ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬ್ರಹ್ಮಾವರ: ದಿನಾಂಕ 13/04/2023 ರಂದು ಸಮಯ  ಬೆಳಗ್ಗೆ 08:00 ಗಂಟೆಗೆ ಪಿರ್ಯಾಧಿದಾರರಾದ ಶಾರದಾ  (39), ತಂದೆ: ಆನಂದ, ವಾಸ: ತೆಂಕುಬಿರ್ತಿ ವಾರಂಬಳ್ಳಿ ಗ್ರಾಮ ಬ್ರಹ್ಮಾವರ ಇವರು ತನ್ನೊಂದಿಗೆ ಶಾಲಾ ಹೆಲ್ಪರ್ ಕೆಲಸ ಮಾಡುತ್ತಿರುವ ಸಂಪ ಪೂಜಾರ್ತಿ, ಮ್ಯಾಕ್ಸಿಮೀ ರೊಡಿಗ್ರಸ್  ರವರೊಂದಿಗೆ ಬೈಕಾಡಿ ಗ್ರಾಮದ ಕಾಮೇಶ್ವರ ದೇವಸ್ಥಾನದಿಂದ ಬಿಸಿ ರೋಡ್ ಬೈಕಾಡಿ ಮಧ್ಯ ಜಿನ್ನು ಪೂಜಾರ್ತಿಯವರ ಮನೆಯ ಬಳಿಯ ರಸ್ತೆಯ ಎಡ ಭಾಗದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಆರೋಪಿಯು KA-30 W-3241ನೇ ಬೈಕನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಎಡಭಾಗಕ್ಕೆ ಚಲಾಯಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ರಸ್ತೆಗೆ ಬಿದ್ದು ಶಾರದ ರವರ ತಲೆಯ ಎಡಭಾಗಕ್ಕೆ ರಕ್ತಗಾಯ ಸೊಂಟಕ್ಕೆ ಗುದ್ದಿದ ಒಳ ನೋವಾಗಿದ್ದು ಸಂಪ ಪೂಜಾರ್ತಿಯವರಿಗೆ ಬಲಕಾಲಿನ ಕೆಳಮೊಳಗಂಟು ರಕ್ತಗಾಯ ಹಾಗೂ ಎಡ ಭುಜಕ್ಕೆ  ಒಳನೋವುಂಟಾಗಿದ್ದು ಮ್ಯಾಕ್ಸಿಮೀ ರೊಡಿಗ್ರಸ್ರವರಿಗೆ ಬಲಗಾಲು ತೊಡೆಗೆ ತೀವ್ರ ತರದ  ನೋವು ಮುಖಕ್ಕೆ ಹಾಗೂ ತಲೆಗೆ ರಕ್ತ ಗಾಯ ಆಗಿರುತ್ತದೆ. ಜೊತೆಯಲ್ಲಿದ್ದ ಇದ್ದ ಜೂಲಿಯನ್ ಡಿಸಿಲ್ವ ಹಾಗೂ ಇತರರು ತಮ್ಮನ್ನು ಉಪಚರಿಸಿರುತ್ತಾರೆ. ಚಿಕಿತ್ಸೆಯ ಬಗ್ಗೆ ಒಂದು ವಾಹನದಲ್ಲಿ ಮಹೇಶ್ ಆಸ್ಪತ್ರೆಗೆ ತಂದು ದಾಖಲಿಸಿದ್ದು ಶಾರದಾ ರವರು ಹಾಗೂ ಸಂಪ ಮಹೇಶ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು ಮ್ಯಾಕ್ಸಿಮೀ ರೊಡಿಗ್ರಸ್ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುವುದಾಗಿದೆ, ಈ ಅಪಘಾತಕ್ಕೆ ಬೈಕ್ ಚಾಲಕ ಕಾರ್ತಿಕ್ ನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯು ಕಾರಣವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 