ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೊಲ್ಲೂರು: ದಿನಾಂಕ:13/03/2023 ರಂದು ಪಿರ್ಯಾದಿ: ಸಜೀಷ್‌ .ಟಿ. (48 ವರ್ಷ) ತಂದೆ:ತಂಗಪ್ಪನ್‌ಆಚಾರಿ  ವಾಸ:ಪೊಯಿಕಯಿಲ್‌ಉದಯನಗರ ಮುದೂರು  ಗ್ರಾಮ ಇವರು ತನ್ನ ಕಾರನ್ನುದೇವಲ್ಕಂದದಲ್ಲಿರುವ ತಮ್ಮ ವೆಲ್ಡಿಂಗ್‌ಶಾಪ್‌ಗೆ ಹೋಗಲು ಕೊಲ್ಲೂರು-ಕುಂದಾಪುರ  ರಾಜ್ಯ ಹೆದ್ದಾರಿ ಯಲ್ಲಿ ಜಡ್ಕಲ್‌ಕಡೆಯಿಂದ ಹೆಮ್ಮಾಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿ ದಾಗ ಬೆಳಗ್ಗೆ 07:15 ಗಂಟೆಗೆ ಚಿತ್ತೂರು ಗ್ರಾಮದ ಹಾರ್ಮಣ್ಣು ಶ್ರೀ. ಬ್ರಹ್ಮಲೀಂಗೇಶ್ವರ ಹಾರ್ಡ್‌ವೇರ್‌ಅಂಗಡಿ ಸಮೀಪ ತಲುಪಿದಾಗ ಪಿರ್ಯಾದಿದಾರರ ಕಾರಿನ  ಎದುರಿನಿಂದ ಚಿತ್ತೂರು ಕಡೆಯಿಂದ ಜಡ್ಕಲ್ ಕಡೆಗೆ ಆರೋಪಿ ಪೌಲೋಸ್‌ರವರು KA 20 MB 0506 ನೇ ಕಾರನ್ನು ತಿರುವು  ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕಾರಿನ ವೇಗವನ್ನು ನಿಯಂತ್ರಿಸಲಾಗದೇ ಹತೋಟಿ ತಪ್ಪಿ  ತೀರ ಬಲಬದಿಗೆ ಹೋಗಿ  ರಸ್ತೆ ಬದಿಯಲ್ಲಿ ರುವ ಸಾಗುವಾಣಿ ಮರಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ  ಶೆಲ್ಬಿ ರವರಿಗೆ ಹಣೆಗೆ ರಕ್ತ ಗಾಯ  ಮತ್ತು   ಕುತ್ತಿಗೆ  ಗುದ್ದಿದ ಒಳನೋವು  ಉಂಟಾಗಿರುತ್ತದೆ. ಬಾಲಕಿ ಶ್ರೇಯಾಗೆ ಎಡಕಾಲಿನ ಮೂಳೆ ಮುರಿತದ  ಪೆಟ್ಟಾಗಿರುತ್ತದೆ. ಬಾಲಕ ಅಭೀನ್‌ಜೋನ್‌ಗೆ ಎಡ ಕೈ ಮತ್ತು ತುಟಿಗೆ ಪೆಟ್ಟಾಗಿರುತ್ತದೆ.  ಆರೋಪಿ ಪೌಲೋಸ್‌ರವರಿಗೆ ಎದೆಗೆ ಗುದ್ದಿದ ಒಳನೋವು ಮತ್ತು ಬಲಕಾಲಿನ ಬೆರಳಿಗೆ ರಕ್ತಗಾಯದ ಪೆಟ್ಟಾಗಿರುತ್ತದೆ.ಗಾಯಳುಗಳು ಕುಂದಾಪುರ  ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 13/2023 ಕಲಂ:279, 337, 338 IPC ಯಂತೆ ಪ್ರಕರಣ ದಾಖಲಿಸಲಾಗಿದೆ.  

ಗಂಡಸು ಕಾಣೆ ಪ್ರಕರಣ

 • ಉಡುಪಿ:, ಪಿರ್ಯಾದಿ: ಶ್ರೀಮತಿ ಶಾಂತವ್ವ ಬಸವರಾಜ ಹಿರಗಣ್ಣವರ (55)  ಗಂಡ: ಬಸವರಾಜ ಹಿರಗಣ್ಣವರ ವಾಸ: ಹೊಸಗಬ್ಬೂರು ಗ್ರಾಮ ಇವರ 2ನೇ ಮಗ ರವಿ ಪ್ರಾಯ: 41 ವರ್ಷ ಎಂಬಾತನು ಕೆಲಸಕ್ಕೆಂದು ಉಡುಪಿಗೆ ಬಂದಿದ್ದು, ದಿನಾಂಕ 08/03/2023 ರಂದು ಉದ್ಯಾವರದಲ್ಲಿ ಅಸ್ವಸ್ಥಗೊಂಡವರನ್ನು ನಿತ್ಯಾನಂದ ಒಳಕಾಡು ರವರು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಅದೇ ದಿನ ಒಳರೋಗಿಯಾಗಿ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು ದಿನಾಂಕ 10/03/2023 ರಂದು ರಾತ್ರಿ ಜಿಲ್ಲಾಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದು, ಈವರೆಗೂ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ   35/2023 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.   

ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ: ಪಿರ್ಯಾದಿ: ಪ್ರಕಾಶ್‌  ಪ್ರಾಯ: 33 ವರ್ಷ ತಂದೆ: ರಾಜುಕಣ್ಣನ್‌  ವಾಸ: ವಿನಾಯಕ ನಗರ  ಕುಂಬಾಷಿ ಗ್ರಾಮ ಇವರು  ತಂದೆಯವರಾದ ರಾಜುಕಣ್ಣನ್‌ (65 ವರ್ಷ) ರವರು  ಕುಂದಾಪುರದ ಶಾಸ್ತ್ರೀ ಸರ್ಕಲ್‌ ಬಳಿ ಚಪ್ಪಲಿ ರಿಪೇರಿ ಮಾಡುವ ಕೆಲಸ ಮಾಡಿಕೊಂಡಿದ್ದು  ದಿನಾಂಕ 12/03/2023 ರಂದು ಭಾನುವಾರವಾದ್ದರಿಂದ ಅಂಗಡಿಗೆ ರಜೆ ಹಾಕಿ ಬೆಳಿಗ್ಗೆ 08:30 ಗಂಟೆಗೆ ಮನೆಯಿಂದ ಹೊರಗಡೆ ಹೋದವರು ಸಂಜೆಯಾದರು ಮನೆಗೆ ಬಾರದೆ ಇದ್ದು  ದಿನಾಂಕ 12/03/2023 ರಂದು ರಾತ್ರಿ 20:00 ಗಂಟೆ ಸುಮಾರಿಗೆ ಕುಂಭಾಶಿ ಗ್ರಾಮದ ಗಣೇಶ್‌ ನಗರದ  ಫಾರೂಕ್‌ ರವರ ಗುಜರಿ ಅಂಗಡಿಯ ಮುಂದೆ ಪಿರ್ಯಾದಿದಾರರ ತಂದೆಯವರು ಮಲಗಿದ್ದಲ್ಲಿ ಮೃತ ಪಟ್ಟ ವಿಚಾರವನ್ನು ಪಿರ್ಯಾದಿದಾರರ ಸಂಬಂಧಿಕರು ಪಿರ್ಯಾದಿದಾರರಿಗೆ ತಿಳಿಸಿದ್ದು, ನಂತರ ಪಿರ್ಯಾದಿದಾರರು ಮಂಗಳೂರಿಗೆ ಕೆಲಸದ ನಿಮಿತ್ತ ಹೋದವರು ವಾಪಸ್ಸು ಬಂದು ಮೃತ ಶರೀರವನ್ನು ನೋಡಿದ್ದು ದಿನಾಂಕ 12/03/2023 ರಂದು ಬೆಳಿಗ್ಗೆ 08:30 ಗಂಟೆಯಿಂದ ಸಂಜೆ 18:00 ಗಂಟೆಯ  ಮಧ್ಯಾವದಿಯಲ್ಲಿ  ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ  UDR No 14/2023 ಕಲಂ: 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 
