ಜನ ಅಪರಿಚಿತರು (ಇಬ್ಬರು ಗಂಡಸರು ಮತ್ತು ಮೂವರು ಮಹಿಳೆಯರು)ರು ಸಮಾನ ಉದ್ದೇಶದಿಂದ ಪಿರ್ಯಾದುದಾರರ ಹೋಟೇಲ್ ಕಟ್ಟಡದ ಒಳಗೆ ಬಂದು, ಅವಾಚ್ಯ ಶಬ್ದಗಳಿಂದ ಬೈದು, ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿ, ಕೈಯಿಂದ ಹಾಗೂ ಹ್ಯಾಂಡ್ ಬ್ಯಾಗ್ನಿಂದ ಪಿರ್ಯಾದುದಾರರಿಗೆ ಹಲ್ಲೆ ಮಾಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  66/2023 ಕಲಂ: 143, 147, 448, 323, 324, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ : ಪಿರ್ಯಾದು ಶ್ವೇತಾರಾಣಿ.ಡಿ ಪ್ರಾಯ: 36 ವರ್ಷ ಗಂಡ: ತಿಲಕ್‌ರಾಜ್‌ ವಾಸ: ಕೊಳ, ಮಲ್ಪೆ, ಉಡುಪಿ ತಾಲೂಕು ಮತ್ತು ಜಿಲ್ಲೆಇವರು ತನ್ನ ಗಂಡ ಹಾಗೂ ಮಕ್ಕಳೊಂದಿಗೆ ಸ್ಕೂಟರ್‌ ನಲ್ಲಿ ಉಡುಪಿಗೆ ಬಂದು ಪರಿವಾರ್‌ ಸ್ವೀಟ್ಸ್‌ ಅಂಗಡಿ ಬಳಿ ಪಾರ್ಕ್‌ ಮಾಡಿ, ಅದರಲ್ಲಿ ಹೆಲ್ಮೆಟ್‌ ಇಟ್ಟು ಸ್ವೀಟ್ಸ್‌ ತರಲು ಹೋಗಿದ್ದು, ಆಪಾದಿತ ಬಾಲಕೃಷ್ಣ ಶೆಣೈ ರವರು ಸ್ಕೂಟರ್‌ ಮೇಲಿದ್ದ ಹೆಲ್ಮೆಟ್ನ್ನು ಬಿಸಾಡಿ ಹೋಗಿರುತ್ತಾನೆ. ಇದನ್ನು ಕೇಳಲು ಸುಮಾರು 18:35 ಗಂಟೆಗೆ ಪಿರ್ಯಾದುದಾರರು ಗಂಡನೊಂದಿಗೆ ಉಡುಪಿ ಸೆಂಚುರಿ ಕಂಫರ್ಟ್ಸ್‌ ಹೋಟೇಲ್ಗೆ ಹೋದಾಗ ಆಪಾದಿತ ಕೆ. ಬಾಲಕೃಷ್ಣ ಶೆಣೈ, ಸೆಂಚುರಿ ಕಂಫರ್ಟ್ಸ್‌ ಹೋಟೇಲ್, ಉಡುಪಿ ಇವನು ಪಿರ್ಯಾದುದಾರರನ್ನು ಉದ್ದೇಶಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕಬ್ಬಿಣದ ರಾಡ್‌ ನಿಂದ ಪಿರ್ಯಾದುದಾರರ ಗಂಡನಿಗೆ ಹಾಗೂ ಪಿರ್ಯಾದುದಾರರಿಗೆ ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 67/2023 ಕಲಂ: 32̧4 32̧3 50̧4 354 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ : ಪಿರ್ಯಾದಿ ರಾಜಶ್ರೀ ರಾಘವೆಂದ್ರ ಪ್ರಭು (41 ವರ್ಷ) ಗಂಡ: ರಾಘವೆಂದ್ರ ಪ್ರಭು ವಾಸ:ಪಾಂಡೇಶ್ವರ ಗ್ರಾಮ ಬ್ರಹ್ಮಾವರ ತಾಲೂಕು ಇವರು ಪಾಂಡೇಶ್ವರ ಗ್ರಾಮದಲ್ಲಿ ಸ್ಥಿರಾಸ್ತಿಯನ್ನು ಹೊಂದಿದ್ದು, ಸದ್ರಿ ಸ್ಥಿರಾಸ್ತಿಯಲ್ಲಿ 3 ಅಂಗಡಿಕೋಣೆಗಳು ಇದ್ದು ಅದರಲ್ಲಿ ಒಂದನ್ನು ಡಾ. ಪುಣ್ಯ ಬಿ ರಾವ್ ಎಂಬುವವರಿಗೆ ಬಾಡಿಗೆಗೆ ನೀಡಿರುವುದಾಗಿದ್ದು, ಅವರು ಸರಿಯಾಗಿ ಬಾಡಿಗೆ ಕೊಡದೇ ಅಂಗಡಿ ಕೋಣೆಯನ್ನು ಸಹಾ ಖಾಲಿ ಮಾಡಿರುವುದಿಲ್ಲ.  ಈ ಬಗ್ಗೆ ಹೇಳಿದಾಗ ಅನೇಕ ಬಾರಿ ಪಿರ್ಯಾದಿದಾರರ ಗಂಡ ಮತ್ತು ಅತ್ತೆಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವುದಾಗಿದೆ. ಹೀಗಿರುವಾಗ ದಿನಾಂಕ: 24-04-2023 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರ ಅತ್ತೆಗೆ ಬಿ. ಪಿ. ಯಲ್ಲಿ ಏರುಪೇರು ಆದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಡಾ. ಪುಣ್ಯ ಬಿ. ರಾವ್ ರವರು  ಪಿರ್ಯಾದಿದಾರರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಅತ್ತೆಯನ್ನು ದೂಡಿ ಪಿರ್ಯಾದಿದಾರರ ಮೇಲೆ ಕಲ್ಲು ಎಸೆದು ಕೈ ರಟ್ಟೆಯನ್ನು ಎಳೆದು ಬೆನ್ನಿಗೆ ಕೈಯಿಂದ ಹಲ್ಲೆ ಮಾಡಿ ಇನ್ನು ಮುಂದೆ ತನ್ನ ವಿಚಾರಕ್ಕೆ ಬಂದಲ್ಲಿ ಪಿರ್ಯಾದಿದಾರರನ್ನು ಸುಪಾರಿ ಕೊಟ್ಟು ಕೊಂದು ಹಾಕುವುದಾಗಿ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 88/2023 ಕಲಂ: 341, 323, 324, 504, 506 IPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 13-05-2023 08:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080