ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿ ಗೋಪಾಲಕೃಷ್ಣ  ಇವರು ದಿನಾಂಕ: 12/05/2022 ರಂದು ಶೇಡಿಗುಡ್ಡೆಯ ತನ್ನ ಬಾಬ್ತು ಗಿರಿಜಾ ಎಲೆಕ್ಟ್ರಿಕಲ್ಸ್‌ ಅಂಗಡಿಯ ಎದುರುಗಡೆ ಇದ್ದ  ಸಮಯ ಬೆಳಿಗ್ಗೆ 09:15 ಗಂಟೆಗೆ ಅವರ ಪರಿಚಯದ ಮದಗದ ಕೃಷ್ಣ  ನಾಯಕ್‌ ಎಂಬವರು ಮದಗ ಕಡೆಯಿಂದ  ಆತ್ರಾಡಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 169(ಎ) ರ ಎಡಬದಿಯ ಮಣ್ಣು ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿದ್ದು ಆ ಸಮಯ ಮದಗ  ಕಡೆಯಿಂದ ಆತ್ರಾಡಿ ಕಡೆಗೆ ಕೆಎ 19 ವಿ 5897 ನೇ ಮೋಟಾರ್‌ ಸೈಕಲ್‌ ಸವಾರ ರಂಜಿತ್‌ ಎಂಬವರು ಮೋಟಾರ್‌ ಸೈಕಲನ್ನು  ಅತೀ ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಡು ರಸ್ತೆಯ ತೀರಾ ಎಡಭಾಗಕ್ಕೆ ಹೋಗಿ ನಡೆದುಕೊಂಡು ಹೋಗುತ್ತಿದ್ದ ಕೃಷ್ಣ ನಾಯಕ್‌ ರವರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಅವರು ನೆಲಕ್ಕೆ ಬಿದ್ದು  ಅವರ ಎಡಕಾಲು ಹಾಗು ಎಡಕೈಗೆ ರಕ್ತಗಾಯವಾಗಿದ್ದು, ಅಲ್ಲದೇ ಬೈಕ್‌ ಸವಾರ ರಂಜಿತ್‌ ರವರು ಕೂಡ ಮೋಟಾರು ಸೈಕಲ್ ಸಮೇತ ಬಿದ್ದು, ಅವರ ಬಲಕೈ ಹಾಗು ಬಲಕಾಲಿಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ  ಕೃಷ್ಣ ನಾಯಕ್‌ ರವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ಆಪಾದಿತ ರಂಜಿತ್ ಹಿರಿಯಡ್ಕ ಕಾಮತ್ ನರ್ಸಿಂಗ್ ಹೋಮಿನಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2022  ಕಲಂ :279, 337  ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

 

