ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾಧ ಸೇಕ್ಬರ್ ಅಲಿ, (26),  ತಂದೆ: ಜೋಯಿದ್ದೀನ್  ಶೇಖ್, ವಾಸ: ಭಗವಾನ್ ಗೋಲ, ಚಕಿದೇಬಿಪುರ, ಹನುಮಂತನಗರ, ಹನುಮಂತನಗರ ದಕ್ಷಿಣ ಅಂಚೆ, ಮುರ್ಶಿದಾಬಾದ್  ಜಿಲ್ಲೆ, ಪಶ್ಚಿಮ ಬಂಗಾಳ ಇವರು ಹಾಗೂ ಅವರ ಚಿಕ್ಕಪ್ಪನ ಮಗ ರೋಫಿಕ್ ಎಸ್ ಕೆ (24)  ಎಂಬುವರು ಗಾರೆ ಕೆಲಸ ಮಾಡಿಕೊಂಡಿದ್ದು, ಕಾಪು ತಾಲೂಕು ನಂದಿಕೂರಿನಲ್ಲಿ ವಾಸವಾಗಿರುತ್ತಾರೆ. ರೋಫಿಕ್ ಎಸ್ ಕೆ ಎಂಬಾತನು ದಿನಾಂಕ 12/04/2022 ರಂದು ಕೆಲಸ ಮುಗಿಸಿ ನಂದಿಕೂರು ಪೇಟೆಗೆ ಹೋದವನು ವಾಪಾಸ್ಸು ಸುಮಾರು 19:00 ಗಂಟೆಯ ವೇಳೆಗೆ  ಇನ್ನೊಬ್ಬ ತಮ್ಮ ತಾರೀಕುಲ್ ಇಸ್ಲಾಂ ಎಂಬುವನ ಜೊತೆ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ-1 ರಲ್ಲಿ ನಂದಿಕೂರು ಗ್ರಾಮದ ರಾಮ ಮಂದಿರದ ಎದುರು ನಡೆದುಕೊಂಡು ಬರುತ್ತಿರುವಾಗ KA-19-EF-9778 ನೇ ನಂಬ್ರದ ಮೋಟಾರ್ ಸೈಕಲ್ ಸವಾರ ವಿಶಾಲ್ ಡಿ ಅಲ್ಮೆಡಾ ಎಂಬುವರು ತನ್ನ ಮೋಟಾರ್ ಸೈಕಲ್ಲನ್ನು ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು  ರೋಫಿಕ್ ಎಸ್‌‌ಕೆ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ರೋಫಿಕ್‌ಎಸ್‌ಕೆ ನು ರಸ್ತೆಗೆ ಬಿದ್ದಿದ್ದು, ಮೋಟಾರ್ ಸೈಕಲ್ ಸವಾರ ಕೂಡಾ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾನೆ. ಸದ್ರಿ ಅಪಘಾತದಿಂದ ರೋಫಿಕ್ ಎಸ್ ಕೆ ರವರ ಬಲಕಾಲಿಗೆ ಮೂಳೆ ಮುರಿತದ ಗಾಯ ಉಂಟಾಗಿದ್ದು, ಮೋಟಾರ್ ಸೈಕಲ್ ಸವಾರನಿಗೂ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ. ನಂತರ ಗಾಯಾಳುವಿಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಸೇಕ್ಬರ್ ಅಲಿ ರವರು ಗಾಯಾಳುವಿನ ಆರೈಕೆಯಲ್ಲಿ ಇದ್ದುದರಿಂದ ದೂರು ನೀಡಲು ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2022 ಕಲಂ 279,  338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾಧ ಸಜ್ಜನ್(30) ತಂದೆ:ದಿ.ಕೆ ರಾಘವೇಂದ್ರ ಭಟ್,ವಾಸ: ಮನೆ ನಂ: 5-16ಅಂಬ ನಿವಾಸ, ಅಂಬಲಪಾಡಿ ಗ್ರಾಮ ಮತ್ತು ಅಂಚೆ, ಉಡುಪಿ ತಾಲೂಕು ಇವರು ದಿನಾಂಕ 11/04/2022 ರಂದು KA-20 EW-0321ನೇ ಸ್ಕೂಟರ್ ನಲ್ಲಿ ಮಾವ ಸುಧೀಂದ್ರ ಭಟ್ಟರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಬ್ರಹ್ಮಗಿರಿ ಕಡೆಯಿಂದ ಅಂಬಲಾಪಾಡಿ ಕಿದಿಯೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ  ಸುಮಾರು ಮಧ್ಯಾಹ್ನ 1:15 ಗಂಟೆಗೆ ಅಂಬಲಪಾಡಿ ಜಂಕ್ಷನ್ ತಲುಪುವಾಗ KA-20 D-7370 ನೇ ಆಟೋ ರಿಕ್ಷಾದ ಚಾಲಕ ಶಿವಾನಂದ ಎಂಬಾತನು ತನ್ನ ಆಟೋ ರಿಕ್ಷಾವನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಕಾರ್ತಿಕ್ ಪಾರ್ಕಿಂಗ್ ಸ್ಥಳದಿಂದ ಅಂಬಲಪಾಡಿ ಕಡೆಕಾರ್ ರಸ್ತೆಯ ಕಡೆಗೆ ಚಲಾಯಿಸಿ KA-20 EW-0321ನೇ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಜ್ಜನ್‌ ರವರು ಮತ್ತು ಸಹಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಸಹ ಸವಾರ ಸುಧೀಂದ್ರ ಭಟ್ಟರವರಿಗೆ ಎಡಎದೆಯ ಬಳಿ ಮೂಳೆ ಮುರಿತ ಗಾಯವಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/2022 ಕಲಂ 279,  338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ: ಫಿರ್ಯಾದಿದಾರರಾದ ಶರತ್ ಎಸ್ ಕೆಮ್ತೂರು (30), ತಂದೆ: ಶ್ರೀನಿವಾಸ ಪೂಜಾರಿ, ವಾಸ: ಮನೆ ನಂ.3-80 ಕಾರ್ತಿಕ ನಿವಾಸ,ಕೆಮ್ತೂರು, ಕೊರಂಗ್ರಪಾಡಿ ಗ್ರಾಮ, ಉಡುಪಿ ಇವರೊಂದಿಗೆ ವಾಸವಿದ್ದ ತಂದೆಯಾದ ಶ್ರೀನಿವಾಸ ಪೂಜಾರಿ (66) ರವರು ದಿನಾಂಕ 12/04/2022 ರಂದು ಮನೆಯಲ್ಲಿ ಒಬ್ಬರೇ ಇದ್ದು ಸಂಜೆ 5:30 ಗಂಟೆಯ ಸಮಯಕ್ಕೆ ಶರತ್ ಎಸ್ ಕೆಮ್ತೂರು ರವರ ಅಕ್ಕ ಶ್ವೇತಾ ಎಂಬವರು ಮನೆಗೆ ಬಂದಾಗ ಮನೆಯಲ್ಲಿ ತಂದೆ ಇಲ್ಲದೇ ಇರುವ ವಿಚಾರ ತಿಳಿಸಿದಂತೆ ಶರತ್ ಎಸ್ ಕೆಮ್ತೂರು ರವರು ಮನೆಗೆ ಬಂದು ತಂದೆಯನ್ನು ಎಲ್ಲ ಕಡೆಗಳಲ್ಲಿ ಹುಡುಕಾಡಿದಾಗ ಮನೆಯ ಪಕ್ಕದಲ್ಲಿ ಇದ್ದ ಕೆರೆಯಲ್ಲಿ ಮೃತ ಪಟ್ಟ ಸ್ಧಿತಿಯಲ್ಲಿ ಪತ್ತೆಯಾಗಿರುತ್ತಾರೆ. ದಿನಾಂಕ 12/04/2022 ರಂದು ಸುಮಾರು 17:00 ಗಂಟೆಯಿಂದ 17:30 ಗಂಟೆಯ ಮಧ್ಯಾವಧಿಯಲ್ಲಿ ಕೆರೆಯಲ್ಲಿ ಬಿದ್ದ ಕೋಳಿಯನ್ನು ಮೇಲಕ್ಕೆತ್ತಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 23/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಶಿರ್ವಾ: ಪಿರ್ಯಾದಿದಾರರಾದ ರೇಶ್ಮಾ ಬಾನು, (30) ಗಂಡ: ರೆಹಮಾನ್‌ಸಾಬ್‌, ವಾಸ: ಮನೆ ನಂ. 3-91 ಬಿಳಿಯಾರು ರಸ್ತೆ, ಡೇಲನ್‌ಮಾರ್ಟಿಸ್‌ ರವರ  ಬಾಡಿಗೆ ಮನೆ, ಕುರ್ಕಾಲು ಗ್ರಾಮ, ಕಾಪು ಇವರ ಗಂಡ ರೆಹಮಾನ್‌ಸಾಬ್‌(42) ರವರು  ವಿಪರೀತ  ಮದ್ಯಪಾನ  ಮಾಡುವ  ಚಟವನ್ನು ಹೊಂದಿದ್ದು, ಯಾವುದೋ  ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ  ಯಾರು ಇಲ್ಲದ  ಸಮಯ  ದಿನಾಂಕ 13/04/2022 ರಂದು  ಬೆಳಿಗ್ಗೆ  11:30  ಗಂಟೆಯಿಂದ 12:00 ಗಂಟೆಯ ನಡುವಿನ  ಅವಧಿಯಲ್ಲಿ  ಕುರ್ಕಾಲು  ಗ್ರಾಮದ ಬಿಳಿಯಾರು ಎಂಬಲ್ಲಿ ಡೇಲನ್‌ ಮಾರ್ಟಿಸ್‌ರವರ  ಬಾಡಿಗೆ  ಮನೆಯ  ಚಾವಡಿ  ಮಾಡಿನ ಜಂತಿಗೆ ನೈಲಾನ್‌ ಸೀರೆ  ಬಿಗಿದು ಕುತ್ತಿಗೆಗೆ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ. ಸದ್ರಿಯವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 07/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಹೆಬ್ರಿ: ಸುದರ್ಶನ್ ದೊಡಮನಿ –ಪಿಎಸ್ ಐ ಹೆಬ್ರಿ ಪೊಲೀಸ್ ಠಾಣೆ ಇವರು ತನ್ನ ಸಿಬ್ಬಂದಿಯವರೊಂದಿಗೆ ರಾತ್ರಿ ಸಮಯದಲ್ಲಿ ಅಕ್ರಮ ಗೋಸಾಗಾಟಯಾಗುತ್ತಿರುವ ವಿಚಾರದಲ್ಲಿ ಇಲಾಖಾ ನಂಬ್ರ KA-20 G-334 ನೇದರಲ್ಲಿ ದಿನಾಂಕ 12/04/2022 ರಂದು ರಾತ್ರಿ ಸಮಯ ಸೊಮೇಶ್ವರ ಸರ್ಕಲ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಅಪರಾತ್ರಿ ಅಂದರೆ ದಿನಾಂಕ 13/04/2022 ರಂದು ಮುಂಜಾನೆ 02:00 ಗಂಟೆಗೆ ಕಾಸನಮಕ್ಕಿ ಕಡೆಯಿಂದ ಅತೀವೇಗವಾಗಿ ಬರುತ್ತಿರುವ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಅದರ ಚಾಲಕನು ವಾಹನವನ್ನು ನಿಲ್ಲಿಸದೇ ಉಡುಪಿ ಕಡೆಯ ರಸ್ತೆಗೆ ತಿರುಗಿಸಿದ್ದು. ಅದನ್ನು ಬೆನ್ನಟ್ಟಿದಾಗ ಸದ್ರಿ ವಾಹನದ ಚಾಲಕನು ವಾಹನವನ್ನು ಅತೀವೇಗವಾಗಿ ಚಲಾಯಿಸಿ ಸೀತಾನದಿ,  ಕೈಕಂಬ, ಬಚ್ಚಪ್ಪು, ಮುದ್ರಾಡಿ ಭಕ್ರೆ, ಬ್ಯಾಣದಿಂದಾಗಿ ಪುನ:ಹ ಉಡುಪಿ ಕಡೆಗೆ ತಿರುಗಿಸಿ ಅತೀವೇಗವಾಗಿ ಹೋಗಿ ಸಮಯ ಸುಮಾರು ಮುಂಜಾನೆ 02:45 ಗಂಟೆಗೆ ಶಿವಪುರ ಗ್ರಾಮದ ಬ್ಯಾಣ ಎಂಬಲ್ಲಿಗೆ ತಲುಪಿದಾಗ ಸದ್ರಿ ವಾಹನದ ಚಾಲಕನು ನಮ್ಮಿಂದ ತಪ್ಪಿಸಿ ಕೊಳ್ಳುವ ಉದ್ದೇಶದಿಂದ ವಾಹನವನ್ನು ರಸ್ತೆಯ ಎಡಬದಿಗೆ ತಿರುಗಿಸಿ ರಸ್ತೆಯ ಬದಿಯಲ್ಲಿರುವ ಒಂದು ಅಂಗಡಿಗೆ ಡಿಕ್ಕಿ ಹೊಡೆದು ನಿಲ್ಲಿಸಿ ಅದರಲ್ಲಿದ್ದ 4-5 ಜನರು ಓಡಿ ತಪ್ಪಿಸಿಕೊಂಡಿದ್ದು. ವಾಹನವನ್ನು ಪರಿಶೀಲಿಸಿದಾಗ ಅದಕ್ಕೆ ನಂಬ್ರ ಪ್ಲೇಟ್ ಇರುವುದಿಲ್ಲ. ಅದರ ಮುಂದಿನ ಗ್ಲಾಸ್ ಸಂಪೂರ್ಣ ಜಖಂ ಗೊಂಡಿರುತ್ತದೆ. ಸದ್ರಿ ವಾಹನದ ಹಿಂಬದಿಯ ಟಾಪ್ ಗೆ ಕಪ್ಪು ಬಣ್ಣದ ಪ್ಲಾಸ್ಟಿಕ್ ಟರ್ಪಲ್ ಹಾಕಿ ಸಂಪೂರ್ಣ ಮುಚ್ಚಿದ್ದು. ಅದನ್ನು ತೆರೆದು ನೋಡಿದಾಗ ಅದರ ಒಳಗೆ 14 ಜಾನುವಾರುಗಳನ್ನು ಯದ್ವತದ್ವವಾಗಿ ಒಂದರ ಮೇಲೆ ಒಂದರಂತೆ ತುಂಬಿಸಿ ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಅವುಗಳ ಕುತ್ತಿಗೆಗೆ ಹುರಿಹಗ್ಗವನ್ನು ಕಟ್ಟಿರುವುದಲ್ಲದೇ ಅವುಗಳ ಕಾಲುಗಳನ್ನು ಮೇಲೆ ಮಾಡಿ ಹುರಿಹಗ್ಗದಿಂದ  ಕಟ್ಟಿರುವುದು ಕಂಡು ಬರುತ್ತದೆ. ಅದರಲ್ಲಿ ಒಂದು ಜಾನುವಾರು ಸತ್ತು ಹೋಗಿರುವುದು ಕಂಡು ಬಂದಿದ್ದು. ಕೆಲವು ಜಾನುವಾರುಗಳಿಗೆ ಗಾಯವಾಗಿರುತ್ತದೆ. ವಾಹನವು ಅಂಗಡಿಗೆ ಡಿಕ್ಕಿ ಹೊಡೆದಿರುವುದರಿಂದ ಅಂಗಡಿಯ ಮುಂದಿನ ಸಿಮೆಂಟ್ ಶೀಟ್ ಜಖಂ ಅಗಿರುತ್ತದೆ. ಆರೋಪಿತರುಗಳು  ಸದ್ರಿ ಜಾನುವಾರುಗಳನ್ನು  ಎಲ್ಲಿಂದಲೂ ಕಳವು ಮಾಡಿ ಸದರಿ ವಾಹನದಲ್ಲಿ ಯದ್ವಾತದ್ವವಾಗಿ ಒಂದರ ಮೇಲೆ ಒಂದರಂತೆ ತುಂಬಿಸಿ ಅವುಗಳಿಗೆ ಹಿಂಸೆ ಆಗುವ ರೀತಿಯಲ್ಲಿ ಅವುಗಳ ಕುತ್ತಿಗೆಗೆ ಮತ್ತು ಕಾಲಿಗೆ ಹುರಿ ಹಗ್ಗವನ್ನು ಕಟ್ಟಿ ಅವುಗಳನ್ನು