ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ :

  • ಕೋಟ : ಪಿರ್ಯಾದಿ ಗೋಪಾಲ ಮೊಗವೀರ (53 ವರ್ಷ) ತಂದೆ: ಕುಷ್ಠ ನಾಯ್ಕ ವಾಸ:ಓಣಿಕಡು ಕೈಲಕೆರೆ ಮೊಳಹಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು ಮೊಳಹಳ್ಳಿ ಗ್ರಾಮದಲ್ಲಿ ಸ್ಥಿರಾಸ್ತಿಯನ್ನು ಹೊಂದಿದ್ದು ಈ ಬಗ್ಗೆ ಪಿರ್ಯಾದಿದಾರರಿಗೆ ಹಾಗೂ ಅವರ ಅಕ್ಕನಿಗೆ ತಕರಾರು ಇರುತ್ತದೆ. ಹೀಗಿರುವಾಗ ದಿನಾಂಕ:12-05-2023 ರಂದು ಸಮಯ 20:00 ಗಂಟೆಗೆ ಪಿರ್ಯಾದಿದರರು ಮೊಳಹಳ್ಳಿ ಗ್ರಾಮದ ಅಶೋಕ ಎಂಬುವವರ ಮನೆಯ ಎದುರು ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಸಂಬಂಧಿ ಕಿರಣ, ಮಂಜುನಾಥ ಮತ್ತು ಪೃಥ್ವಿರಾಜ್ ಎಂಬುವವರು ಪಿರ್ಯಾದಿದಾರರ ಬಳಿ ಬಂದು ಜಾಗದ ವಿಚಾರದಲ್ಲಿ ಜಗಳ ಮಾಡಲು ಪ್ರಾರಂಭಿಸಿದ್ದು ಪಿರ್ಯಾದಿದಾರರು “ಎನಿದ್ದರೂ  ಬೆಳಿಗ್ಗೆ ಮಾತನಾಡುವ” ಎಂದು ಹೇಳಿದಾಗ ಪಿರ್ಯಾದಿದಾರರ ಅಕ್ಕನ ಅಳಿಯ ಕಿರಣನು ಏಕಾಎಕಿ ಕೈಯಿಂದ ಬೆನ್ನಿಗೆ ಗುದ್ದಿ ಪಿರ್ಯಾದಿದಾರರನ್ನು ಮುಂದೆ ಹೋಗದಂತೆ ತಡೆದಿದ್ದು, ಮೂರು ಜನ ಸೇರಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಎಲ್ಲರೂ ಸೇರಿ ಕೈಯಿಂದ ಹೊಡೆದು ಪಿರ್ಯಾದಿದಾರರನ್ನು ಬದಿಗೆ ದೂಡಿರುತ್ತಾರೆ ಆಗ ಪಿರ್ಯಾದಿದಾರರು ಆಯತಪ್ಪಿ ಚರಂಡಿಗೆ ಹೋಗಿ ಬಿದ್ದಿರುತ್ತಾರೆ. ಪರಿಣಾಮ  ಪಿರ್ಯಾದಿದಾರರ ಎಡಭಾಗದ ಮೇಲು ಬೆನ್ನು ಹಾಗೂ ಎಡ ಸೊಂಟ ಮತ್ತು ಎಡ ಪುಷ್ಠದ ಬಳಿ ಗದ್ದಿದ ಒಳ ನೋವು ಆಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 89/2023 ಕಲಂ: 323, 341, 504, 506 ಜೊತೆಗೆ 34 IPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಂಕರನಾರಾಯಣ  : ಫಿರ್ಯಾದು ವಾರಿಜಾ  ಶೆಡ್ತಿ ಪ್ರಾಯ  66  ವರ್ಷ  ತಂದೆ, ತೇಜಪ್ಪ  ಶೆಟ್ಟಿ ವಾಸ, ವಾರಿಜಾ ನಿಲಯ  ಜೆಡ್ಡಿನಮುಲ್ಲೆಯಡ್ನಾಳಿ  ಆಜ್ರಿ ಗ್ರಾಮ ಕುಂದಾಪುರ  ತಾಲೂಕು ಇವರಿಗೆ ಕುಂದಾಪುರ ತಾಲೂಕಿನ ಆಜ್ರಿ  ಗ್ರಾಮದ  ಯಡ್ನಾಳಿ  ಜಡ್ಡಿನ ಮೂಲೆ  ಎಂಬಲ್ಲಿ  0.09  ಎಕ್ರೆ ಸರಕಾರಿ ಜಾಗ ಹಕ್ಕು ಪತ್ರ ಆಗಿದ್ದು, ಈ ಜಾಗದಲ್ಲಿ ಹೊಸ ಮನೆಯನ್ನುಪಂಚಾಯತ್  ಪರವಾನಿಗೆ ಪಡೆದುಕೊಂಡು ಕಟ್ಟುತ್ತಿದ್ದು, ಈ ವಿಷಯದಲ್ಲಿ  ಕೋಪಗೊಂಡ ಆರೋಪಿಗಳಾದ 1.