ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬ್ರಹ್ಮಾವರ: ದಿನಾಂಕ 11/03/2022 ರಂದು ಪಿರ್ಯಾದಿದಾರರಾದ ಗಣೇಶ್ ಆಚಾರಿ, (52), ತಂದೆ:- ಗಿರಿಯಪ್ಪ ಆಚಾರಿ, ವಾಸ- ಮನೆ ನಂ 2-66, ಆಳುಂಜೆ, ಆರೂರು ಅಂಚೆ  ಮತ್ತು ಗ್ರಾಮ, ಬ್ರಹ್ಮಾವರ ಇವರು ತನ್ನ KA-20 S-4208 ನೇ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಬ್ರಹ್ಮಾವರ – ಹೆಬ್ರಿ ಮುಖ್ಯ ರಸ್ತೆಯಲ್ಲಿ ಬ್ರಹ್ಮಾವರ ದಿಂದ ಆರೂರು ಕಡೆಗೆ ಹೋಗುತ್ತಾ ಮಧ್ಯಾಹ್ನ ಸುಮಾರು 4:45 ಗಂಟೆಗೆ ನೀಲಾವರ ಗ್ರಾಮದ, ನೀಲಾವರ ಕ್ರಾಸ್ ಬಳಿ ತಲುಪುವಾಗ ಅವರ ಎದುರಿನಿಂದ ಆರೋಪಿಯು ಅವರ KA-47 N-0035 ನೇ ಮಾರುತಿ ಸ್ವೀಪ್ಟ್ ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆ ಬಲಬದಿಗೆ ಬಂದು ಗಣೇಶ್‌ ಆಚಾರಿ ರವರ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದ ಪರಿಣಾಮ ಗಣೇಶ್‌ ಆಚಾರಿ ರವರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಅವರ ಎಡಬದಿ ಕಾಲಿನ ತೊಡೆಯ ಬಳಿ ಮೂಳೆ ಮುರಿತವಾಗಿದ್ದು ಹಾಗೂ ಬಲಬದಿಯ ಕಾಲಿನ ಮೊಣಗಂಟಿನ ಕೆಳಗೆ ರಕ್ತಗಾಯವಾಗಿರುತ್ತದೆ.  ಗಾಯಗೊಂಡ ಗಣೇಶ್‌ ಆಚಾರಿ ರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 37/2022 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾಧ ರಮೇಶ ಮುಂಡ(25) ತಂದೆ: ನಾಗೇಶ್ವರ ಮುಂಡ ವಾಸ: ಕಾರ್ತಿಕ್ ಕಾಂಪ್ಲೆಕ್ಸ್  ಮಲ್ಪೆ ಬಸ್ ನಿಲ್ದಾಣ ಹತ್ತಿರ ಕೊಡವೂರು ಇವರು ಹಾಗೂ ಅವರ ತಮ್ಮಂದಿರಾದ ಅರವಿಂದ ಮುಂಡ ಮತ್ತು ಸಾಹಿಂದರ್ ಮುಂಡ  ಒಟ್ಟಿಗೆ 5 ತಿಂಗಳಿಂದ ಮಲ್ಪೆ ಯ ಸ್ವರ್ಣರಾಜ್  ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ 11/03/2022 ರಂದು ಸಂಜೆ 7:00 ಗಂಟೆಗೆ ಮೀನುಗಾರಿಕೆಯ ಬಗ್ಗೆ ಮಲ್ಪೆ ಬಂದರಿನಿಂದ ಬೋಟಿನಲ್ಲಿ ಹೋಗಿದ್ದು , ದಿನಾಂಕ 12/03/2022 ರಂದು ಬೆಳಿಗ್ಗೆ 4:00 ಗಂಟೆಗೆ ಮೀನುಗಾರಿಕೆ ಕೆಲಸ ಮುಗಿಸಿ  ವಿಶ್ರಾಂತಿಯ ಬಗ್ಗೆ ಮಲಗಿದ್ದು, ಬೆಳಿಗ್ಗೆ 09:00 ಗಂಟೆಗೆ  ಊಟಕ್ಕೆ ಏಳಿಸುವಾಗ  ರಮೇಶ ಮುಂಡ ರವರ ತಮ್ಮ ಸಾಹಿಂದರ್ ಮುಂಡ (22) ಏಳದೆ ಇದ್ದು ಆತನು  ಸ್ಥಳದಲ್ಲಿಯೆ ಹೃದಯಾಘಾತರದಿಂದ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿದ್ದು, ಆತನ ಮೃತದೇಹವನ್ನು ಸ್ವರ್ಣ ರಾಜ್ ಬೋಟಿನಲ್ಲಿ ಮಲ್ಪೆ ಬಂದರಿಗೆ ತಂದು ಅಲ್ಲಿಂದ ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಾಗಾರದ ಶೀತಲಿಕರಣದಲ್ಲಿಇರಿಸಿವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 16/2022 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ಪಿರ್ಯಾಧಿದಾರರಾದ ಶ್ರೀಮತಿ  ವಿನುತಾ( 49)ಗಂಡ : ಆರ್ ಸೆಂಥಿಲ್ ವಡಿವೇಲನ್ ವಾಸ: 1 ನೇ ಕ್ರಾಸ್  ಮೂಡುಬೆಟ್ಟು ಕಲ್ಯಾಣಪುರ ಮೂಡುತೋನ್ಸೆ ಇವರ ಗಂಡನಾದ  ಸೆಂಥಿಲ್ ವಡಿವೇಲಿನ್( 56), ಅವರು ಮುಂಬೈಯ ಪ್ರಗತಿ ಫ್ಯಾಶನ್ ಮೋಲಿಸ್ ಕ್ಲೋತಿಂಗ್  ಪ್ರೈವೇಟ್ ಲಿಮಿಟೆಡ್ ಮುಂಬೈ ಕಂಪೆನಿಯ ಕರ್ನಾಟಕ ರಾಜ್ಯಕ್ಕೆ ಡಿಲರ್ ಶಿಪ್  ತೆಗೆದುಕೊಂಡಿದ್ದು,  ಅವರು ಬೇರೆ ಕಡೆ ಬಟ್ಟೆ ಅಂಗಡಿಗೆ ಹೋಗಿ ಬಟ್ಟೆ ಆರ್ಡರ್ ತೆಗೆದು ಕಂಪೆನಿಗೆ ಕಳುಹಿಸಿಕೊಡುತ್ತಿದ್ದು, ಅವರಿಗೆ ವಾರ್ಷಿಕವಾಗಿ ಕಮಿಷನ್  ಸಿಗುತ್ತಿದ್ದು, ಸೆಂಥಿಲ್ ವಡಿವೇಲಿನ್ನು 1) ಪೀತಮ್  ಶೆಟ್ಟಿ ಗೆಸ್ ಪ್ಯಾಮೀಲಿ ಶಾಪ್  ಮಂಗಳೂರು, 2) ಸತ್ಯಾನಂದ ಸಿಂಗ್  ಪದ್ಮನಾಭ್ ಎಂಟರ್ ಪ್ರೈಸೆಸ್  ಕಾರಾವಾರ 3) ಬಿಸಿ ರವಿ ಆಲಿಯಾಸ್ ಮಂಜಣ್ಣ  ಅನನ್ಯ ಪ್ಯಾಶನ್, 4) BAANUMATHI JYOTHI PARTNRA COLOUR KIDS, RAMESH GOUDA NAKUL CREATION/SR CREATION, 6) ಅಬ್ದುಲ್ ರಜಾಕ್ ಆಲಿಯಾಸ್ ರಜ್ಜು  ಜೊಯಿಕ್ ಕಿಡ್ಸ್ ವೇರ್, 7) ಪ್ರೇಟ್ರಿಕ್ ಡಿಸೋಜಾ  ಬಾಂಬೆ ಗಾರ್ಮೆಟ್ಸ್  ಇವುಗಳಿಂದ ಕಂಪೆನಿಗೆ ಹಣ ಸಂದಾಯ ಮಾಡಲು ಬಾಕಿ ಇದ್ದು, ಇದರಿಂದ ಪಿರ್ಯಾಧಿದಾರರ ಗಂಡನಿಗೆ ಕಮೀಷನ ಹಣ ಬಂದಿರುವುದಿಲ್ಲ, ಇದರಿಂದ ಸೆಂಥಿಲ್ ವಡಿವೇಲಿನ್ ಇವರಿಗೆ ಆರ್ಥಿಕ ಅಡಚಣೆ ಆಗಿದ್ದು, ಈ ವಿಚಾರವನ್ನು ಶ್ರಿಮತಿ ವಿನುತಾ ತಿಳಿಸಿರುತ್ತಾರೆ ಅಲ್ಲದೆ ಕಳೆದ 1.5 ವರ್ಷದಿಂದ ಕಾನ್ಸರ್ ರೋಗದಿಂದ ಬಳಲುತ್ತಿದ್ದುಈ ಬಗ್ಗೆ ಮಂಗಳೂರಿನ  ಎಂಐಓ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನಾಂಕ 11/03/2022 ರಂದು ಸಾಯಂಕಾಲ 4:00 ಗಂಟೆಗೆ ವಿನುತಾ ರವರು ಹಾಗೂ ಅವರ ಮಕ್ಕಳು ಉಡುಪಿ ಅಂಬಲಪಾಡಿ ದೇವಸ್ಥಾನಕ್ಕೆ ಹೋಗಿದ್ದು, ಇವರ ಗಂಡ ಮನೆಯಲ್ಲಿ ಇದ್ದು, ವಿನುತಾ ಇವರು