ಹಲ್ಲೆ ಪ್ರಕರಣ

  • ಬೈಂದೂರು: ಫಿರ್ಯಾದಿ ಸುರೇಂದ್ರ ದೇವಾಡಿಗ ಇವರು ದಿನಾಂಕ 12/05/2022 ರಂದು ಬೆಳಿಗ್ಗೆ 11:00 ಗಂಟೆಗೆ ಅವರ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ 20 ಈಯು 3102ನೇದರಲ್ಲಿ ಶಿರೂರು ಪೇಟೆಗೆ ಹೋಗಿ ವಾಪಾಸ್ಸು ಮನೆ ಕಡೆಗೆ  ಮೇಲ್ಪಂಕ್ತಿ ರಸ್ತೆಯಲ್ಲಿ ರಾಮನಾಥ ಭಟ್ ರವರ ಹಾಡಿಯ ಬಳಿ ಬರುತ್ತಿರುವಾಗ ರಾಮನಾಥ ಭಟ್ ನು ಆತನ ಬಾಬ್ತು ಕಾರನ್ನು ಫಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಅಡ್ಡ ಇಟ್ಟು, ಮುಂದಕ್ಕೆ ಹೋಗದಂತೆ ತಡೆದು, ಕಾರಿನಿಂದ ಇಳಿದು ಬಂದು ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಈ ಊರಿನಲ್ಲಿ ನೀನು ಬಾರಿ ಮೆರೆಯುತ್ತಿಯಾ, ನಿನ್ನ ಆಟವನ್ನೆಲ್ಲಾ ನಿಲ್ಲಿಸುತ್ತೇನೆ ಎಂದು ಹೇಳಿ ಕೈಯಿಂದ ಫಿರ್ಯಾದಿದಾರರ ಬೆನ್ನಿಗೆ ಗುದ್ದಿದ್ದು, ರಾಮಕೃಷ್ಣ ಭಟ್ ನು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಬಂದು, ಫಿರ್ಯಾದಿದಾರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ತನಗೆ ಜೀವದ ಮೇಲೆ ಆಸೆ ಇಲ್ಲ. ನಿನ್ನನ್ನು ಈ ಕತ್ತಿಯಿಂದಲೇ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದು, ಅಲ್ಲದೇ ರಾಮನಾಥ ಭಟ್ ನು ಕೂಡಾ ಫಿರ್ಯಾದಿದಾರರನ್ನು ಉದ್ದೇಶಿಸಿ ಈ ರಸ್ತೆಯಲ್ಲಿ ಮುಂದಕ್ಕೆ ತಿರುಗಾಡಿದಲ್ಲಿ ನಿಮ್ಮನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಕಾರಿನಲ್ಲಿ ಹೋಗಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 89/2022 ಕಲಂ. 341, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು : ಫಿರ್ಯಾದಿ ಸುಚಿತ್ರಾ ಭಟ್ಟ  ಇವರು ದಿನಾಂಕ 12/05/2022 ರಂದು ಮದ್ಯಾಹ್ನ 4:15 ಗಂಟೆಯ ಸುಮಾರಿಗೆ ಮನೆಯಲ್ಲಿರುವಾಗ ಸುರೇಂದ್ರ ದೇವಾಡಿಗ, ಗಿರೀಶ ದೇವಾಡಿಗ ಹಾಗೂ 3 ಜನ ಹೆಂಗಸರು ಫಿರ್ಯಾದಿದಾರರ ಮನೆಯ ಪಾಗಾರದ ಒಳಗೆ ಅಕ್ರಮವಾಗಿ ಬಂದು, ಫಿರ್ಯಾದಿದಾರರ ಗಂಡ ಹಾಗೂ ಮಾವನಿಗೆ ಅವಾಚ್ಯ ಶಬ್ದಗಳಿಂದ ಬೈದು, ಕಲ್ಲುಗಳಿಂದ ಫಿರ್ಯಾದಿದಾರರ ಗೇಟಿಗೆ ಹೊಡೆದು, ಫಿರ್ಯಾದಿದಾರರ ಗಂಡ ಹಾಗೂ ಮಾವನನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿ, ಅವರು ಬಂದ  ಬೈಕ್ ನಲ್ಲಿ ಅಲ್ಲಿಂದ ವಾಪಾಸ್ಸು ಹೋಗಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 90/2022 ಕಲಂ. 447, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಫಿರ್ಯಾದಿ ಯಮುನಾ ಇವರ ಅಣ್ಣ ದೂಜ (63) ಎಂಬಾತನು ಎಡಕಾಲು ನೋವು ಇದ್ದು, ಅಪರೂಕೊಮ್ಮೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ದಿನಾಂಕ 09/09/2022 ರಂದು ದೂಜರವರು ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಕೈ ಚೀಲವನ್ನು ಹಿಡಿದುಕೊಂಡು ಹೋದವನು ವಾಪಾಸ್ ಮನೆಗೆ ಬಾರದೇ ಇದ್ದು, ಈ ಬಗ್ಗೆ ಫಿರ್ಯಾದಿದಾರರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 56/2022 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲಾಗಿರುತ್ತದೆ. ಫಿರ್ಯಾದಿದಾರರು ಮತ್ತು ಸಂಬಂಧಿಕರು ಹುಡುಕಾಟದಲ್ಲಿರುವಾಗ ಈ ದಿನ ದಿನಾಂಕ 13/05/2022 ರಂದು ಬೆಳಿಗ್ಗೆ 07.00 ಗಂಟೆ ಸುಮಾರಿಗೆ ಫಿರ್ಯಾದಿದಾರರ ಸಂಬಂಧಿಕಾರ ರಮೇಶ ಎಂಬಾತನು ಫೋನ್ ಮಾಡಿ ದೂಜರವರ ಮೃತದೇಹವು ಮುಂಡ್ಕೂರು ಹಿಂದೂ ರುದ್ರ ಭೂಮಿ ಬಳಿಯ ಹಾಡಿಯಲ್ಲಿ ಇದೆ ಎಂದು ತಿಳಿಸಿದ್ದು, ಸ್ಥಳಕ್ಕೆ ಸಂಬಂಧಿಕರಾದ ಶೇಖರ, ದಿನೇಶ, ರಾಜು ಹಾಗೂ ಜಯರವರೊಂದಿಗೆ ಸ್ಥಳಕ್ಕೆ ಬಂದು ದೂಜರವರ ಮೃತ ದೇಹವನ್ನು ನೋಡಿರುತ್ತೇನೆ. ಆತನು ಬಲ ಮಗ್ಗುಲಾಗಿ ಮಲಗಿಕೊಂಡವನು ಅಲ್ಲಿಯೇ ಮೃತಪಟ್ಟಿರುವುದು ಕಂಡು ಬರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13/2022 ಕಲಂ: 174  ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 13-05-2022 05:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080