ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು 

  • ಕೊಲ್ಲೂರು : ಪಿರ್ಯಾದಿದಾರರಾದ ಮಂಜುನಾಥ ಬಸವರಾಜ್ ಧನ್ಯಾಳ್ (33), ತಂದೆ: ದಿ. ಬಸವರಾಜ್, ವಾಸ: ತಿಗಡಿಕೆರೆ ಓಣಿ , ಮುಳುಗುಂದ , ಗದಗ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 11/04/2021 ರಂದು ತನ್ನ ಪತ್ನಿ ಶ್ರೀಮತಿ ಶ್ರುತಿ ಮಗು ಶ್ರೇಯಾ, ಚಿಕ್ಕಮ್ಮ ಮಂಜುಳಾ, ಚಿಕ್ಕಮ್ಮನ ಮಗಳಾದ ವರ್ಷಾ ಳೊಂದಿಗೆ KA-20-N-0327 ನೇ ಮಾರುತಿ ಆಲ್ಟೋ 800 ಕಾರಿನಲ್ಲಿ ಚಾಲಕ ನಾಗಯ್ಯರೊಂದಿಗೆ ಮುಳುಗುಂದ ದಿಂದ ಧರ್ಮಸ್ಥಳಕ್ಕೆ ಹೊರಟು ಮಾರ್ಗ ಮಧ್ಯೆ ಕೊಲ್ಲೂರು ದೇವಸ್ಥಾನ ತಲುಪಿ ರಾತ್ರಿ ಉಳಕೊಂಡು ದಿನಾಂಕ 12/04/2021 ರಂದು ಕೊಲ್ಲೂರಿನಿಂದ ಧರ್ಮಸ್ಥಳಕ್ಕೆ ಕಾರಿನಲ್ಲಿ ಹೊರಟು ಬೆಳಿಗ್ಗೆ 08;07 ಗಂಟೆಗೆ ಜಡ್ಕಲ್ ಗ್ರಾಮದ ರಾಜ್ಯ ಹೆದ್ದಾರಿ ನಾಯಿಕೋಡಿ ಎಂಬಲ್ಲಿ ತಿರುವು ರಸ್ತೆಯಲ್ಲಿ ತಲುಪಿದಾಗ ಎದುರಿನಿಂದ ಜಡ್ಕಲ್ ಕಡೆಯಿಂದ ಕೊಲ್ಲೂರು ಕಡೆಗೆ KL-13-Y-5903 ನೇ ಕಾರನ್ನು ಅದರ ಚಾಲಕ ಆರೋಪಿ ವಿಜೇಶ್ ಬಾಬು ವೇಗ ಹಾಗೂ ಅಜಾಗರೂಕತೆಯಿಂದ ತೀರ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಕಾರುಗಳು ಜಖಂಗೊಂಡು ಪಿರ್ಯಾದಿದಾರರಿಗೆ ತಲೆಗೆ ಭುಜಕ್ಕೆ ಪೆಟ್ಟಾಗಿದ್ದು, ಕಾರಿನ ಚಾಲಕ ನಾಗಯ್ಯ ರವರಿಗೆ ಸೊಂಟ ಮತ್ತು ಬಲಕಾಲಿಗೆ ಮೂಳೆ ಮುರಿದ ಗಾಯವಾಗಿದ್ದು , ಮಗು ಶ್ರೇಯಾ ಗೆ ಹಣೆಯ ಬಳಿ ಪೆಟ್ಟಾಗಿದ್ದು , ಕಾರಿನ ಹಿಂಬಾಗ ಕುಳಿತಿದ್ದ ಶ್ರೀಮತಿ ಶ್ರುತಿ ರವರಿಗೆ ಬಲಕಾಲಿಗೆ ಪೆಟ್ಟಾಗಿದ್ದು ಮಂಜುಳಾರವರಿಗೆ ಬಲ ಕಾಲಿಗೆ ಮತ್ತು ಬಲ ಕೈಗೆ ಮೂಳೆ ಮುರಿತದ ಗಾಯವಾಗಿದ್ದು ವರ್ಷಾಳಿಗೆ ಹಣೆಗೆ ಪೆಟ್ಟಾಗಿರುವ ಗಾಯವಾಗಿದ್ದು ಗಾಯಾಳುಗಳು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಚಿನ್ಮಯ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ ಹಾಗೂ ಆರೋಪಿ ವಿಜೇಶ್ ಬಾಬು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಾಯಿ ಸತ್ಯನ್, ಲತಾ ಸತ್ಯನ್, ಸಂಜನಾ ಸತ್ಯನ್ ಮತ್ತು ಅದ್ವೇತ್ ಸತ್ಯನ್ ಎಂಬುವವರಿಗೆ ಪೆಟ್ಟಾಗಿದ್ದು ಕುಂದಾಪುರ ಚಿನ್ಮಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 10/2021 ಕಲಂ: 279,337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ಚಂದ್ರ ಶೇಖರ ಶೆಟ್ಟಿ (45), ತಂದೆ:ರಾಮಣ್ಣ ಶೆಟ್ಟಿ ,ವಾಸ: ಕೊಳೂರು ಮನೆ , ಚಿತ್ತೂರು ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 12/04/2021 ರಂದು ಮಧ್ಯಾಹ್ನ 12:00 ಗಂಟೆಗೆ ತನ್ನ ಮೋಟಾರು ಸೈಕಲ್ ನಲ್ಲಿ ಕೆಲಸದ ನಿಮಿತ್ತ ಕೊಲ್ಲೂರು ಕಡೆಯಿಂದ ಚಿತ್ತೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಇಡೂರು ಕುಂಜ್ಞಾಡಿ ಗ್ರಾಮದ ರಾಜ್ಯ ಹೆದ್ದಾರಿಯ ಇಡೂರು ಗೇರು ಪ್ಲಾಟ್ ಬಳಿ ಎದುರಿನಿಂದ ಚಿತ್ತೂರು ಕಡೆಯಿಂದ ಜಡ್ಕಲ್ ಕಡೆಗೆ KA-20-EE-7952 ನೇ ಮೋಟಾರು ಸೈಕಲ್ ನ್ನು ಆರೋಪಿ ಮಹಾಬಲ ಶೆಟ್ಟಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಎಡಬದಿಯಿಂದ ನಾಯಿ ಅಡ್ಡ ಬಂದ ಕಾರಣ ಗಲಿಬಿಲಿ ಗೊಂಡು ವೇಗವನ್ನು ನಿಯಂತ್ರಿಸಲಾಗದೇ ಒಮ್ಮೇಲೆ ಮೋಟಾರು ಸೈಕಲ್ ಗೆ ಬ್ರೇಕ್ ಹಾಕಿ ನಿಯಂತ್ರಣ ತಪ್ಪಿದ ಪರಿಣಾಮ ಆರೋಪಿ ಮೊಟಾರು ಸೈಕಲ್ ನಲ್ಲಿ ಸಹ ಸವಾರರಾದ ಮಂಜುನಾಥ ಶೆಟ್ಟಿ ಯವರು ಬಲ ಮಗ್ಗುಲಾಗಿ ರಸ್ತೆಗೆ ಬಿದ್ದು ತಲೆಗೆ ತೀವ್ರ ತರಹದ ಗಾಯವಾಗಿ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಭಾಸ್ಕರ ದೇವಾಡಿಗ (41), ತಂದೆ: ಚಂದಯ್ಯ ಶೇರಿಗಾರ, ವಾಸ: ಕನರಾಡಿ ಮನೆ, ಮರ್ಣೆ ಅಂಚೆ, ಉಡುಪಿ ತಾಲೂಕು ಇವರ ತಮ್ಮ ಪದ್ಮನಾಭ ದೇವಾಡಿಗ ಎಂಬುವವರು ದಿನಾಂಕ 11/04/2021 ರಂದು ಸಂಜೆ ತನ್ನ KA-20-EH-1926 ನೇ ನಂಬ್ರದ ಮೋಟಾರ್‌‌ ಸೈಕಲ್ಲಿನಲ್ಲಿ ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು-ಉಡುಪಿ ಏಕಮುಖ ಸಂಚಾರ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿರುವ ಸಮಯ 17:30 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಎಸ್.ಎಸ್. ಬಾರ್ ಬಳಿ ತಲುಪುತ್ತಿದ್ದಂತೆ KA-01-AG-8965 ನೇ ನಂಬ್ರದ ಈಚರ್ ಗೂಡ್ಸ್ ವಾಹನ ಚಾಲಕ ತನ್ನ ವಾಹನವನ್ನು ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ಲಿನ ಹಿಂಬದಿಗೆ ಡಿಕ್ಕಿ ಹೊಡೆದು ವಾಹನವನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿರುತ್ತಾನೆ. ಅಪಘಾತದ ಪರಿಣಾಮ ಪಿರ್ಯಾದಿದಾರರ ತಮ್ಮ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಅವರ ಎದೆ ಭಾಗದ ಎಡಗಡೆಯ ಮೂಳೆ ಮುರಿತ ಹಾಗೂ ಎಡಕೈ ತೋರುಬೆರಳು,ಎರಡೂ ಕಾಲುಗಳಿಗೆ ತರಚಿದ ಗಾಯಗಳಾಗಿದ್ದು, ಗಾಯಾಳುವಿಗೆ ಪಡುಬಿದ್ರಿಯ ಸಿದ್ದಿ ವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿಯ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2021 ಕಲಂ: 279, 338 ಐಪಿಸಿ. ಮತ್ತು 134 (ಎ)(ಬಿ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-04-2021 08:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080