78/2023 ಕಲಂ: 279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಣಿಪಾಲ: : ಪಿರ್ಯಾದಿದಾರರಾದ ಬಿ ಪ್ರಭಾಕರ ಪೈ (73), ತಂದೆ: ದಿ. ಸೀತಾರಾಮ್ ಪೈ, ವಾಸ: ಕೆನರಾ ಬ್ಯಾಂಕ್ ಮೇಲಗಡೆ  ಮೊದಲನೆ ಮಹಡಿ ಪರ್ಕಳ ಹೆರ್ಗಾ ಗ್ರಾಮ ಉಡುಪಿ ತಾಲೂಕು ಇವರ ಮಗ ವಿನಾಯಕ ಪೈ (35) ಇವರು 6 ತಿಂಗಳಿನಿಂದ ಯಾವುದೇ ಕೆಲಸ ವಿಲ್ಲದೇ ಇದ್ದು ವಿಪರೀತ ಮಧ್ಯಸೇವನೆ ಮಾಡುವ ಅಭ್ಯಾಸ ಹೊಂದಿದ್ದರು, ಸುಮಾರು 2 ವರ್ಷಗಳ ಹಿಂದೆ ಲಿವರ್ ಸಮಸ್ಯೆ ಕಾಣಿಸಿದ್ದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ, ದಿನಾಂಕ 12/04/2023 ರಂದು ಬೆಳಿಗ್ಗೆ 07:00 ಗಂಟೆಗೆ  ವಿನಾಯಕ ರವರು ಮನೆಗೆ ಬಂದು ವಾಪಾಸು ಹೋಗಿರುತ್ತಾರೆ. ಪಿರ್ಯಾದಿದಾರರು ಸಂಜೆ  07:15 ಗಂಟೆಗೆ ಮೊಬೈಲ್ ಕರೆ ಮಾಡಿ ಮಾತನಾಡಿರುತ್ತಾರೆ. ದಿನಾಂಕ 13/04/2023 ರಂದು ಬೆಳಿಗ್ಗೆ 09:00 ಗಂಟೆಗೆ ವಿನಾಯಕ ರವರು ಮಣಿಪಾಲ ಸುಷ್ಮಾ ಲಾಡ್ಜ್ ನಲ್ಲಿ ಅಸ್ವತ್ಥಗೊಂಡು ಬಿದ್ದಿರುವುದಾಗಿ ಮಾಹಿತಿ ತಿಳಿದು ಪಿರ್ಯಾದಿದಾರರು ಸುಷ್ಮಾಲಾಡ್ಜ್  ಗೆ ಬಂದು ನೋಡಿದಾಗ ರೂಂ ನಂಬರ್ 108 ರಲ್ಲಿ  ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದ್ದು ಪರಿಶೀಲಿಸಲಾಗಿ ವಿನಾಯಕ ಮೃತಪಟ್ಟಿರುತ್ತಾರೆ. ಮೃತ ವಿನಾಯಕ ದಿನಾಂಕ 12/04/2023 ರಂದು ಸಂಜೆ 07:15 ಗಂಟೆಯಿಂದ ದಿನಾಂಕ 13/04/2023 ರ ಬೆಳಿಗ್ಗೆ 09:00 ಗಂಟೆಯ ಮದ್ಯಾವಧಿಯಲ್ಲಿ ಯಾವುದೋ ಕಾರಣದಿಂದ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 16/2023 ಕಲಂ: 174(3)(iv)  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಪಡುಬಿದ್ರಿ: ದಿನಾಂಕ 09/04/2023 ರಂದು ಪುರುಷೋತ್ತಮ ಎ, ಪೊಲೀಸ್ ಉಪನಿರೀಕ್ಷಕರು (ಕಾ.