ಶ್ರೀಮತಿ ಜಲಜಮ್ಮ ಶೆಡ್ತಿ, 2. ಸಂತೋಷ ಶೆಟ್ಟಿ ವಾಸ, ಆಜ್ರಿ ಗ್ರಾಮ ಕುಂದಾಪುರ ತಾಲೂಕು ಇವರುಗಳು ಸಮಾನ  ಉದ್ದೇಶದಿಂದ ದಿನಾಂಕ 12.05.2023 ರಂದು ಬೆಳಿಗ್ಗೆ 10:00 ಘಂಟೆಗೆ ಫಿರ್ಯಾದುದಾರರ ವಾಸದ ಮನೆಯಾದ ಕುಂದಾಪುರ ತಾಲೂಕಿನ ಆಜ್ರಿ  ಗ್ರಾಮದ ಯಡ್ನಾಳಿ ಜಡ್ಡಿನ ಮೂಲೆ ಎಂಬಲ್ಲಿಗೆ ಬಂದು ಅವರ ಮೇಲೆ  ಅಕ್ರಮವಾಗಿ ತಡೆದು ನಿಲ್ಲಿಸಿ ಬಲಪ್ರಯೋಗ ಮಾಡಿರುತ್ತಾರೆ ಮತ್ತು ಮನೆ  ಕಟ್ಟುವ ಕೆಲಸ ಮಾಡುತ್ತಿರುವ ಕೆಲಸಗಾರರಿಗೆ ಅವಾಚ್ಯ ಶಬ್ದದಿಂದ ಬೈದು  ದಮ್ಕಿಹಾಕಿರುತ್ತಾರೆ. ಈ ಬಗ್ಗೆ   ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ :  48/2023 ಕಲಂ:, 341, 323,504,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   

ಅಪಘಾತ ಪ್ರಕರಣ :

  • ಬೈಂದೂರು : ಪಿರ್ಯಾದಿ ಚಂದ್ರ ಮರಾಠಿ ಪ್ರಾಯ: 29 ವರ್ಷ ತಂದೆ: ನಾಗು ಮರಾಠಿ ವಾಸ: ಹೆಗ್ಗಡೆ ಮಕ್ಕಿ ಗೋಳಿಹೊಳೆ ಪೋಸ್ಟ್ & ಗ್ರಾಮ,  ಬೈಂದೂರು ತಾಲೂಕು ಇವರು ದಿನಾಂಕ 12/05/2023 ರಂದು ಸಂಜೆ 5:30 ಗಂಟೆಗೆ ಅವರ ಬಾಬ್ತು ಮೋಟಾರು ಸೈಕಲ್ ನಲ್ಲಿ ಮನೆಯಿಂದ ಬೈಂದೂರಿಗೆ ಹೊರಟು ತಗ್ಗರ್ಸೆ ಗ್ರಾಮದ  ಗುಡ್ಡೆಯಂಗಡಿ ಬಳಿ  ಲಕ್ಷ್ಮೀ ಬೋವಿ ಎಂಬವರ ಮನೆ ಎದುರು ರಾ.ಹೆ 766 ಸಿ ರಲ್ಲಿ ಹೋಗುತ್ತಿರುವಾಗ ಫಿರ್ಯಾದುದಾರರ ಎದುರಿನಿಂದ ಅಂದರೆ ಯಡ್ತರೆ ಕಡೆಯಿಂದ ಗೋಳಿಹೊಳೆ ಕಡೆಗೆ KA 20 ME 6888 ನೇ ಕಾರಿನ ಚಾಲಕ ವಿಕ್ರಂ ರವರು ಅವರ  ಬಾಬ್ತು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ಅದೇ ರಸ್ತೆಯಲ್ಲಿ ಕಾರಿನ ಮುಂದಿನಿಂದ ಫಿರ್ಯಾದುದಾರರ ಪರಿಚಯದ ಸಂಜೀವ ರವರು ಭಾರತಿರವರನ್ನು ಸಹಸವಾರಳಾಗಿ ಕುಳ್ಳಿರಿಸಿಕೊಂಡು ರಸ್ತೆಯ ಎಡಬದಿಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA 20EN 5460ನೇ ಮೋಟಾರು ಸೈಕಲ್ ನ್ನು ಹಿಂದಿಕ್ಕುವ ಭರದಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಮೋಟಾರು ಸೈಕಲ್ ಗೆ ತಾಗಿಸಿದ ಪರಿಣಾಮ ಮೋಟಾರು ಸೈಕಲ್  ಸವಾರ ಹಾಗೂ ಸಹ ಸವಾರಳು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು  ಫಿರ್ಯಾದುದಾರರು ಮೋಟಾರು ಸೈಕಲ್ ನಿಲ್ಲಿಸಿ ಸ್ಥಳಕ್ಕೆ ಹೋಗಿ ಸಾರ್ವಜನಿಕರ ಸಹಾಯದಿಂದ ಗಾಯಾಳುವನ್ನು ಎತ್ತಿ ಉಪಚರಿಸಿದ್ದು, ಅಪಘಾತದ ಪರಿಣಾಮ ಮೋಟಾರು ಸೈಕಲ್ ಸಹ ಸವಾರಳಾದ ಭಾರತಿ ರವರಿಗೆ ದವಡೆ, ಮುಖಕ್ಕೆ ಹಾಗೂ ತಲೆಗೆ ರಕ್ತಗಾಯವಾಗಿದ್ದು ಸವಾರ ಸಂಜೀವ ರವರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ಗಾಯಗೊಂಡ ಭಾರತಿರವರನ್ನು ಫಿರ್ಯಾದುದಾರರು  ಅಪಘಾತವೆಸಗಿದ ಕಾರಿನ ಚಾಲಕನೊಂದಿಗೆ ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಸೂಚಿಸಿದ ಮೇರೆಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಭಾರತಿರವರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 79/2023 ಕಲಂ:279, 338 ಭಾದಂಸಂ. ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ : ದಿನಾಂಕ 13/05/2023 ರಂದು ಸುಮಾರು 13-30 ಗಂಟೆಗೆ, ಕುಂದಾಪುರ ತಾಲೂಕು ಹಟ್ಟಿಯಂಗಡಿ ಗ್ರಾಮದ ಕರ್ಕಿ ಬಸ್ಸು ನಿಲ್ದಾಣದ ಸಮೀಪ ಶೀಕೃಷ್ಣ ಪೈಪ್ ಪ್ಯಾಕ್ಟರಿ ಎದುರು ಹಾದು ಹೋದ ತಲ್ಲೂರು - ನೇರಳಕಟ್ಟೆ ರಸ್ತೆಯಲ್ಲಿ ಆಪಾದಿತ ಕಾರು ಚಾಲಕ ಸುರೇಶ್ ಎಂಬವರು KA 04 MZ 2830ನೇ ಕಾರನ್ನು ನೇರಳಕಟ್ಟೆ ಕಡೆಯಿಂದ ತಲ್ಲೂರು ಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಅದೇ ದಿಕ್ಕಿನಲ್ಲಿ ತಲ್ಲೂರು ಕಡೆಗೆ ಹೋಗುತ್ತಿದ್ದ ಬೈಕ್ ನಂಬ್ರ KA 20 EM 2436ನೇಯದನ್ನು ಓವರ್ ಟೇಕ್ ಮಾಡುವ ಬರದಲ್ಲಿ ಕಾರನ್ನು ರಸ್ತೆಯ ತೀರ ಎಡಕ್ಕೆ ಚಲಾಯಿಸಿ ಬೈಕ್ ಗೆ ಢಿಕ್ಕಿ ಹೊಡೆಸಿರುತ್ತಾರೆ ಈ ಅಫಘಾತದಿಂದ ಬೈಕ್ ಸವಾರನಿಗೆ ತಲೆಗೆ ತೀವ್ರ ಸ್ವರೂಪದ ರಕ್ತಗಾಯ ಕಿವಿಗೆ ಹಾಗೂ ಮೂಗಿಗೆ ತರಚಿದ ಗಾಯವಾಗಿರುತ್ತದೆ. ಕೂಡಲೇ ಆಟೋ ರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ  ಕೆ.