ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 12/04/2023 ರಂದು ಮಧ್ಯಾಹ್ನ 3:00  ಗಂಟೆಗೆ, ಕುಂದಾಪುರ ತಾಲೂಕಿನ, ಕಸಬಾ  ಗ್ರಾಮದ ಸರಕಾರಿ ಆಸ್ಪತ್ರೆಯ ಬಳಿ ಪುರಸಭಾ ರಸ್ತೆಯಲ್ಲಿ,  ಆಪಾದಿತ ರವೀಂದ್ರ  KA-20-D-6368ನೇ ಶ್ರೀ ದುರ್ಗಾಂಭಾ ಬಸ್‌‌‌ನ್ನು ಕುಂದಾಪುರ ಹೊಸ ಬಸ್‌ನಿಲ್ದಾಣದ  ಕಡೆಯಿಂದ ಶಾಸ್ತ್ರಿ ಸರ್ಕಲ್‌‌ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ  ಚಾಲನೆ ಮಾಡಿಕೊಂಡು ಬಂದು,  ಪುರಸಭಾ ರಸ್ತೆಯಲ್ಲಿ ಹಾಕಿದ್ದ “ರಸ್ತೆ ಹಂಪ್ಸ್‌‌‌” ಮೇಲೆ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಬಸ್ಸಿನ ಗೇರ್‌ ಬಾಕ್ಸ್ ಒಡೆದು ಸಿಡಿದ ಅದರ ಕಬ್ದಿಣದ ಭಾಗವೊಂದು ರಸ್ತೆಯ ಪಶ್ಚಿಮ ಬದಿಯಲ್ಲಿ ನಿಂತುಕೊಂಡಿದ್ದ ಪಿರ್ಯಾದಿದಾರರಾದ ಶ್ರೀಮತಿ ಶಾಂತ (45), ತಂದೆ: ಆನಂದ, ವಾಸ: ಕೆಪ್ಪೆಹೊಂಡ, ಹೊಸಂಗಡಿ ಗ್ರಾಮ, ಕುಂದಾಪುರ ತಾಲೂಕು ಇವರ ಬಲಕಾಲಿಗೆ ಬಡಿದು, ಅವರ ಬಲಕಾಲಿಗೆ ಮೂಳೆ ಮುರಿತವಾದ ಗಾಯವಾಗಿ ಕುಂದಾಪುರ ಸರಕಾರಿ  ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 49/2023   ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಸತೀಶ ಮಲ್ಯ, (64), ವಾಸ: ಸುಮುಖ, 1 ನೇ ಕ್ರಾಸ್‌, ಮಾರ್ಕೆಟ್‌ ರಸ್ತೆ, ಪರ್ಕಳ ಗ್ರಾಮ, ಉಡುಪಿ ತಾಲೂಕು, ಉಡುಪಿ ಇವರ ಅಣ್ಣ ಪ್ರಕಾಶ್‌ ಮಲ್ಯ (74) ರವರು ಕಾರ್ಕಳ ತಾಲೂಕು ಕಸಬಾ ಗ್ರಾಮದ ಕಾರ್ಪೋರೇಶನ್‌ ಬ್ಯಾಂಕ್‌ ಎದುರು, ವೆಂಕಟರಮಣ ದೇವಸ್ಥಾನದ ಬಳಿ ಹೆಂಡತಿಯೊಂದಿಗೆ ವಾಸವಾಗಿರುತ್ತಾರೆ. ದಿನಾಂಕ 08/04/2023 ರಂದು ಬೆಳಗಿನ ಜಾವ 04:45 ಗಂಟೆಗೆ ಪ್ರಕಾಶ್‌ ಮಲ್ಯ ರವರು ಪಿರ್ಯಾದಿದಾರರಿಗೆ ಕರೆ ಮಾಡಿ ತಾನು ಮನೆಯಲ್ಲಿ ಬೆಳಗಿನ ಜಾವ 04:30 ಗಂಟೆಗೆ ಸ್ನಾನ ಮಾಡುತ್ತಿರುವಾಗ ಬಿಸಿ ನೀರಿಗೆ ಅಳವಡಿಸಿದ ಗ್ಯಾಸ್‌ ಗೀಜರ್‌ ನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ತನ್ನ ಮೈಗೆ ಬೆಂಕಿ ತಗುಲಿದ್ದು ಚಿಕಿತ್ಸೆ ಬಗ್ಗೆ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಬರುತ್ತಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಕೂಡಲೇ ಆಸ್ಪತ್ರೆಗೆ ಬಂದಾಗ ಪ್ರಕಾಶ್‌ ಮಲ್ಯ ರವರ ಕೈ ಮೇಲೆ, ಹೊಟ್ಟೆಯ ಭಾಗದಲ್ಲಿ, ಬೆನ್ನಿನ ಮೇಲೆ, ಮುಖಕ್ಕೆ ತೀವ್ರ ಸ್ವರೂಪದ ಸುಟ್ಟ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ.  ದಿನಾಂಕ 12/04/2023 ರಂದು ಬೆಳಗಿನ ಜಾವ 01:10 ಗಂಟೆಗೆ ಪ್ರಕಾಶ್‌ ಮಲ್ಯ ರವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿದೆ.   ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 14/2023 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ರೋಶನ್‌ ಕುಮಾರ್‌ (46), ವಾಸ: ಪತ್ರಾಂಕಿತ ವ್ಯವಸ್ಥಾಪಕರು, ಉಪನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆ ಇವರು 120-ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಫ್ಲೈಯಿಂಗ್‌ ಸ್ಕ್ವ್ಯಾಡ್‌ ಟೀಮ್‌-2 ರಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 12/04/2023 ರಂದು ಬೆಳಿಗ್ಗೆ 11:15 ಗಂಟೆಗೆ ಉಡುಪಿ ತಾಲೂಕು ಚುನಾವಣಾ ಶಾಖೆಯಿಂದ ಬಂದ ಮಾಹಿತಿ ಆಧಾರದ ಮೇಲೆ ಮಧ್ಯಾಹ್ನ 12:15 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕಲ್ಸಂಕ ಜಂಕ್ಷನ್‌ ಬಳಿಯ ನಿಧಿ ಹೋಮ್ಸ್‌ ನಲ್ಲಿ ಆಮ್‌ ಆದ್ಮಿ ಪಕ್ಷದ ಕಛೇರಿ ಮುಂಭಾಗದಲ್ಲಿ ಪಕ್ಷದ ಮುಖಂಡರಾದ ದೆಹಲಿ ಮುಖ್ಯಮಂತ್ರಿಯಾದ ಅರವಿಂದ ಕ್ರೇಜಿವಾಲ್‌ ರವರು ಕೈಯಲ್ಲಿ ಪಕ್ಷದ ಚಿಹ್ನೆಯಾದ ಪೊರಕೆಯನ್ನು ಹಿಡಿದಿರುವ ಭಾವಚಿತ್ರವುಳ್ಳ ಸುಮಾರು 10x4 ಅಡಿ ಉದ್ದಗಲದ ಎರಡು ಪ್ಲಾಸ್ಟಿಕ್‌ ಫ್ಲೆಕ್ಸ್‌ ಗಳನ್ನು ಅಳವಡಿಸಿರುವುದು ಕಂಡು ಬಂದಿದ್ದು, ಉಡುಪಿ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಸಂಭಾವ್ಯ ಅಭ್ಯರ್ಥಿ ಎಂದು ಬಿಂಬಿತ ಪ್ರಭಾಕರ ಪೂಜಾರಿ ತೊಟ್ಟಂ @ ಪ್ರಭಾಕರ್‌ ಆರ್‌. ಸಾಲ್ಯಾನ್‌ ಎಂಬುವವರು ಸದರಿ ಫ್ಲೆಕ್ಸ್‌ ಗಳನ್ನು ಅಳವಡಿಸಿರುವ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಸಾರ್ವಜನಿಕರಿಗೆ ಪ್ರದರ್ಶಿತವಾಗುವಂತೆ ಫ್ಲೆಕ್ಸ್‌ ಗಳನ್ನು ಅಳವಡಿಸಿ, ಚಾಲ್ತಿಯಲ್ಲಿರುವ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2023, ಕಲಂ:3 KARNATAKA OPEN PLACE DISFIGUREMENT ACT  1981 & ಕಲಂ: 171H ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ರೋಶನ್‌ ಕುಮಾರ್‌ (46), ವಾಸ: ಪತ್ರಾಂಕಿತ ವ್ಯವಸ್ಥಾಪಕರು, ಉಪನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆ ಇವರು ಫ್ಲೈಯಿಂಗ್‌ ಸ್ಕ್ವ್ಯಾಡ್‌ ಟೀಮ್‌-2, 120-ಉಡುಪಿ ವಿಧಾನಸಭಾ ಕ್ಷೇತ್ರ, ವಿಧಾನಸಭಾ ಕ್ಷೇತ್ರದಲ್ಲಿ ಫ್ಲೈಯಿಂಗ್‌ ಸ್ಕ್ವ್ಯಾಡ್‌ ಟೀಮ್‌-2 ರಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 