ಮತ್ತು ಮಕ್ಕಳು ಸಂಜೆ 7:00 ಗಂಟೆಗೆ ಮನೆಗೆ ಬಂದಾಗ ಮನೆಯ ಬಾಗಿಲನ್ನು ಸೆಂಥಿಲ್ ವಡಿವೇಲಿನ್ ಇವರು ತೆಗೆಯದೆ ಇದ್ದು, ಮನೆಯ ಓನರ್ ಪ್ರಶಾಂತ ರವರ  ಸಹಾಯದಿಂದ ಬಾಗಿಲು ಒಡೆದು ಮನೆಯ ಒಳಗೆ ಹೋಗಿ ನೋಡಲಾಗಿ ಮನೆಯ ಬೆಡ್ ರೂಮಿನಲ್ಲಿ ಸೆಂಥಿಲ್ ವಡಿವೇಲಿನ್ ಇವರು ಫ್ಯಾನಿಗೆ  ನೈಲಾನ್ ಸೀರೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ  ಮಾಡಿಕೊಂಡಿದ್ದು, ಸೆಂಥಿಲ್ ವಡಿವೇಲಿನ್ ಇವರನ್ನು  ನೇಣು ಕುಣಿಕೆಯಿಂದ ಬಿಡಿಸಿ ಮೃತ ದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು, ಸೆಂಥಿಲ್ ವಡಿವೇಲಿನ್ ಇವರು ಅನಾರೋಗ್ಯದಿಂದ ಹಾಗೂ ತಮಗಿರುವ ವ್ಯವಹಾರದಲ್ಲಿನ ಆರ್ಥಿಕ ಸಂಕಷ್ಟದಿಂದ  ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 15/2022 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾಧ ಸತೀಶ ಪೂಜಾರಿ (48) ತಂದೆ: ಸಿದ್ದಪ್ಪ ಪೂಜಾರಿ, ವಾಸ: ನೆಲ್ಲಿಗುಡ್ಡೆ ದರ್ಖಾಸು ನಿಟ್ಟೆ ಅಂಚೆ ಮತ್ತು ಗ್ರಾಮ ಕಾರ್ಕಳ ಇವರ ಅಣ್ಣ ಸುರೇಶ ಪೂಜಾರಿ, (51) ಎಂಬವರು ಗಾರೆ ಕೆಲಸ  ಮಾಡಿಕೊಂಡಿದ್ದು ಅವಿವಾಹಿತರಾಗಿರುತ್ತಾರೆ. ಎಂದಿನಂತೆ ನಂದಳಿಕೆಯ ಅಣ್ಣಪ್ಪ ಎಂಬವರೊಂದಿಗೆ ದಿನಾಂಕ 12/03/2022 ರಂದು ಮಿಯಾರು ಗ್ರಾಮದ ಕುಂಟಿಬೈಲು ಎಂಬಲ್ಲಿ ಕೆಲಸಕ್ಕೆ ಹೋಗಿದ್ದವರು ಕೆಲಸ ಮಾಡುತ್ತಿರುವ ಸಮಯ ಮಧ್ಯಾಹ್ನ 13:30 ಗಂಟೆಗೆ 5 ಅಡಿ ಎತ್ತರದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ತಲೆಯ ಮುಂಬದಿ, ಬಲಕೈ ಮೊಣಗಂಟಿನ ಬಳಿ, ಬಲಕಾಲಿನ ಮೊಣಗಂಟಿನ ಬಳಿ ತರಚಿದ ಹಾಗೂ ರಕ್ತಗಾಯಗೊಂಡವರನ್ನು ಅಣ್ಣಪ್ಪ ಎಂಬುವವರು ಚಿಕಿತ್ಸೆಗೆ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ 16:00 ಗಂಟೆಗೆ ಮೃತಪಟ್ಟಿದ್ದು ಅವರ ಮರಣದಲ್ಲಿ  ಯಾವುದೇ ಸಂಶಯ ಇರುವುದಿಲ್ಲ ಮೃತದೇಹವನ್ನು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಶವಾಗಾರದಲ್ಲಿ ಇರಿಸಲಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 08/2022 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 13-03-2022 10:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080