 • ಮಣಿಪಾಲ: ಪಿರ್ಯಾದಿ: ಮಹೇಶ್ ಪ್ರಾಯ: 32 ವರ್ಷ ತಂದೆ: ಹಾಲೇಶಪ್ಪ ವಾಸ: ಡೋರ್ ನಂ: 109 ಸಾಸಿವೆಹಳ್ಳಿ, ಹೊನ್ನಾಳಿ ತಾಲೂಕು ದಾವಣಗೆರೆ ಇವರ ಜೊತೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಆಂಜನೇಯ ಬಸವರಾಜಪ್ಪ  ಗೋಣಗೇರಿ ಪ್ರಾಯ: 22 ವರ್ಷ ಇವರು ಮಾನಸಿಕವಾಗಿ ತುಂಬಾ ನೊಂದಿದ್ದು ದಿನಾಂಕ: 13.03.2023 ರ ಮುಂಜಾನೆ 00:30 ಗಂಟೆಯಿಂದ ಬೆಳಿಗ್ಗೆ 08:00 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಶಾಂತಿನಗರದ ಲಕ್ಮಣ ನಾಯ್ಕ ರವರ ಕುಮ್ಕಿ ಜಾಗದ ಹಾಡಿಯಲ್ಲಿ ಮಾವಿನ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ  ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ನಂಬ್ರ 12/2023 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಹಿರಿಯಡ್ಕ: ಪಿರ್ಯಾದಿ: ಮಂಜುನಾಥ ಸೇರಿಗಾರ (45) ಅನಂತ ಸೇರಿಗಾರ ವಾಸ:ಲಕ್ಷ್ಮೀ ನಿವಾಸ, ಮ್ಯೊಲಿಬೆಟ್ಟು, ಪೆರ್ಣಂಕಿಲ ಗ್ರಾಮ ಇವರ ತಮ್ಮನಾದ ಬಾಲಚಂದ್ರ ಸೇರಿಗಾಠ (40) ರವರು ಚಾಲಕ ಕೆಲಸ ಮಾಡುತ್ತಿದ್ದು, ಕುಡಿತದ ಅಭ್ಯಾಸವಿದ್ದು,  ಸುಮಾರು 6 ತಿಂಗಳಿನಿಂದ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದು, ಈ ಬಗ್ಗೆ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡುತ್ತಿದ್ದು, ಅಪರೇಶನ್ ಮಾಡಲು ವೈದ್ಯರು ತಿಳಿಸಿದ್ದು, ಇದಕ್ಕೆ ಆತನು ಒಪ್ಪುತ್ತಿರಲಿಲ್ಲ. ಇತ್ತೀಚೆಗೆ ಹರ್ನಿಯಾ ಸಮಸ್ಯೆ ಜಾಸ್ತಿಯಾಗಿದ್ದು, ಇದರಿಂದ ಮಾನಸಿಕವಾಗಿ ನೊಂದು ಕೊಂಡಿದ್ದು, ಇದೇ ವಿಚಾರವಾಗಿ ದಿನಾಂಕ: 12/03/2023 ರಂದು  ಸಂಜೆ 7:00 ಗಂಟೆಯಿಂದ ರಾತ್ರಿ 10:30 ಗಂಟೆಯ ಮಧ್ಯಾವದಿಯಲ್ಲಿ ಮನೆಯ ಕೊಟ್ಟಿಗೆ ಬಳಿಯಿದ್ದ ಸಾಗುವಾನಿ ಮರಕ್ಕೆ ಕಟ್ಟಲಾಗಿದ್ದ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ. ಯುಡಿಆರ್ ನಂಬ್ರ: 10/2023 ಕಲಂ: 174  ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತ್ತೀಚಿನ ನವೀಕರಣ​ : 13-03-2023 06:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080