ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಬಾಲಕೃಷ್ಣ(27 ತಂದೆ:ಶೇಖರ  ದೇವಾಡಿಗ ವಾಸ:1-21ಎ ಮೃತ್ಯುಂಜಯ ನಿಲಯ ನಾರಾಯಣ ಗುರು ರಸ್ತೆ, ಬಡಾ ಗ್ರಾಮ ಕಾಪು ತಾಲೂಕು, ಇವರ ಅಣ್ಣ ರಿತೇಶ ದೇವಾಡಿಗ (36) ರವರು ದಿನಾಂಕ 12/03/2023 ರಂದು ತನ್ನ ಮೋಟಾರ್‌ ಸೈಕಲ್‌ ನಂಬ್ರ ಕೆ.ಎ-20-ಇ.ವೈ-1376 ನೇದರಲ್ಲಿ ಮನೆಯಿಂದ ರಾ ಹೆ 66 ರ ಮಂಗಳೂರು ಉಡುಪಿ ರಸ್ತೆಯಲ್ಲಿ  ಕೆಮ್ತೂರಿಗೆ ಹೊರಟಿದ್ದು, ಸಮಯ 2:30 ರ ಸುಮಾರಿಗೆ ಕಾಪುವಿನ ಮಂದಾರ ಹೋಟೇಲ್‌ ಬಳಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಎದುರಿನಿಂದ ಅಂದರೇ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ, ರಾಹೆ 66 ರ ಮಂಗಳೂರು ಉಡುಪಿ ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಶಿವಪ್ರಸಾದನು ತನ್ನ ಕೆ.ಎ.-03-ಎ.ಡಿ.-0104 ನಂಬ್ರದ ಅಂಬುಲೇನ್ಸ್‌‌ನ್ನು ಅತೀವೇಗ ಹಾಗೂ ನಿಲ೯ಕ್ಷಯತನದಿಂದ ಚಲಾಯಿಸಿಕೊಂಡು ಬಂದು  ರಸ್ತೆಯ ಪೂವ೯ ಅಂಚಿನಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಬಾಲಕೃಷ್ಣರವರ ಅಣ್ಣನ ಮೋಟಾರ್‌ ಸೈಕಲ್ಲಿಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದು, ಪರಿಣಾಮ ಬಾಲಕೃಷ್ಣರವರ  ಅಣ್ಣ ಮೋಟಾರ್‌ ಸೈಕಲ್‌ ಸಹಿತ ರಸ್ತೆಗೆ ಬಿದ್ದು, ಅವರ  ತಲೆಗೆ  ತೀವೃ ಸ್ವರೂಪದ ಪೆಟ್ಟಾಗಿದ್ದು, ಕೈ ಹಾಗೂ ಕಾಲುಗಳ ಮೂಳೆ ಮುರಿತವಾಗಿರುತ್ತದೆ. ಕಾಪು ಪೇಟೆಯಲ್ಲಿದ್ದ ಬಾಲಕೃಷ್ಣ ರವರ ತಮ್ಮ ಅಶೋಕನಿಗೆ ಮಾಹಿತಿ ತಿಳಿದಂತೆ ಕೂಡಲೇ ಸ್ಥಳಕ್ಕೆ ಹೋಗಿ ಅಣ್ಣ ರೀತೇಶನನ್ನು ನೋಡಿ,  ಸ್ಥಳೀಯರ ಸಹಕಾರದಿಂದ  ರಿತೇಶನನ್ನು ಎತ್ತಿ ಉಪಚರಿಸಿ ಅಂಬುಲೆನ್ಸ ನಲ್ಲಿ ಕುಳ್ಳಿರಿಸಿಕೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಹೋಗಿದ್ದು,  ಅಲ್ಲಿ ತುತು೯ನಿಗಾ ಘಟಕದಲ್ಲಿ  ಚಿಕಿತ್ಸೆಯಲ್ಲಿದ್ದ  ರಿತೇಶನು ಚಿಕಿತ್ಸೆಗೆ  ಸ್ಪಂದಿಸದೇ ದಿನಾಂಕ 12/03/2023 ರಂದು 04:20  ಗಂಟೆಗೆ ಮರಣ ಹೊಂದಿರುವುದಾಗಿ  ಕೆ.