12/04/2023 ರಂದು ಬೆಳಿಗ್ಗೆ 11:15 ಗಂಟೆಗೆ ಉಡುಪಿ ತಾಲೂಕು ಚುನಾವಣಾ ಶಾಖೆಯಿಂದ ಬಂದ ಮಾಹಿತಿ ಆಧಾರದ ಮೇಲೆ ಮಧ್ಯಾಹ್ನ 12:45 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ನಾಯರ್‌ಕೆರೆ ರಸ್ತೆಯಲ್ಲಿರುವ ಕಾಂಗ್ರೆಸ್‌ ಭವನದ ಎದುರು ತೆಂಗಿನ ಗರಿಯ ಚಪ್ಪರದ ಎದುರಿನ ಎರಡು ಅಡಿಕೆ ಕಂಬಗಳಿಗೆ ಸುಮಾರು 9x3 ಅಡಿ ಉದ್ದಗಲದ ಎರಡು ಪ್ಲಾಸ್ಟಿಕ್‌ ಫ್ಲೆಕ್ಸ್‌ ಗಳನ್ನು ಅಳವಡಿಸಿದ್ದು, ಎರಡು ಫ್ಲೆಕ್ಸ್‌ಗಳಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ಬ್ಲಾಕ್‌ ಕಾಂಗ್ರೆ ಸ್‌ ಸಮಿತಿ, ಉಡುಪಿ-ಬ್ರಹ್ಮಾವರ ರವರ  ವತಿಯಿಂದ ‘ನಂ. 1  ಪ್ರತಿ  ಮನೆಗೆ 200 ಯುನಿಟ್‌ ಉಚಿತ  ವಿದ್ಯುತ್‌,’ ‘ಕಾಂಗ್ರೆಸ್‌ ಗ್ಯಾರಂಟಿ ಗೃಹಲಕ್ಷ್ಮಿ ಪ್ರತಿ ಯಜಮಾನಿಗೆ ಪ್ರತಿ ತಿಂಗಳು ರೂ 2,000’, ‘ಕಾಂಗ್ರೆಸ್‌ ಗ್ಯಾರಂಟಿ-3, ಅನ್ನಭಾಗ್ಯ ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 10 K.G. ಅಕ್ಕಿ ಉಚಿತ’, ‘ಯುವನಿಧಿ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ರೂಪಾಯಿ 3000 ಪದವೀಧರರಿಗೆ, ರೂಪಾಯಿ 1500 ಡಿಪ್ಲೋಮಾ  ಪದವೀಧರರಿಗೆ ’ ಎಂಬುದಾಗಿ ನಮೂದಿರುವ ಹಾಗೂ ಫ್ಲೆಕ್ಸನ ಕೆಳಭಾಗದಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ ಸಂಭಾವ್ಯ ಕಾಂಗ್ರೆಸ್‌ ಅಭ್ಯರ್ಥಿ ಎಂದು ಬಿಂಬಿತ ಪ್ರಸಾದ್‌ರಾಜ್‌ ಕಾಂಚನ್‌ರವರ ಭಾವಚಿತ್ರವಿರುವ, ಪಕ್ಕದಲ್ಲಿ  ‘ಅಭಿವೃದ್ಧಿಗಾಗಿ ನಿಮ್ಮ ಮತ’ ಎಂಬುದಾಗಿ ನಮೂದಿರುವುದು ಕಂಡುಬಂದಿರುತ್ತದೆ.  ಫ್ಲೆಕ್ಸ್‌ ಗಳನ್ನು ಅಳವಡಿಸಿರುವ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಸಾರ್ವಜನಿಕರಿಗೆ ಪ್ರದರ್ಶಿತವಾಗುವಂತೆ ಫ್ಲೆಕ್ಸ್‌ ಗಳನ್ನು ಅಳವಡಿಸಿದ್ದು, ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಸಂಭಾವ್ಯ ಅಭ್ಯರ್ಥಿ ಪ್ರಸಾದ್‌ರಾಜ್‌ ಕಾಂಚನ್‌ ಹಾಗೂ ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌ ಸಮಿತಿ, ಉಡುಪಿ-ಬ್ರಹ್ಮಾವರ ರವರು ಚಾಲ್ತಿಯಲ್ಲಿರುವ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 53/2023, ಕಲಂ:  3 KARNATAKA OPEN PLACE DISFIGUREMENT ACT  1981 & ಕಲಂ: 171H ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-04-2023 09:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080