ವಧೆ ಮಾಡುವ ಸಲುವಾಗಿ ಖಾಸಾಯಿ ಖಾನೆಗೆ ತೆಗೆದು ಕೊಂಡು ಹೋಗುತ್ತಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 14/2022 ಕಲಂ:,379, 279,427, ಐಪಿಸಿ ಮತ್ತು ಕಲಂ: 4,5,7,12 ಕರ್ನಾಟಕ ಜಾನುವಾರುಹತ್ಯೆ ಪ್ರತಿಬಂದಕ ಮತ್ತುಸಂರಕ್ಷಣ ಕಾಯಿದೆ 2020 ಯಂತೆ ಪ್ರಕರಣ ದಾಖಲಾಗಿರುತ್ತದೆ.     
 • ಕಾರ್ಕಳ: ಪಿರ್ಯಾದಿದಾರರಾದ ರಾಜಾರಾಮ್ ಎಂ, (44) ತಂದೆ: ನಾರಾಯಣ ಪ್ರಭು, ವಾಸ: ಗುರುಕೃಪಾ ಮನೆ, ಮಿಯಾರು ಅಂಚೆ ಮತ್ತು ಗ್ರಾಮ, ಕಾರ್ಕಳ ಇವರು ಎಕ್ಸ್  ಪೋರ್ಟ್   ಬಿಸಿನೆಸ್ ಮಾಡುತ್ತಿದ್ದು ತನ್ನ ತಾಯಿ ಜಯಲಕ್ಷ್ಮಿ ಪ್ರಭು  ಮತ್ತು ನಾದಿನಿ ಶ್ರೀಮತಿ ಚೇತನ ಇವರೊಂದಿಗೆ ಕಾರ್ಕಳ ತಾಲೂಕು ಮಿಯಾರು ಗ್ರಾಮದ ಗುರುಕೃಪಾ ಎಂಬ ಮನೆಯಲ್ಲಿ ವಾಸವಾಗಿದ್ದು ದಿನಾಂಕ 12/04/2022 ರಂದು ರಾತ್ರಿ 23:30 ಗಂಟೆಗೆ ಮಹಡಿಯ ಮೇಲೆ ಕೋಣೆಯಲ್ಲಿ ಮಲಗಿದ್ದು ತಾಯಿ ಕೆಳಗಿನ ಕೋಣೆಯಲ್ಲಿ ಮಲಗಿದ್ದರು, ನಾದಿನಿ ಹಾಗೂ ಮಗು ಕೆಳಗಿನ ಇನ್ನೊಂದು  ಕೋಣೆಯಲ್ಲಿ ಬಾಗಿಲು ಚಿಲಕ ಹಾಕಿಕೊಂಡು ರಾತ್ರಿ 00:30 ಗಂಟೆಗೆ ಮಲಗಿದ್ದು ದಿನಾಂಕ 13/04/2022 ರಂದು ಬೆಳಿಗ್ಗೆ 06:00 ಗಂಟೆಗೆ ನೋಡಿದಾಗ ರಾಜಾರಾಮ್ ಎಂ, ರವರ ಕೋಣೆಯಲ್ಲಿದ್ದ ಟೇಬಲ್‌ನ 2 ಡ್ರಾವರ್‌ಗಳು ತೆರೆದಿದ್ದು ಜಯಲ್ಷ್ಮಿ ಪ್ರಭುರವರು ಮಲಗಿದ್ದ ಕೋಣೆಯಲ್ಲಿ ಕಪಾಟಿನ ಬಾಗಿಲು ತೆರೆದು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದರು. ಮತ್ತು ಡೈನಿಂಗ್ ರೂಮಿನಲ್ಲಿದ್ದ  ಕಪಾಟಿನ ಬಾಗಿಲು ತೆರೆದು ಲಾಕರನ್ನು ಮುರಿದು ಹಾಕಿ ಅದರಲ್ಲಿದ್ದ ಜಯಲಕ್ಷ್ಮಿರವರ  ಬ್ಯಾಗನ್ನು ತೆಗೆದು ರೂಪಾಯಿ 2500/ ಹಣವನ್ನು ಕಳವು ಮಾಡಿ ಬ್ಯಾಗನ್ನು ಹೊರಗೆ ಎಸೆದಿದ್ದರು. ಹಾಗೂ ಹಾಲ್‌ನಲ್ಲಿ ಟಿ ವಿ ಮೇಲೆ ಇಟ್ಟಿದ್ದ ಇವರ ಪರ್ಸನ್ನು ತೆಗೆದು ಅದರಲ್ಲಿದ್ದ ನಗದು ಹಣ 4500/ ರೂ ನ್ನು ಮತ್ತು 1000/ರೂ ಮೌಲ್ಯದ ಟೈಟಾನ್ ವಾಚನ್ನು ಕಳವು ಮಾಡಿ ಪರ್ಸನ್ನುಹೊರಗೆ ಎಸೆದಿದ್ದಾರೆ. ಯಾರೋ ಕಳ್ಳರು ದಿನಾಂಕ 13/04/2022 