ಎಂ. ಸಿ ಆಸ್ಪತ್ರೆಯ ವೈಧ್ಯರು ತಿಳಿಸಿರುತ್ತಾರೆ. ಬಾಲಕೃಷ್ಣ ರವರು ಆಸ್ಪತ್ರೆಯಿಂದ ಹೊರಟು ಅಪಘಾತವಾದ ಸ್ಥಳವನ್ನು ನೋಡಿ ಕಾಪು ಠಾಣೆಗೆ ಬಂದು ಈ ದೂರು ನೀಡುತ್ತಿರುವುದಾಗಿದೆ. ಆದ್ದರಿಂದ ಈ ಅಪಘಾತಕ್ಕೆ  ಕೆ.ಎ-03-ಎ.ಡಿ-0104 ನೇಯದರ ಅಂಬುಲೆನ್ಸ್‌ ಚಾಲಕ  ಶಿವಪ್ರಸಾದ್‌  ವಿರುದ್ದ ದಿಕ್ಕಿನಲ್ಲಿ ತನ್ನ ಅಂಬುಲೆನ್ಸ್‌ ನ್ನು ಅತೀವೇಗ ಹಾಗೂ ನಿಲ೯ಕ್ಷ್ಯತನದ ಚಾಲನೆ ಮಾಡಿಕೊಂಡು ಬಂದಿರುವುದೇ  ಕಾರಣವಾಗಿದ್ದು ಅಲ್ಲದೇ  ರಾ.ಹೆ 66 ರ ಉಡುಪಿ-ಮಂಗಳೂರು ರಸ್ತೆಯನ್ನು ಅವೈಜ್ಞಾನಿಕವಾಗಿ ಕಿತ್ತುಹಾಕಿ ಹಲವು ದಿನಗಳು ಕಳೆದರು  ಕೂಡ ರಸ್ತೆಯನ್ನು  ದುರಸ್ತಿ ಮಾಡದೇ ಇರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  42/2023 ಕಲಂ 279, 304(A) ಐಪಿಸಿ ಮತ್ತು ಕಲಂ: 218 ಜೊತೆಗೆ 177 ಐ.ಎಂ. ವಿ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೋಟ: ಪಿರ್ಯಾದಿದಾರರಾಧ ಅಭಿಷೇಕ (28)  ತಂದೆ: ರವಿ ಮೊಗವೀರ, ವಾಸ: 68, ಹಂದಟ್ಟು ಜೋಟತಟ್ಟು ಗ್ರಾಮದ ಗ್ರಾಮ  ಬ್ರಹ್ಮಾವರ ಇವರು ದಿನಾಂಕ  04/03/2023 ರಂದು 21:30 ಗಂಟೆಗೆ ಕೋಟತಟ್ಟುವಿನಿಂದ ಕೋಟ ಗೆ ತೆರಳುವರೇ ಗೆಳೆಯ ನವೀನ ಎಂಬುವವರನ್ನು ಕರೆದುಕೊಂಡು ಅವನ ಮೋಟರ್ ಸೈಕಲ್ KA-19-ET-1819 ರಲ್ಲಿ ಹಿಂಬದಿ ಸವಾರನಾಗಿ ಕುಳಿತುಕೊಂಡು ಹಂದಟ್ಟುವಿನಿಂದ ರಾ. ಹೆ 66 ರಲ್ಲಿ ಕೋಟ ಕಡೆಗೆ ಬರುತ್ತಿರುವಾಗ ಕೋಟ ವಿವೇಕ ಶಾಲೆಯ ಗೇಟ್ ಬಳಿ ತಲುಪುವಾಗ ಹಿಂದಿನಿಂದ ಅತೀವೇಗ ಹಾಗೂ  ನಿರ್ಲಕ್ಷತನದಿಂದ ಬಂದ KA-20-EU-6074 ನೇ ಸ್ಕೂಟಿ ಸವಾರ ಆದಂ ಎಂಬಾತನು ಅಭಿಷೇಕ ರವರು ಕುಳಿತ ಮೋಟರ್ ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅಭಿಷೇಕ ರವರು ಹಾಗೂ  ಗೆಳೆಯ ನವೀನ ಮೋಟರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು    ಅಭಿಷೇಕ ರವರಿಗೆ ಎಡಕಾಲಿನ ಗಂಟಿನಲ್ಲಿ ಎಲುಬು ಮುರಿತದ ಗಾಯವಾಗಿದ್ದು ಬಲಕೈಗೆ ತರಚಿದ ಗಾಯವಾಗಿರುತ್ತದೆ. ನವೀನನಿಗೆ ಎಡಭುಜಕ್ಕೆ ಮೂಳೆ ಮುರಿತದ ತೀವ್ರ ಗಾಯ ಹಾಗೂ ಎಡಕಾಲಿಗೆ ತರಚಿದ ಗಾಯವಾಗಿರತ್ತದೆ.  ಎದ್ರಿ ಅಪಘಾತಪಡಿಸಿದ ಸ್ಕೂಟಿ ಸಹ ಸವಾರನಾದ ಸಲ್ಮಾನ್ ಅಸ್ಮಾರ್ ಎಂಬುವವನಿಗೆ ತಲೆಗೆ, ಮೈ ಕೈಗೆ ತರಚಿದ ಗಾಯವಾಗಿರುತ್ತದೆ ಅಭಿಷೇಕ ರೌರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ಇದುವರೆಗೂ ಯಾರೂ ದೂರು ನೀಡದೇ ಇರುವ ಕಾರಣ ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  42/2023  ಕಲಂ: 279, 337, 338 ಐಪಿಸಿಯಂತೆ  ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ಪಿರ್ಯಾದಿದಾರರಾದ ಆನಂದ ಕುಮಾರ್ (52) ತಂದೆ: ಅಯ್ಯದೊರೆಯ್ಯ  ವಾಸ:ನಂ: 70, ಶ್ರೀಕಂಠ ನಿಲಯ, 1 ನೇ ಕ್ರಾಸ್ , ಭೂಮಿಕಾ ಲೇಔಟ್ ಮೈಲಾಸಂದ್ರ ಗ್ರಾಮ, ಕಂಗೇರೆ ಬೆಂಗಳೂರು ಇವರು ದಿನಾಂಕ 12/03/2023 ರಂದು ತಮ್ಮ KA-41-MD 9531 ನೇದರ ಕಾರಿನಲ್ಲಿ ಮಗ ಅಶೋಕ್ ಕುಮಾರ್ ಹಾಗೂ ಹೆಂಡತಿ ಶಿವರಾಧ ರವರೊಂದಿಗೆ ಉಡುಪಿ - ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169(A) ರಸ್ತೆಯ ಮೂಲಕ ಬೆಂಗಳೂರಿಗೆ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 04:30 ಗಂಟೆಗೆ ಪರ್ಕಳದ ಸಿಂಡಿಕೇಟ್ ಬ್ಯಾಂಕ್ ಬಳಿ ತಲುಪುವಾಗ ಎದುರಿನಿಂದ ಅಂದರೆ ಶಿವಮೊಗ್ಗ ಕಡೆಯಿಂದ ಉಡುಪಿ ಕಡೆಗೆ KA-16 C-9206 ನೇ ಕಾರನ್ನು ಅದರ  ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಆನಂದ ಕುಮಾರ್‌ ರವರ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದು ಪರಿಣಾಮ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಶಿವರಾಧ ರವರ ತಲೆಯು ಕಾರಿನ ಸೀಟಿಗೆ ಹೊಡೆದು ತಲೆಗೆ ಪೆಟ್ಟಾಗಿರುತ್ತದೆ ಅಫಘಾತದಲ್ಲಿ ಕಾರು ಜಖಂಗೊಂಡಿರುವುದಾಗಿದೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  51/2023  ಕಲಂ: 279, 337 ಐಪಿಸಿಯಂತೆ  ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾಧ ಶಮೀಯುಲ್ಲಾ, (45) ತಂದೆ: ಹಸನಬ್ಬ,  ವಾಸ: ಪಕೀರ್ಣಕಟ್ಟೆ ಮಸೀದಿಯ ಬಳಿ, ಮಲ್ಲಾರು ಗ್ರಾಮ, ಕಾಪು ತಾಲೂಕು, ಉಡುಪಿ ಇವರು ಕಾಪುವಿನ ಇಮ್ತಿಯಾಜ್ ಎಂಬುವರ KA-20-AB-7677 ನೇ ನಂಬ್ರದ ಗಣೇಶ್ ಹೆಸರಿನ ಮಂಗಳೂರು-ಕುಂದಾಪುರ ಮಾರ್ಗದ ಎಕ್ಸ್‌‌‌‌ಪ್ರೆಸ್‌‌ಬಸ್ಸಿನ ನಿರ್ವಾಹಕನಾಗಿ ಕಳೆದ 13 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಹನೀಫ್ ಎಂಬುವರು ಚಾಲಕರಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಎಂದಿನಂತೆ ದಿನಾಂಕ 12/03/2023 ರಂದು ಮಧ್ಯಾಹ್ನ 13:25 ಗಂಟೆಗೆ ಕುಂದಾಪುರದಿಂದ  ಹೊರಟು 15:36 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಬಸ್ಸು ನಿಲ್ದಾಣಕ್ಕೆ ಬಂದು 15:38 ಗಂಟೆಗೆ ಬಸ್ಸು ಹೊರಡುವ ಸಮಯ ಅಲ್ಲಿನ ಟೈಂ ಕೀಪರ್ ಮಹೇಶ್ ಎಂಬಾತನು ಬಸ್ಸಿನ ಮುಂದೆ ಬಂದು, ಮುಂದೆ ಹೋಗದಂತೆ ತಡೆದಿದ್ದು, ಆಗ ಶಮೀಯುಲ್ಲಾ ರವರು ಆತನನ್ನು ಕೇಳುತ್ತಿದ್ದಾಗ, ಮಹೇಶನು ಶಮೀಯುಲ್ಲಾ ರವರನ್ನು ಉದ್ದೇಶಿಸಿ, ಅವಾಚ್ಯವಾಗಿ ಬೈಯುತ್ತಾ, ಶಮೀಯುಲ್ಲಾ ರವರನನ್ನು ದೂಡಿ ಕೈಯಿಂದ ಹೊಡೆದಿದ್ದು, ಆಗ ಶಮೀಯುಲ್ಲಾ ರವರು ರಸ್ತೆಗೆ ಬಿದ್ದ ಪರಿಣಾಮ ಬಲಕೈ, ಅಂಗೈಗೆ ಗಾಯವಾಗಿರುತ್ತದೆ. ನಂತರ ಶಮೀಯುಲ್ಲಾ ರವರಿಗೆ ಹಾಗೂ ಬಸ್ಸಿನ ಚಾಲಕನಿಗೆ ಮುಂದಕ್ಕೆ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  25/2023, ಕಲಂ: 341, 504, 323,  506 ಐಪಿಸಿಯಂತೆ  ಪ್ರಕರಣ ದಾಖಲಿಸಲಾಗಿದೆ.
  • ಪಡುಬಿದ್ರಿ: ಪಿರ್ಯಾದಿದಾರರಾಧ ಮಹೇಶ್,(28) ತಂದೆ: ದಿ. ಶಂಕರ್, ವಾಸ: ಮನೆ ನಂಬ್ರ: 1-328, ಗರಡಿಪಲ್ಲ, ಬಾಳೆಪುಣಿ ಗ್ರಾಮ, ಬಂಟ್ವಾಳ ತಾಲೂಕು ಇವರು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿಯ ಬಸ್ಸು ನಿಲ್ದಾಣದಲ್ಲಿ ಟೈಂ ಕೀಪರ್ ಆಗಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ದಿನಾಂಕ 12/03/2023 ರಂದು ಟೈಂ ಕೀಪರ್ ಕೆಲಸದಲ್ಲಿರುತ್ತಾ ಸಮಯ ಸುಮಾರು 15:37 ಗಂಟೆಗೆ KA-20-AB-7677 ನೇ ನಂಬ್ರದ ಗಣೇಶ್ ಹೆಸರಿನ ಎಕ್ಸ್‌‌‌ಪ್ರೆಸ್ ಬಸ್ಸು ಉಡುಪಿ ಕಡೆಯಿಂದ ಪಡುಬಿದ್ರಿಯ ಬಸ್ಸು ನಿಲ್ದಾಣಕ್ಕೆ ಬಂದಿದ್ದು, ಅದು 15:38 ಗಂಟೆಗೆ ಬಿಡಬೇಕಾಗಿದ್ದು, ಮಹೇಶ ರವರು ಹೊರಡುವಂತೆ ಚಾಲಕನಿಗೆ ಸೂಚಿಸಿದರೂ ಕೂಡಾ ಹೊರಡದೇ ಇದ್ದುದರಿಂದ, ಮಹೇಶ್‌ ಇವರು ಬಸ್ಸಿನ ಎದುರು