ಎಂ. ಸಿ ಆಸ್ಪತ್ರೆಯಲ್ಲಿ ಒಳರೋಗಿ ಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾದ ಕ್ರಮಾಂಕ : 62/2023 ಕಲಂ. 279, 338 IPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ :

  • ಕುಂದಾಪುರ : ಪಿರ್ಯಾದಿ ಶಿಲ್ಪ (31), ಗಂಡ: ಗ್ರೇಶನ್ ಡಿಸೋಜ, ವಾಸ: ಮಾರ್ಗೋಳಿ ನವೀನರವರ ಬಾಡಿಗೆ ಮನೆ ಬಸ್ರೂರು  ಗ್ರಾಮ, ಕುಂದಾಪುರ ತಾಲೂಕು ಇವರ ಗಂಡ ಗ್ರೇಶನ್ ಡಿಸೋಜ ಪ್ರಾಯ 36 ವರ್ಷ ಎಂಬವರು ವಿಪರೀತ ಮದ್ಯಪಾನ ಚಟವನ್ನು ಹೊಂದಿದವರಾಗಿದ್ದು, ದಿನಾಂಕ 12/05/2023ರಂದು ರಾತ್ರಿ ಮನೆಗೆ ವಿಪರೀತ ಮದ್ಯಪಾನ ಮಾಡಿ ಬಂದು ಮಾನಸಿಕ ಖಿನ್ನತೆಯಿಂದ ತನ್ನ ಹೆಂಡತಿ ಮಕ್ಕಳೊಂದಿಗೆ ಗಲಾಟೆ ಮಾಡಿ ದಿನಾಂಕ 13/05/2023ರಂದು ರಾತ್ರಿ 01:00 ಗಂಟೆಯಿಂದ ರಾತ್ರಿ 03:15 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಹಾಲ್‌ನ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್‌ ನಂ: 16/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ  : ಪಿರ್ಯಾದು ಮಂಜುನಾಥ ಗೌಡ (27), ತಂದೆ: ಬದಿಯ ಗೌಡ  ವಾಸ: ಗುಡಿ ಮೇಲ್ಮನೆ, ಯಳಜಿತ್ ಗ್ರಾಮ ಬೈಂದೂರು ತಾಲೂಕು ಉಡುಪಿ ಜಿಲ್ಲೆ. ಇವರ ಅಕ್ಕನ ಗಂಡನಾದ ಪ್ರಭು ತಮದೊಡ್ಡಿ ( 40) ಇವರು ತನ್ನ ಹೆಂಡತಿ ಮಕ್ಕಳೊಂದಿಗೆ ಬೈಂದೂರು ತಾಲೂಕಿನ ಯಳಜಿತ್ ಗ್ರಾಮದ ಗುಡಿ ಮೇಲ್ ಮನೆ ಎಂಬಲ್ಲಿ ವಾಸ ಮಾಡಿಕೊಂಡಿದ್ದು, ಕುಂದಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾರಕ್ಕೆ ಒಂದು ಬಾರಿ ಮನೆಗೆ ಬಂದು ಹೋಗುತ್ತಿರುತ್ತಾರೆ. ಪಿರ್ಯಾದಿದಾರರ ಅಕ್ಕನ ಗಂಡನಿಗೆ ವೀಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ದಿನಾಂಕ 13/05/2023 ರಂದು ಬೆಳಿಗ್ಗೆ 08:30 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಅಕ್ಕ ಶಾಂತರವರಿಗೆ ಕುಂದಾಪುರದಿಂದ ಯಾರೋ ದೂರವಾಣಿ ಕರೆ ಮಾಡಿ ಪಿರ್ಯಾದಿದಾರರ ಭಾವ ಪ್ರಭು ತಮದಡ್ಡಿರವರು ಕುಂದಾಪುರ ಶಾಸ್ತ್ರೀ ವೃತ್ತದ ಬಳಿ ರಾ.