ರಂದು 00-30 ಗಂಟೆಯಿಂದ ಬೆಳಿಗ್ಗೆ  06-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯವರು ಮಲಗಿರುವ ಸಮಯ ಅಡುಗೆ ಕೋಣೆಯ ಕಿಟಿಕಿಯ ಚಿಲಕ ಮುರಿದು ಅಡುಗೆ ಕೋಣೆಯ ಬಾಗಿಲು ತೆರೆದು ಒಳಪ್ರವೇಶಿಸಿ ನಗದು ರೂಪಾಯಿ 7,000/ ಮತ್ತು 1000/ ರೂ ಮೌಲ್ಯದ ಟೈಟಾನ್  ವಾಚನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2022 ಕಲಂ 380, 457 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಕೋಟ: ಮಾನ್ಯ ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಪಿರ್ಯಾದಿದಾರರಾದ ರಾಘವೇಂದ್ರ ಕರ್ಕೆರ (46) ತಂದೆ:ಕೃಷ್ಣ ಕರ್ಕೆರ ವಾಸ: ಆಲಿತೋಟ ಸಾಸ್ತಾನ ಗುಂಡ್ಮಿ ಗ್ರಾಮ  ಬ್ರಹ್ಮಾವರ ಇವರು ದ್ವಿತೀಯ ದರ್ಜೆಯ ಪಿ ಡಬ್ಲ್ಯೂ ಡಿ  ಕಂಟ್ರಾಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು  ಆರೋಪಿತ 1.    ಭಾಸ್ಕರ ಶ್ರೀಯಾನ್ (37) ತಂದೆ: ಗೋವಿಂದ ಕಡ್ಡಿ ಮನೆ ಐರೋಡಿ ಗ್ರಾಮ ಬ್ರಹ್ಮಾವರ ತಾಲೂಕು  2. ಕೃಷ್ಣಿ ಶ್ರೀಯಾನ್ (62) ಗಂಡ: ವಿಂದ ಕಡ್ಡಿ ಮನೆ ಐರೋಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರು ದೂರ ಸಂಬಂದಿಕರಾಗಿದ್ದು  2 ನೇ ಆರೋಪಿತೆಯ ಹಕ್ಕಿನ ಸ್ಥಿರಾಸ್ತಿಯಾದ  ಐರೋಡಿ ಗ್ರಾಮದ ಸ ನಂ 2-69 ರಲ್ಲಿ  ಆರೋಪಿತರು ವಾಸದ ಉದ್ದೇಶಕ್ಕಾಗಿ  ಮನೆಯನ್ನು ನಿರ್ಮಿಸುವ  ಗುತ್ತಿಗೆಯನ್ನು ರಾಘವೇಂದ್ರ ಕರ್ಕೆರ ರವರಿಗೆ ವಹಿಸಿಕೊಟ್ಟಿರುತ್ತಾರೆ. ಇವರು ಆರೋಪಿತರ ಕೋರಿಕೆಯ ಮೇರೆಗೆ ಮನೆ ನಿರ್ಮಾಣಕ್ಕೆ ಬೇಕಾದ  ಅಂದಾಜು ಪಟ್ಟಿ ಹಾಗೂ ನಕ್ಷೆಯನ್ನು ತಯಾರಿಸಿ ಆರೋಪಿಗಳಿಗೆ ನೀಡಿರುತ್ತಾರೆ ಸದ್ರಿ ಅಂದಾಜು ಪಟ್ಟಿಯಲ್ಲಿ  ಒಟ್ಟು ಅಂದಾಜು ಮೊತ್ತ  38,53,765 ಆಗಿದ್ದು ಗುತ್ತಿಗೆಪಡೆದುಕೊಳ್ಳುವ ಪೂರ್ವದಲ್ಲೆ ಆರೋಪಿತರು ಸುಮಾರು 5,00,000 ಮರಳನ್ನು ಶೇಖರಿಸಿ ಇಟ್ಟಿರುವುದರಿಂದ ಸದ್ರಿ ಮೊತ್ತವನ್ನು ಅಂದಾಜು ಮೊತ್ತದಿಂದ  ಕಡಿತಗೊಳಿಸಿ  33,00,000 ಕ್ಕೆ ಕಟ್ಟಡನಿರ್ಮಾಣ ಗುತ್ತಿಗೆಯನ್ನು ರಾಘವೇಂದ್ರ ಕರ್ಕೆರ ರವರು ಮಾಡಲು ಒಪ್ಪಿರುತ್ತಾರೆ .