ಸು & ಸಂಚಾರ) , ಪಡುಬಿದ್ರಿ ಠಾಣೆ ಇವರು ಗಸ್ತು ನಡೆಸುತ್ತಿದ್ದಾಗ ಕಾಫು ತಾಲೂಕು ನಡ್ಸಾಲು ಗ್ರಾಮದ ಕಂಚಿನಡ್ಕದಲ್ಲಿ ದಾವೂದ್ ಹಕೀಂ (24) ಎಂಬಾತನು ಯಾವುದೋ ಅಮಲಿನಲ್ಲಿದ್ದವನಂತೆ ತೂರಾಡುತ್ತಿದ್ದು, ಅವನು ಯಾವುದೋ ಮಾದಕ ಪದಾರ್ಥ ಸೇವಿಸಿರಬಹುದು ಎಂಬ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದುಕೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ದಾವೂದ್ ಹಕೀಂ ಮಾದಕ ವಸ್ತುವಾದ ಗಾಂಜಾ ಸೇವಿಸಿರುವುದಾಗಿ ದಿನಾಂಕ 13/04/2023 ರಂದು ವೈದ್ಯರು ದೃಢ ಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 35/2023,  ಕಲಂ: 27 (b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾಧ ಲವೀನ ಉಷಾ ಮೆನೇಜಸ್ (43) , ಗಂಡ: ಜೋಕಿಂ ಮೈಕಲ್ ಮೆನೇಜಸ್, ವಾಸ: ಬೆಥಾನಿಯಾ, ಲೆಮಿನಾ ಕ್ರಾಸ್ ಎದುರುಗಡೆ, ನಿಟ್ಟೆ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಇವರ ತಾಯಿ ಲೂಸಿ ಕ್ಯಾಸ್ತಲಿನೊ (79) ಎಂಬುವವರಿಗೆ ಸಂಬಂದಿಸಿದ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಬೈದಾಲ್ ರಸ್ತೆಯಲ್ಲಿರುವ ಅನಿಲ್ ಕಂಪೌಂಡ್ ನಲ್ಲಿರುವ ಜನವಾಸವಿಲ್ಲದ ಮನೆಯೊಳಗೆ ದಿನಾಂಕ 10/04/2023 ರ 16:00 ಗಂಟೆಯಿಂದ 12/04/2023 ರಂದು ಬೆಳಿಗ್ಗೆ 08:30 ಗಂಟೆಯ ಮದ್ಯ ಅವದಿಯಲ್ಲಿ ಮನೆಯ ಬಾಗಿಲನ್ನು ಬಲತ್ಕಾರವಾಗಿ ಮುರಿದು ಮನೆಯೊಳಗಿನ ಕೊಠಡಿಯಲ್ಲಿ ಇದ್ದ ಕಬ್ಬಿಣದ ಕಪಾಟಿನಲ್ಲಿ ಇಟ್ಟಿದ್ದ 2 ಜೊತೆ ಕಿವಿಯ ಬೆಂಡೊಲೆ, 2 ಬಲೆಗಳು, 3 ಉಂಗುರುಗಳು, 1 ಹವಳದ ಸರ, 1 ಚಿನ್ನದ ಸರ ಮತ್ತು 2 ಬೇಬಿ ಬ್ಯಾಂಗಲ್ಸ್  10 ಪವನ್ ತೂಕದ ಸುಮಾರು 35 ವರ್ಷಕ್ಕೂ ಮೆಲ್ಪಟ್ಟ ಹಳೆಯ ಚಿನ್ನಾಭರಣಗಳು  ಮೌಲ್ಯ 1.45.000/- ಆಗಬಹುದು ಎಂದು  ತಾಯಿ ಲೂಸಿ ಕ್ಯಾಸ್ತಲಿನೊ ಯವರಲ್ಲಿ ವಿಚಾರ ತಿಳಿದು ಪ್ರಕರಣ ದಾಖಲಿಸಲು ತಡವಾಗಿ ದೂರು ನೀಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 52/2023 ಕಲಂ: 454,457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿದಾರರಾದ ವಿಶ್ವನಾಥ ಭಟ್‌ (37) ,Static Surveillance Team Alevooru Check Post ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜ್‌ ಮಲ್ಪೆ ಉಡುಪಿ ಇವರು ದಿನಾಂಕ 12/04/2023 ರಂದು ಮದ್ಯಾಹ್ನ 14:00 ಗಂಟೆಯಿಂದ ರಾತ್ರಿ 22:00 ಗಂಟೆ ತನಕ ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ತ ಉಡುಪಿ ತಾಲೂಕು ಅಲೆವೂರು ನಲ್ಲಿ ಚೆಕ್‌ ಪೋಸ್ಟ್‌ನಲ್ಲಿ ವಾಹನ ತಪಾಸಣೆ  ಕರ್ತವ್ಯ ನಿರ್ವಹಿಸುತ್ತಿರುವಾಗ  18:45 ಗಂಟೆಗೆ ಕೊರಂಗ್ರಪಾಡಿ ಕಡೆಯಿಂದ ಮಣಿಪಾಲ ಕಡೆಗೆ KA-20-AA-6445 ನೇ ದರ ಈಚರ್‌ ಲಾರಿಯ ಚಾಲಕ ಅಭಿಲಾಶ್‌ ತಂದೆ: ಅಶೋಕ್‌ ಕುಮಾರ್‌ ಪಿ ಎಂಬಾತನು ಓಂ ಶಿವದುರ್ಗ ಇಂಡಸ್ಟ್ರೀಸ್‌ ಬೆಳ್ಳಂಪಳ್ಳಿ ಕುಕ್ಕಿಕಟ್ಟೆ ಪೆರ್ಡೂರು ಎಂಬ ಬಿಲ್ ನೊಂದಿಗೆ ಲಾರಿಯಲ್ಲಿ 1)50 ಕೆ ಜಿ ಅಕ್ಕಿ  ತುಂಬಿರುವ ಗೋಣಿ ಚೀಲಗಳು – 5, 2)30 ಕೆ ಜಿ ಅಕ್ಕಿ  ತುಂಬಿರುವ ಗೋಣಿ ಚೀಲಗಳು –14, 3) 26 ಕೆ ಜಿ ಅಕ್ಕಿ  ತುಂಬಿರುವ ಗೋಣಿ ಚೀಲಗಳು – 3,  4) 25 ಕೆ ಜಿ ಅಕ್ಕಿ  ತುಂಬಿರುವ ಗೋಣಿ ಚೀಲಗಳು –2,  5) 10 ಕೆ ಜಿ ಅಕ್ಕಿ  ತುಂಬಿರುವ ಗೋಣಿ ಕೈ ಚೀಲಗಳು –11,  6) 5 ಕೆ ಜಿ ಅಕ್ಕಿ  ತುಂಬಿರುವ ಗೋಣಿ ಕೈ ಚೀಲಗಳು –15 ಒಟ್ಟು 9.80 ಕ್ವಿಂಟಾಲ್‌ ಅಕ್ಕಿ ಇರುವುದು ಕಂಡು ಬಂದಿರುತ್ತದೆ.  ಬಿಲ್‌ ಗೂ ಮತ್ತು ಲಾರಿಯಲ್ಲಿದ್ದ ಅಕ್ಕಿಯ ಗೋಣಿ ಚೀಲಗಳಿಗೂ ಒಂದಕ್ಕೊಂದು ತಾಳೆ ಯಾಗದೇ ವ್ಯತ್ಯಾಸ ಕಂಡು ಬಂದಿರುತ್ತದೆ,  ವಶಪಡಿಸಿಕೊಂಡ 9.80 ಕ್ವಿಂಟಾಲ್‌ ಅಕ್ಕಿಗೆ  ಮೌಲ್ಯ 3,92,000/- ಹಾಗೂ ಲಾರಿಯ ಮೌಲ್ಯ 5,00,000/- ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 96/2023, ಕಲಂ: 98 KP Act ರಂತೆ ಪ್ರಕರಣ ದಾಖಲಾಗಿರುತ್ತದೆ.ಇತ್ತೀಚಿನ ನವೀಕರಣ​ : 13-04-2023 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080