ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ ಗಣೇಶ ಬಿ ಪೂಜಾರಿ, ತಂದೆ: ಮಾದ ಪೂಜಾರಿ,  ವಾಸ: ಪ್ಲಾಟ್ ನಂಬ್ರ 4 ಈ  ಕೃಷ್ಣಪ್ರಸಾದ ಅಪಾರ್ಟ್ ಮೆಂಟ್  ಭಗತ್ ಸಿಂಗ್ ಮಾರ್ಗ ಕಿನ್ನಿಮೂಲ್ಕಿ ಉಡುಪಿ ಇವರು ದಿನಾಂಕ 12/05/2022 ರ ರಂದು ತನ್ನ ಹೆಂಡತಿ ಸುಮಿತ್ರ ರವರನ್ನು ಕರೆದುಕೊಂಡು  KA-20-MA-5400 ನೇ ಕಾರಿನಲ್ಲಿ ಉದ್ಯಾವರದಿಂದ ಹೊರಟು ಪಿರ್ಯಾದಿದಾರರ ತಾಯಿಯ ಮನೆಯಾದ ಮಲ್ಪೆ ತೊಟ್ಟಂ ಗೆ ಹೊರಟು ಮಧ್ಯಾಹ್ನ 2:45 ಗಂಟೆಗೆ  ತೊಟ್ಟಂ  ಮುಖ್ಯ ರಸ್ತೆ ಗಣೇಶೋತ್ಸವ ಸಮಿತಿಯ ವೇದಿಕೆಯ ಎದುರು ಹೋಗುತ್ತಿರುವಾಗ ಹೂಡೆ ಕಡೆಯಿಂದ ಬಬ್ಬ ಬುಲೆಟ್ ಸವಾರ ಅತೀವೇಗ ಹಾಗು ಅಜಾಗರೂಕತೆ, ನಿರ್ಲಕ್ಷ್ಯತನದಿಂದ  ರಸ್ತೆಯ ತೀರ ಬಲಬದಿಗೆ ಬುಲೆಟ್ ನ್ನು ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರು ಕಾರನ್ನು ಮಂಜುನಾಥ ಭಜನಾ ಮಂದಿರಕ್ಕೆ ಹೋಗುವ ರಸ್ತೆಗೆ ತಿರುಗಿಸುತ್ತಿರುವಾಗ ಬುಲೆಟ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಬುಲೆಟ್ ಸವಾರ ಮತ್ತು ಆತನ ಸಹ ಸವಾರ ರಸ್ತೆಗೆ  ಬಿದ್ದು ಗಾಯಗೊಂಡಿರುತ್ತಾರೆ,  ಅವರನ್ನು ಪಿರ್ಯಾದಿದಾರರು ಉಪಚರಿಸಿ ಒಂದು ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಈ ಅಪಘಾತ ದಲ್ಲಿ ಪಿರ್ಯಾದಿದಾರರ ಕಾರಿನ ಎದುರು ಬಾಗ ಸಂಪೂರ್ಣ ಜಖಂಗೊಂಡಿರುತ್ತದೆ.  ಅಪಘಾತಗೊಳಿಸಿದ ಬುಲೆಟ್ ನಂಬ್ರ KA-20-EP-0547 ಆಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಅಪರಾಧ ಕ್ರಮಾಂಕ 41/2022 , ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 12/05/2022 ರಂದು 15:00 ಗಂಟೆಗೆ ಕಾರ್ಕಳ ತಾಲೂಕು ಕೆದಿಂಜೆ ಗ್ರಾಮದ ದುರ್ಗಾ ಪ್ಯೂಲ್ ಪೆಟ್ರೋಲ್ ಬಂಕ್ ಸಮೀಪ ಹಾದು ಹೋಗುವ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಕಾರು ನಂಬ್ರ KA-19-MJ-8024 ನೇಯದರ ಚಾಲಕನು ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಆತನ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಹೋಗಿ, ಬೆಳ್ಮಣ್ ಕಡೆಯಿಂದ ಕಾರ್ಕಳ ಕಡೆಗೆ ಗುರುರಾಜ ಆಚಾರಿ ಎಂಬುವವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನಂಬ್ರ KA-20-W-1514 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರನು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಆತನ ಬಲಕೈಗೆ ತೀವೃ ಸ್ವರೂಪದ ಜಖಂ, ಎಡಕೈ ಮೊಣಗಂಟಿನ ಬಳಿ ಗುದ್ದಿದ ನೋವು, ಹಾಗೂ ಮುಖಕ್ಕೆ ರಕ್ತ ಗಾಯ ಆಗಿದ್ದು, ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿರುತ್ತವೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2022 ಕಲಂ: 279, 337 , 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿದಾರರಾದ ಶ್ರೀನಿವಾಸ ವಿಶ್ವನಾಥ (51), ತಂದೆ : ದಿ. ವಿಶ್ವನಾಥ, ವಾಸ : ಮನೆ ನಂಬ್ರ 2-7-542/16 ಆದಿಶ್ರೀ, 4 ನೇ ಕ್ರಾಸ್‌‌ ಕಾಪಿಕಾಡು ಬಿಜೈ ಅಂಚೆ ಮಂಗಳೂರು ಇವರು ಮತ್ತು  ಅವರ ಹೆಂಡತಿ ಅಶ್ವಿನಿ ಶ್ರೀನಿವಾಸ ಮತ್ತು ಇತರೆ 30 ಜನ ಪ್ರಯಾಣಿಕರೊಂದಿಗೆ ದಿನಾಂಕ 12/05/2022 ರಂದು ಸುಧಾಕರ ರವರು ಚಾಲನೆ ಮಾಡಿಕೊಂಡು ಬರುತ್ತಿರುವ KA-20-D-6258 ನೇ ಬಸ್ಸಿನಲ್ಲಿ ಕುಳಿತುಕೊಂಡು 12.45 ಗಂಟೆಗೆ ಮಂಗಳೂರಿನಿಂದ ಉಡುಪಿಗೆ ಬರಲು ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸುಧಾಕರ ರವರು ತನ್ನ ಬಸ್ಸನ್ನು ಉದ್ಯಾವರ ಸಮೀಪ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು 13:45 ಗಂಟೆಗೆ  ಸಮಯಕ್ಕೆ ಉದ್ಯಾವರ ಗ್ರಾಮದ ಗುಡ್ಡೆಯಂಗಡಿ ಸಮೀಪ ಬಸ್ಸಿನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66 ರ ಪಶ್ವಿಮ ಬದಿಯ ಮಣ್ಣು ರಸ್ತೆಯಲ್ಲಿರುವ ನವಯುಗ ಕಂಪನಿಯವರ ಸೈನ್‌ ಬೋರ್ಡ್‌ ಗೆ ಢಿಕ್ಕಿ  ಹೊಡೆದು ನಂತರ ಅಲ್ಲಿಯೇ ಮುಂದಿರುವ “ಇಸಿಬಿ” ಕಂಬಕ್ಕೆ ಢಿಕ್ಕಿ ಹೊಡೆದು ರಸ್ತೆಯ ಬಲ ಬದಿಗೆ ಹೋಗಿ ಪಲ್ಟಿಯಾಗಿ ಬಸ್ಸು ಬಿದ್ದಿರುತ್ತದೆ. ಪರಿಣಾಮ ಬಸ್ಸಿನಲ್ಲಿದ್ದವರೆಲ್ಲಾ ಬೊಬ್ಬೆ ಹೊಡೆದಿದ್ದು ಅಲ್ಲಿನ ಸಾರ್ವಜನಿಕರು ಬಂದು ಪಿರ್ಯಾದಿರರು ಹಾಗೂ ಇತರನ್ನು ಉಪಚರಿಸಿದ್ದು, ಪಿರ್ಯಾದಿದಾರರಿಗೆ ಎಡಕೈ ಗಂಟಿನ ಹತ್ತಿರ ರಕ್ತ ಗಾಯ ಬಲಬದಿ ಭುಜದ ಹತ್ತಿರ ಗುದ್ದಿದ ನೋವು, ಬಲ ಬದಿ ಸೊಂಟದ ಹತ್ತಿರ ಗುದ್ದಿದ ನೋವು ಆಗಿದ್ದು, ಪಿರ್ಯಾದಿದಾರರ ಹೆಂಡತಿಗೆ ಬಲಬದಿ ಕೈಯ ಮಣಿಗಂಟಿನ ಹತ್ತಿರ ಮೂಳೆ ಮುರಿತ, ಎಡಕಾಲು, ಎಡಕೈಗೆ ಗುದ್ದಿದ ನೋವು ಆಗಿದ್ದು, ಅಲ್ಲದೇ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರಿಗೂ ಗಾಯಗಳಾಗಿರುತ್ತದೆ. ಪಿರ್ಯಾದಿದಾರರು ಮತ್ತು ಮತ್ತು ಅವರ ಹೆಂಡತಿಯನ್ನು ಅಲ್ಲಿ  ಸೇರಿದ ಸ್ಥಳೀಯರು ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ  ಪರೀಕ್ಷಿಸಿದ ವೈದ್ಯರು ಅವರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿರುತ್ತಾರೆ. ಬಸ್ಸಿನಲ್ಲಿ ಗಾಯಗೊಂಡ ಇತರ ಪ್ರಯಾಣಿಕರನ್ನು ಸಾರ್ವಜನಿಕರು ಉಡುಪಿ ಕಡೆ ಆಸ್ಪತ್ರೆಗೆ ಸಾಗಿಸಿರುತ್ತಾರೆ. ಈ ಅಪಘಾತದಿಂದ ನವಯುಗ ಕಂಪನಿಯವರ “ಇಸಿಬಿ” ಕಂಬ ಮತ್ತು  ಸೈನ್‌ ಬೋರ್ಡ್ ಜಖಂ ಗೊಂಡಿದ್ದು ಅಲ್ಲದೇ ಬಸ್ಸು ಸಹ ಜಖಂ ಗೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2022 ಕಲಂ: 279, 337, 338, 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಹೆಬ್ರಿ: ದಿನಾಂಕ 12/05/2022 ರಂದು ಪಿರ್ಯಾದಿದಾರರಾದ ದಿನೇಶ ಪೂಜಾರಿ (23), ತಂದೆ: ಗೋಪಾಲ ಪೂಜಾರಿ, ವಾಸ: ಜಯಶ್ರೀ ನಿವಾಸ ಬೈದಡಪು ವರಂಗ, ವರಂಗ ಗ್ರಾಮ ಹೆಬ್ರಿ ತಾಲೂಕು ಇವರ ಮಾವ ಶ್ರೀಧರ ಪೂಜಾರಿ (69) ರವರು ಸಂಜೆ 05:30 ಗಂಟೆಯಿಂದ 06:00 ಗಂಟೆಯ ಮಧ್ಯಾವಧಿಯಲ್ಲಿ ವರಂಗ ಗ್ರಾಮದ ಬೈದಡಪು ಹೊಳೆಯ ದಡದಲ್ಲಿ ನಿಂತು ಹೊಳೆಗೆ  ಬಲೆಯನ್ನು ಹಾಕಿ  ಮೀನು ಹಿಡಿಯುತ್ತಿರುವಾಗ ಅವರು ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯ ನೀರಿಗೆ ಬಿದ್ದು ಹೊಳೆಯ ಕೆಸರಿನಲ್ಲಿ ಸಿಲುಕಿ ಮೇಲಕ್ಕೆ ಬರಲು ಆಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 19/2022 ಕಲಂ: 174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.
   


ಇತ್ತೀಚಿನ ನವೀಕರಣ​ : 13-05-2022 09:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080