ಬಂದು, ಹಿಂದಿನಿಂದ ಬರುವ ಬಸ್ಸಿಗೆ ಕೆಲಸ ಮಾಡುತ್ತಿರುವಾಗ, ಸದ್ರಿ ಬಸ್ಸಿನ ಕಂಡಕ್ಟರ್ ಶಮೀಯುಲ್ಲಾ ಎಂಬುವರು ಇವರ ಬಳಿ ಬಂದು, ಅಡ್ಡಗಟ್ಟಿ, ಬಾರೀ ಅಹಂಕಾರನ ನಿನ್ನ ಎಂದು ಹೇಳುತ್ತಾ, ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು, ಟಿ-ಶರ್ಟಿನ ಕಾಲರನ್ನು ಹಿಡಿದು ಎಳೆದಾಡಿದ್ದು, ನಂತರ ಮುಂದಕ್ಕೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  26/2023, ಕಲಂ: 341, 504, 323,  506 ಐಪಿಸಿಯಂತೆ  ಪ್ರಕರಣ ದಾಖಲಿಸಲಾಗಿದೆ.
  • ಗಂಗೊಳ್ಳಿ: ಪಿರ್ಯಾದಿದಾರರಾಧ ಸತೀಶ ದೇವಾಡಿಗ (38) ತಂದೆ: ರಾಜು ದೇವಾಡಿಗ, ವಾಸ: ಅಂಬಿಕಾ ನಿಲಯ, ತ್ರಾಸಿ, ಹೊಸಾಡು ಗ್ರಾಮ ಕುಂದಾಪುರ  ಇವರು ಅಂಬಿಕಾ ಡ್ರೈವಿಂಗ್‌ ಸ್ಕೂಲ್‌ನ ಮಾಲಕರಾಗಿದ್ದು ದಿನಾಂಕ 12/03/2023 ರಂದು KA-20 ME-5495  ನೇ ಕಾರಿನಲ್ಲಿ ಡ್ರೈವಿಂಗ್‌ ತರಭೇತಿ ಬಗ್ಗೆ ಸನತ್‌ ಎಂಬವರನ್ನು ಡ್ರೈವಿಂಗ್‌ ಶೀಟ್‌ ನಲ್ಲಿ ಕೂರಿಸಿ ತರಭೇತಿ ನೀಡುತ್ತಾ ತ್ರಾಸಿ ಗ್ರಾಮದ ಸಾಯಿಖುಷಿ ಹೋಟೇಲ್‌ ಬಳಿ  NH 66 ರಸ್ತೆಯಲ್ಲಿ ಹೋಗುತ್ತೀರುವಾಗ ಸಮಯ ಸುಮಾರು 11:30 ಗಂಟೆಗೆ  ತ್ರಾಸಿ ಕಡೆಯಿಂದ ಬೈಂದೂರು ಕಡೆಗೆ KA-20 D-7522 ನೇ ಚಾವರಲೇಟ್‌ ಟ್ರಾವೆಲ್‌ ವಾಹನವನ್ನು ಚಾಲಕನು ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಸತೀಶ ದೇವಾಡಿಗ ರವರ ತರಭೇರಿ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದನು, ಆ ಸಮಯ ಸತೀಶ ದೇವಾಡಿಗ ರವರು ಕಾರಿನಿಂದ ಇಳಿದು ಹೋಗಿ ನಿಮಗೆ ಕಣ್ಣು ಕಾಣಿಸುದಿಲ್ಲವಾ ಇದು ಡ್ರೈವಿಂಗ್‌ ಸ್ಕೂಲ್‌ನ ಗಾಡಿ ಎಂದು ವಿಚಾರಿಸುತ್ತೀರುವಾಗ ಚಾವರಲೇಟ್‌ ವಾಹನದ ಚಾಲಕನು ಸತೀಶ ದೇವಾಡಿಗ ರವರ ಹೊಟ್ಟೆಗೆ ಎಡಕಾಲಿಗೆ ತುಳಿದಿರುತ್ತಾನೆ, ಅಲ್ಲದೇ ಚಾವರಲೇಟ್‌ ವಾಹನದಲ್ಲಿ ಇರುವ 4 ಜನರು ಸೇರಿ ಸತೀಶ ದೇವಾಡಿಗ ಇವರಿಗೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ. ಹಲ್ಲೆ ನಡೆಸಿದವರನ್ನು ಗುರುತಿಸಲಾಗಿ ವಿಜಯ, ಸುಬ್ರಹ್ಮಣ್ಯ, ಸದಾಶಿವ, ಹಾಗೂ ಅಣ್ಣಪ್ಪ ಎಂದು ತಿಳಿದು ಬಂದಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  27/2023 ಕಲಂ: 279, 323, 504 34  ಐಪಿಸಿಯಂತೆ  ಪ್ರಕರಣ ದಾಖಲಿಸಲಾಗಿದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಸದಾಶಿವ (62) ತಂದೆ: ನಾಗಪ್ಪ ಶೆರುಗಾರ, ವಾಸ: ಬೆಳ್ಗಿ ಮನೆ, ಬಾಡ ಗ್ರಾಮ, ಬೈಂದೂರು  ತಾಲೂಕು ಇವರು ತನ್ನ ಹೆಂಡತಿ ಪ್ರೇಮ, ಮಕ್ಕಳಾದ ವಿಜಯ, ಸುಬ್ರಹ್ಮಣ್ಯ , ಜ್ಯೋತಿ ಹಾಗೂ ಅಣ್ಣನಾದ ಅಣ್ಣಪ್ಪ ನೊಂದಿಗೆ ಧರ್ಮಸ್ಥಳ ತೀರ್ಥಯಾತ್ರೆ ಮುಗಿಸಿ ವಾಪಾಸ್ಸು ಮನೆಗೆ ಬರುತ್ತೀರುವಾಗ ದಿನಾಂಕ 12/03/2023 ರಂದು KA-20 D-7522 ನೇ ಚಾವರಲೇಟ್‌ ವಾಹನದಲ್ಲಿ  ಕುಂದಾಪುರದಿಂದ ಬೈಂದೂರಿಗೆ ಹೋಗುವ NH 66 ರಸ್ತೆಯಲ್ಲಿ ಹೋಗುತ್ತೀರುವಾಗ ಸಮಯ ಸುಮಾರು 11:30 ಗಂಟೆಗೆ ತ್ರಾಸಿ ಗ್ರಾಮದ ಸಾಯಿಖುಶಿ ಹೋಟೇಲ್‌ ಬಳಿ NH 66 ರಸ್ತೆಯಲ್ಲಿ ಎದುರಿನಿಂದ ಹೋಗುತ್ತಿದ್ದ KA-20 ME-5495  ನೇ ಕಾರನ್ನು ಅದರ ಚಾಲಕನು ನಿರ್ಲಕ್ಷತನದಿಂದ ಯಾವುದೇ ಸೂಚನೆ ನೀಡದೇ ರಸ್ತೆಯಲ್ಲಿ ತಕ್ಷಣ ನಿಲ್ಲಿಸಿದಾಗ ಸದ್ರಿ ಕಾರಿಗೆ ಸದಾಶಿವ ರವರ  ವಾಹನವು  ಹಿಂದಿನಿಂದ ಡಿಕ್ಕಿಯಾಗಿರುತ್ತದೆ. ಆಗ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ಇಳಿದು ಬಂದು ಏನು ನಿಮಗೆ ಕಣ್ಣು ಕಾಣುವುದು ಇಲ್ಲವೇ ಎಂದು ಅವಾಚ್ಯವಾಗಿ ಬೈದು ಸದಾಶಿವ ರವರ ಕಡೆಯವರನ್ನು ತಡೆದು ನಿಲ್ಲಿಸಿ ಸದಾಶಿವ ರವರಿಗೆ ಹಾಗೂ ಸುಬ್ರಹ್ಮಣ್ಯ ರವರಿಗೆ ಹೊಡೆದಿರುತ್ತಾನೆ.  ಆ ಸಮಯ 2 ಕಡೆಯವರಿಗೂ ದೂಡಾಟವಾಗಿ  ಅಣ್ಣಪ್ಪ ರವರು ರಸ್ತೆಗೆ ಬಿದ್ದು ಬೆನ್ನಿಗೆ ಗುದ್ದಿದ  ಗಾಯವಾಗಿರುತ್ತದೆ. ಸದಾಶಿವ ರವರಿಗೆ ಎದೆಗೆ ಗುದ್ದಿದ ಗಾಯ, ಸುಬ್ರಹ್ಮಣ್ಯ ರವರಿಗೆ ಬಲಕೈಗೆ ತರಚಿದ ಗಾಯವಾಗಿರುತ್ತದೆ. ಹಲ್ಲೆ ಮಾಡಿದ ಆಪಾದಿತನ ಹೆಸರು ಸತೀಶ ಎಂಬುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  28/2023 ಕಲಂ: 279, 341, 323, 504 ಐಪಿಸಿಯಂತೆ  ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 13-03-2023 10:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080