ಹೆ ಮೇಲ್ಸೆತುವೆಯ ಕೆಳಗಡೆ ಖಾಲಿ ಜಾಗದಲ್ಲಿ ಮಲಗಿದವರು ಅಲ್ಲೆ ಮೃತಪಟ್ಟಿರುವುದಾಗಿ ತಿಳಿಸಿದ್ದು, ಆ ಪ್ರಕಾರ ಪಿರ್ಯಾದಿದಾರರು ತನ್ನ ಸಂಬಂಧಿಕರೊಂದಿಗೆ ಕುಂದಾಪುರಕ್ಕೆ ಬಂದು ಮೃತ ಶರೀರವನ್ನು ನೋಡಿದ್ದು ಮೃತ ದೇಹವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು, ಪಿರ್ಯಾದಿದಾರರ ಭಾವನಾದ ಪ್ರಭು ತಮದಡ್ಡಿ  ವಿಪರೀತ ಮದ್ಯಸೇವನೆಯಿಂದ ಆರೋಗ್ಯ ಸಮಸ್ಯೆಯಿಂದ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ : 23/2023 ಕಲಂ: 174 CrPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹೆಂಗಸು ಕಾಣೆ ಪ್ರಕರಣ :

  • ಬ್ರಹ್ಮಾವರ : ಬ್ರಹ್ಮಾವರ ತಾಲೂಕು, ಕಚ್ಚೂರು ಗ್ರಾಮ ಬಾರ್ಕೂರು ಎಂಬಲ್ಲಿ  ಫಿರ್ಯಾದಿ ಪ್ರಶಾಂತ ಪೂಜಾರಿ (36), ತಂದೆ: ಕೃಷ್ಣ ಪೂಜಾರಿ, ವಾಸ:  ಪೂರ್ಣಿಮಾ ನಿಲಯ, ಕೂರಾಡಿ ಅಂಚೆ, ಹನೇಹಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು  ಅನಾಥಾಶ್ರಮ ನಡೆಸಿಕೊಂಡಿದ್ದು, ಸದ್ರಿ ಆಶ್ರಮದಲ್ಲಿ ಆಶ್ರಯ ಪಡೆದುಕೊಂಡಿರುವ ವಾರಿಜಾ ಎಸ್ ರೈ @ ರೂಪ, ಪ್ರಾಯ: 63 ವರ್ಷ ಎಂಬವರು ಮದ್ಯಪಾನ ಮಾಡುವ ಚಟಹೊಂದಿದ್ದು, ಅವರು ಯಾವಗಲೂ ಫಿರ್ಯಾದಿದಾರರ ಹತ್ತಿರ ಮದ್ಯ ತಂದು ಕೊಡಲು ಒತ್ತಾಯ ಮಾಡುತ್ತಿದ್ದರು, ಆದರೆ ಫಿರ್ಯಾದಿದಾರರು ಮದ್ಯ ತಂದು ಕೊಡದೇ ಅವರಿಗೆ ಬುದ್ದಿವಾದ ಹೇಳಿರುತ್ತಾರೆ. ಹೀಗೆ ಇರುವಾಗ ವಾರಿಜಾ ಎಸ್ ರೈ @ ರೂಪ ರವರು ದಿನಾಂಕ 13.05.2023 ರಂದು ಬೆಳಿಗ್ಗೆ 06:00 ಗಂಟೆಗೆ ಆಶ್ರಮದ ಕಂಪೌಂಡ್ ಹತ್ತಿ ಓಡಿ ಹೋಗಿ, ಎಲ್ಲಿಯೂ ಪತ್ತೆಯಾಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ  ಬ್ರಹ್ಮಾವರ ಠಾಣೆ  ಅಪರಾಧ ಕ್ರಮಂಕ 100/2023  ಕಲಂ. ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 13-05-2023 06:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080