ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ: ದಿನಾಂಕ 11/04/2022 ರಂದು ಪಿರ್ಯಾದಿದಾರರಾದ ಗಣೇಶ್ ಶೆಣೈ (49), ತಂದೆ: ವೆಂಕಟೇಶ ಶೆಣೈ, ವಾಸ: ‘’ಶೋಬಿತಾನಿಲಯ’’ , ಬೆಳ್ಕಲ್‌‌ಗುಡ್ಡೆ, ಮಾಣೈ, ಬೊಮ್ಮರಬೆಟ್ಟು ಗ್ರಾಮ ಉಡುಪಿ ತಾಲೂಕು ಇವರ ಹೆಂಡತಿ ತನ್ನ  KA-20-EA-8229 ನೇ ಸ್ಕೂಟಿಯಲ್ಲಿ ಎಂದಿನಂತೆ ಉಡುಪಿಗೆ ಕೆಲಸಕ್ಕೆ ತೆರಳಿ ವಾಪಾಸು ಕೆಲಸ ಮುಗಿಸಿ ಮನೆಗೆ ಬರುವುದಕ್ಕಾಗಿ  ಸ್ಕೂಟಿಯಲ್ಲಿ ಕೋಟ್ನಕಟ್ಟೆಯಿಂದ ಹರಿಖಂಡಿಗೆ ರಸ್ತೆಯಲ್ಲಿ ಬರುತ್ತಾ ಸಂಜೆ 6:00 ಗಂಟೆಗೆ ದಿಯಾ ಬಾರ್ ಎದುರು ನಿಲ್ಲಿಸಿದ್ದ ಒಂದು ಕಾರನ್ನು ಓವರ್‌ಟೆಕ್ ಮಾಡಿ ಮುಂದೆ ಹೋಗುವಾಗ ಹಿಂದಿನಿಂದ  KA-20-AA-9099 ನೇ ಟೆಂಪೋ ಚಾಲಕ ಟೆಂಪೋವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಹೆಂಡತಿಯವರ ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 20/2022  ಕಲಂ :279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಶರತ್ ಜೋಗಿ (28), ತಂದೆ: ಸುರೇಶ್ ಜೋಗಿ, ವಾಸ: ಕೆ .ಆಫ್ ಕರಮ್ ಆಲಿ , ಓಷನ್ ಪರ್ಲ್‌ ಹಿಂಭಾಗ, ಕಟ್ಟೆ ಆಚಾರ್ಯ ಮಾರ್ಗ, ಕುಂಜಿಬೆಟ್ಟು ಉಡುಪಿ ಇವರ ತಾಯಿ ಸಾವಿತ್ರಿ ಎಸ್ ಜೋಗಿ (51) ಎಂಬುವವರು ದಿನಾಂಕ 12/04/2022 ರಂದು ಕಡಿಯಾಳಿ ನೀಲಗಿರಿ ಶಾಪ್ ಬಳಿ ರಸ್ತೆ ಬದಿಯಲ್ಲಿ ಯೋಗ ಕ್ಲಾಸಿಗೆ ನಡೆದುಕೊಂಡು ಹೋಗುತ್ತಿರುವಾಗ ಬೆಳಿಗ್ಗೆ 05:55 ಗಂಟೆಗೆ ಮಣಿಪಾಲ ಕಡೆಯಿಂದ ಕಲ್ಸಂಕ ಕಡೆಗೆ KA-20-EQ-7178 ಮೋಟಾರು ಸೈಕಲ್ ಸವಾರ ರವಿ ಪ್ರಸಾದ್ ಭಟ್ ಎಂಬುವವರು ಶಿವಳ್ಳಿ ಗ್ರಾಮದ ಕಡಿಯಾಳಿ ನೀಲಗಿರಿ ಶಾಪ್ ಬಳಿ ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ತೀರಾ ಎಡಬದಿಗೆ ಬಂದು ಸಾವಿತ್ರಿ ಎಸ್ ಜೋಗಿ ರವರಿಗೆ ಅಫಘಾತಪಡಿಸಿದ ಪರಿಣಾಮ ಸಾವಿತ್ರಿ ಎಸ್ ಜೋಗಿ ರವರು ರಸ್ತೆಗೆ ಎಸೆಯಲ್ಪಟ್ಟು ಬಲಕಾಲಿಗೆ ಮೂಳೆ ಮುರಿತ ಉಂಟಾಗಿದ್ದು, ತಲೆಗೆ ಗಂಭೀರ ಗಾಯವಾಗಿ ಉಡುಪಿ ಗಾಂಧಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 34/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ : ಪಿರ್ಯಾದಿದಾರರಾದ ದಿನಕರ ಪೂಜಾರಿ (62), ತಂದೆ: ಬಾಬಣ್ಣ ಪೂಜಾರಿ, ವಾಸ: ಸಾಸ್ತಾನ ಗೋಳಿಗರಡಿ ಪಾಂಡೇಶ್ವರ ಗ್ರಾಮ ಬ್ರಹ್ಮಾವರ ಇವರ ಅಕ್ಕನ ಮಗ ರಾಜೇಂದ್ರ ಪೂಜಾರಿ (38) ಇವರು ಕೃಷಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ  ದಿನಾಂಕ 12/04/2022 ರಂದು ಬೆಳಿಗ್ಗೆ ಮನೆಯ ಪಕ್ಕದಲ್ಲಿರುವ ಗದ್ದೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿರುವಾಗ ಬೆಳಿಗ್ಗೆ 10:00 ರಿಂದ 15:00 ಗಂಟೆಯ ಮಧ್ಯಾವಧಿಯಲ್ಲಿ ಕೃಷಿ ಗದ್ದೆಗೆ  ನೀರು ಬಿಡಲು ಬಾವಿಯ ಬಳಿ ಹೋದಾಗ ಆಕಸ್ಮಿಕವಾಗಿ  ಕಾಲು ಜಾರಿ ಬಾವಿಗೆ ಬಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಅರ್‌ ಕ್ರಮಾಂಕ 14/2022 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಮಧುಕರ ಸಾಲ್ಯಾನ್ (42), ತಂದೆ: ಸಂಜೀವ ಸಾಲ್ಯಾನ್, ವಾಸ:ಗುರುಪ್ರಸಾದ ನಿಲಯ, ಹನುಮಾನ ನಗರ ಮಲ್ಪೆ ಕೊಡವೂರು ಗ್ರಾಮ , ಉಡುಪಿ ತಾಲೂಕು ಇವರು ದಿನಾಂಕ 12/04/2022 ರಂದು ಬೆಳಿಗ್ಗೆ  9:00 ಗಂಟೆಗೆ ಮಲ್ಪೆ ಬೀಚ್ ನಲ್ಲಿ ಸಂಚರಿಸುತ್ತಿರುವಾಗ ಬೀಚ್ ನ ಇಂಟರ್ ಲಾಕ್  ರಸ್ತೆಯಲ್ಲಿರುವ  ಕುಲ್ಲುಗ ಹೋಟೆಲ್ ನ ನೇರ ಸಮುದ್ರ ಕಿನಾರೆಯಲ್ಲಿ ಸುಮಾರು 55-60 ವರ್ಷ ಪ್ರಾಯದ  ನೀಲಿ ಬಣ್ಣದ ಚೌಕುಳಿ ಲುಂಗಿಯನ್ನು  ಹಾಸಿ ಮರಳಿನಲ್ಲಿ  ಮಲಗಿದ್ದು  ಪಿರ್ಯಾದಿದಾರರು ಆತನನ್ನು ಎಬ್ಬಿಸಿದಾಗ ಆತನು ಏಳದೆ  ಇದ್ದು , ಮಲ್ಪೆಯ ಈಶ್ವರ ರವರ ಸಹಾಯದಿಂದ ಅಪರಿಚಿತ ವ್ಯಕ್ತಿಯನ್ನು ಅಂಬುಲೆನ್ಸ್ ನಲ್ಲಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ವ್ಯಕ್ತಿಯು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ . ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 24/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಮಹಮ್ಮದ್ ರಾಝಿ (15), ತಂದೆ: ಮಹಮ್ಮದ್ ಸಿದ್ದೀಕ್, ವಾಸ: ಎ.ಎನ್. ಮಾಂಜಿಲ್, ಬೀಜಾಡಿ ಗ್ರಾಮ, ಕುಂದಾಪುರ ತಾಲೂಕು ಇವರು ವಿದ್ಯಾರ್ಥಿಯಾಗಿದ್ದು ದಿನಾಂಕ 12/04/2022 ರಂದು 16:45 ಗಂಟೆಗೆ ಅವರ ಅಜ್ಜಿಯ ಮನೆಯಾದ ಬೀಜಾಡಿ ಗ್ರಾಮದ ಎ.ಎನ್. ಮಾಂಜಿಲ್ ಗೆ ಹೋಗಿದ್ದು ಅಲ್ಲಿ ಮಹಡಿಯ ಮೇಲೆ ಪುಸ್ತಕ ತೆಗೆದುಕೊಳ್ಳುತ್ತಿರುವಾಗ ಪಿರ್ಯಾದಿದಾರರ ಮಾವನವರಾದ ಬಿ.ಕೆ ನಿಸಾರ್, ಬಿ.ಕೆ ಅನ್ಸಾರ್, ಶ್ರೀಮತಿ ಅಸ್ಮತ್ ಹಾಗೂ ಶ್ರೀಮತಿ ಶಹನಾಝ್ ರವರು ಪಿರ್ಯಾದಿದಾರರಿಗೆ ಇದು ನಿಮ್ಮ ಮನೆಯಲ್ಲ ನಿನ್ನನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ ಎಂದು ಹೇಳಿ ತಡೆದು ನಿಲ್ಲಿಸಿ ಕೈಯಿಂದ ಹೊಡೆದು ನೆಲಕ್ಕೆ ಬೀಳಿಸಿ ಆರೋಪಿತರೆಲ್ಲರೂ ಕಾಲಿನಿಂದ ತುಳಿದಿರುತ್ತಾರೆ. ಪಿರ್ಯಾದಿದಾರರು ಆರೋಪಿತರ ಕೈಯಿಂದ ತಪ್ಪಿಸಿಕೊಂಡು ಕಳೆದ ಎರಡು ತಿಂಗಳಿನಿಂದ ವಾಸವಾಗಿರುವ  ಬ್ಯಾರೀಸ್  ಫ್ಲ್ಯಾಟ್ ಗೆ  ಬಂದಿದ್ದು ತದನಂತರ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಪಿರ್ಯಾದಿದಾರರ ತಾಯಿ ಹಾಗೂ ಆರೋಪಿತರಿಗೂ ಜಾಗದ ತಕರಾರಿದ್ದು ಈ ದ್ವೇಷದಿಂದ ಆರೋಪಿತರು  ಕೃತ್ಯ ಎಸಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾದ ಕ್ರಮಾಂಕ 42/2022 ಕಲಂ: 341, 323, 504 ಜೊತೆಗೆ 34 ಐಪಿಸಿ ಮತ್ತು ಕಲಂ: 75 JJ ( care And Protection of Children) Act 2015 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 12/04/2022 ರಂದು ಗುರುನಾಥ ಬಿ ಹಾದಿಮನಿ, ಪೊಲೀಸ್‌ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್‌ ಠಾಣೆ  ಇವರಿಗೆ 52 ನೇ ಹೇರೂರು ಗ್ರಾಮದ ಹೇರಂಜೆ, ಕಾಡೋಳಿ ಎಂಬಲ್ಲಿ 1ನೇ ಆರೋಪಿಯಾದ  ಥಾಮಸ್‌ ಡಿ ಸೋಜಾ ಎಂಬುವವರ ದನದ ಶೆಡ್‌ ಬಳಿ ರಸ್ತೆಯಲ್ಲಿ ದನಗಳನ್ನು ಅಕ್ರಮವಾಗಿ ವಧೆ ಮಾಡಲು ಕಳುಹಿಸಲು ಹಿಂಸಾತ್ಮಾಕ ರೀತಿಯಲ್ಲಿ ಗೂಡ್ಸ್ ಟೆಂಪೋಕ್ಕೆ ತುಂಬಿಸುತ್ತಿದ್ದಾರೆ ಎಂಬುದಾಗಿ ದೊರೆತ ಮಾಹಿತಿಯ ಮೇರೆಗೆ ಆರೋಪಿಯ  ಮನೆಯ ಸಮೀಪದ ದನದ ಶೆಡ್‌ ಬಳಿ  ತಲುಪಿ ರಸ್ತೆಯಲ್ಲಿ ಆರೋಪಿಗಳಾದ 1) ಥೋಮಸ್‌ ಡಿ ಸೋಜಾ (62), ತಂದೆ: ಮಥಾಯಸ್‌ ಡಿ ಸೋಜಾ ವಾಸ: ಕಾಡೋಳಿ ಹೆರಂಜೆ,52 ನೇ ಹೇರೂರು ಗ್ರಾಮ ,ಬ್ರಹ್ಮಾವರ ತಾಲೂಕು, 2) ಕೃಷ್ಣ ಪೂಜಾರಿ (46), ತಂದೆ:ದಿವಂಗತ ನಾಗರಾಜ, ವಾಸ:ಪಡುಬೈಲು, ಕಾರ್ಕಡ, ಕಾರ್ಕಡ ಗ್ರಾಮ, ಬ್ರಹ್ಮಾವರ ತಾಲೂಕು, 3) ನಾಗೇಶ ಮರಕಾಲ (40),ತಂದೆ: ನರಸಿಂಹ ಮರಕಾಲ,ವಾಸ: ಹಿರಿಯ ಪ್ರಾಥಮಿಕ ಶಾಲೆ ಬಳಿ, ಕಾವಡಿ, ಕಾವಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು KA-19-AA-5417 ನೇ ಗೂಡ್ಸ್  ಟೆಂಪೋಕ್ಕೆ ದನಗಳನ್ನು ತುಂಬಿ ಹೊರಡಲು ಅನುವಾಗುತ್ತಿದ್ದಾಗ ಸುತ್ತುವರಿದು ಒಳಗೆ ನೋಡಿದಾಗ ಗೂಡ್ಸ್‌ ಟೆಂಪೋದ ಹಿಂಭಾಗದ ಬಾಡಿಯಲ್ಲಿ  6 ದನದ ಗಂಡು ಕರುಗಳು, ಒಂದು ಹೆಣ್ಣು ದನ ಇವುಗಳನ್ನು ಕಾಲು, ಕುತ್ತಿಗೆ  ಕಟ್ಟಿ ಉಸಿರುಗಟ್ಟುವಂತೆ, ಹಿಂಸಾತ್ಮವಾಗಿ  ಕಟ್ಟಿ,  ನಿಲ್ಲಿಸಿರುವುದು ಕಂಡು ಬಂದಿರುತ್ತದೆ. ಆರೋಪಿಗಳು  ಗೋವುಗಳನ್ನು 1ನೇ ಆರೋಪಿಗೆ ಪರಿಚಯ ಇರುವ 4ನೇ ಆರೋಪಿಯಾದ ಮಂಗಳೂರಿನ  ವ್ಯಕ್ತಿಯೋರ್ವರಿಗೆ ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡಲು ನೀಡುತ್ತಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2022 ಕಲಂ: 4,5,7,12 The Karnataka prevention cattle ordinance 2020 & us 11(1)(D) prevention of cruelty to  animals act 1960 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-04-2022 05:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080