ಆರೋಪಿತರು ಇವರಿಗೆ  ಈ ವರೆಗೆ  17.70,000  ಮಾತ್ರವೇ ಪಾವತಿಮಾಡಿದ್ದು  10,03,000 ಹಣವನ್ನು ಬಾಕಿಯಿರಿಸಿಕೊಂಡಿರುತ್ತಾರೆ, ರಾಘವೇಂದ್ರ ಕರ್ಕೆರ ರವರು ತಾನೂ ಪೂರ್ಣಗೊಂಡ ಕಾಮಗಾರಿ ಪಟ್ಟಿಯನ್ನು  ಅಂಚೆಯ ಮೂಲಕ ಆರೋಪಿತರಿಗೆ  ಕಳುಹಿಸಿಕೊಟ್ಟಿರುತ್ತಾರೆ ರಾಘವೇಂದ್ರ ಕರ್ಕೆರ ರವರು ಸದ್ರಿ ಕಟ್ಟಡದ ಉಳಿದ ಕಾಮಗಾರಿ ಕೆಲಸ ನಿರ್ವಹಿಸುವರೆ ಈಗಾಗಲೇ 3,00,000 ವ್ಯಯಿಸಿ ಉಳಿದ ಕಟ್ಟಡ ನಿರ್ಮಾಣ ಕಾಮಗಾರಿ ಸಾಮಗ್ರಿಗಳನ್ನು ಸ್ಥಳದಲ್ಲಿ  ದಾಸ್ತಾನಗೊಳಿಸಿದ್ದು  ಹಾಗೂ ಸ್ಲ್ಯಾಬ್ ಹಾಕುವರೆ ಬೇಕಾದ ಉಪಕರಣಗಳನ್ನು ಸಹ ಸ್ಥಳದಲ್ಲಿಯೇ ಇಟ್ಟಿರುತ್ತಾರೆ ರಾಘವೇಂದ್ರ ಕರ್ಕೆರ ರವರು ಕೊಡ ಬೇಕಾದ ಉಳಿದ ಹಣವನ್ನು ಕೇಳಿದಾಗ ಆರೋಪಿತರು ಕೊಡಲು ನಿರಾಕರಿಸಿ ಬೇರೆ ವ್ಯಕ್ತಿಗಳಿಂದ  ಬಾಕಿ ಉಳಿದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮಾಡಿಸುವುದಾಗಿ ಬೆದರಿಸಿರುತ್ತಾರೆ. ಆರೋಪಿತರಿಂದ ಬರಬೇಕಾದ ಬಾಕಿ ಹಣವನ್ನು  ಕುಟುಂಬದ ಹಿರಿಯರ ಮುಖಾಂತರ  ಮಾತುಕತೆ ಮೂಲಕ ಬಗೆಹರಿಸಿ ಪಡೆದುಕೊಳ್ಳುವ ಪ್ರಯತ್ನ ದಲ್ಲಿರುವಾಗ ದಿನಾಂಕ 28/07/2021 ರಂದು ರಾಘವೇಂದ್ರ ಕರ್ಕೆರ ರವರು ಕಟ್ಟಡ ಕಾಮಗಾರಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ರಾಘವೇಂದ್ರ ಕರ್ಕೆರ ರವರು ಕಟ್ಟಡ ನಿರ್ಮಾಣ ಕ್ಕೆ ತಂದಿದ್ದ ಬಾಡಿಗೆ ಸಾಮಾನುಗಳು ಹಾಗೂ ಕಟ್ಟಡ ನಿರ್ಮಾಣದ ಬಗ್ಗೆ ಶೇಖರಿಸಿದ್ದ ಸಾಮಾನುಗಳು ನಾಪತ್ತೆಯಾಗಿರುವುದು ಕಂಡು ಬಂತು ಈ ಬಗ್ಗೆ ಆರೋಪಿತರಲ್ಲಿ ವಿಚಾರಿಸಿದಲ್ಲಿ ಹಾರಿಕೆಯ ಉತ್ತರ ನೀಡಿರುವುದಾಗಿದೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 48/2022  ಕಲಂ: 406,418.420,424,504,506, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-04-2022 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080